ದ್ವಾರಕ ತಲುಪಿದ ಮೇಲೆ ಮೊದಲು ಹೋಗಿದ್ದು ದ್ವಾರಕದೀಶ್ ದೇವಸ್ಥಾನಕ್ಕೆ. ದೊಡ್ಡ ದೇವಸ್ಥಾನ, ಜನರಿಂದ ತುಂಬಿತ್ತು. ಸಂಜೆಯ ಆರತಿಗೆ ಕಾದಿದ್ದೆವು. ದೇವಸ್ಥಾನದ ವಳಾಂಗಣ ಆಹ್ಲಾದಕರ ವಾತಾವರಣದಿಂದ ತುಂಬಿತ್ತು. ಕೆಲವು ಭಕ್ತರು ಭಜನೆ, ನೃತ್ಯ ಮಾಡಲು ಶುರುಮಾಡಿದರು. Very nice experience.ಆರತಿ ಮುಗಿದ ಮೇಲೆ ಕೃಷ್ಣನ ದರ್ಶನ ಪಡೆದು ಹೋಟೆಲ್ ಗೆ ಮರಳಿದೆವು.
ದ್ವಾರಕ ದೇವಾಲಯವು ಪ್ರಪಂಚದ ಒಂದು ಪುಣ್ಯಸ್ಥಳಗಳಲ್ಲಿ ಒಂದು. ಇಲ್ಲಿಗೆ ದೇಶ ವಿದೇಶ ಗಳಿಂದ ಜನರು ಬರುತ್ತಾರೆ. ಪುರಾಣದ ಪ್ರಕಾರ ಶ್ರೀ ಕೃಷ್ಣನು ಮಥುರ ನಗರಿಯನ್ನು ಬಿಟ್ಟು ದ್ವಾರಕೆಗೆ ಬಂದು ನೆಲೆಸುತ್ತಾನೆ ಗೋಮತಿ ನದಿಯ ಬಳಿ. ದ್ವಾರಕದೀಶ್ ದೇವಸ್ಥಾನವು ಸುಮಾರು 1400 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು.
ಮಾರನೆ ದಿನ ಬೆಳಗ್ಗೆ ಬೈಟ್ ದ್ವಾರಕಗೆ ಹೊರಟಿದ್ವಿ. ಮೊದಲು ನಾಗೇಶ್ವರ್ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಹೊರಟೆವು. ಈ ದೇವಾಲಯದ ಹೊರಗಡೆ ದೊಡ್ಡದಾದ ಶಿವನ ಪ್ರತಿಮೆ ಇದೆ. ಶಿವನ ಸನ್ನಿದಿಯಲ್ಲಿ ಜ್ಯೋತಿರ್ಲಿಂಗದ ಸ್ತ್ರೋತ್ರವನ್ನು ಪಠಿಸಿ ನಮ್ಮ ಪಯಣ ವನ್ನು ಮುಂದುವರೆಸಿದೆವು.
ಇಲ್ಲಿಂದ ಮುಂದೆ ಗೋಪಿ ತಲಬ್ ಗೆ ಹೋದೆವು. ಪುರಾಣದ ಪ್ರಕಾರ ಇಲ್ಲಿ ಗೋಪಿಕಾಸ್ತ್ರೀಯರು ಸ್ನಾನ ಮಾಡುತಿದ್ದರೆಂದು ಪ್ರತೀತಿ. ಅಲ್ಲಿಂದ ಮುಂದೆ ಗೋಮತಿ ನದಿಯನ್ನು ದಾಟಿ ಬೋಟ್ ನಲ್ಲಿ ಬೈಟ್ ದ್ವಾರಕಗೆ ಹೊರಟೆವು. 30 ನಿಮಿಷಗಳ ದೋಣಿ ವಿಹಾರ. ದೋಣಿ ವಿಹಾರ ಆಹ್ಲಾದಕರವಾಗಿತ್ತು. ಆಚೆಯ ದಡ ಸೇರಿ ಕೃಷ್ಣನ ದರ್ಶನವನ್ನು ಪಡೆವು ಮರಳಿ ಬಂದಿದ್ದೆವು. ಅಲ್ಲಿಂದ ಮುಂದೆ ರುಕ್ಮಿಣಿ ದೇವಸ್ಥಾನಕ್ಕೆ ಹೊರಟೆವು.
ಮರಳಿ ನಮ್ಮ ಹೊರಟ ಜಾಗಕ್ಕೆ ಮರಳುವ ಹೊತ್ತಿಗೆ ಮಧ್ಯಾನವಾಗಿತ್ತು.ಊಟ ಮುಗಿಸಿ ಹೋಟೆಲ್ ತಲುಪಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದೆವು. ಸಾಯಂಕಾಲ ಕೆಲವು ಹತ್ತಿರದ ಸ್ಥಳಗಳನ್ನು ನೋಡಲು ಹೊರಟೆವು. ಬ್ರಹ್ಮ ಕುಮಾರಿ ಆರ್ಟ್ ಗ್ಯಾಲರಿ, ಗಾಯತ್ರಿ ಶಕ್ತಿ ಪೀಠ, ಗೀತ ಮಂದಿರ, ಸಿದ್ದೇಶ್ವರ ಮಹಾದೇವ ದೇವಸ್ಥಾನ ಮತ್ತೆ ಭಡಕೇಶ್ವರ ದೇವಸ್ಥಾನ.
ಸೂರ್ಯ ಮುಳುಗುವ ದೃಶ್ಯ ಭಡಕೇಶ್ವರ ದೇವಸ್ಥಾನದಿಂದ ಬಲು ಮನೋಹರವಾಗಿ ಕಾಣುತ್ತದೆ. ನಮ್ಮ ಕ್ಯಾಮೆರಗಳಲ್ಲಿ ಈ ಮನೋಹರ ದೃಶ್ಯಗಳನ್ನು ಸೆರೆಹಿಡಿದು ಹೋಟೆಲ್ ಗೆ ಮರಳಿದೆವು.
No comments:
Post a Comment