ಸೋಮನಾಥ ದೇವಾಲಯವು ಶಿವನ ಜ್ಯೋತಿರ್ಲಿಂಗವಿರುವ ದೇಗುಲವಾಗಿದೆ.ಪುರಾಣದ ಪ್ರಕಾರ ಈ ದೇವಾಲಯವನ್ನು ಚಂದ್ರದೇವನಾದ ಸೋಮರಾಜನು ಇದನ್ನು ಚಿನ್ನದಿಂದ ಕಟ್ಟಿಸಿದ್ದನು, ನಂತರ ರಾವಣನು ಇದನ್ನು ಮತ್ತೆ ಬೆಳ್ಳಿಯಿಂದ ಕಟ್ಟಿಸಿದನು , ಕೃಷ್ಣನು ಇದನ್ನು ಮರದಿಂದ ಹಾಗು ಭೀಮನು ಇದನ್ನು ಕಲ್ಲಿನಿಂದ ಕಟ್ಟಿಸಿದ ಎಂಬುದು ಪ್ರತೀತಿ . ಮೊಹಮದ್ ಘಜ್ನಿ ಈ ದೇಗುಲವನ್ನು ನಾಶಮಾಡಿ ಇದರಲ್ಲಿದ್ದ ಸಂಪತ್ತನ್ನು ಎಲ್ಲ ಲೂಟಿ ಮಾಡಿದನು . ಹಿಂದೂಗಳು ಮತ್ತೆ ಈ ದೇಗುಲವನ್ನು ಪುನಃ ಕಟ್ಟಿಸಿದರು . ಮತ್ತೆ ಮುಸ್ಲಿಮರಿಂದ ನಾಶವಾಯಿತು . ಹೀಗೆ ಸುಮಾರು ಸಲ ಈ ದೇವಾಲಯವು ನಾಶವಾಗಿ ಪುನರ್ನಿರ್ಮಾಣವಾಗಿದೆ . ಕೊನೆಗೆ ಇದನ್ನು ಸರ್ದಾರ್ ವಲ್ಲಭಾಯಿ ಪಟೇಲರು ತಮ್ಮ ಕಾಲದಲ್ಲಿ ನಿರ್ಮಾಣ ಮಾಡಿದರು .
ದೇವಸ್ಥಾನದ ಒಳಗೆ ಹೋಗಿ ಸೋಮನಾಥಾನ ದರ್ಶನವನ್ನು ಪಡೆದೆವು . ದರ್ಶನವನ್ನು ಮುಗಿಸಿ ಹೋಟೆಲ್ ತಲುಪಿ , ಊಟ ಮುಗಿಸಿ ನಿದ್ರಾದೇವಿಯ ತೆಕ್ಕೆಗೆ ಜಾರಿಕೊಂದೆವು . ಮಾರನೆ ದಿನ ಬೆಳಗ್ಗೆ ಬೇಗನೆ ಎದ್ದು ಬೆಳಗ್ಗಿನ ಆರತಿಗೆ ಹೊರಟೆವು . ಮತ್ತೆ ಸೋಮನಾಥಾನ ದರ್ಶನ ವನ್ನು ಮುಗಿಸಿ ಅಲ್ಲೇ ದೇವಸ್ಥಾನದ ಹೊರಾಂಗಣದಲ್ಲಿ ಅರೇಬಿಯನ್ ಸಮುದ್ರದ ಸೌಂದರ್ಯವನ್ನು ಸವಿಯುತ್ತ ಜ್ಯೋತಿರ್ಲಿಂಗ ಸ್ತ್ರೋತ್ರವನ್ನು ಓದಿ ಮುಗಿಸಿ ದೇವಸ್ಥಾನದ ಹೊರ ಬಂದೆವು . ಅಲ್ಲಿಂದ ಹೋಟೆಲ್ ನ ಖಾಲಿ ಮಾಡಿ ದ್ವಾರಕೆಯ ಕೃಷ್ಣನ ಬೇಟಿಗೆ ಸಜ್ಜಾದೆವು . ದ್ವಾರಕೆಗೆ ಹೊರಡುವ ದಾರಿಯಲ್ಲಿ ಪೋರಬಂದರನ್ನು ವೀಕ್ಷಿಸಿ ನಂತರ ಹೊರಡುವ ಪ್ಲಾನ್ ಇತ್ತು .
No comments:
Post a Comment