Saturday, 9 November 2013

ನಾನು , ಶಂಗಂ ಸಾಹಿತ್ಯ ಹಾಗು ಕನ್ನಡ

ನವೆಂಬರ್ ,  ಯಾರು  ತಾನೇ  ಮರೆಯಲು  ಸಾಧ್ಯ  ಕನ್ನಡ  ರಾಜ್ಯೋತ್ಸವದ ದಿನವನ್ನು .   ವರ್ಷ   ೫೭ನೇ  ರಾಜ್ಯೋತ್ಸವವನ್ನು ಆಚರಿಸಿದ  ವರ್ಷ . ಆಫೀಸ್ಗೆ  ರಜೆ . ಸ್ನೇಹಿತರ  ಜೊತೆ  ರಾಜ್ಯೋತ್ಸವದ  ಶುಭಾಶಯವನ್ನು  ಹಂಚಿಕೊಂಡಿದ್ದೆ . ಹೀಗೆ  ಮಾತು  ಕಥೆಯಲ್ಲಿ  ಸ್ನೇಹಿತನ  ಸಲಹೆ  ಶಂಗಂ ತಮಿಳಗಂ  ಮತ್ತು  ಕನ್ನಡ  ನಾಡು  ನುಡಿ’  ಪುಸ್ತಕವನ್ನು  ಓದಲು . ಇದು  ಕೇಂದ್ರ  ಸಾಹಿತ್ಯ  ಅಕಾಡೆಮಿಯ  ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ  ಕೃತಿ . ಇತಿಹಾಸಕಾರರಾದ ಶೆಟ್ಟರ್   ಕೃತಿಯ  ಕರ್ತ್ರು. ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ  ಕುರಿತ  ಪುಸ್ತಕ . ಹೆಚ್ಚಾಗಿ ಪುಸ್ತಕಗಳನ್ನು ಓದದ ನಾನು , ಪುಸ್ತಕದ ಹೆಸರನ್ನು ಕೇಳಿರಲಿಲ್ಲ. ಹೇಗೂ ಸಮಯ ಇದ್ದುದರಿಂದ, ಸ್ವಪ್ನ ಬುಕ್ ಹೌಸ್  ಗೆ  ಹೋಗಿ  ಬುಕ್  ಕೊಳ್ಳುವ  ಯೋಜನೆ  ಸಿದ್ದಪಡಿಸಿದೆ . ಸ್ವಲ್ಪದರಲ್ಲೇ ಪುಸ್ತಕ  ನನ್ನದಾಗಿತ್ತು . ಇನ್ನು  ಓದುವುದೊಂದು  ಬಾಕಿ . ಮಧ್ಯಾನದ  ಊಟ  ಮುಗಿಸಿ ಪುಸ್ತಕ  ಓದಲು  ಕುಳಿತೆ .

ಮುನ್ನುಡಿ  ಓದಿದಾಗಲೇ ಅರಿತೆ  ಇದು  ಹಲವು  ದಶಕಗಳ  ಇತಿಹಾಸವನ್ನು ಕುರಿತ ಚರ್ಚೆ , ಚಿಂತನೆ , ಸಂವಾದಗಳೆಂದು. ಕನ್ನಡದ  ಪುರಾತನ  ಕೃತಿಯಾದ ಕವಿರಾಜಮಾರ್ಗ  ಹಾಗು  ತಮಿಳರ  ಶಂಗಂ  ಸಾಹಿತ್ಯದ  ಬಗ್ಗೆ  ಸಮಾಲೋಚನೆ  ಕುರಿತ  ವಿಷಯ. ಶಂಗಂ ಕಾಲದ  ರಾಜಮನೆತನಗಳಾದ ಪಾಂಡ್ಯ, ಚೋಳ , ಚೇರರ ಬಗ್ಗೆ  ಇಲ್ಲಿ  ಚರ್ಚೆ  ಇದೆ .ಹಾಗೆಯೇ  ಕನ್ನಡದ  ನೆಲದಲ್ಲಿ  ರಾಜ್ಯಕಟ್ಟಿದ ಕದಂಬ , ಬಾದಾಮಿ , ಚಾಲುಕ್ಯ  ಮತ್ತು  ರಾಷ್ಟ್ರಕೂಟರು  ಸಂಸ್ಕೃತಕ್ಕೆ  ಕೊಟ್ಟ ಸ್ಥಾನಮಾನದ ಬಗ್ಗೆ  ಪ್ರಶಂಸೆ ಇದೆ. ಶಂಗಂ  ತಮಿಳರ  ಮೇಲೆ  ಬೀರಿದ  ಕನ್ನಡ  ಪ್ರಭಾವ  ಅಪಾರ . ಬಹುಕಾಲದ ವರೆಗೂ  ಲಿಪಿರಹಿತ  ಜನಾಂಗದ ತಮಿಳಗಂ  ಕಾರ್ಯಕ್ಷೇತ್ರದಲ್ಲಿ  ತಮ್ಮ  ವ್ಯವಹಾರಕ್ಕೆ  ತಮಿಳು ಬ್ರಾಹ್ಮೀ ಲಿಪಿಯನ್ನು ಬಳಸಿಕೊಂಡಿದ್ದರು .   ಶಾಸನವನ್ನು  ಹಿನ್ನಲೆಯಾಗಿಟ್ಟು ನೋಡಿದರೆ  ತಮಿಳರ  ಮೇಲೆ  ಹಳೆಗನ್ನಡ  ಬೀರಿದ  ಪ್ರಭಾವದ  ಅರಿವಾಗುತ್ತದೆ . ಇದರಿಂದ  ಶಂಗಂ  ಕಾಲಕ್ಕಾಗಲೇ ಕನ್ನಡವು ಬೆಳೆದ  ಭಾಷೆಯಾಗಿತೆಂಬುದು ತಿಳಿದು  ಬರುತ್ತದೆ.

ಕೆಲ ಅಧ್ಯಾಯಗಳನ್ನು ಶ್ರದ್ದೆ  ಇಂದ  ಓದಿದ  ಮೇಲೆ  ಅದೇ  ವಿಷಯಗಳನ್ನು  ಕೆದಕುತ್ತಾ  ಹೋದ ಹಾಗೆ ಅನ್ನಿಸಿತು. ಪುಸ್ತಕದ  ವಕ್ಕಣೆ ಗೊತ್ತಾಗಿತ್ತು . ಎರಡು  ಅಧ್ಬುತ  ಗ್ರಂಥಗಳಾದ ಕವಿರಾಜಮಾರ್ಗ ಹಾಗು ತೊಲ್ಕಾಪ್ಪಿಯಂ ಗಳ  ಕರ್ತ್ರು  ಯಾರು  ಅಂತ  ಎಲ್ಲರಿಗಿರುವ ಗೊಂದಲ, ತಿಳಿದುಕೊಳ್ಳುವ ಜಿಗ್ನ್ಯಾಸೆ ನನಗೂ ಇತ್ತು. ಇದರಲ್ಲಿ ಕಾವೇರಿ  ನದಿಯ  ಮೂಲದ  ಬಗ್ಗೆ  ಚರ್ಚೆ  ಇತ್ತು . ಎರಡೂ ರಾಜ್ಯಗಳ ಪ್ರಾಂತ್ಯಗಳನ್ನು ಧಾಟುವ ಕಾವೇರಿಯ  ನೀರಿಗೆ  ವರ್ಷ  ವರ್ಷ  ನಡೆಯುವ  ನೀರಿನ  ಯುದ್ದ  ಅಸಮಂಜಸ  ಎನಿಸ ತೊಡಗಿತು . ನಮ್ಮ  ಪೂರ್ವಿಕರು  ಬಿಟ್ಟು  ಹೋದ  ಕಾವ್ಯ  ಸಂಪತ್ತಿನ  ಅರಿವೇ  ಇಲ್ಲದ ಅಜ್ಞ್ಯಾನದ ಹೊಸ್ತಿಲನ್ನು  ಮೆಟ್ಟಿ  ನಿಂತ  ನಮ್ಮ  ಜನರ  ಭಾಷಾ  ಕಲಹದ  ಬಗ್ಗೆ  ಮನಸ್ಸು  ಖೇದಗೊಂಡಿತ್ತು. ಈಗಿನ  ಕಾಲದ  ಎಷ್ಟೋ  ಕನ್ನಡಿಗರಿಗೆ  ನಮ್ಮ  ಕನ್ನಡವೆ  ಕಬ್ಬಿಣದ  ಕಡಲೆಯಾಗಿರುವ ವಿಷಯ  ಸ್ವಲ್ಪ  ದುಃಖತರುವ  ವಿಷಯ.

ಅಂತು ಒಂದು ಅಧ್ಬುತ ಕೃತಿಯನ್ನು ಓದಿ ಮುಗಿಸಿದ್ದೆ. ಸಾಕಷ್ಟು ವಿಷಯಗಳ ಪರಿಚಯವಾಗಿತ್ತು.  ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಸಾಹಿತ್ಯವನ್ನು ಎಲ್ಲರೂ ಉಳಿಸಿ ಬೆಳೆಸಲಿ ಎಂದು ಆಶಿಸುತ್ತೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಲ್ಗೆ !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.

No comments:

Post a Comment