Wednesday, 16 October 2013

ನಳಪಾಕ

ಅವತ್ತು  ಆಫೀಸ್ನಿಂದ  ಬೇಗನೆ ಮನೆಗೆ  ಬಂದಿದ್ದೆ . Usually ಆಫೀಸ್  ಕ್ಯಾಬ್ ನಲ್ಲಿ  ಬಂದ್ರೆ  ಮನೆ  ತಲುಪೋಷ್ಟುತ್ತಿಗೆ  ಆಗಲೇ ಕತ್ತಲಾಗಿರುತ್ತೆ . ಇವತ್ತು  ಇನ್ನೂ  ಸಂಜೆಯ  ಬೆಳಕಿತ್ತು . ಸರಿ , ಸ್ವಲ್ಪ  ಆಫೀಸ್  ಕೆಲಸ  ಮುಗಿಸಿ , walk ಗೆ  ಹೊರಟಿದ್ದೆ . walk ಮುಗಿಸಿ  ಬಂದ ಮೇಲೂ , ಸಾಕಷ್ಟು  ಸಮಯ ಇತ್ತು  ನನ್ನ  serial start  ಆಗಲು .  ಏನಾದರು  ಮಾಡುವ  ಅನ್ನಿಸ್ತು . ಅಷ್ಟರಲ್ಲಿ  Dining table ಮೇಲೆ  ಮೊನ್ನೆ  ತಂದ  sweet corn ಕಾಣಿಸ್ತು . ಅಮ್ಮ  ಯಾವಾಗಲು ಹೇಳುವ ಮಾತು ನೆನಪಾಯಿತು, ಸುಮ್ನೆ  ತಂದು  use ಮಾಡೋದೇ  ಇಲ್ಲ ಹಳೆದು ಮಾಡ್ಕೊಂಡು ತಿನ್ತೀರಾ ಅಂತ . ಸರಿ , sweet corn ನಲ್ಲಿ  ಏನಾದ್ರು  ಮಾಡೋಣ  ಅನ್ನಿಸ್ತು . ತಕ್ಷಣ  ಮನಸ್ಸಿಗೆ  ಹೊಳೆದದ್ದು  Sweet corn soup.

ನೆಟ್  ನಲ್ಲಿ  check ಮಾಡ್ದೆ  soup ನ  receipe ಬಗ್ಗೆ . ತುಂಬಾ  simple ಅನ್ನಿಸ್ತು . ಅದಕ್ಕೆ  ಬೇಕಾಗಿರುವ  basic ingredients ಎಲ್ಲ  ಇತ್ತು . ಅಮ್ಮನಿಗೆ  corn flour ಇದೆಯಾ  ಅಂತ  ಕೇಳಿದೆ. ಸ್ವಲ್ಪ ಮಾತ್ರ ಇದೆ  ಅಂದ್ರು . ಸರಿ  ಹೋಗಿ  ಅಂಗಡಿ  ಇಂದ  ತಂದು  ಬಿಡೋಣ  ಅನ್ಕೊಂಡು , sweet corn ನ  cooker ನಲ್ಲಿ  ಬೇಯಿಸಕ್ಕೆ  ಇಟ್ಟೆ. corn flour ತರುವಷ್ಟರಲ್ಲಿ  corn ಬೆಂದ್ದಿತ್ತು. Vegetables ಏನಿದೆ  ಅಂತ  fridge ನಲ್ಲಿ  check ಮಾಡ್ದೆ . ಕ್ಯಾರಟ್  ಮತ್ತೆ  ಬೀನ್ಸ್  ಇಟ್ಟು . ಸಾಕು  ಇಷ್ಟು  ಅಂತ  preparations ಗೆ  ಸಿದ್ದವಾದೆ . Lalbagh ನಿಂದ  ತಂದ  vegetable chopper ಅನ್ನು ಹೆಚ್ಚು  use ಮಾಡಿರಲಿಲ್ಲ . ಈಗ  ಅದು  ಉಪಯೋಗಕ್ಕೆ  ಬಂತು. ಕ್ಯಾರಟ್  ಮತ್ತೆ  ಬೀನ್ಸ್  ನ  ಅದರಲ್ಲಿ  chop ಮಾಡಿಕೊಂಡು  soup ಪ್ರಿಪೇರ್  ಮಾಡಲು  ಹೊರಟೆ. ಜಾಸ್ತಿ  ಟೈಮ್  ಹಿಡಿಯಲಿಲ್ಲ . 15 ನಿಮಿಷದಲ್ಲಿ soup ರೆಡಿಯಾಗಿತ್ತು . ಒಂದು ಮಟ್ಟಿಗೆ ಚೆನ್ನಾಗಿ  ಬಂದ್ದಿತ್ತು . ಆದರೆ  quantity ಜಾಸ್ತಿ  ಆಗ್ಬಿಟ್ಟಿತ್ತು. ಇಷ್ಟೊಂದು  ಹೇಗಪ್ಪ  ಖಾಲಿ  ಮಾಡೋದು  ಅನ್ಕೊಂಡು ಸ್ವಲ್ಪ  nephew ಗೆ  ಕೊಟ್ಟು  ಬಂದೆ . ಅವರಾಗಲೇ  ಊಟ  ಮುಗಿಸಿದ್ದರು ...ಆದರೂ ತುಂಬಾ  ಚೆನ್ನಾಗಿದೆ  ಅಂತ  ಮಾರ್ಕೆಟ್  ಮಾಡಿ  ಒಂದಷ್ಟನ್ನು  ಕೊಟ್ಟಿದ್ದೆ . ಅಮ್ಮ  ಟೇಸ್ಟ್  ಮಾಡಿ  not bad ಅಂದ್ರು . ನನಗೆ  good ಅನ್ನಿಸ್ತು . ಸ್ವಲ್ಪ  pepper ಮತ್ತೆ  corn flour mix ಜಾಸ್ತಿ  ಆಗಿತ್ತು . ಇವೆರಡನ್ನೂ  ಸ್ವಲ್ಪ  ಕಮ್ಮಿ  ಮಾಡಿದರೆ  ಇನ್ನೂ  ಚೆನ್ನಾಗಿರುತ್ತೆ  ಅನ್ನಿಸ್ತು . vegetables ನ ನೀರಿನಲ್ಲಿ ಬೇಯಿಸೋ ಬದಲು vegetable stock ನಲ್ಲಿ ಬೇಯಿಸಿದರೆ ಇನ್ನೂ tasty ಆಗಿರುತ್ತೆ  ಅಂತ  ಹೇಳಿದ್ದರು. Next time ಮಾಡುವಾಗ ಇದನ್ನು  ಗಮನದಲ್ಲಿ ಇಟ್ಕೋಬೇಕು  ಅನ್ಕೊಂಡು  ನನ್ನ  ಬೌಲ್ ನಲ್ಲಿಯ  soup ನ  ಖಾಲಿ  ಮಾಡಿದ್ದೆ serial ನೋಡುತ್ತಾ. ಇಲ್ಲಿಗೆ  ನನ್ನ  soupನ  ನಳಪಾಕ  ಮುಗಿದಿತ್ತು.

ಹಾಗೆ  ನನ್ನ  cooking list ಗೆ  Sweet corn vegetable soup add ಆಗಿತ್ತು !!!

Sweet Corn Vegetable Soup

No comments:

Post a Comment