Sunday, 29 September 2013

ಫೇಸ್ Book

ಈಗಿನ social Networking ಸೈಟ್ಗಳಲ್ಲಿ ನಮ್ಮ FaceBook ತನ್ನ  ಸಾಮ್ರಾಜ್ಯವನ್ನು ಸ್ಥಾಪಿಸಿದೆ . ಇದಕ್ಕೆ ಸಿಕ್ಕಿರುವ  ಖ್ಯಾತಿ  ಯಾವ  Hollywood ಅಥವಾ  Bollywood ನಟರಿಗೂ  ಸಿಕ್ಕಿಲ್ಲ . ಇದರ ಮೋಹ  ಎಲ್ಲ  ಪೀಳಿಗೆಯ   ಜನರನ್ನು  ಆಕರ್ಷಿಸಿದೆ. ಎಲ್ಲರಿಗೂ  ತಮ್ಮದೂ ಒಂದು facebook account ಇದೆ  ಎಂದು  ಹೇಳಿಕೊಳ್ಳಲು  ಏನೋ  ಹೆಮ್ಮೆ , ದೊಡ್ಡ ಪದಕ  ಸಿಕ್ಕಷ್ಟು  ಸಂತೋಷ. ಯುವಪೀಳಿಗೆಯ  ಜನರ  ಬದುಕು ಬೆಳಗಿನಿಂದ ರಾತ್ರಿಯವರೆಗೂ  facebook ಗೆ ಬೆಸೆದುಕೊಂಡಿರುತ್ತದೆ . ಪ್ರತಿ  ನಿಮಿಷ  ಗಂಟೆಗೆ   ಒಂದು  ಸಾರಿಯಾದರೂ ತಮ್ಮ status update ಮಾಡದೆ  ಹೋದರೆ  ಅವರಿಗೆ  ಏನೋ  ಕಳೆದುಕೊಂಡಷ್ಟು ಬೇಸರ . ಅವರ  updates ಗೆ Likes ಗಳ ಸುರಿಮಳೆ  ಬಂದರೆ  ಅದೇನೋ  ಸಾಧಿಸಿದಷ್ಟು ಸಂತೋಷ, ಪ್ರಸನ್ನಭಾವ. updates ಗಳನ್ನು ನೋಡಿದರೆ  ನಗು  ಬರುವಂತೆ  ಇರುತ್ತೆ ..ನಾನು  ತಿಂಡಿ  ತಿಂದೆ , ಊಟ  ಮಾಡಿದೆ , ಕಾಫಿ  ಕುಡಿದೆ ..ಹೀಗೆ ದಿನಚರಿಯ ಬಗ್ಗೆ. ಇದನ್ನು  ಓದಿದವರು  Like ಅಂತ press ಮಾಡಿರುತ್ತಾರೆ.  ಹೀಗೊಂದು update ಇರುತ್ತೆ ..."My wife is not keeping well today".ಇದಕ್ಕೆ  ನೂರು  Likes. ಜನರು ಯಾವುದನ್ನು  Like ಅಂತ  ಹೇಳಬೇಕು  ಅನ್ನುವ ಪ್ರಜ್ಞಾಭಾವವನ್ನೇ ಕಳೆದುಕೊಂಡಿರುತ್ತಾರೆ.

ಕೆಲವೊಂದು  ಸಲ  ಇಂತಹ Likes ಇಕ್ಕಟ್ಟಿನ  ಪರಿಸ್ಥಿಯನ್ನು  ತರುತ್ತೆ . ಯಾರೋ  ಏನೋ communal ಕಲಹದ  ಬಗ್ಗೆಯೋ  ಅಥವಾ  terrorism ಬಗ್ಗೆ updates ಹಾಕಿದ್ರೆ , ಅಪ್ಪಿ  ತಪ್ಪಿ Like ಅಂತ  press ಮಾಡಿದರೆ  Jail ಗ್ಯಾರಂಟಿ. ಇನ್ನು ಕೆಲವು  ಸಲ ಬೇಡವಾದ  photos ಬೇರೆಯವರ account ಗೆ  Tag ಮಾಡಿ  ಅವರನ್ನು  ಸಂಕಷ್ಟಕ್ಕೆ  ಈಡುಮಾಡಿದ ಪ್ರಸಂಗಗಳು ಹಲವು.

ನನ್ನ  ಹಾಗು  facebook   ಬಾಂಧವ್ಯ ಅಷ್ಟಕ್ಕಷ್ಟೆ. ನಾನು  ಎಲ್ಲರಿಗಿಂತ ಸ್ವಲ್ಪ  ತದ್ವಿರುದ್ದ  ವಿಷಯದಲ್ಲಿ . ತಿಂಗಳಿಗೋ  ಅಥವಾ  ಎರಡು  ತಿಂಗಳಿಗೋ  ಒಂದು  ಸಲ ಇದರ  ಒಳಗೆ ಇಣುಕಿ  ನೋಡುತ್ತೇನೆ . Friends request accept ಮಾಡೋದಕ್ಕೆ  ಅಥವಾ  B'day ಗಳ  wishes ಕಳಿಸೋದಕ್ಕೆ ಮತ್ತೆ  wishes ಸ್ವೀಕರಿಸಿ  reply ಮಾಡೋದಕ್ಕೆ. ಇಲ್ಲಿಗೆ ನನ್ನ ಹಾಗು ಫೇಸ್ ಬುಕ್ ನ connect ಮುಗಿಯುತ್ತೆ.

ಇದರಲ್ಲಿನ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಅಂತ ಹೇಳಬಹುದು. This is more prone to security breach. Hackers ಸುಲಭವಾಗಿ accounts hack ಮಾಡಿ ಅದರಲ್ಲಿಯ personal details ನ ದುರುಪಯೋಗ ಪಡಿಸಿಕೊಳ್ಳಬಹುದು.
ಇಷ್ಟಾದರೂ Facebook ತನ್ನ ವರ್ಚಸ್ಸನ್ನು ಕಳೆದು ಕೊಂಡಿಲ್ಲ. ದಿನದಿಂದ  ದಿನಕ್ಕೆ  ಇದರ  Face ವ್ಯಾಲ್ಯೂ ಮೇಲಕ್ಕೇರುತ್ತಲೇ ಇದೆ !!!
*spelling mistakes ಗಳ ಬಗ್ಗೆ ಕ್ಷಮೆ ಇರಲಿ

No comments:

Post a Comment