Sunday, 3 November 2013

ದೀಪಾವಳಿ



ದೀಪಗಳ  ಹಬ್ಬ  ದೀಪಾವಳಿ .  ಮನುಕುಲವನ್ನು  ಅಂಧಕಾರದಿಂದ  ಬೆಳಕಿನತ್ತ  ತರುವ  ಹಬ್ಬ  ದೀಪಾವಳಿ . ಮನೆಯ ಮನದ  ಕತ್ತಲನ್ನು  ಹೋಗಲಾಡಿಸಿ  ಬೆಳಕನ್ನು  ಹಚ್ಚುವ  ಹಬ್ಬ ದೀಪಾವಳಿ. ಇಷ್ಟೆಲ್ಲಾ  ವೈಭವದಿಂದ  ಕೂಡಿದ  ದೀಪಾವಳಿ  ಎಲ್ಲರ  ತನು  ಮನವನ್ನು  ಬೆಳಗಿಸುವ  ಬೆಳಕಿನ  ಹಬ್ಬವಾಗಿದೆ. 

ದೇಶಾದ್ಯಂತ  ಆಚರಿಸುವ ಈ  ಹಬ್ಬಕ್ಕೆ  ಹಲವು  ಪೌರಾಣಿಕ ಹಿನ್ನಲೆಗಳಿವೆ. ಶ್ರೀಮನ್ನಾರಾಯಣ ವರಾಹವತಾರವೆತ್ತಿ  ಲೋಕವನ್ನು  ಉದ್ದರಿಸಿದ  ಬಳಿಕ  ಅವರ  ದೇಹದಿಂದ  ಬಿದ್ದ  ಒಂದು  ತೊಟ್ಟು  ಬೆವರು  ಅಸುರಾಕೃತಿಯನ್ನು ಪಡೆದು  ಮುಂದೆ  ಅವನು  ನರಕಾಸುರನಾದನಂತೆ . ರಾಕ್ಷಸ  ಪ್ರವೃತ್ತಿಯ  ಇವನು  ಕೊನೆಗೆ  ಶ್ರೀಕೃಷ್ಣನಿಂದ  ಸಂಹಾರವಾಗುತ್ತಾನೆ. ನರಕಾಸುರನ  ತಾಯಿಯ  ಕೋರಿಕೆಯ  ಮೇರೆಗೆ  ಅವನನ್ನು ಎಲ್ಲರೂ  ನೆನೆಪಿಸಿಕೊಳ್ಳೋದಕ್ಕೋಸ್ಕರ  ಶ್ರೀಕೃಷ್ಣ  ಈ  ಹಬ್ಬವನ್ನು  ಸ್ಥಾಯಿಗೊಳಿಸಿದ  ಎಂಬುದು  ಪ್ರತೀತಿ . ಆ  ದಿನದ  ನೆನಪೇ  ನರಕ  ಚತುದರ್ಶಿ. ದೀಪಾವಳಿಯ  ಅಮಾವಾಸ್ಯೆಯ  ದಿನ  ಪಿತೃಗಳಿಗೆ  ತರ್ಪಣವನಿತ್ತು ಶ್ರದ್ದಾ  ವಿಧಿಗಳನ್ನು  ತೀರಿಸಿ  ಜನರು  ತಮ್ಮ  ಅಗಲಿದ  ಹಿರಿಯರಿಗೆ  ಭಕ್ತಿಯಿಂದ  ಪ್ರಾರ್ಥನೆ  ಸಲ್ಲಿಸುವ  ಪರಿಪಾಠವಿದೆ. ಲಕ್ಷ್ಮಿ  ಹಬ್ಬವನ್ನು  ಆಚರಿಸುವುದು ಈ  ಹಬ್ಬದ  ಮತ್ತೊಂದು  ವೈಶಿಷ್ಟ್ಯ. ಇನ್ನು  ಬಲಿಚಕ್ರವರ್ತಿಯನ್ನು  ನೆನಪಿಸಿಕೊಳ್ಳುವ  ದಿನವೇ  ಬಲಿಪಾಡ್ಯಮಿ . ಹೀಗೆ  ನರಕ  ಚತುದರ್ಶಿ , ಅಮಾವಾಸ್ಯೆ , ಬಲಿಪಾಡ್ಯಮಿ ದಿನಗಳನ್ನೊಳಗೊಂಡ  ದೀಪಾವಳಿ  ಹಬ್ಬ  ಸಂಭ್ರಮದಿಂದ  ಕೂಡಿರುತ್ತೆ .

ಮಕ್ಕಳ  ಅತ್ಯಂತ  ನೆಚ್ಚಿನ  ಹಬ್ಬ  ಇದಾಗಿದೆ . ಹೊಸ  ಬಟ್ಟೆಗಳನ್ನು  ತೊಟ್ಟು , ಮನೆಯನ್ನು ದೀಪಗಳಿಂದ  ಅಲಂಕರಿಸಿ , ಪಟಾಕಿಗಳನ್ನು  ಹಚ್ಚಿ  ಸಂಭ್ರಮಿಸುತ್ತಾರೆ.

ಈಗಿನ  ಹಬ್ಬಕ್ಕೂ  ನಾನು  ಚಿಕ್ಕವಳಾಗಿದ್ದಾಗ  ಆಚರಿಸುತ್ತಿದ್ದ  ಹಬ್ಬಕ್ಕೂ  ತುಂಬಾ  ವ್ಯತ್ಯಾಸವಿದೆ. ಆಗೆಲ್ಲ ಹಬ್ಬ  ಎಂದರೆ  ಎಲ್ಲಿಲ್ಲದ  ಸಡಗರ . ಒಂದು  ವಾರದ  ಮುಂಚೆಯೇ  ಹೊಸಬಟ್ಟೆಗಳನ್ನು ಖರೀದಿಸಿ, ಹಬ್ಬ  ಬರುವುದನ್ನೇ  ಎದಿರು  ನೋಡುತ್ತಿರುತ್ತಿದ್ದೆ . ಇನ್ನು ಹಬ್ಬದ  ದಿನವಂತೂ ಸಡಗರ  ಹೇಳತೀರದು . ಬೆಳಗ್ಗಿನ  ಜಾವ  ಬೇಗನೆ  ಎದ್ದು, ಎಣ್ಣೆ  ಸ್ನಾನ  ಮಾಡಿ  ಹೊಸ  ಬಟ್ಟೆಯನ್ನು  ತೊಟ್ಟು , ದೇವರ  ಪೂಜೆ  ಮಾಡಿ  ದೇವಸ್ಥಾನಕ್ಕೆ  ಹೊರಡುತ್ತಿದ್ದೆವು. ಆಮೇಲೆ  ಕಜ್ಜಾಯ  ತಿನ್ನುವ  ಸಡಗರ . ಕಜ್ಜಾಯದ  ತಯಾರಿಕೆಯಂತು 2-3 ದಿನದ  ಮುಂಚೆಯೇ  ನಡೆದಿರುತ್ತಿತ್ತು . ಅಮ್ಮ  ಪಾತ್ರೆ  ತುಂಬಾ  ಕಜ್ಜಾಯ  ಮಾಡಿರುತ್ತಿದ್ದರು .  ಇಷ್ಟೆಲ್ಲಾ  ಆದ  ಮೇಲೆ  ಸಂಜೆಗೆ  ಪಟಾಕಿ  ಹೊಡೆಯುವ  ಸಂಭ್ರಮ. ಅಪ್ಪ  ಇದರ ಬಗ್ಗೆ ತುಂಬಾ strict. ಪಟಾಕಿಯ  ಮೇಲೆ ಹೆಚ್ಚಾಗಿ ದುಡ್ಡು  ಸುರಿಯುತ್ತಿರಲಿಲ್ಲ. ನನಗೋ ಪಟಾಕಿ ಅಂದರೆ ತುಂಬಾ  ಆಸೆ . ಆ  ಬಾಣ  ಬಿರಿಸು , ಸುರು  ಸುರು  ಬತ್ತಿ , ಫ್ಲವರ್  ಪಾಟ್ , ಲಕ್ಷ್ಮಿ ಪಟಾಕಿ , ಮತಾಪು , gun ಪಟಾಕಿ  ಎಲ್ಲ  ಇಷ್ಟ . ಆಕಾಶದೆತ್ತರಕ್ಕೆ  ಹೋಗುವ  ರಾಕೆಟ್  ಅನ್ನು  ನೋಡುವುದೆಂದರೆ  ಎಲ್ಲಿಲ್ಲದ  ಆಸೆ . ಮನೆಮಂದಿಯೆಲ್ಲಾ ಸೇರಿ ಸ್ನೇಹಿತರು ಹಾಗು ನೆರೆಹೊರೆಯವರ ಜೊತೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದೆವು. ಹೀಗೆ  ಮೂರುದಿನಗಳ  ಹಬ್ಬ  ಯಾವಾಗ  ಮುಗಿದಿತ್ತು  ಅಂತ  ಗೊತ್ತೇ  ಆಗುತ್ತಿರಲಿಲ್ಲ .

ಆದರೆ  ಈಗ  life style ಬದಲಾಗಿದೆ . ಯಾವಾಗ  ಹಬ್ಬ  ಬಂದು  ಹೋಯಿತೆನ್ನುವುದು ಗೊತ್ತೇ  ಆಗುವುದಿಲ್ಲ . ಆಫೀಸ್ಗೆ  ಒಂದು  ದಿನ  ರಜ ಸಿಕ್ಕಿರುತ್ತೆ ...ಹೀಗಾಗಿ  ಹಬ್ಬದ  ಆಚರಣೆ . ಆಚರಣೆ  ಅನ್ನೋದಕ್ಕಿಂತ , relaxing ಅನ್ನುವುದು ಉತ್ತಮ . ಮುಂಚಿನ  ಸಡಗರ  ಈಗಿಲ್ಲ. ಹೊಸಬಟ್ಟೆ  ತೊಟ್ಟು  ದೇವಸ್ಥಾನಕ್ಕೆ  ಹೋಗುವ  ಪ್ರಕ್ರಿಯೆ  ನಿಂತಿದೆ . ಈಗ  ಎಲ್ಲ  ತಿನಿಸುಗಳು  ಹೊರಗಡೆ ದೊರೆಯುವುದರಿಂದ , ಮನೆಯಲ್ಲಿ  ಮಾಡುವ  ಸಿಹಿಪರ್ದಾರ್ಥಗಳು ಅಷ್ಟಕಷ್ಟೇ. ಇನ್ನು ಸ್ನೇಹಿತರಿಗೆ ಹಬ್ಬದ wishes ನ ತಿಳಿಸಲು ಒಂದು sms ಹೋಗಿರುತ್ತೆ. ಪಟಾಕಿಗಳ ಹುಚ್ಚು  ಸಂಪೂರ್ಣ  ಬಿಟ್ಟಿದೆ . ವಾಯುಮಾಲಿನ್ಯದ  ಅರಿವು , ಅದರಿಂದ ದೇಹದ  ಮೇಲಾಗುವ  ದುಷ್ಪರಿಣಾಮಗಳ  ತಿಳುವಳಿಕೆ ಹೆಚ್ಚಿದೆ. 

ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿವೆಯಾದರೂ, ಎಲ್ಲೊ  ನಮ್ಮ  ಹಿಂದಿನ  ಸಂಪ್ರದಾಯಗಳು ಈಗಿನ  ಆಧುನಿಕತೆಯಲ್ಲಿ ಮರೆಯಾಗುತ್ತಿವೆ  ಅನ್ನಿಸುತ್ತಿದೆ . ನಮ್ಮ  ಯುವಪೀಳಿಗೆಗಳು ನಮ್ಮ ಪರಂಪರೆಯನ್ನು ಮರೆಯದಿರಲಿ  ಎಂದು  ಆಶಿಸೋಣ !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ 

No comments:

Post a Comment