ಫೋಟೋಗ್ರಫಿ ಅಂದಾಕ್ಷಣ ಮನಸ್ಸಿಗೆ ಬರೋದು camera. ಈ ಒಂದು ಸಣ್ಣ ವಸ್ತುವಿನಲ್ಲಿ ಪ್ರಪಂಚದ ಸೌಂದರ್ಯವನ್ನೇ ಹಿಡಿದಿಡುವ ಶಕ್ತಿ ಇದೆ. ಸಂತೋಷ, ದುಃಖ, ಅಳು, ನಗು ಎಲ್ಲವನ್ನು ಸೆರೆಹಿಡಿಯುವ ಸಾಮರ್ಥ್ಯ ಇದಕ್ಕೆ. ಗತಕಾಲದ ನೆನಪುಗಳನ್ನು ಮರುಕಳಿಸುವ ಶಕ್ತಿ ಇದಕ್ಕಿದೆ.
ನನ್ನ ಹಾಗು ಕ್ಯಾಮೆರಾದ ವಡನಾಟ ಕೆಲವು ವರ್ಷಗಳ ಹಿಂದೆ ಶುರುವಾಯಿತು. ನನ್ನ ಮೊದಲ ಕ್ಯಾಮೆರಾ Role ಕ್ಯಾಮೆರಾ. ಆಗಿನ್ನೂ Digital ಕ್ಯಾಮೆರಾಗಳು ಅಷ್ಟು ಬಳಕೆಯಲ್ಲಿರಲಿಲ್ಲ. ನಾನು professional career ಶುರು ಮಾಡಿದ್ಮೇಲೆ ಮೊದಲ ಸಲ USಗೆ ಹೋದಾಗ purchase ಮಾಡಿದ್ದು. ಆಗೆಲ್ಲ ಹೊರದೇಶದ picturesನ capture ಮಾಡಿ ಮನೆಯಲ್ಲಿ ತೋರಿಸುವ ಒಂದು craze.
Digital ಪ್ರಪಂಚ ನನ್ನನು ಡಿಜಿಟಲ್ ಕ್ಯಾಮೆರಾದ ಮೋಡಿಗೆ ಬೀಳಿಸಿತು. ಸರಿ, Role ಕ್ಯಾಮೆರಾ ಹೋಗಿ ಹೆಗಲಿಗೆ ಡಿಜಿಟಲ್ ಕ್ಯಾಮೆರಾ ನೇತಾಡಲು ಶುರುವಾಯಿತು. ಪ್ರಪಂಚವನ್ನೆಲ್ಲಾ ಸುತ್ತಾಡಿ ಬರುವ ಆಸೆ ನನಗೆ. ಫೋಟೋಗ್ರಫಿ ಹುಚ್ಚು ನನ್ನ Travelಗೆ ಅನುಕೂಲವಾಯಿತು. ಹೋದ ಕಡೆಯಲ್ಲೆಲ್ಲಾ ಕ್ಯಾಮೆರಾ ನನ್ನ ಜೊತೆಗಿರುತ್ತಿತ್ತು. ನನ್ನ ಪಯಣ ಶುರುವಾಯಿತು. ಗೋವಾ , ಮೈಸೂರ್ , ರಾಜಸ್ಥಾನ್ , ಉತ್ತರಖಂಡ್ , ಲಡಾಖ್, ಅಮ್ರಿತಸರ್, ಆಗ್ರಾ , ಹಳೆಯ ಶತಮಾನಗಳ ದೇವಸ್ಥಾನಗಳು ಹೀಗೆ ಎಲ್ಲ ಕಡೆ ಸುತ್ತಾಡಿ ಬಂದೆ. ಸಾವಿರಾರು ಫೋಟೋಸ್ ನ capture ಮಾಡಿದ್ದೆ ಹಾಗು ಸ್ನೇಹಿತರ ಜೊತೆ share ಮಾಡಿದ್ದೆ.
ಹೀಗಿರುವಾಗ, ಆಫೀಸಿನಲ್ಲಿ ಒಂದು ಫೋಟೋಗ್ರಫಿ contest ಇಟ್ಟಿದ್ರು. ಸಾಮಾನ್ಯವಾಗಿ ಡಿಸೆಂಬರ್ ತಿಂಗಳನ್ನು vacation month ಅಂತ ಹೇಳಬಹುದು. Vacation pictures ಈ ಫೋಟೋಗ್ರಫಿ ಕಾಂಟೆಸ್ಟ್ನ theme ಆಗಿತ್ತು. ಆಗ ತಾನೇ ಅಮ್ರಿತಸರ್ ಹಾಗೂ ಉತ್ತರಖಂಡ್ ಗೆ ಹೋಗಿ ಬಂದಿದ್ದೆ. ಸರಿ, ನನಗೂ ಈ contest ನಲ್ಲಿ ಭಾಗವಹಿಸುವ ಬಯಕೆಯಾಯಿತು. ನಾನು ತೆಗೆದ ಫೋಟೋಸ್ನೆಲ್ಲ ಒಂದು ಸಾರಿ glance ಮಾಡಿದೆ. ಅಮ್ರಿತಸರ್ ನ Golden temple ಮತ್ತೆ ಸರಯು ನದಿಯ sunset picture ನನ್ನನ್ನ ಸೆಳೆಯಿತು. ಇವೆರಡನ್ನೆ contestಗೆ ಕಳಿಸಿದ್ದೆ. wow!!! ನನ್ನ ಆಶ್ಚರ್ಯಕ್ಕೆ ನನ್ನ Golden temple ಫೋಟೋಗೆ 2ನೇ ಬಹುಮಾನ ಬಂದಿತ್ತು. ಏನೋ ಸಾಧಿಸಿದಷ್ಟು ಸಂತೋಷ.
Golden Tample - Amritsar |
ಫೋಟೋಗ್ರಫಿ ಒಂದು ಕಲೆ. ಆದರೆ ನಾನು ಇದರ rules ಅಥವಾ conventions ಅನ್ನು ಅಷ್ಟು follow ಮಾಡೋಲ್ಲ. ಯಾವುದು ಕಣ್ಮನ ಸೆಳೆಯುತ್ತದೋ ಅದನ್ನು ಸರೆಹಿಡಿಯುವ ಆಸೆ ಅಷ್ಟೆ. ಎಲ್ಲೋ ಓದಿದ ನೆನಪು "The best images are the ones that retain their strength and impact over the years, regardless of the number of times they are viewed". ಎಷ್ಟು ಸತ್ಯ ಈ ಮಾತು.
ನನ್ನ ಬಗ್ಗೆ ಸಾಕು, ಇನ್ನು ಜನರ ಮನೋವಿಚಾರಕ್ಕೆ ಬರೋಣ. ಕೆಲವರಿಗೆ ಕ್ಯಾಮರಾಕ್ಕೆ pose ಕೊಡೋದಂದ್ರೆ ಎಲ್ಲಿಲ್ಲದ ಇಷ್ಟ, camera ಮುಂದೆ ನಿಂತುಕೊಳ್ಳುವ chanceನ miss ಮಾಡ್ಕೊಳಲ್ಲ. ಅದೇ ಕೆಲವರಿಗೆ photo ಅಂದ್ರೆ ಅಷ್ಟಕಷ್ಟೆ. ತಮ್ಮ ಭಾವಚಿತ್ರವನ್ನು ಯಾರ ಬಳಿ share ಮಾಡಲು ಇಷ್ಟಪಡುವುದಿಲ್ಲ. ಬೇರೆಯವರ ಕ್ಯಾಮೆರಾದಲ್ಲಿ ಬಿಡಿ ತಮ್ಮ ಸ್ವಂತ ಕ್ಯಾಮೆರದಲ್ಲೂ ಸೆರೆಸಿಕ್ಕಲು ಇಷ್ಟಪಡುವುದಿಲ್ಲ. ಒಬ್ಬೊಬ್ಬರದು ಒಂದೊಂದು ಮನೋಭಾವ. ನಾನು ಮೊದಲ ಗುಂಪಿಗೆ ಸೇರಿದೋಳು.
Life is like photography. We develop from the negatives. Let's capture life !!!
*Spelling mistakes ಗಳ ಬಗ್ಗೆ ಕ್ಷಮೆ ಇರಲಿ
sari ninna tappugaLannu kshamisiddeene ;)
ReplyDelete