Tuesday, 31 December 2013

Jamnagar

ದ್ವಾರಕದಿಂದ ಟ್ಯಾಕ್ಸಿ ಮಾಡಿಕೊಂಡು Jamnagar  ಕಡೆ ತೆರಳಿದೆವು. ಹೋಟೆಲ್ ನಲ್ಲಿ  checkin ಮಾಡಿ ನಂತರ "Marine National Park"ಗೆ ಹೊರಟೆವು. ದೊಡ್ಡ ಅಲೆಗಳು ಅಪ್ಪಳಿಸಿದ ಮೇಲೆ 2 ಗಂಟೆಗಳ ನಂತರ ಲೇಕ್ ನಲ್ಲಿರುವ ಎಲ್ಲ Marine Species ದಡದ ಬಳಿ ಬರುತ್ತದೆ, ಆಗ ಸಮುದ್ರ ನದಿಗೆ ಮಾಡಿದರೆ ನೀರಿನಲ್ಲಿರುವ ಎಲ್ಲ ಮರೀನ್ animalsನ ನೋಡಬಹುದು. ಇದನ್ನು Coral walk ಎಂದು ಕರೆಯುತಾರೆ. ನಾವು ಸಹ ಗೈಡ್ ನ ಕರೆದುಕೊಂಡು coral ವಾಕ್ ಗೆ ಹೊರಟೆವು. ನಮ್ಮ ಜೊತೆ ಬಂಡ ಗೈಡ್ ತುಂಬಾ experienced. ಅವರಿಗೆ ಯಾವ ಕಲ್ಲು ಅಥವಾ ಬಂಡೆಯ ಕೆಳಗಡೆ ಯಾವ species ಇರುತ್ತದೆ ಅಂತ ತಿಳಿದಿರುತ್ತಿತ್ತು. ಹಾಗೆ ಒಂದೊಂದಾಗಿ ನಮಗೆ ತೋರಿಸತೊಡಗಿದರು. ಅಲ್ಲಿ Puffer fish, crab, hairy crab, sea cucumber, star fish, stingray ಎಲ್ಲ ಕಾಣಿಸಿತು. ಅವುಗಳನ್ನು ನಮ್ಮ ಕೈನಲ್ಲಿ ಹಿಡಿದು ನೋಡುವ ಅವಕಾಶವು ಒದಗಿ ಬಂದಿತು. ಇದು ರೋಮಾಂಚನಕಾರಿ ಅನುಭವ. ಗೈಡ್ ಇಲ್ಲದೆ ಇವೆಲ್ಲ speciesನ ನೀರಿನಲ್ಲಿ ಕಂಡು ಹಿಡಿಯುವುದು ಕಷ್ಟ. ಸುಮಾರು 3 ಗಂಟೆಗಳ ಕಾಲ coral ವಾಕ್ ಮಾಡಿದ ಮೇಲೆ ವಾಪಸ್ ಬಂದು ಹೋಟೆಲ್ ತಲುಪಿದೆವು. ಊಟ ಮುಗಿಸಿ ರಾತ್ರಿಯ ನಿದ್ರೆ ಮುಗಿಸಿದೆವು.


ಮಾರನೆ ದಿನ ಬೆಳಗ್ಗೆ ಮತ್ತೆ Jamnagariಯ ಸುತ್ತ ಮುತ್ತಲ ಸ್ಥಳಗಳನ್ನು ನೋಡಲು ಹೊರಟೆವು. ಮೊದಲು ಲಕೋಟ ಪ್ಯಾಲೇಸ್ ಗೆ ಹೊರಟೆವು. ಆದರೆ ನಾವು ಹೋದ ದಿನ ಪ್ಯಾಲೇಸ್ ಬಂದ್ ಆಗಿತ್ತು. ಆದರೆ ಪ್ಯಾಲೇಸ್ ನ Ranmal Lake ನೋಡಲು ಸುಂದರವಾಗಿತ್ತು. ಸಾಕಷ್ಟು Ducks ಮತ್ತೆ Pigeons ಅಲ್ಲಿ ನೋಡಲು ಸಿಕ್ಕಿತು. ಹಾಗೆ ಅಲ್ಲಿಂದ ಮುಂದೆ ಬಾಲ ಹನುಮಾನ್ ದೇವಸ್ಥಾನಕ್ಕೆ ಬಂದೆವು. ಈ ದೇವಸ್ಥಾನದ ವಿಶೇಷತೆಯೇನೆಂದರೆ ಇಲ್ಲಿ 1964 ರಿಂದ "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಎಂದು ಶ್ರೀರಾಮನ ನಾಮ ಪಠನೆಯಾಗುತ್ತಿದೆ. Guiness Book of Recordsನಲ್ಲೂ ಈ ದೇವಾಲಯ ಹೆಸರು ಪಡೆದಿದೆ. ನಾವು 5-10 ನಿಮಿಷ ರಾಮನಾಮ ಪಠನೆ ಮಾಡಿ, ನಂತರ ಅಲ್ಲಿಂದ ಮುಂದಕ್ಕೆ "Khijadiya Bird Sanctuary" ಗೆ ಹೊರಟೆವು. ಅಲ್ಲಿ ನೂರಾರು ತರಹದ ವಿಧ ವಿಧ ಪಕ್ಷಿಗಳು ನಮಗೆ ಕಾಣ ಸಿಕ್ಕವು. ಸಂಜೆಗೆ ಒಂದು ಜೈನ ದೇವಸ್ಥಾನಕ್ಕೆ ಬೇಟಿ ಕೊಟ್ಟು ಹೋಟೆಲ್ಗೆ ಮರಳಿ ದಿನದ ಕಾರ್ಯಕ್ರಮವನ್ನು ಮುಗಿಸಿದೆವು.


Dwaraka

ದ್ವಾರಕ ತಲುಪಿದ ಮೇಲೆ ಮೊದಲು ಹೋಗಿದ್ದು ದ್ವಾರಕದೀಶ್ ದೇವಸ್ಥಾನಕ್ಕೆ. ದೊಡ್ಡ ದೇವಸ್ಥಾನ, ಜನರಿಂದ ತುಂಬಿತ್ತು. ಸಂಜೆಯ ಆರತಿಗೆ ಕಾದಿದ್ದೆವು. ದೇವಸ್ಥಾನದ ವಳಾಂಗಣ ಆಹ್ಲಾದಕರ ವಾತಾವರಣದಿಂದ ತುಂಬಿತ್ತು. ಕೆಲವು ಭಕ್ತರು ಭಜನೆ, ನೃತ್ಯ ಮಾಡಲು ಶುರುಮಾಡಿದರು. Very nice experience.ಆರತಿ ಮುಗಿದ ಮೇಲೆ ಕೃಷ್ಣನ ದರ್ಶನ ಪಡೆದು ಹೋಟೆಲ್ ಗೆ ಮರಳಿದೆವು.


ದ್ವಾರಕ ದೇವಾಲಯವು ಪ್ರಪಂಚದ ಒಂದು ಪುಣ್ಯಸ್ಥಳಗಳಲ್ಲಿ ಒಂದು. ಇಲ್ಲಿಗೆ ದೇಶ ವಿದೇಶ ಗಳಿಂದ ಜನರು ಬರುತ್ತಾರೆ. ಪುರಾಣದ ಪ್ರಕಾರ ಶ್ರೀ ಕೃಷ್ಣನು ಮಥುರ ನಗರಿಯನ್ನು ಬಿಟ್ಟು ದ್ವಾರಕೆಗೆ ಬಂದು ನೆಲೆಸುತ್ತಾನೆ ಗೋಮತಿ ನದಿಯ ಬಳಿ. ದ್ವಾರಕದೀಶ್ ದೇವಸ್ಥಾನವು ಸುಮಾರು 1400 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು. 

ಮಾರನೆ ದಿನ ಬೆಳಗ್ಗೆ ಬೈಟ್ ದ್ವಾರಕಗೆ ಹೊರಟಿದ್ವಿ. ಮೊದಲು ನಾಗೇಶ್ವರ್ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಹೊರಟೆವು. ಈ ದೇವಾಲಯದ ಹೊರಗಡೆ ದೊಡ್ಡದಾದ ಶಿವನ ಪ್ರತಿಮೆ ಇದೆ. ಶಿವನ ಸನ್ನಿದಿಯಲ್ಲಿ ಜ್ಯೋತಿರ್ಲಿಂಗದ ಸ್ತ್ರೋತ್ರವನ್ನು ಪಠಿಸಿ ನಮ್ಮ ಪಯಣ ವನ್ನು ಮುಂದುವರೆಸಿದೆವು.


ಇಲ್ಲಿಂದ ಮುಂದೆ ಗೋಪಿ ತಲಬ್ ಗೆ ಹೋದೆವು. ಪುರಾಣದ ಪ್ರಕಾರ ಇಲ್ಲಿ ಗೋಪಿಕಾಸ್ತ್ರೀಯರು ಸ್ನಾನ ಮಾಡುತಿದ್ದರೆಂದು ಪ್ರತೀತಿ. ಅಲ್ಲಿಂದ ಮುಂದೆ ಗೋಮತಿ ನದಿಯನ್ನು ದಾಟಿ ಬೋಟ್ ನಲ್ಲಿ ಬೈಟ್ ದ್ವಾರಕಗೆ ಹೊರಟೆವು. 30 ನಿಮಿಷಗಳ ದೋಣಿ ವಿಹಾರ. ದೋಣಿ ವಿಹಾರ ಆಹ್ಲಾದಕರವಾಗಿತ್ತು. ಆಚೆಯ ದಡ ಸೇರಿ ಕೃಷ್ಣನ ದರ್ಶನವನ್ನು ಪಡೆವು ಮರಳಿ ಬಂದಿದ್ದೆವು. ಅಲ್ಲಿಂದ ಮುಂದೆ ರುಕ್ಮಿಣಿ ದೇವಸ್ಥಾನಕ್ಕೆ ಹೊರಟೆವು.



ಮರಳಿ ನಮ್ಮ ಹೊರಟ ಜಾಗಕ್ಕೆ ಮರಳುವ ಹೊತ್ತಿಗೆ ಮಧ್ಯಾನವಾಗಿತ್ತು.ಊಟ ಮುಗಿಸಿ ಹೋಟೆಲ್ ತಲುಪಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದೆವು. ಸಾಯಂಕಾಲ ಕೆಲವು ಹತ್ತಿರದ ಸ್ಥಳಗಳನ್ನು ನೋಡಲು ಹೊರಟೆವು. ಬ್ರಹ್ಮ ಕುಮಾರಿ ಆರ್ಟ್ ಗ್ಯಾಲರಿ, ಗಾಯತ್ರಿ ಶಕ್ತಿ ಪೀಠ, ಗೀತ ಮಂದಿರ, ಸಿದ್ದೇಶ್ವರ ಮಹಾದೇವ ದೇವಸ್ಥಾನ ಮತ್ತೆ ಭಡಕೇಶ್ವರ ದೇವಸ್ಥಾನ.


ಸೂರ್ಯ ಮುಳುಗುವ ದೃಶ್ಯ ಭಡಕೇಶ್ವರ ದೇವಸ್ಥಾನದಿಂದ ಬಲು ಮನೋಹರವಾಗಿ ಕಾಣುತ್ತದೆ. ನಮ್ಮ ಕ್ಯಾಮೆರಗಳಲ್ಲಿ ಈ ಮನೋಹರ ದೃಶ್ಯಗಳನ್ನು ಸೆರೆಹಿಡಿದು ಹೋಟೆಲ್ ಗೆ ಮರಳಿದೆವು. 




Porabandar


ಪೋರಬಂದರ್ ಗಾಂಧೀಜಿ ಹುಟ್ಟಿದ ಸ್ಥಳ.ಸ್ಕಂದ ಪುರಾಣದಲ್ಲಿ ಇದನ್ನು ಸುದಾಮಪುರಿ ಎಂದು ವರ್ಣಿಸಲಾಗಿದೆ. ಪುರಾಣದಲ್ಲಿ ಈ ನಗರಿಯನ್ನು ಸುದಾಮ ಹಾಗು ಕೃಷ್ಣನ ಮಧ್ಯೆ ಇದ್ದ ಸ್ನೇಹಕ್ಕೆ ಕೊಂಡಿ ಎಂದಿದ್ದಾರೆ. ಮೊದಲು ನಾವು ಕೀರ್ತಿ ಮಂದಿರಕ್ಕೆ ಹೋದೆವು. ಇದು ಗಾಂಧೀಜಿ ಹಾಗು ಕಸ್ತೂರಭ ಮನೆ. ಈಗ ಇದನ್ನು ಸಣ್ಣ museum , ಲೈಬ್ರರಿ ಹಾಗು ಪ್ರಾರ್ಥನಾ ಮಂದಿರವನ್ನಾಗಿ ಮಾಡಿದ್ದಾರೆ. ಗಾಂಧೀಜಿಯ ಬಗ್ಗೆ ಸಾಕಷ್ಟು ಪುಸ್ತಕ ಹಾಗು ಫೋಟೋಗಳನ್ನು ಸಂಗ್ರಹಿಸಿದ್ದಾರೆ.


ಕೀರ್ತಿ ಮಂದಿರವನ್ನು ನೋಡಿದ ನಂತರ ಸುಧಾಮ ದೇವಸ್ಥಾನಕ್ಕೆ ಹೋದೆವು. ದೇವಸ್ಥಾನದ ಮುಂದೆ ಸುಧಾಮ ಚಕ್ರವಿತ್ತು. ಜನರು ಆ ಚಕ್ರವನ್ನು ಸುತ್ತಾಕುತಿದ್ದರು. ಅದರ ಪ್ರಾಮುಖ್ಯತೆ ತಿಳಿದುಬರಲಿಲ್ಲ. ದೇವಸ್ಥಾನವನ್ನು ಕಂಡು ಅಲ್ಲಿಂದ ಹೊರಟೆವು ದ್ವಾರಕೆಯ ಕಡೆಗೆ.




Somnath



Diu ಇಂದ ಹೊರಟು  ಸಂಜೆ  ಹೊತ್ತಿಗೆ  ಸೋಮನಾಥ್  ತಲುಪಿದೆವು . ಹೋಟೆಲ್  ನಲ್ಲಿ  checkin ಮಾಡಿ ಸ್ವಲ್ಪ   freshen up ಆಗಿ ದೇವಸ್ಥಾನಕ್ಕೆ ಹೊರಟೆವು . ನಾವು  ಉಳಿದುಕೊಂಡ  ಹೋಟೆಲ್  ಎದುರಿನಲ್ಲೇ  ದೇವಸ್ಥಾನ ಇದ್ದದ್ದು . ನಾವು ದೇವಸ್ಥಾನದ  ಒಳಗೆ  ಹೋಗೋಷ್ಟರಲ್ಲಿ  Sound and Light show ಶುರು  ಆಗಿತ್ತು . ದೇವಸ್ಥಾನದ  ಮಧ್ಯಭಾಗದಲ್ಲಿದ್ದ  ದೊಡ್ಡ  ಒಳಾಂಗಣದಲ್ಲಿ  ಇದನ್ನು  ವ್ಯವಸ್ಥೆ ಮಾಡಿದ್ದರು . ದೇವಸ್ಥಾನದ  ಪುರಾಣದ  ಬಗ್ಗೆ  ಮಾಹಿತಿ  ಕೊಟ್ಟರು .

ಸೋಮನಾಥ  ದೇವಾಲಯವು  ಶಿವನ ಜ್ಯೋತಿರ್ಲಿಂಗವಿರುವ  ದೇಗುಲವಾಗಿದೆ.ಪುರಾಣದ  ಪ್ರಕಾರ  ಈ  ದೇವಾಲಯವನ್ನು  ಚಂದ್ರದೇವನಾದ  ಸೋಮರಾಜನು ಇದನ್ನು  ಚಿನ್ನದಿಂದ  ಕಟ್ಟಿಸಿದ್ದನು, ನಂತರ ರಾವಣನು  ಇದನ್ನು  ಮತ್ತೆ  ಬೆಳ್ಳಿಯಿಂದ  ಕಟ್ಟಿಸಿದನು , ಕೃಷ್ಣನು  ಇದನ್ನು  ಮರದಿಂದ  ಹಾಗು  ಭೀಮನು  ಇದನ್ನು  ಕಲ್ಲಿನಿಂದ ಕಟ್ಟಿಸಿದ ಎಂಬುದು  ಪ್ರತೀತಿ . ಮೊಹಮದ್  ಘಜ್ನಿ  ಈ  ದೇಗುಲವನ್ನು  ನಾಶಮಾಡಿ ಇದರಲ್ಲಿದ್ದ  ಸಂಪತ್ತನ್ನು  ಎಲ್ಲ  ಲೂಟಿ  ಮಾಡಿದನು . ಹಿಂದೂಗಳು  ಮತ್ತೆ  ಈ  ದೇಗುಲವನ್ನು ಪುನಃ  ಕಟ್ಟಿಸಿದರು . ಮತ್ತೆ  ಮುಸ್ಲಿಮರಿಂದ  ನಾಶವಾಯಿತು . ಹೀಗೆ ಸುಮಾರು  ಸಲ ಈ  ದೇವಾಲಯವು ನಾಶವಾಗಿ  ಪುನರ್ನಿರ್ಮಾಣವಾಗಿದೆ . ಕೊನೆಗೆ  ಇದನ್ನು  ಸರ್ದಾರ್  ವಲ್ಲಭಾಯಿ ಪಟೇಲರು ತಮ್ಮ  ಕಾಲದಲ್ಲಿ  ನಿರ್ಮಾಣ  ಮಾಡಿದರು .

ದೇವಸ್ಥಾನದ ಒಳಗೆ  ಹೋಗಿ  ಸೋಮನಾಥಾನ  ದರ್ಶನವನ್ನು  ಪಡೆದೆವು . ದರ್ಶನವನ್ನು  ಮುಗಿಸಿ  ಹೋಟೆಲ್  ತಲುಪಿ , ಊಟ  ಮುಗಿಸಿ  ನಿದ್ರಾದೇವಿಯ  ತೆಕ್ಕೆಗೆ  ಜಾರಿಕೊಂದೆವು . ಮಾರನೆ  ದಿನ ಬೆಳಗ್ಗೆ  ಬೇಗನೆ  ಎದ್ದು  ಬೆಳಗ್ಗಿನ  ಆರತಿಗೆ  ಹೊರಟೆವು . ಮತ್ತೆ  ಸೋಮನಾಥಾನ  ದರ್ಶನ  ವನ್ನು  ಮುಗಿಸಿ  ಅಲ್ಲೇ ದೇವಸ್ಥಾನದ ಹೊರಾಂಗಣದಲ್ಲಿ  ಅರೇಬಿಯನ್  ಸಮುದ್ರದ  ಸೌಂದರ್ಯವನ್ನು ಸವಿಯುತ್ತ  ಜ್ಯೋತಿರ್ಲಿಂಗ  ಸ್ತ್ರೋತ್ರವನ್ನು  ಓದಿ  ಮುಗಿಸಿ  ದೇವಸ್ಥಾನದ ಹೊರ  ಬಂದೆವು . ಅಲ್ಲಿಂದ  ಹೋಟೆಲ್  ನ  ಖಾಲಿ  ಮಾಡಿ  ದ್ವಾರಕೆಯ  ಕೃಷ್ಣನ  ಬೇಟಿಗೆ  ಸಜ್ಜಾದೆವು . ದ್ವಾರಕೆಗೆ  ಹೊರಡುವ ದಾರಿಯಲ್ಲಿ  ಪೋರಬಂದರನ್ನು  ವೀಕ್ಷಿಸಿ  ನಂತರ  ಹೊರಡುವ  ಪ್ಲಾನ್  ಇತ್ತು .

Diu

ನಾವು Sasan Gir ನಿಂದ  ಹೊರಟು Diu ಕಡೆ  ಪ್ರಯಾಣವನ್ನು  ಮುಂದುವರೆಸಿದ್ದೆವು . Diu ತಲುಪುವಷ್ಟರಲ್ಲಿ  ಬೆಳಗ್ಗೆ  11 ಗಂಟೆ  ಆಗಿತ್ತು . Diu ಒಂದು Union territory. ಇದು  ಅರೇಬಿಯನ್  ಸಮುದ್ರದಲ್ಲಿರುವ ಒಂದು  ಸಣ್ಣ  ದ್ವೀಪ , ಸುಮಾರು 11kms ಉದ್ದ ಮತ್ತೆ  3 kms ಅಗಲದ  ಅಳತೆ . ಈ  ಸುಂದರವಾದ  ದ್ವೀಪದಲ್ಲಿ  beaches, ಚರ್ಚ್ galu, ಬಜಾರ್ , portuguese ಕಾಲದ  fort ಇವೆ. Mythology ಯ ಪ್ರಕಾರ ಮಹಾಭಾರತದ ಪಾಂಡವರು  ತಮ್ಮ  14 ವರ್ಷದ ವನವಾಸದ ಸ್ವಲ್ಪ ಕಾಲವನ್ನು  ಇಲ್ಲಿ  ಕಳೆದಿದ್ದರೆಂದು  ಪ್ರತೀತಿ .Diu 15-16 century ಯಲ್ಲಿ  Portugues ರಿಂದ ಆಳಲ್ಪಟ್ಟಿತ್ತು .


ನಾವು  Diu ತಲುಪಿದ  ಮೇಲೆ  ಮೊದಲು  Panikota Fortum Diu Mar ಗೆ  ಬೋಟ್  ನಲ್ಲಿ  ಹೊರಟಿದ್ದೆವು . ಇದು ದ್ವೀಪದಲ್ಲಿರುವ  ಒಂದು  ಆಗಿನ  ಕಾಲದ  ಸೆರೆಮನೆ. Panikota, ಒಂದು  ಸುಂದರವಾದ  ಸಮುದ್ರದಲ್ಲಿರುವ  ಕಲ್ಲಿನ  ಅಮೋಘವಾದ ಕಟ್ಟಡ. ಈ  Fortress ಅಲ್ಲಿ  ಒಂದು  Light house ಮತ್ತೆ  ಒಂದು  ಸಣ್ಣ  chapel ಇದೆ . ಇಲ್ಲಿಂದ  ಅರೇಬಿಯನ್  ಸಮುದ್ರದ ನೋಟ ತುಂಬಾ  ಸುಂದರ . Motor Launch ಮುಖಾಂತರ ಇಲ್ಲಿಗೆ  ತಲುಪಬೇಕು . Boat ನ  ಪ್ರಯಾಣ  ಉಲ್ಲಾಸಕರವಾಗಿತ್ತು.  Panikota ತಲುಪಿ  ಅಲ್ಲಿ  ಕೆಲವು ಫೋಟೋಸ್ನ  ತೆಗೆದುಕೊಂಡೆವು . ಅಲ್ಲಿಂದ  ಮತ್ತೆ  Boat ನ  ಮುಖಾಂತರ  ಮತ್ತೆ  ವಾಪಸ್  ಬಂದು  ಅಲ್ಲಿಂದ  Diu fort ಗೆ  ಹೊರಟೆವು .


Diu Fort ಬಲು ದೊಡ್ಡ  ಕೋಟೆ . ಇದು  15th century ಯಲ್ಲಿ  ಗುಜರಾತ್  Sultan ಮತ್ತೆ  portuguesರ ಮಧ್ಯೆ treaty ಒಪ್ಪಂದವಾದಾಗ ಕಟ್ಟಿದ್ದು . ಸಮುದ್ರದಿಂದ  ಸುತ್ತುವರೆದ  ಕೋಟೆ  ನೋಡಲು ಬಲು  ಸುಂದರ . ಈ  ಕೋಟೆಯ  ಒಳಗಡೆ  chappel, light house ಇವೆ .


ಕೋಟೆಯನೆಲ್ಲ  ಸುತ್ತಿದ  ಮೇಲೆ , ಅಲ್ಲಿಂದ  St. Paul's church ಗೆ  ಹೊರಟೆವು . ಇದು  ಬಲು  ದೊಡ್ಡ  church. ಚರ್ಚಿನ ಒಳಗಡೆ  ಹೋಗಿ  ಯೇಸುವನ್ನು  ಕಂಡು  ಬಂದೆವು . ಅಲ್ಲಿಂದ  ಹೊರಟು  shell Museum ಗೆ  ಹೊರಟೆವು . ಆದರೆ  ನಮ್ಮ  ದುರಾದುಷ್ಟಕ್ಕೆ  Museum close ಆಗಿತ್ತು . ಮತ್ತೆ  ಸಂಜೆಗೆ  ತೆಗಿಯುವುದು  ಅಂದರು . ಆದರೆ  ನಮಗೆ  ಅಲ್ಲಿಯವರೆಗೂ  ಕಾಯುವ  ಸಮಯವಿಲ್ಲದಿದ್ದುರಿಂದ  ಅಲ್ಲಿಂದ  ಹೊರಟು  ಬಿಟ್ಟೆವು . ಈ museum ನಲ್ಲಿ  ಅತಿ  ಚಿಕ್ಕ  ಹಾಗು  ಅತಿ  ದೊಡ್ಡ  shell ಅನ್ನು  ಪ್ರದರ್ಶನಕಿಟ್ಟಿದ್ದಾರಂತೆ .


ಅಲ್ಲಿಂದ  ಮುಂದೆ  ಗಂಗೇಶ್ವರ್  ದೇವಸ್ಥಾನಕ್ಕೆ ಹೋದೆವು .ಇದು  ಶಿವನ  ದೇವಸ್ಥಾನ . 5 ಶಿವ  ಲಿಂಗಗಳು  ಸಮುದ್ರದ  ಅಂಚಿನ  ಬಳಿ ಇದೆ . ಸಮುದ್ರದ  ಆಳೆತ್ತರದ  ಅಲೆಗಳು ಈ  ಶಿವ  ಲಿಂಗಗಳನ್ನು  ತೊಳೆದು  ಹೋಗುತ್ತದೆ . Mythology ಪ್ರಕಾರ ಈ  5 ಲಿಂಗಗಳನ್ನು  ಪಂಚ  ಪಾಂಡವರು  ನಿರ್ಮಿಸಿದರೆಂದು  ಪ್ರತೀತಿ .


ಶಿವನ  ದರ್ಶನವನ್ನು ಪಡೆದು  Nagoa beach ಗೆ  ಹೊರಟೆವು . Nagoa beach ದೊಡ್ಡ  beach. Goa beachನ  ವಾತಾವರಣ  ಇತ್ತು . Paragliding, Parasailing ಹಾಗು ಸಾಕಷ್ಟು water games ನಡೆಯುತ್ತಿತ್ತು . ಅಲ್ಲಿ  ಸ್ವಲ್ಪ  ಸಮೆಯ  ಕಳೆದು  ಹೊರಟು  ಬಿಟ್ಟೆವು . ಸಂಜೆಗೆ  ಸೋಮನಾಥನ  ಕಡೆ  ಪ್ರಯಾಣ  ಬೆಳೆಸಬೇಕಿತ್ತು .


Sasan Gir

ಬೆಳಗ್ಗಿನ  ಜಾವ  ಜುನಾಗಡ್  ನಿಂದ  ಹೊರಟು Sasan Gir ತಲುಪಿದ್ವಿ . Gir forest ನಲ್ಲಿ  ಸಫಾರಿ  ಹೋಗುವ  ಪ್ಲಾನ್  ಇತ್ತು . ಮಧ್ಯಾನದ  ಸಫಾರಿ  ಟ್ರಿಪ್  ಸಿಕ್ಕಿತ್ತು . 1 gypsy open top vehicle ನಲ್ಲಿ  ಹೊರಟಿದ್ವಿ. 2.30 ಗಂಟೆಗಳ  ಸಫಾರಿ  ಆಗಿತ್ತು .




Gir forest ಎಂಟರ್  ಆದ್ವಿ. ಸ್ವಲ್ಪ  ದೂರ  ಹೋಗೋಷ್ಟೊತ್ತಿಗೆ  spotted deers ಕಾಣಿಸಿತು . ಇದಾದ  ಮೇಲೆ  sambars, ವಿಧ  ವಿಧವಾದ  ಪಕ್ಷಿಗಳು , peacock ಎಲ್ಲ  ಕಾಣಿಸಿದವು .





ಕೊನೆಗೂ  ನಾವು  ನೋಡ  ಬೇಕಿದ್ದ  ಸಿಂಹ  ಕಾಣಿಸಿತು . A female Lion. ಮಧ್ಯಾನದ  ಊಟ  ಮುಗಿಸಿ  ಮರದ  ಕೆಳಗೆ  ವಿಶ್ರಾಂತಿ  ಪಡೆಯುತ್ತಿತ್ತು . ದೂರದಿಂದ ಒಂದು  glimpse ಸಿಕ್ಕಿತ್ತು . ಅದು  ನಮ್ಮ  ಲಕ್  ಅನ್ನಬಹುದು . ಎಲ್ಲರಿಗೂ  ಇದು ಸುಲಭವಾಗಿ  ಕಾಣಸಿಗುವುದಿಲ್ಲ . ಅಂತೂ  ನಮ್ಮ  ನಿರೀಕ್ಷಣೆಯ  ಕ್ಷಣಗಳು  ಮುಗಿದಿತ್ತು . ಮನಸ್ಸಿಗೆ  ನೆಮ್ಮದಿ . ಎಲ್ಲವನ್ನೂ  ನಮ್ಮ  ಕ್ಯಾಮೆರಗಳಲ್ಲಿ ಸೆರೆಹಿಡಿದಿದ್ವಿ.




ಇದಾದ  ಮೇಲೆ  tribal ಜನರ  ಗುಡಿಸಲು  ಕಾಣಿಸಿತು . ಹೀಗೆ  2.30 ಗಂಟೆಗಳ  ಕಾಲ  ಸುತ್ತಿದ  ಮೇಲೆ  exit ಗೇಟ್  ಹತ್ರ  ಬಂದಿದ್ದೋ . ಸಂಜೆಗೆ  forest ಡಿಪಾರ್ಟ್ಮೆಂಟ್ ನವರು  Gir forest ನ  ಬಗ್ಗೆ  ಒಂದು  ಡಾಕ್ಯುಮೆಂಟರಿ  ಸಿದ್ದಪಡಿಸಿದ್ದರು .  ಇದನ್ನು  ನೋಡಿದ  ಮೇಲೆ  ಹೋಟೆಲ್  ಗೆ  ಮರಳಿ , ಊಟ ಮುಗಿಸಿ  ನಿದ್ರಾ  ದೇವಿಗೆ  ಶರಣಾದೆವು . ಮಾರನೆ  ದಿನ  Diu ಗೆ  ಹೊರಡೋದಿತ್ತು.

Monday, 30 December 2013

ಪಯಣ

ನನ್ನ  ಪಯಣ  ಗಾಂಧಿ ಹುಟ್ಟಿದ  ನಾಡು  ಗುಜರಾತ್ ನ  ಕಡೆ  ತಿರುಗಿತ್ತು . ಕೆಲಸದಿಂದ  ಒಂದು Break ಬೇಕಿತ್ತು .  Incredible ಇಂಡಿಯಾದಲ್ಲೊಂದು memorable journey ಮಾಡುವ ಆಸೆ ಇತ್ತು. ಸ್ನೇಹಿತರ ಜೊತೆ  ಹೊರಟಿದ್ದೆ . 10 ದಿನಗಳ  ಪಯಣ. ಹೊರಟಾಗ ಎಲ್ಲರೂ ತಮಾಷೆ ಮಾಡಿದ್ದರು ನರೇಂದ್ರ ಮೋದಿಯನ್ನು ಭೇಟಿಯಾಗಲು ಹೊರಟಿದ್ಯ ಅಂತ. ಆದರೆ ನನಗೆ ಗುಜರಾತ್ನಲ್ಲಿ ಗಾಂಧಿಯ  ಮನೆ , ಆಶ್ರಮ , ಸೋಮನಾಥನ ದರ್ಶನ , ಜ್ಯೋತಿರ್ಲಿಂಗಗಳ  ದರ್ಶನ , ದ್ವಾರಕೆಯ  ಕೃಷ್ಣನ  ಭೇಟಿ , Diu ನ  Beach ಗಳ  ಕಡೆ  ಒಂದು  ನೋಟ , Jamnagarದ  ಸಮುದ್ರ  ನಡಿಗೆ, Baroda ದ  Museum ಹಾಗೂ ಅರಮನೆಯ  ಒಂದು  ಪಕ್ಷಿ  ನೋಟ , ಚಂಪಾನಗರಿಯ ಪುರಾತನ  Architecure ಪರಿಚಯ , ಹೀಗೆ  ಎಲ್ಲವನ್ನೂ ನೋಡುವ ಯೋಚನೆ  ಇತ್ತು . ಅಹಮದಾಬಾದ್  ನಿಂದ  start ಮಾಡಿ , ಗುಜರಾತನ್ನು  ಸುತ್ತಿ  ಮತ್ತೆ  ಅಹಮದಾಬಾದ್  ಗೆ  ಮರಳಿ  ಅಲ್ಲಿಂದ  ಬೆಂಗಳೂರನ್ನು  ತಲುಪುವ  ಪ್ಲಾನ್ ಇತ್ತು. ಎಲ್ಲ  ಪ್ಲಾನ್  ಪ್ರಕಾರ  ನಡೆದಿತ್ತು .
 
 
Colours of Gujarat :
ಗುಜರಾತ್  ಒಂದು  ಅಧ್ಬುತ ನಗರಿ. ಸಾಕಷ್ಟು ಮಹಾನುಭಾವರನ್ನು ಕಂಡ ನಾಡು. ಗಾಂಧಿ ಹುಟ್ಟಿದ ನಾಡು  ಗುಜರಾತ್ . ಉಕ್ಕಿನ  ಮನುಷ್ಯ  ಸರ್ದಾರ್  ವಲ್ಲಭಾಯಿ ಪಟೇಲ್ , ವಿಪ್ರೊ ಚೀಫ್  ಅಜೀಂ ಪ್ರೇಮಜಿ ಹೀಗೆ  ಸಾಕಷ್ಟು  ಜನರನ್ನು  ಬೆಳೆಸಿದ  ನಗರಿ . ಭಾರತದಲ್ಲೇ  ಪ್ರಸಿದ್ದಿಯಾದ  ಗೀರ್ ಅರಣ್ಯ ಇಲ್ಲಿದೆ . ಫುಣ್ಯಸ್ಥಳಗಳಾದ ಸೋಮನಾಥ , ದ್ವಾರಕೆಯ  ಮಂದಿರಗಳು  ಇಲ್ಲಿವೆ . 12 ಜ್ಯೋತಿರ್ಲಿಂಗಗಳ ಪೈಕಿ , 2 ಜ್ಯೋತಿರ್ಲಿಂಗ  ಗುಜರಾತಿನಲ್ಲಿದೆ. ಆಗಿನ  ಕಾಲದ ಗಾಯಕವಾಡ್ ಮನೆತನದ ಸಯ್ಯಾಜಿ ರಾವ್ ಗಾಯಕವಾಡ್ ಅವರ  ಕಾಲದಲ್ಲಿ  ಕಟ್ಟಿಸಿದ  ಲಕ್ಷ್ಮಿ ವಿಲಾಸ್ ಪ್ಯಾಲೇಸ್  ಈಗಲೂ ನೋಡಲು  ಮನಮೋಹಕವಾಗಿದೆ .ಹೀಗೆ  ಹಲವು  ವಿಶೇಷತೆಗಳನ್ನೊಳಗೊಂಡ  ಗುಜರಾತ್ ನ  ಇನ್ನೊಂದು  ವಿಶೇಷ  ಎಂದರೆ  ಕುಡಿತ  ಇಲ್ಲಿ  ಸಂಪೂರ್ಣ  ನಿಶಿದ್ದ .
 
ಇಲ್ಲಿನ  ಜನ  ಸಿಹಿಪ್ರಿಯರು . ಹಾಲಿನ  ಉತ್ಪನ್ನಗಳಿಂದ  ಮಾಡಿದ  ಸಿಹಿತಿಂಡಿಗಳು  ಇಲ್ಲಿ  ಹೇರಳ . ಧೋಕ್ಲಾಸ್, ಸೇವ್  ಉಸಲ್ , ಘಾಟಿಯ , ಪಾವ್ ಭಾಜಿ, ಪೋಹ  ಇಲ್ಲಿನ  ವಿಶೇಷವಾದ  ತಿಂಡಿಗಳು . Havmore ಐಸ್ಕ್ರೀಂ  ಗುಜರಾತ್  ನ  local brand ಐಸ್ಕ್ರೀಂ . ಇನ್ನು  ಊಟಕ್ಕೆ  ಗುಜರಾತ್  ತಾಲಿ famous. ಬಿಸಿ  ಬಿಸಿ  ಜಿಲೇಬಿ ಬಾಯಲ್ಲಿ  ನೀರೂರಿಸುತ್ತೆ . ತರಾವರಿ  sweets ಗಳು . ಹೀಗೆ  ಬಗೆ  ಬಗೆ  ತಿನಿಸುಗಳನ್ನು  ಗುಜಾರತ್  ನಲ್ಲಿ  ಇರುವಷ್ಟು  ದಿನ  try ಮಾಡಿದ್ವಿ .
ಅರೇಬಿಯನ್  sea, ಸಾಕಷ್ಟು  ಬೀಚ್ಗಳು , ನದಿಗಳು  ಇಲ್ಲಿ  ಕಾಣಸಿಗುತ್ತವೆ . ಹಾಗಾಗಿ  ಇಲ್ಲಿ  ಶಂಕ  ಹಾಗು  ಕಪ್ಪೆ ಚಿಪ್ಪುಗಳನ್ನು ಹೇರಳವಾಗಿ ನೋಡಬಹುದು .ಅದರಿಂದ  ಮಾಡಿದ  ಅಲಂಕಾರಿಕ  ವಸ್ತುಗಳು  ಅಪಾರ , ನೋಡಲು  ಕಣ್ಣಿಗೆ  ಆನಂದ .
ಇಲ್ಲಿನ  ಜನರು  ತುಂಬಾ  ಸ್ನೇಹಜೀವಿಗಳು . ಅವರ  ಉಡಿಗೆ  ತೊಡಿಗೆ  ನಮಗಿಂತ ಭಿನ್ನ . ಗಂಡಸರು frock ಟೈಪ್  ತರ ಇರುವಂಥ ಬಿಳಿಯ ನಿಲುವಂಗಿಯನ್ನು ಹಾಕಿರುತ್ತಾರೆ, ಅದರ  ಜೊತೆ  ಕಚ್ಚೆ  ಪಂಚೆ . ಇನ್ನು  ಹೆಂಗಸರು  ಬಲಬದಿಗೆ  ಸೆರಗು , ತಲೆಯ  ಮೇಲೆ  ಸೆರಗಿನ  ಹೊದಿಕೆ .
 
 
 
ಗುಜರಾತ್, ಪ್ರಾಣಿ, ಪಕ್ಷಿಗಳ  ಬೀಡು  ಅಂತ  ಹೇಳಬಹುದು . ಸಾಕಷ್ಟು  ತರಹದ  ವಿಧ  ವಿಧ  ಪಕ್ಷಿಗಳು  ಇಲ್ಲಿ  ಕಾಣಸಿಗುತ್ತವೆ .
 
ಇಲ್ಲಿಗೆ ಗುಜರಾತ್ ನ ಒಂದು ಕಿರು ಪರಿಚಯ ಮುಗಿಯಿತು.ಇಲ್ಲಿಂದ ಮುಂದೆ ಒಂದೊಂದೇ ಊರುಗಳ ವಿಶೇಷತೆಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ.  
 
  
*Spelling mistakes ಗಳ ಬಗ್ಗೆ ಕ್ಷಮೆ ಇರಲಿ

Saturday, 9 November 2013

ನಾನು , ಶಂಗಂ ಸಾಹಿತ್ಯ ಹಾಗು ಕನ್ನಡ

ನವೆಂಬರ್ ,  ಯಾರು  ತಾನೇ  ಮರೆಯಲು  ಸಾಧ್ಯ  ಕನ್ನಡ  ರಾಜ್ಯೋತ್ಸವದ ದಿನವನ್ನು .   ವರ್ಷ   ೫೭ನೇ  ರಾಜ್ಯೋತ್ಸವವನ್ನು ಆಚರಿಸಿದ  ವರ್ಷ . ಆಫೀಸ್ಗೆ  ರಜೆ . ಸ್ನೇಹಿತರ  ಜೊತೆ  ರಾಜ್ಯೋತ್ಸವದ  ಶುಭಾಶಯವನ್ನು  ಹಂಚಿಕೊಂಡಿದ್ದೆ . ಹೀಗೆ  ಮಾತು  ಕಥೆಯಲ್ಲಿ  ಸ್ನೇಹಿತನ  ಸಲಹೆ  ಶಂಗಂ ತಮಿಳಗಂ  ಮತ್ತು  ಕನ್ನಡ  ನಾಡು  ನುಡಿ’  ಪುಸ್ತಕವನ್ನು  ಓದಲು . ಇದು  ಕೇಂದ್ರ  ಸಾಹಿತ್ಯ  ಅಕಾಡೆಮಿಯ  ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ  ಕೃತಿ . ಇತಿಹಾಸಕಾರರಾದ ಶೆಟ್ಟರ್   ಕೃತಿಯ  ಕರ್ತ್ರು. ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ  ಕುರಿತ  ಪುಸ್ತಕ . ಹೆಚ್ಚಾಗಿ ಪುಸ್ತಕಗಳನ್ನು ಓದದ ನಾನು , ಪುಸ್ತಕದ ಹೆಸರನ್ನು ಕೇಳಿರಲಿಲ್ಲ. ಹೇಗೂ ಸಮಯ ಇದ್ದುದರಿಂದ, ಸ್ವಪ್ನ ಬುಕ್ ಹೌಸ್  ಗೆ  ಹೋಗಿ  ಬುಕ್  ಕೊಳ್ಳುವ  ಯೋಜನೆ  ಸಿದ್ದಪಡಿಸಿದೆ . ಸ್ವಲ್ಪದರಲ್ಲೇ ಪುಸ್ತಕ  ನನ್ನದಾಗಿತ್ತು . ಇನ್ನು  ಓದುವುದೊಂದು  ಬಾಕಿ . ಮಧ್ಯಾನದ  ಊಟ  ಮುಗಿಸಿ ಪುಸ್ತಕ  ಓದಲು  ಕುಳಿತೆ .

ಮುನ್ನುಡಿ  ಓದಿದಾಗಲೇ ಅರಿತೆ  ಇದು  ಹಲವು  ದಶಕಗಳ  ಇತಿಹಾಸವನ್ನು ಕುರಿತ ಚರ್ಚೆ , ಚಿಂತನೆ , ಸಂವಾದಗಳೆಂದು. ಕನ್ನಡದ  ಪುರಾತನ  ಕೃತಿಯಾದ ಕವಿರಾಜಮಾರ್ಗ  ಹಾಗು  ತಮಿಳರ  ಶಂಗಂ  ಸಾಹಿತ್ಯದ  ಬಗ್ಗೆ  ಸಮಾಲೋಚನೆ  ಕುರಿತ  ವಿಷಯ. ಶಂಗಂ ಕಾಲದ  ರಾಜಮನೆತನಗಳಾದ ಪಾಂಡ್ಯ, ಚೋಳ , ಚೇರರ ಬಗ್ಗೆ  ಇಲ್ಲಿ  ಚರ್ಚೆ  ಇದೆ .ಹಾಗೆಯೇ  ಕನ್ನಡದ  ನೆಲದಲ್ಲಿ  ರಾಜ್ಯಕಟ್ಟಿದ ಕದಂಬ , ಬಾದಾಮಿ , ಚಾಲುಕ್ಯ  ಮತ್ತು  ರಾಷ್ಟ್ರಕೂಟರು  ಸಂಸ್ಕೃತಕ್ಕೆ  ಕೊಟ್ಟ ಸ್ಥಾನಮಾನದ ಬಗ್ಗೆ  ಪ್ರಶಂಸೆ ಇದೆ. ಶಂಗಂ  ತಮಿಳರ  ಮೇಲೆ  ಬೀರಿದ  ಕನ್ನಡ  ಪ್ರಭಾವ  ಅಪಾರ . ಬಹುಕಾಲದ ವರೆಗೂ  ಲಿಪಿರಹಿತ  ಜನಾಂಗದ ತಮಿಳಗಂ  ಕಾರ್ಯಕ್ಷೇತ್ರದಲ್ಲಿ  ತಮ್ಮ  ವ್ಯವಹಾರಕ್ಕೆ  ತಮಿಳು ಬ್ರಾಹ್ಮೀ ಲಿಪಿಯನ್ನು ಬಳಸಿಕೊಂಡಿದ್ದರು .   ಶಾಸನವನ್ನು  ಹಿನ್ನಲೆಯಾಗಿಟ್ಟು ನೋಡಿದರೆ  ತಮಿಳರ  ಮೇಲೆ  ಹಳೆಗನ್ನಡ  ಬೀರಿದ  ಪ್ರಭಾವದ  ಅರಿವಾಗುತ್ತದೆ . ಇದರಿಂದ  ಶಂಗಂ  ಕಾಲಕ್ಕಾಗಲೇ ಕನ್ನಡವು ಬೆಳೆದ  ಭಾಷೆಯಾಗಿತೆಂಬುದು ತಿಳಿದು  ಬರುತ್ತದೆ.

ಕೆಲ ಅಧ್ಯಾಯಗಳನ್ನು ಶ್ರದ್ದೆ  ಇಂದ  ಓದಿದ  ಮೇಲೆ  ಅದೇ  ವಿಷಯಗಳನ್ನು  ಕೆದಕುತ್ತಾ  ಹೋದ ಹಾಗೆ ಅನ್ನಿಸಿತು. ಪುಸ್ತಕದ  ವಕ್ಕಣೆ ಗೊತ್ತಾಗಿತ್ತು . ಎರಡು  ಅಧ್ಬುತ  ಗ್ರಂಥಗಳಾದ ಕವಿರಾಜಮಾರ್ಗ ಹಾಗು ತೊಲ್ಕಾಪ್ಪಿಯಂ ಗಳ  ಕರ್ತ್ರು  ಯಾರು  ಅಂತ  ಎಲ್ಲರಿಗಿರುವ ಗೊಂದಲ, ತಿಳಿದುಕೊಳ್ಳುವ ಜಿಗ್ನ್ಯಾಸೆ ನನಗೂ ಇತ್ತು. ಇದರಲ್ಲಿ ಕಾವೇರಿ  ನದಿಯ  ಮೂಲದ  ಬಗ್ಗೆ  ಚರ್ಚೆ  ಇತ್ತು . ಎರಡೂ ರಾಜ್ಯಗಳ ಪ್ರಾಂತ್ಯಗಳನ್ನು ಧಾಟುವ ಕಾವೇರಿಯ  ನೀರಿಗೆ  ವರ್ಷ  ವರ್ಷ  ನಡೆಯುವ  ನೀರಿನ  ಯುದ್ದ  ಅಸಮಂಜಸ  ಎನಿಸ ತೊಡಗಿತು . ನಮ್ಮ  ಪೂರ್ವಿಕರು  ಬಿಟ್ಟು  ಹೋದ  ಕಾವ್ಯ  ಸಂಪತ್ತಿನ  ಅರಿವೇ  ಇಲ್ಲದ ಅಜ್ಞ್ಯಾನದ ಹೊಸ್ತಿಲನ್ನು  ಮೆಟ್ಟಿ  ನಿಂತ  ನಮ್ಮ  ಜನರ  ಭಾಷಾ  ಕಲಹದ  ಬಗ್ಗೆ  ಮನಸ್ಸು  ಖೇದಗೊಂಡಿತ್ತು. ಈಗಿನ  ಕಾಲದ  ಎಷ್ಟೋ  ಕನ್ನಡಿಗರಿಗೆ  ನಮ್ಮ  ಕನ್ನಡವೆ  ಕಬ್ಬಿಣದ  ಕಡಲೆಯಾಗಿರುವ ವಿಷಯ  ಸ್ವಲ್ಪ  ದುಃಖತರುವ  ವಿಷಯ.

ಅಂತು ಒಂದು ಅಧ್ಬುತ ಕೃತಿಯನ್ನು ಓದಿ ಮುಗಿಸಿದ್ದೆ. ಸಾಕಷ್ಟು ವಿಷಯಗಳ ಪರಿಚಯವಾಗಿತ್ತು.  ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಸಾಹಿತ್ಯವನ್ನು ಎಲ್ಲರೂ ಉಳಿಸಿ ಬೆಳೆಸಲಿ ಎಂದು ಆಶಿಸುತ್ತೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಲ್ಗೆ !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.

Sunday, 3 November 2013

ದೀಪಾವಳಿ



ದೀಪಗಳ  ಹಬ್ಬ  ದೀಪಾವಳಿ .  ಮನುಕುಲವನ್ನು  ಅಂಧಕಾರದಿಂದ  ಬೆಳಕಿನತ್ತ  ತರುವ  ಹಬ್ಬ  ದೀಪಾವಳಿ . ಮನೆಯ ಮನದ  ಕತ್ತಲನ್ನು  ಹೋಗಲಾಡಿಸಿ  ಬೆಳಕನ್ನು  ಹಚ್ಚುವ  ಹಬ್ಬ ದೀಪಾವಳಿ. ಇಷ್ಟೆಲ್ಲಾ  ವೈಭವದಿಂದ  ಕೂಡಿದ  ದೀಪಾವಳಿ  ಎಲ್ಲರ  ತನು  ಮನವನ್ನು  ಬೆಳಗಿಸುವ  ಬೆಳಕಿನ  ಹಬ್ಬವಾಗಿದೆ. 

ದೇಶಾದ್ಯಂತ  ಆಚರಿಸುವ ಈ  ಹಬ್ಬಕ್ಕೆ  ಹಲವು  ಪೌರಾಣಿಕ ಹಿನ್ನಲೆಗಳಿವೆ. ಶ್ರೀಮನ್ನಾರಾಯಣ ವರಾಹವತಾರವೆತ್ತಿ  ಲೋಕವನ್ನು  ಉದ್ದರಿಸಿದ  ಬಳಿಕ  ಅವರ  ದೇಹದಿಂದ  ಬಿದ್ದ  ಒಂದು  ತೊಟ್ಟು  ಬೆವರು  ಅಸುರಾಕೃತಿಯನ್ನು ಪಡೆದು  ಮುಂದೆ  ಅವನು  ನರಕಾಸುರನಾದನಂತೆ . ರಾಕ್ಷಸ  ಪ್ರವೃತ್ತಿಯ  ಇವನು  ಕೊನೆಗೆ  ಶ್ರೀಕೃಷ್ಣನಿಂದ  ಸಂಹಾರವಾಗುತ್ತಾನೆ. ನರಕಾಸುರನ  ತಾಯಿಯ  ಕೋರಿಕೆಯ  ಮೇರೆಗೆ  ಅವನನ್ನು ಎಲ್ಲರೂ  ನೆನೆಪಿಸಿಕೊಳ್ಳೋದಕ್ಕೋಸ್ಕರ  ಶ್ರೀಕೃಷ್ಣ  ಈ  ಹಬ್ಬವನ್ನು  ಸ್ಥಾಯಿಗೊಳಿಸಿದ  ಎಂಬುದು  ಪ್ರತೀತಿ . ಆ  ದಿನದ  ನೆನಪೇ  ನರಕ  ಚತುದರ್ಶಿ. ದೀಪಾವಳಿಯ  ಅಮಾವಾಸ್ಯೆಯ  ದಿನ  ಪಿತೃಗಳಿಗೆ  ತರ್ಪಣವನಿತ್ತು ಶ್ರದ್ದಾ  ವಿಧಿಗಳನ್ನು  ತೀರಿಸಿ  ಜನರು  ತಮ್ಮ  ಅಗಲಿದ  ಹಿರಿಯರಿಗೆ  ಭಕ್ತಿಯಿಂದ  ಪ್ರಾರ್ಥನೆ  ಸಲ್ಲಿಸುವ  ಪರಿಪಾಠವಿದೆ. ಲಕ್ಷ್ಮಿ  ಹಬ್ಬವನ್ನು  ಆಚರಿಸುವುದು ಈ  ಹಬ್ಬದ  ಮತ್ತೊಂದು  ವೈಶಿಷ್ಟ್ಯ. ಇನ್ನು  ಬಲಿಚಕ್ರವರ್ತಿಯನ್ನು  ನೆನಪಿಸಿಕೊಳ್ಳುವ  ದಿನವೇ  ಬಲಿಪಾಡ್ಯಮಿ . ಹೀಗೆ  ನರಕ  ಚತುದರ್ಶಿ , ಅಮಾವಾಸ್ಯೆ , ಬಲಿಪಾಡ್ಯಮಿ ದಿನಗಳನ್ನೊಳಗೊಂಡ  ದೀಪಾವಳಿ  ಹಬ್ಬ  ಸಂಭ್ರಮದಿಂದ  ಕೂಡಿರುತ್ತೆ .

ಮಕ್ಕಳ  ಅತ್ಯಂತ  ನೆಚ್ಚಿನ  ಹಬ್ಬ  ಇದಾಗಿದೆ . ಹೊಸ  ಬಟ್ಟೆಗಳನ್ನು  ತೊಟ್ಟು , ಮನೆಯನ್ನು ದೀಪಗಳಿಂದ  ಅಲಂಕರಿಸಿ , ಪಟಾಕಿಗಳನ್ನು  ಹಚ್ಚಿ  ಸಂಭ್ರಮಿಸುತ್ತಾರೆ.

ಈಗಿನ  ಹಬ್ಬಕ್ಕೂ  ನಾನು  ಚಿಕ್ಕವಳಾಗಿದ್ದಾಗ  ಆಚರಿಸುತ್ತಿದ್ದ  ಹಬ್ಬಕ್ಕೂ  ತುಂಬಾ  ವ್ಯತ್ಯಾಸವಿದೆ. ಆಗೆಲ್ಲ ಹಬ್ಬ  ಎಂದರೆ  ಎಲ್ಲಿಲ್ಲದ  ಸಡಗರ . ಒಂದು  ವಾರದ  ಮುಂಚೆಯೇ  ಹೊಸಬಟ್ಟೆಗಳನ್ನು ಖರೀದಿಸಿ, ಹಬ್ಬ  ಬರುವುದನ್ನೇ  ಎದಿರು  ನೋಡುತ್ತಿರುತ್ತಿದ್ದೆ . ಇನ್ನು ಹಬ್ಬದ  ದಿನವಂತೂ ಸಡಗರ  ಹೇಳತೀರದು . ಬೆಳಗ್ಗಿನ  ಜಾವ  ಬೇಗನೆ  ಎದ್ದು, ಎಣ್ಣೆ  ಸ್ನಾನ  ಮಾಡಿ  ಹೊಸ  ಬಟ್ಟೆಯನ್ನು  ತೊಟ್ಟು , ದೇವರ  ಪೂಜೆ  ಮಾಡಿ  ದೇವಸ್ಥಾನಕ್ಕೆ  ಹೊರಡುತ್ತಿದ್ದೆವು. ಆಮೇಲೆ  ಕಜ್ಜಾಯ  ತಿನ್ನುವ  ಸಡಗರ . ಕಜ್ಜಾಯದ  ತಯಾರಿಕೆಯಂತು 2-3 ದಿನದ  ಮುಂಚೆಯೇ  ನಡೆದಿರುತ್ತಿತ್ತು . ಅಮ್ಮ  ಪಾತ್ರೆ  ತುಂಬಾ  ಕಜ್ಜಾಯ  ಮಾಡಿರುತ್ತಿದ್ದರು .  ಇಷ್ಟೆಲ್ಲಾ  ಆದ  ಮೇಲೆ  ಸಂಜೆಗೆ  ಪಟಾಕಿ  ಹೊಡೆಯುವ  ಸಂಭ್ರಮ. ಅಪ್ಪ  ಇದರ ಬಗ್ಗೆ ತುಂಬಾ strict. ಪಟಾಕಿಯ  ಮೇಲೆ ಹೆಚ್ಚಾಗಿ ದುಡ್ಡು  ಸುರಿಯುತ್ತಿರಲಿಲ್ಲ. ನನಗೋ ಪಟಾಕಿ ಅಂದರೆ ತುಂಬಾ  ಆಸೆ . ಆ  ಬಾಣ  ಬಿರಿಸು , ಸುರು  ಸುರು  ಬತ್ತಿ , ಫ್ಲವರ್  ಪಾಟ್ , ಲಕ್ಷ್ಮಿ ಪಟಾಕಿ , ಮತಾಪು , gun ಪಟಾಕಿ  ಎಲ್ಲ  ಇಷ್ಟ . ಆಕಾಶದೆತ್ತರಕ್ಕೆ  ಹೋಗುವ  ರಾಕೆಟ್  ಅನ್ನು  ನೋಡುವುದೆಂದರೆ  ಎಲ್ಲಿಲ್ಲದ  ಆಸೆ . ಮನೆಮಂದಿಯೆಲ್ಲಾ ಸೇರಿ ಸ್ನೇಹಿತರು ಹಾಗು ನೆರೆಹೊರೆಯವರ ಜೊತೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದೆವು. ಹೀಗೆ  ಮೂರುದಿನಗಳ  ಹಬ್ಬ  ಯಾವಾಗ  ಮುಗಿದಿತ್ತು  ಅಂತ  ಗೊತ್ತೇ  ಆಗುತ್ತಿರಲಿಲ್ಲ .

ಆದರೆ  ಈಗ  life style ಬದಲಾಗಿದೆ . ಯಾವಾಗ  ಹಬ್ಬ  ಬಂದು  ಹೋಯಿತೆನ್ನುವುದು ಗೊತ್ತೇ  ಆಗುವುದಿಲ್ಲ . ಆಫೀಸ್ಗೆ  ಒಂದು  ದಿನ  ರಜ ಸಿಕ್ಕಿರುತ್ತೆ ...ಹೀಗಾಗಿ  ಹಬ್ಬದ  ಆಚರಣೆ . ಆಚರಣೆ  ಅನ್ನೋದಕ್ಕಿಂತ , relaxing ಅನ್ನುವುದು ಉತ್ತಮ . ಮುಂಚಿನ  ಸಡಗರ  ಈಗಿಲ್ಲ. ಹೊಸಬಟ್ಟೆ  ತೊಟ್ಟು  ದೇವಸ್ಥಾನಕ್ಕೆ  ಹೋಗುವ  ಪ್ರಕ್ರಿಯೆ  ನಿಂತಿದೆ . ಈಗ  ಎಲ್ಲ  ತಿನಿಸುಗಳು  ಹೊರಗಡೆ ದೊರೆಯುವುದರಿಂದ , ಮನೆಯಲ್ಲಿ  ಮಾಡುವ  ಸಿಹಿಪರ್ದಾರ್ಥಗಳು ಅಷ್ಟಕಷ್ಟೇ. ಇನ್ನು ಸ್ನೇಹಿತರಿಗೆ ಹಬ್ಬದ wishes ನ ತಿಳಿಸಲು ಒಂದು sms ಹೋಗಿರುತ್ತೆ. ಪಟಾಕಿಗಳ ಹುಚ್ಚು  ಸಂಪೂರ್ಣ  ಬಿಟ್ಟಿದೆ . ವಾಯುಮಾಲಿನ್ಯದ  ಅರಿವು , ಅದರಿಂದ ದೇಹದ  ಮೇಲಾಗುವ  ದುಷ್ಪರಿಣಾಮಗಳ  ತಿಳುವಳಿಕೆ ಹೆಚ್ಚಿದೆ. 

ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿವೆಯಾದರೂ, ಎಲ್ಲೊ  ನಮ್ಮ  ಹಿಂದಿನ  ಸಂಪ್ರದಾಯಗಳು ಈಗಿನ  ಆಧುನಿಕತೆಯಲ್ಲಿ ಮರೆಯಾಗುತ್ತಿವೆ  ಅನ್ನಿಸುತ್ತಿದೆ . ನಮ್ಮ  ಯುವಪೀಳಿಗೆಗಳು ನಮ್ಮ ಪರಂಪರೆಯನ್ನು ಮರೆಯದಿರಲಿ  ಎಂದು  ಆಶಿಸೋಣ !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ 

Saturday, 2 November 2013

Bigg ಬಾಸ್

ಇದು  Reality showಗಳ  ಜಮಾನ. TV on ಮಾಡಿದರೆ , ಎಲ್ಲ  ಭಾಷೆಗಳ chanells ನಲ್ಲೂ  ಒಂದಲ್ಲ  ಒಂದು  reality ಶೋ ಪ್ರೋಗ್ರಾಮ್ telecast ಆಗುತ್ತಿರುತ್ತೆ. ಹಾಡು , ಡಾನ್ಸ್  ಪ್ರೊಗ್ರಾಮ್ ಗಳಿಗೆ  ಮಾತ್ರ  ಇಂತಹ ಶೋ  ಸೀಮಿತವಾಗಿಲ್ಲ . ಆಧುನಿಕ ಸ್ವಯಂವರಗಳು ಈನಡುವೆ  ಹೆಚ್ಚಿನ ಜನಮನ್ನಣೆಯನ್ನುಗಳಿಸುತ್ತಿವೆ .

ಎಲ್ಲರಿಗೂ ತಿಳಿದಿರುವ  ಹಾಗೆ , BigBoss ಸಹ TVಯಲ್ಲಿ ಬರುವ ಒಂದು Reality show. ಸರಿ ಸುಮಾರು 3 ತಿಂಗಳು ನಡೆಯುವ ಈ showದಲ್ಲಿ 12-14 Housemates ಇರುತ್ತಾರೆ. ಒಂದು ದೊಡ್ಡ ಮನೆಯಲ್ಲಿ ಇವರೆಲ್ಲ ಒಟ್ಟಿಗೆ ಬಂಧಿಯಾಗಿರುತ್ತಾರೆ. ಆ ಬಿಗ್ ಬಾಸ್ ಮನೆಯಲ್ಲಿರುವವರು ಹೊರಗಿನ ಪ್ರಪಂಚದಿಂದ ಸಂಪೂರ್ಣ cutoff. ಒಳಗೆ Entertainmentಗೆ ಅಂತ TV, Music, Newspaper, Phone, Internet ಏನೂ ಇರುವುದಿಲ್ಲ. ಇವರೆಲ್ಲ ಒಟ್ಟಿಗಿದ್ದು ಜೊತೆಗೆ ದಿನ ನೂಕಬೇಕು. ಇವರೇ  ಮನೆಯ  ಎಲ್ಲ  ಕೆಲಸವನ್ನು ಮಾಡಬೇಕಾಗುತ್ತೆ . ಕಸ  ಗುಡಿಸುವುದರಿಂದ   ಹಿಡಿದು , cleaning, cooking, washing ಎಲ್ಲ ಅಚ್ಚು ಕಟ್ಟಾಗಿ ನಡೆಯಬೇಕು. ಇದರ ಬಿಗ್ ಬಾಸ್ ದಿನ ಬೆಳಗಾದರೆ ಇವರಿಗೊಂದು Task ready ಮಾಡಿರುತ್ತಾರೆ. ಪ್ರತಿ ವಾರ Nomination ಪ್ರಕ್ರಿಯೆ  ಇರುತ್ತೆ  ಹಾಗೆ  Elimination ಸಹ  ಇರುತ್ತೆ . ಸರಿಯಾಗಿ  task ಅನ್ನು  ಶ್ರದ್ದೆಯಿಂದ ಮಾಡದೆ  ಹೋದರೆ  vote out ಆಗುವ chance ಜಾಸ್ತಿ. ಇದರ Host ವಾರಕೊಮ್ಮೆ ಬಂದು TV screen ನ ಮುಖಾಂತರ ಮನೆಯ ಒಳಗೆ entry ಕೊಟ್ಟು housemates ಗಳ ಸುಖ ದುಃಖಗಳನ್ನು ವಿಚಾರಿಸುತ್ತಾರೆ. ಇವರೇ housemates ಮತ್ತು ಹೊರಪ್ರಪಂಚದ ಒಂದು ಕೊಂಡಿ.

Housemates ಸಹ ಕೇವಲ ಸಾಮಾನ್ಯ ಜನರಲ್ಲ...Artists, Film stars, ನಾಟಕ  ರಂಗದಿಂದ  ಬಂದವರು, Politicians ಹೀಗೆ ಬೇರೆ ಬೇರೆ  ಕ್ಷೇತ್ರದಲ್ಲಿ ತಮ್ಮದೇ  ಆದ  ಛಾಪನ್ನು ಮೂಡಿಸಿಕೊಂಡವರು. ಅಥವಾ ಯಾವುದಾದರು scandleನಲ್ಲಿ ಸುದ್ದಿ ಮಾಡಿದವರು. Channelನ TRP ಹೆಚ್ಹ ಬೇಕಾದರೆ ಇಂಥ ಕೆಲವೊಂದು ಜನ ಇರಬೇಕಾಗುತ್ತೆ.

ಇಲ್ಲಿಂದ ಶುರುವಾಗುತ್ತೆ ಬಿಗ್ ಬಾಸ್ ನ ಮೋಡಿ. ನಾವು  ಸಹ  ನಮ್ಮೆಲ್ಲ  ನೆಚ್ಚಿನ  stars ಅನ್ನು ನಿಜ  ರೀತಿಯಲ್ಲಿ  ನೋಡುವ ತವಕದಿಂದ ನಮೆಲ್ಲ ಕೆಲಸಗಳನ್ನು ಬೇಗನೆ ಮುಗಿಸಿ correct ಆಗಿ  ಈ program start ಆಗುವಷ್ಟರಲ್ಲಿ  TV ಮುಂದೆ ಹಾಜರ್. ಇಲ್ಲಿಂದ  ಶುರುವಾಗುತ್ತೆ  ಇವರ  ನಿಜ ಜೀವನದ ಪರಿಚಯ. ಮೊದಲ ಕೆಲ ದಿನಗಳು  ಎಲ್ಲ  ಸರಿ  ಇರುತ್ತೆ , ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ. ಆಮೇಲೆ ನಿಧಾನವಾಗಿ ಇವರ  ನಿಜ  ಬಣ್ಣ ಹೊರಬರುತ್ತದೆ. ಸಣ್ಣದಾಗಿ  ಕೆಲವೊಬ್ಬರ  ಮಧ್ಯೆ  ಜಗಳ  ಶುರುವಾಗುತ್ತೆ, ಯಾವುದಾದರು ಒಂದು ಸಣ್ಣ ವಿಷಯಕೋಸ್ಕರ. ಅದನ್ನೇ  ದೊಡ್ಡದಾಗಿ  ಮಾಡಿ  ರಂಪ  ರಾಮಾಯಣ  ಮಾಡಿ  ಅತ್ತು  ಕರೆದು ಎಲ್ಲರ  ಅನುಕಂಪ  ಗಿಟ್ಟಿಸಿಕೊಳ್ಳುವ  ಪ್ರಯತ್ನ  ನಡೆಯುತ್ತೆ . ಕೆಲವೊಂದು  ಸಲವಂತೂ  ಒಬ್ಬರನೊಬ್ಬರು  ಹಿಗ್ಗಾಮುಗ್ಗ  ಬೈಯುತ್ತ   ಕೈ  ಸಹ  ಮಿಲಾಯಿಸುವ  ತನಕ ಹೋಗಿರುತ್ತೆ . ಇದರಿಂದ  ಬದ್ದದ್ವೇಶಿಗಳಾಗಿ ಹೊರಬಂದವರು  ಇದ್ದಾರೆ. ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಳ್ಳೋದಕ್ಕೋಸ್ಕರ ನಿರಂತರ strategic ಪ್ರಯತ್ನ ನಡೆಯುತ್ತಿರುತ್ತೆ.

BigBoss  ಅಭಿಮಾನಿಗಳಂತು ಈ show ನ ಚಾಚು ತಪ್ಪದೆ follow ಮಾಡುತ್ತಾರೆ . ಒಂದು  ದಿನವೂ  miss  ಮಾಡ್ಕೊಳಲ್ಲ . ಅಪ್ಪಿ  ತಪ್ಪಿ  elimination ಪ್ರಕ್ರಿಯೆ  ನಡೆದ  ದಿನವನ್ನು  ಮಿಸ್  ಮಾಡ್ಕೊಂಡ್ರೆ , ಯಾರು out ಆಗಿದ್ದು ಅಂತ ತಿಳಿದುಕೊಳ್ಳೋವರೆಗೊ ಅವರಿಗೆ ಸಮಾಧಾನವಿಲ್ಲ. ತಮ್ಮ favourite contestent ಯಾರಾದ್ರೂ out ಆಗ್ಬಿಟ್ರೆ , ಇವರಿಗೇನೋ ಬೇಸರ . ಅದೇ  ಬೇಡದವರು out ಆದರೆ , ಇವರ  ಸಂತೋಷ  ಹೇಳತೀರದು . "I guessed it right", "she got out yesterday" ಇಂತ  ಮಾತುಗಳು  ಆಫೀಸ್ ನಲ್ಲಿ  pantry ಗೆ ಹೋದಾಗಲೋ, cafe ಗೆ  ಹೋದಾಗಲೋ  ಕಿವಿಗೆ  ಬೀಳುತ್ತಿರುತ್ತೆ.

ಅಂತೂ ಈ  Reality show ಜನರನ್ನು ಹಿಡಿದಿಟ್ಟುಕೊಳ್ಳೋದ್ರಲ್ಲಿ ಮೇಲುಗೈ ಸಾಧಿಸಿದೆ!!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.