Saturday, 19 October 2013

ನಾಮಕರಣ

ನನ್ನ  ಆಫೀಸ್  Friend ರಮ್ಯ  ಮಗುವಿನ  ನಾಮಕರಣವಿತ್ತು. ಆಫೀಸ್ ವರೆಗೂ  ಬಂದು  ಎಲ್ಲರನ್ನೂ invite ಮಾಡಿ  ಹೋಗಿದ್ದರು . ISKCON ನಲ್ಲಿ  function  ಇಟ್ಕೊಂಡಿದ್ರು . Weekday ಆಗಿರೋದ್ರಿಂದ  ಹಾಗು  friends company ಇರೋದ್ರಿಂದ  functionಗೆ  ಹೋಗುವ  ತೀರ್ಮಾನ  ಮಾಡಿದ್ದೆ . I was all set to go.

Function ದಿನ  ಬಂದೇ ಬಿಟ್ಟಿತ್ತು. ಆಫೀಸ್  ಗೆ  ಬಂದಾಗ ಸೋಹನ್ ಹೇಳಿದ್ರು  ಸ್ವಲ್ಪ  ಬೇಗನೆ  ಹೊರಡುವ  on the way gift purchase ಮಾಡ್ಬೇಕು  ಅಂತ . ಸರಿ  11.15 ಕ್ಕೆ start ಮಾಡೋಣ  ಅಂತ  decide ಮಾಡಿದ್ವಿ . ಕೆಲಸದಲ್ಲಿ  busy ಆಗ್ಬಿಟ್ಟು ಟೈಮ್  ಹೋಗಿದ್ದೇ ಗೊತ್ತಾಗ್ಲಿಲ್ಲ . 11.15 ಆಗೋಷ್ಟರಲ್ಲಿ ಸೋಹನ್ ನಿಂದ  2 ಸಲ  reminder ಬಂದಿತ್ತು . ಸರಿ  ಬೇಗನೆ  ಕೆಲಸನ  wrap up ಮಾಡಿ  parking lot ge ಹೋದೆಸೋಹನ್  ಜೊತೆ  ಕಾರ್ ನಲ್ಲಿ  ಹೊರಡಬೇಕಿತ್ತು . ಆದರೆ  ಮಹಾನುಭಾವ  ಕಾರ್  ಕೀನೇ  ಮರೆತು  ಬಂದಿದ್ರು. ಹಾಗೂ ಹೀಗೂ  ಆಫೀಸ್ನಿಂದ  ಹೊರಟೆವು . ಆದರೆ  ನಮ್ಮ  ದುರಾದುಷ್ಟಕ್ಕೆ , ಹೆಬ್ಬಾಲ್  ಕಡೆ  ದಾರಿನ  block ಮಾಡಿದ್ರು . No point in waiting ಅಂತ  left ತೊಗೊಂಡು  U trun ಮಾಡ್ಕೊಂಡು  ಬರೋಣ  ಅಂತ  ಹೊರಟೆವು . ಸ್ವಲ್ಪ  ದೂರ  ಮಾತ್ರ  ಹೋಗಬೇಕು  U turn ತೊಗೊಳಕ್ಕೆ  ಅನ್ಕೊಂಡ  ನಮಗೆ  U ಕಾಣಿಸಲೇ  ಇಲ್ಲಸೋಹನ್  frustration ಮುಖದಲ್ಲಿ ಕಾಣಿಸುತ್ತಿತ್ತು. ಕೊನೆಗೂ  ಹೆಬ್ಬಾಲ್  ಕಡೆ  car ತಿರುಗಿತ್ತು . ಬೇರೆಯವರು  12 ಕ್ಕೆ ಹೊರಡುತ್ತಾರೆ  ಅಂದಿದ್ರು . ನಾವು   ಇಷ್ಟೆಲ್ಲಾ  circus ಮಾಡಿ  ಹೋಗೋಷ್ಟರಲ್ಲಿ  ಬೇರೆಯವರು  ನಮ್ಮ   ಜೊತೇನೇ  join ಆಗ್ತಾರೇನೋ ಅನ್ಕೊಂಡಿದ್ವಿ . ಆದರೆ  ಹಾಗಾಗಲಿಲ್ಲ .

ಸೋಹನ್ Route ಮ್ಯಾಪ್  on ಆಯಿತು  mobileನಲ್ಲಿ . Frenchನಲ್ಲಿ  instructions set ಮಾಡಿದ್ರು . French  ಗಂಧ  ಅರಿಯದ  ನನಗೆ  ತುಂಬಾ  ತಮಾಷೆಯಾಗಿತ್ತು ಕೇಳಲು. French ಅರೆದು ಕುಡಿದ ಇವರು instructions follow ಮಾಡ್ಕೊಂಡು Malleswaram ತಲುಪಿದ್ವಿ. Cloud Nine ಮುಂದೆ ಕಾರ್ ನಿಲ್ತು .'Mom and Me' ಗೆ  ಹೋಗ್ಬೇಕಿತ್ತಲ್ಲ   ಅನ್ಕೊಂಡ ನನಗೆ , Hospital ವಳಗೆ    shop ಇರುವ  ಬಗ್ಗೆ  ತಿಳಿಯಿತು . ಸರಿ  basement ಗೆ  ಹೋದ್ವಿ . Mom & me ಎದುರಾಯಿತು . ಎಲ್ಲ  ಮಕ್ಕಳ  items, good collection. ಬೇಕಾದ items   select ಮಾಡಿದ್ವಿ . ಆಗಲೇ  12.45 ಆಗಿತ್ತುಸೋಹನ್  gifts ಗಳ photo ತೊಗೊಂಡ್ರು  ಬೇರೆಯವರಿಗೆ  ತೋರಿಸಲು . Gift wrap ಮಾಡಿಸಿ  ಹೊರಡೋಷ್ಟೊತ್ತಿಗೆ  1 ಆಗಿತ್ತು . ಇನ್ನೇನು  ಕಾರ್  start ಮಾಡಿದ್ವಿಸಿದ್ಹ್  ಕಾಲ್  ಮಾಡಿದ್ರು  ಎಲ್ಲಿದ್ದೀರಾ  ಅಂತ  ಕೇಳಲು . ಸರಿ  ಇನ್ನೊಂದು  10 ನಿಮಿಷದಲ್ಲಿ  Iskconನಲ್ಲಿ  ಇರ್ತೀವಿ ಅಂತ  ಹೇಳಿ  ಹೊರಟೆವು .

ISKCON ತಲುಪಿ  ಮಥುರ  ಹಾಲ್  ಗೆ  ಹೋದಾಗ  ವಿಕಾಸ್ , ರಮ್ಯ  husband ಎದುರಾದರು . ನಿಮ್ಮ  Freinds ಎಲ್ಲ  Temple ಗೆ  ಹೋಗಿದ್ದಾರೆ ಅಂದ್ರು . ನನಗೂ  ಹೋಗುವ  plan ಇತ್ತು. Call ಮಾಡಿ  ಎಲ್ಲಿದ್ದಾರೆ ಅಂತ  ವಿಚಾರಿಸ್ಕೊಳುವ ಅನ್ಕೊಂಡ್ರೆ , signal ಸಿಕ್ಲಿಲ್ಲ . ಆಗಲೇ  Function ಎಲ್ಲ  ಮುಗಿದು  ಜನ ಊಟಕ್ಕೆ  ಕೂತಿದ್ರುಸುಹಾಸ್  ಬೆಳಗಿನಿಂದ  ಎಲ್ಲ  ಹೊಸ  ಮುಖಗಳನ್ನು  ನೋಡಿ  ರಚ್ಚೆ  ಹಿಡಿದಿದ್ದ . ರಮ್ಯ  ಅವನನ್ನ  ಸಮಾಧಾನ  ಮಾಡಲು  ಒಳಗೆ  ಕರೆದು  ಕೊಂಡು  ಹೋದರು . ನಾನು  ಮತ್ತೆ  ಸೋಹನ್ ಇಬ್ಬರೇ  ಉಳ್ಕೊಂದ್ವಿ  ಹಾಲ್ ನಲ್ಲಿ . ಹೊರಗಡೆ  ಬಿಸಿಲಿನಿಂದ  ಬಂದ  ನಮಗೆ  ಶೆಕೆ  ಆಗ್ತಿತ್ತು. ಹೋಗಿ  3600 ಫ್ಯಾನ್  ಕೆಳಗೆ  ಕೂತ್ಕೊಂದ್ವಿ. ಮತ್ತೆ  try ಮಾಡಿದರೂ signal ಸಿಗ್ಲಿಲ್ಲ. ಸರಿ  ಹೊರಗಡೆ  ಹೋದ್ರೆ  signal ಸಿಗುತ್ತೆ  ಅನ್ಕೊಂದ್ವಿ . ಕೈನಲ್ಲಿ  gift ಕವರ್  ಇತ್ತು . ಅದನ್ನ  ಹೊತ್ಕೊಂಡು  ಓಡಾಡ್ಹೋಬದಲು ರಮ್ಯನಿಗೆ  ಕೊಟ್ಟು  ಹೋಗೋಣ  ಅನ್ಕೊಂಡು  ಒಳಗೆ  ಹೋಗಿ  ಕೊಟ್ಟು  ಬಂದೆ. ಹೊರಗಡೆ  ಬಂದು  ಸ್ವಲ್ಪ  ಹೊತ್ತು  wait ಮಾಡಿದ್ಮೇಲೆ  ಆನಂದ್ , ಸಿದ್ಹ್ , ಸಿಬಿ  ಮತ್ತೆ  ಶಾಂತಿ  ಕಾಣಿಸಿದರು. Temple ದರ್ಶನ  ಮುಗಿಸಿ  ಬರ್ತಿದ್ರು .ಅಗರಬತ್ತಿಯ  shopping ಜೋರಾಗಿ  ನಡೆದಿತ್ತು . Temple ಅಷ್ಟರಲ್ಲೇ  close ಆಯಿತು  ಅಂತ  ಕೇಳಿ  ನನಗೆ  ಸ್ವಲ್ಪ  ಬೇಜಾರಾಯಿತು . ಇಷ್ಟು  ದೂರ  ಬಂದು  templeಗೆ  ಹೋಗಲಾಗಲಿಲ್ಲವಲ್ಲ  ಅಂತ . ಆದರೆ  ಸೋಹನ್  ಮುಖದಲ್ಲಿಯ  ಅಸಮಧಾನ  ಬೇರೆಯೇ  ಕಾರಣಕ್ಕೆ  ಅಂತ ತಿಳಿಯಿತು . ಅವರು  ಆಫೀಸ್ನಿಂದ  ಹೊರಡುವಾಗಲೇ  ಅಗರಬತ್ತಿಯ  shopping ಮಾಡ್ಬೇಕು  ಅಂತ  ಹೇಳಿದ್ರು . ಅವರ  main objective ಅಗರಬತ್ತಿ  purchase ಮತ್ತೆ  Orion mall ನಲ್ಲಿ  shopping ಆಗಿತ್ತು.

ಸರಿ , ಎಲ್ಲರೂ  ಮತ್ತೆ  ಹಾಲ್   ಒಳಗೆ  ಹೋದೆವು . ಊಟಕ್ಕೆ  ಕುಳಿತ  batch ಇನ್ನೂ  ಊಟ  ಮುಗಿಸಿರಲಿಲ್ಲ . ರಮ್ಯ  ಮಗುವನ್ನು  ಮಲಗಿಸಿ  ಹೊರಗಡೆ  ಬಂದಿದ್ದರು . ಅವರ  ಜೊತೆ  ಒಂದಷ್ಟು  ಹರಟೆ  ಹೊಡೆದೆವುಸೋಹನ್ಗೆ  ಏನೋ  ಅವತ್ತು  ಫೋಟೋ  ತೆಗೆಯುವ  ಆಸಕ್ತಿ ಬಂದಿತ್ತು . ಎಲ್ಲರೂ  gift ಕೊಡುವ  ಒಂದು  ಗ್ರೂಪ್  ಫೋಟೋ  ಹಿಡಿಸ್ಕೊಳೋಣ  ಅಂದ್ರು . Oops..ಆದರೆ  ಆಗಲೇ  ನಾನು  gift ಕೊಟ್ಬಿಟ್ಟಿದ್ದೆ. Formal ಆಗಿ  ಕೊಟ್ಟಿರಲಿಲ್ಲವಾದ  ಕಾರಣ ಮತ್ತೆ  ಒಳಗೆ  ಹೋಗಿ  ತೆಗೆದು ಕೊಂಡು  ಬನ್ನಿ  ಅಂದ್ರು . ನನಗೆ  ತೀರ  ಮುಜುಗುರವಾಯಿತು , ಕೊಟ್ಟ  gift   ಮತ್ತೆ  ಹೇಗೆ  ಕೇಳಲು  ಸಾಧ್ಯ  ಅಂತ . ನಾನು  ಹೋಗಿ  ತರಲು  ಹಿಂದೇಟು  ಹಾಕಿದೆ. ಆದರೆ  ಸೋಹನ್  ಬಿಡಲಿಲ್ಲ . ಅವರೇ  ರಮ್ಯ  ಕೇಳಿ  ಮತ್ತೆ  ವಾಪಸ್  ತೊಗೊಂಡು  ಬಂದರು . ಮತ್ತೆ  ಕೊಟ್ಟ  ಶಾಸ್ತ್ರ ಮಾಡಿ  ಫೋಟೋ  ತೆಗಿಸ್ಕೊಂದ್ವಿ. ಅಷ್ಟರಲ್ಲೇ  ಎಲ್ಲರಿಗೂ  ಹೊಟ್ಟೆ  ತಾಳ  ಹಾಕುತಿತ್ತು . 1st batch ಊಟ  ಮುಗಿದಿತ್ತು . ನಾವು  ಎಲ್ಲ  ಹೋದೆವು  ಊಟ  ಮಾಡಲು .


ಬಗೆ  ಬಗೆಯ  ಭಕ್ಷ್ಯಗಳು . ಊಟ  ಚೆನ್ನಾಗಿತ್ತು . ಪೇಣಿ , ಮೈಸೂರ್  ಪಾಕ್  ಸ್ವೀಟ್ಸ್ . Pineapple ಕೂಟು ಎಲ್ಲರಿಗೂ  ಇಷ್ಟವಾಗಿತ್ತು . ಊಟ  ಮುಗಿಸಿ  ತಾಂಬೂಲ  ತೆಗೆದುಕೊಂಡು  ಮಗುವನ್ನು  ನೋಡಲು  ಒಳಗೆ  ಬಂದ್ವಿಸುಹಾಸ್  ಆಗಲೇ  ಎದ್ದು  ತೊಟ್ಟಿಲಲ್ಲಿ  ಆಟ  ಆಡ್ತಿದ್ದ . ಮುದ್ದಾದ ಮಗು . ಸ್ವಲ್ಪ  ಹೊತ್ತು  ಅವನ  ಜೊತೆ  ಕಾಲ  ಕಳೆದು  ಹೊರಡಲು  ಅನುವಾದೆವು . ಎಲ್ಲರಿಗೂ  ಹೇಳಿ  ಹೊರಟಿದ್ವಿಸೋಹನ್ ಅಗರಬತ್ತಿ  purchase ಮಾಡ್ಬೇಕು  ಅಂದ್ರು . ಅವರು  ಅಗರಬತ್ತಿಯನ್ನು  ತೆಗೆದುಕೊಂಡು  ಹೋಗಲೇ  ಬೇಕೆಂಬ  ತೀರ್ಮಾನ  ಮಾಡಿದ್ದರು . ಆದರೆ  temple ಮತ್ತೆ  ಸಂಜೆಗೇ open ಆಗುವುದು ಅಂದರು . Mobile ಗಾಡಿಯೂ  ಕೈಕೊಟ್ಟಿತ್ತು . ಆದರೆ  ಅವರು  ಪಟ್ಟು  ಬಿಡಲಿಲ್ಲ . ಅವರ  ಹಠ  ನೋಡಿ ಕೊನೆಗೆ  ಆನಂದ್  ತಾವು  purchase ಮಾಡಿದ  packet  ಅವರಿಗೇ ಕೊಟ್ಬಿಟ್ರು. Wow...ಸೋಹನ್  ಮುಖದಲ್ಲಿ  ವಿಜಯದ  ನಗೆ. ಅವರ  ಒಂದು  objective successful ಆಗಿ  complete ಆಗಿತ್ತು . Orion ಮಾಲ್  shopping ಒಂದು  ಉಳಿದಿತ್ತು . ನಾನು  ಮತ್ತೆ  ಸಿಬಿಯನ್ನು  ಬಿಟ್ಟು , ಎಲ್ಲರೂ  ವಾಪಸ್ ಮನೆಗೆ  ಹೋಗುವ  ತೀರ್ಮಾನ  ಮಾಡಿದ್ದರು . ನಾನು  ಆಫೀಸ್ಗೆ  ಹೋಗಿ  ಮೀಟಿಂಗ್  attend ಮಾಡಬೇಕಿತ್ತು.  Shopping ಮಾಡೋಷ್ಟು  ಟೈಮ್  ಇರ್ಲಿಲ್ಲಸೋಹನ್  ಏನಾದರು  shopping ಮಾಡ್ಬೇಕು  ಅಂದ್ರೆ, ಅವರನ್ನು ಇಲ್ಲಿಯೇಬಿಟ್ಟು  ನಾನು  ಮತ್ತೆ  ಸಿಬಿ  ಆಟೋದಲ್ಲಿ  ಆಫೀಸ್ ಗೆ   ಹೋಗಿ  ಬಿಡುವ  ಅಂತ  decide ಮಾಡಿದ್ವಿ . ಸಧ್ಯಕ್ಕೆ  ಸೋಹನ್  ಹಠ  ಹಿಡಿಯಲ್ಲಿಲ್ಲ . ಆಫೀಸ್ ಗೆ  ಹೊರಡಲು  ಒಪ್ಪಿದರು . ಎಲ್ಲರಿಗೂ  ವಿಧಾಯ  ಹೇಳಿ  ನಾವು ಕಾರ್  ಹತ್ತಿದ್ದೆವು .

ಈ ಎಲ್ಲದರ ಮಧ್ಯೆ ನನಗೆ  Temple ದರ್ಶನ ಮಾಡೊಕ್ಕಾಗಲೇ ಇಲ್ಲ. “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು,,,” ಅನ್ನುವ ಗೋಪಾಲಕೃಷ್ಣ ಅಡಿಗರ ಹಾಡು ಮನದಲ್ಲಿ ತೇಲಿಹೋಯಿತು ...... !!!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.

No comments:

Post a Comment