ಇದು Reality showಗಳ ಜಮಾನ. TV on ಮಾಡಿದರೆ , ಎಲ್ಲ ಭಾಷೆಗಳ chanells ನಲ್ಲೂ ಒಂದಲ್ಲ ಒಂದು reality ಶೋ ಪ್ರೋಗ್ರಾಮ್ telecast ಆಗುತ್ತಿರುತ್ತೆ. ಹಾಡು , ಡಾನ್ಸ್ ಪ್ರೊಗ್ರಾಮ್ ಗಳಿಗೆ ಮಾತ್ರ ಇಂತಹ ಶೋ ಸೀಮಿತವಾಗಿಲ್ಲ . ಆಧುನಿಕ ಸ್ವಯಂವರಗಳು ಈನಡುವೆ ಹೆಚ್ಚಿನ ಜನಮನ್ನಣೆಯನ್ನುಗಳಿಸುತ್ತಿವೆ .
ಎಲ್ಲರಿಗೂ ತಿಳಿದಿರುವ ಹಾಗೆ , BigBoss ಸಹ TVಯಲ್ಲಿ ಬರುವ ಒಂದು Reality show. ಸರಿ ಸುಮಾರು 3 ತಿಂಗಳು ನಡೆಯುವ ಈ showದಲ್ಲಿ 12-14 Housemates ಇರುತ್ತಾರೆ. ಒಂದು ದೊಡ್ಡ ಮನೆಯಲ್ಲಿ ಇವರೆಲ್ಲ ಒಟ್ಟಿಗೆ ಬಂಧಿಯಾಗಿರುತ್ತಾರೆ. ಆ ಬಿಗ್ ಬಾಸ್ ಮನೆಯಲ್ಲಿರುವವರು ಹೊರಗಿನ ಪ್ರಪಂಚದಿಂದ ಸಂಪೂರ್ಣ cutoff. ಒಳಗೆ Entertainmentಗೆ ಅಂತ TV, Music, Newspaper, Phone, Internet ಏನೂ ಇರುವುದಿಲ್ಲ. ಇವರೆಲ್ಲ ಒಟ್ಟಿಗಿದ್ದು ಜೊತೆಗೆ ದಿನ ನೂಕಬೇಕು. ಇವರೇ ಮನೆಯ ಎಲ್ಲ ಕೆಲಸವನ್ನು ಮಾಡಬೇಕಾಗುತ್ತೆ . ಕಸ ಗುಡಿಸುವುದರಿಂದ ಹಿಡಿದು , cleaning, cooking, washing ಎಲ್ಲ ಅಚ್ಚು ಕಟ್ಟಾಗಿ ನಡೆಯಬೇಕು. ಇದರ ಬಿಗ್ ಬಾಸ್ ದಿನ ಬೆಳಗಾದರೆ ಇವರಿಗೊಂದು Task ready ಮಾಡಿರುತ್ತಾರೆ. ಪ್ರತಿ ವಾರ Nomination ಪ್ರಕ್ರಿಯೆ ಇರುತ್ತೆ ಹಾಗೆ Elimination ಸಹ ಇರುತ್ತೆ . ಸರಿಯಾಗಿ task ಅನ್ನು ಶ್ರದ್ದೆಯಿಂದ ಮಾಡದೆ ಹೋದರೆ vote out ಆಗುವ chance ಜಾಸ್ತಿ. ಇದರ Host ವಾರಕೊಮ್ಮೆ ಬಂದು TV screen ನ ಮುಖಾಂತರ ಮನೆಯ ಒಳಗೆ entry ಕೊಟ್ಟು housemates ಗಳ ಸುಖ ದುಃಖಗಳನ್ನು ವಿಚಾರಿಸುತ್ತಾರೆ. ಇವರೇ housemates ಮತ್ತು ಹೊರಪ್ರಪಂಚದ ಒಂದು ಕೊಂಡಿ.
Housemates ಸಹ ಕೇವಲ ಸಾಮಾನ್ಯ ಜನರಲ್ಲ...Artists, Film stars, ನಾಟಕ ರಂಗದಿಂದ ಬಂದವರು, Politicians ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡವರು. ಅಥವಾ ಯಾವುದಾದರು scandleನಲ್ಲಿ ಸುದ್ದಿ ಮಾಡಿದವರು. Channelನ TRP ಹೆಚ್ಹ ಬೇಕಾದರೆ ಇಂಥ ಕೆಲವೊಂದು ಜನ ಇರಬೇಕಾಗುತ್ತೆ.
ಇಲ್ಲಿಂದ ಶುರುವಾಗುತ್ತೆ ಬಿಗ್ ಬಾಸ್ ನ ಮೋಡಿ. ನಾವು ಸಹ ನಮ್ಮೆಲ್ಲ ನೆಚ್ಚಿನ stars ಅನ್ನು ನಿಜ ರೀತಿಯಲ್ಲಿ ನೋಡುವ ತವಕದಿಂದ ನಮೆಲ್ಲ ಕೆಲಸಗಳನ್ನು ಬೇಗನೆ ಮುಗಿಸಿ correct ಆಗಿ ಈ program start ಆಗುವಷ್ಟರಲ್ಲಿ TV ಮುಂದೆ ಹಾಜರ್. ಇಲ್ಲಿಂದ ಶುರುವಾಗುತ್ತೆ ಇವರ ನಿಜ ಜೀವನದ ಪರಿಚಯ. ಮೊದಲ ಕೆಲ ದಿನಗಳು ಎಲ್ಲ ಸರಿ ಇರುತ್ತೆ , ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ. ಆಮೇಲೆ ನಿಧಾನವಾಗಿ ಇವರ ನಿಜ ಬಣ್ಣ ಹೊರಬರುತ್ತದೆ. ಸಣ್ಣದಾಗಿ ಕೆಲವೊಬ್ಬರ ಮಧ್ಯೆ ಜಗಳ ಶುರುವಾಗುತ್ತೆ, ಯಾವುದಾದರು ಒಂದು ಸಣ್ಣ ವಿಷಯಕೋಸ್ಕರ. ಅದನ್ನೇ ದೊಡ್ಡದಾಗಿ ಮಾಡಿ ರಂಪ ರಾಮಾಯಣ ಮಾಡಿ ಅತ್ತು ಕರೆದು ಎಲ್ಲರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಯುತ್ತೆ . ಕೆಲವೊಂದು ಸಲವಂತೂ ಒಬ್ಬರನೊಬ್ಬರು ಹಿಗ್ಗಾಮುಗ್ಗ ಬೈಯುತ್ತ ಕೈ ಸಹ ಮಿಲಾಯಿಸುವ ತನಕ ಹೋಗಿರುತ್ತೆ . ಇದರಿಂದ ಬದ್ದದ್ವೇಶಿಗಳಾಗಿ ಹೊರಬಂದವರು ಇದ್ದಾರೆ. ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಳ್ಳೋದಕ್ಕೋಸ್ಕರ ನಿರಂತರ strategic ಪ್ರಯತ್ನ ನಡೆಯುತ್ತಿರುತ್ತೆ.
BigBoss ಅಭಿಮಾನಿಗಳಂತು ಈ show ನ ಚಾಚು ತಪ್ಪದೆ follow ಮಾಡುತ್ತಾರೆ . ಒಂದು ದಿನವೂ miss ಮಾಡ್ಕೊಳಲ್ಲ . ಅಪ್ಪಿ ತಪ್ಪಿ elimination ಪ್ರಕ್ರಿಯೆ ನಡೆದ ದಿನವನ್ನು ಮಿಸ್ ಮಾಡ್ಕೊಂಡ್ರೆ , ಯಾರು out ಆಗಿದ್ದು ಅಂತ ತಿಳಿದುಕೊಳ್ಳೋವರೆಗೊ ಅವರಿಗೆ ಸಮಾಧಾನವಿಲ್ಲ. ತಮ್ಮ favourite contestent ಯಾರಾದ್ರೂ out ಆಗ್ಬಿಟ್ರೆ , ಇವರಿಗೇನೋ ಬೇಸರ . ಅದೇ ಬೇಡದವರು out ಆದರೆ , ಇವರ ಸಂತೋಷ ಹೇಳತೀರದು . "I guessed it right", "she got out yesterday" ಇಂತ ಮಾತುಗಳು ಆಫೀಸ್ ನಲ್ಲಿ pantry ಗೆ ಹೋದಾಗಲೋ, cafe ಗೆ ಹೋದಾಗಲೋ ಕಿವಿಗೆ ಬೀಳುತ್ತಿರುತ್ತೆ.
ಅಂತೂ ಈ Reality show ಜನರನ್ನು ಹಿಡಿದಿಟ್ಟುಕೊಳ್ಳೋದ್ರಲ್ಲಿ ಮೇಲುಗೈ ಸಾಧಿಸಿದೆ!!!
*Spelling mistakes ಗಳ ಬಗ್ಗೆ ಕ್ಷಮೆ ಇರಲಿ.
No comments:
Post a Comment