Sohan ನಮ್ಮ ಆಫೀಸ್ನವ. ಸರಿ ಸುಮಾರು 3-4 ವರ್ಷಗಳ ಹಿಂದೆ ನಮ್ಮ ಆಫೀಸ್ ಗೆ ಸೇರಿದ್ದ. ಆಗಿನ್ನೂ COE concept ನಮ್ಮ work culture ನಲ್ಲಿ ಬೆರೆತಿರಲಿಲ್ಲ. ನಮ್ಮ pyramidಗೆ join ಆಗಿದ್ದ ಮ್ಯಾನೇಜರ್ ಆಗಿ. ಶಾಂತ ಸ್ವಭಾವದವ, ಹೆಚ್ಚಾಗಿ ಎಲ್ಲರ ಜೊತೆ ಬೆರೆಯುತ್ತಿರಲಿಲ್ಲ....mostly ಆಗಿನ್ನೂ ವಾತಾವರಣ ಹೊಸದಾಗಿದಿದ್ದರಿಂದ not very outspoken ಅನ್ನಿಸ್ತಿತ್ತು. ನಿಧಾನವಾಗಿ ನಮ್ಮೆಲ್ಲರ ಜೊತೆ ಬೆರೆಯಲು ಶುರುಮಾಡಿದ. We made him feel comfortable at the work place. ಸ್ವಲ್ಪ ದಿನಗಳಲ್ಲಿಯೇ he is an energy bundle ಅಂತ ಅವರ ಮ್ಯಾನೇಜರ್ ನಿಂದ ಪ್ರಶಂಸೆಗೊಳಗಾಗಿದ್ದ.
ನಿಧಾನವಾಗಿ ಕಂಪನಿ, COE concept ನ embrace ಮಾಡಲು ಶುರುಮಾಡಿತು. ಪಿರಮಿಡ್ concept ಹೋಗಿ COE concept ಶುರುವಾಯಿತು. vertical st. ಹೋಗಿ horizontal st. ಬಂದಿತು. ಪಿರಮಿಡ್ಗಳು ಹೋಳಾಗಿ ಹತ್ತಾರು COE ಗಳು ತಲೆಯೆತ್ತಿದವು. ದಿನಕ್ಕೊಂದು ಹೊಸ COEಗಳ ಹೆಸರು ಕೇಳಬರತೊಡಗಿದವು. ಎಲ್ಲ ಗೊಂದಲದ ವಾತಾವರಣ. ಸರಿಯಾಗಿ ಯಾವ leadersಗು COE ನ ಹೇಗೆ ಆಪರೇಟ್ ಮಾಡಲು ಗೊತ್ತಿರಲಿಲ್ಲ. There was no proper plan laid out. ಎಲ್ಲರೂ ತಮಗೆ ತೋಚಿದ ಹಾಗೆ ಆಪರೇಟಿಂಗ್ ಮಾಡೆಲ್ ನ define ಮಾಡಿದ್ದರು. COE ಗಳ ಮಧ್ಯೆ sync ಇರಲಿಲ್ಲ. ಸರಿ ಎಲ್ಲರ ಜೊತೆ ನಾವು ಸಹ COE concept ನ embrace ಮಾಡಿಕೊಂಡು ನಮಗೆ ಸಿಕ್ಕCOEಯಲ್ಲಿ ಒಂದಾಗಿ ಬೆರೆತಿದ್ದೆವು.
hmm...let's get back to the hero of our story. ನಮ್ಮೆಲರ ಹಾಗೆ sohan ಸಹ ಒಂದು COE ಗೆ tag ಆಗಿದ್ದ. ನಮ್ಮ ಲಂಚ್ timeನಲ್ಲಿ ಇದೆ ಮಾತು, ಅವರವರ COEಗಳ ಬಗ್ಗೆ ಚರ್ಚೆ. ಹೀಗೆ ಒಂದು ವರ್ಷ ನಡೆಯಿತು. ನಂತರದ ದಿನಗಳಲ್ಲಿ ಈ ಎಲ್ಲ COEಗಳ ಮಧ್ಯೆ ಇನ್ನೊದು ಹೊಸ ಗ್ರೂಪ್ ಸೇರ್ಪಡೆಯಾಯಿತು. PM job ಫ್ಯಾಮಿಲೀ. ಒಂದೊಂದು COE ಇಂದಲೂ ಕೆಲವೊಬ್ಬರನ್ನು identify ಮಾಡಿ ಈ ಜಾಬ್ ಫ್ಯಾಮಿಲೀ ಗೆ ಸೇರಿಸಿದ್ದರು. Sohan ಕೂಡ ಹೊಸ ಜಾಬ್ ಫ್ಯಾಮಿಲೀ ಗೆ ಸೇರಿದ್ದ. ಮತ್ತೆ ಅದೇ excercise. ಜಾಬ್ ಫ್ಯಾಮಿಲೀ ನ define ಮಾಡೋದು. R&R ನ re-define ಮಾಡೋಧು. ಈ ಹೊಸ role ನಿಭಾಯಿಸಲು ಹೊಸ ಟ್ರೈನಿಂಗ್ಸ್ ಗಳು ಶುರುವಾಯಿತು 101, 201 ಅಂತ . ಭರೀ ಇದೆ ಆಯಿತು ಇವರ ದಿನವಿಡೀ ಕೆಲಸ. ಮತ್ತೆ ನಮ್ಮ ಲಂಚ್ ಟೇಬಲ್ conversationನಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದ jobless ಫ್ಯಾಮಿಲೀ ಯ ಬಗ್ಗೆ ಚರ್ಚೆ ನಡೆಯುತ್ತಿತ್ತು.
PM ಜಾಬ್ ಫ್ಯಾಮಿಲೀ ಯಲ್ಲಿ ಇದ್ದವರೆಲ್ಲ ಕೆಲವು ಪ್ರಾಜೆಕ್ಟ್ಸ್ ಗಳನ್ನು ನಿಭಾಯಿಸಬೇಕಿತ್ತು. ಅವರೇ ಪ್ರಾಜೆಕ್ಟ್ ಗಳ ರೂವಾರಿಗಳು. ಪ್ರಾಜೆಕ್ಟ್ ಇವರ ಕಂಟ್ರೋಲ್ ನಲ್ಲಿ ರನ್ ಆಗುತಿತ್ತು. ಬಜೆಟ್, ಮ್ಯಾನೇಜ್ಮೆಂಟ್ activities ಗಳನ್ನು ಇವರೇ ಗಮನಿಸಬೇಕಿತ್ತು. ಇವರು ಬೇರೆ COEಗಳನ್ನು ಸೇರಿಸಿಕೊಂಡು ಪ್ರಾಜೆಕ್ಟ್ ನ drive ಮಾಡಬೇಕಿತ್ತು. ಸರಿ, ಹೊಸ ಮಾಡೆಲ್ ನಲ್ಲಿ ಪ್ರಾಜೆಕ್ಟ್ ಗಳು ರನ್ ಆಗಲು ಶುರುವಾಯಿತು. ಭಾರೀ ಗೊಂದಲ. who is accountable, who is responsible ಅನ್ನುವ confusion ಗೆ ಎಡೆ ಮಾಡಿಕೊಟ್ಟಿತು. Everyone started pointing at each other for the issue/failure. Conflict management ಇಲ್ಲಿ ಬೇಕಾಗಿರುವ ಅತ್ಯಂತ important skill ಅನ್ನುವ ಭಾಸವಾಯಿತು. complex ಪ್ರಾಜೆಕ್ಟ್ಸ್ ಗಳಲ್ಲಿ ಹಲವಾರು COEಗಳು ಬೆರೆತ್ತಿದ್ದರೆ, PMಗೆ ಎಲ್ಲರನ್ನೂ ಸಂಭಾಳಿಸಲು ಅಸಾಧ್ಯವಾಯಿತು. ಸರಿ, ನಮಗೆಲ್ಲ assistants ಬೇಕು ಅನ್ನವ ಬೇಡಿಕೆ PM ಗಳಿಂದ start ಆಯಿತು. ನಮ್ಮ ಲೀಡರ್ಸ್ ಸರಿ ಅಂತ ಆಶ್ವಾಸನೆ ಕೊಟ್ಟ್ರು. Asst. manager role ಬೆಳಕಿಗೆ ಬಂದಿತು. ಒಂದು PMಗೆ, ಒಂದು Asst PM ಗೊತ್ತು ಮಾಡಿದರು. Sohan ಗೂ ಒಬ್ಬ Asst PM ಸಿಕ್ಕಿದ್ದ.
ಈ ಎಲ್ಲ ಗೊಂದಲಗಳ ಮಧ್ಯೆ Sohan ಪ್ರಾಜೆಕ್ಟ್ಸ್ ನ ಹ್ಯಾಂಡಲ್ ಮಾಡಲು ಸ್ಟಾರ್ಟ್ ಮಾಡಿದ್ದ. ಸ್ವಲ್ಪ ದಿನ ಎಲ್ಲ ಸರಿ ಇತ್ತು. ಮಾಡೆಲ್ ವರ್ಕ್ ಆಗುವ ಹಾಗೆ ಕಾಣಿಸಿತು. ಆದರೆ ಮತ್ತೆ conflict. ಈಗ PM ಮತ್ತೆ Asst PM ಮಧ್ಯೆ. ನಮ್ಮ Sohanಗೆ ಎಲ್ಲವೂ ಅಚ್ಚು ಕಟ್ಟಾಗಿ ನಡೆಯಬೇಕು. ಕ್ವಾಲಿಟೀ, ಶೆಡ್ಯೂಲ್, ಎಫರ್ಟ್, ಕಾಸ್ಟ್ ಎಲ್ಲ ಸರಿ ಇರಬೇಕು. ಸ್ವಲ್ಪ ಹೆಚ್ಚು ಕಮ್ಮಿ ಯಾದರೂ ಸರಿ ಹೋಗುತ್ತಿರಲಿಲ್ಲ. ತಪ್ಪು ಹುಡುಕುವುದರಲ್ಲಿ ಎತ್ತಿದ ಕೈ. Somehow ಮತ್ತೆ ಸಮಸ್ಯೆ ಗಳು ತಲೆದೋರಿದವು. ನಾವುಗಳೆಲ್ಲಾ ಅಂದರೆ ಬೇರೆ COEಗಳಲಿದ್ದವರು ಇವುಗಳ ಮಜಾ ತೊಗೊಂಡ್ತಿದ್ದೆವು. Sohan ತಾನು ವಹಿಸಿಕೊಂಡ ಪ್ರಾಜೆಕ್ಟ್ ಮುಗಿದ ತಕ್ಷಣ Asst PM ನ ಚೇಂಜ್ ಕೇಳಿದ. ಮತ್ತೆ ಇದೆ ಪುನರಾವರ್ತನೆಯಾಯಿತು ಬೇರೆ ಪ್ರಾಜೆಕ್ಟ್ಸ್ ನಲ್ಲೂ. ಯಾಕೋ Sohan ಗೆ ಯಾರ ಜೊತೆನೂ ಹೊಂದಿಕೊಳ್ಳಲಾಗಲಿಲ್ಲ. ಮತ್ತೆ ಚೇಂಜ್, ಮತ್ತೆ same ಸ್ಟೋರೀ.
ಈ ಎಲ್ಲವುಗಳ ಮಧ್ಯೆ ಮತ್ತೊಂದು ವರ್ಷವೂ ಕಳೆದು ಹೋಯಿತು. ಈ ಎಲ್ಲ ತಾಕಲಾಟದಿಂದ ಬೇರೆ ಏರಿಯಾ ಗೆ ಹೊರಡುವ ಅಂತ ಪ್ಲಾನ್ ಹಾಕಿದ್ದ Sohan. ಕೆಲವೊಂದು ಕಡೆ ಪ್ರಯತ್ನವೂ ನಡೆಯಿತು. ಆದರೆ ಯಾವುದು ಸರಿ ಬರಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಅನ್ಕೊಂಡು ಮತ್ತೆ PM COE ಗೆ ಮರಳಿದ. ಇಷ್ಟೆಲ್ಲ ಆಗುವಷ್ಟರಲ್ಲಿ, ಇವನಿದ್ದ ಏರಿಯಾದಲ್ಲಿ ಬೇರೆಯೇ ಚೇಂಜ್ ಆಗತೊಡಗಿತ್ತು. ಆ unit ಕಂಪನೀಯ ಬಿಸ್ನೆಸ್ ಗೆ ತುಂಬಾ critical ಆದ ಏರಿಯಾ ಆಗಿತ್ತು. High visibility area ಆಗಿತ್ತು. Product concept ತಲೆದೋರಿತು. PM's ಗಳು ಪ್ರಾಡಕ್ಟ್ owners ಆಗಿದ್ದರು. Sohan ಸಹ ಒಂದು ಪ್ರಾಡಕ್ಟ್ ಏರಿಯಾದ responsibility ವಹಿಸಿಕೊಂಡಿದ್ದ.
ಇಷ್ಟೆಲ್ಲಾ ಬದಲಾವಣೆಗಳ ಮಧ್ಯೆ ಕೆಲವೊಂದು COE ಗಳು ತಮ್ಮ ಹಳೆ st. ಗೆ ಮರಳತೊಡಗಿದವು. ಮತ್ತೆ ಕೆಲವು related COEಗಳು ಕ್ಲಬ್ ಆಗಿ ಒಂದು COEಯಾಗಿ ಪರಿವರ್ಥನೆಯಾದವು. ಹೀಗೆ ಹಲವಾರು ಬದಲಾವಣೆಗಳಾದವು. ಈ ಎಲ್ಲ ಬದಲಾವಣೆಗಳಿಂದ PMCOE ಗೆ ಅಷ್ಟೊಂದು ಕೆಲಸವಿರುತ್ತಿರಲಿಲ್ಲ. Sohan ಸಹ time kill ಮಾಡಲು ಫ್ರೆಂಚ್ ಕ್ಲಾಸೆಸ್ ಶುರು ಮಾಡಿದ. ಹಲವಾರು PM's ಗಳು ಇದರಿಂದ ಪ್ರಯೋಜನ ಪಡೆದರು.
ಆಗಲೇ ಶುರುವಾಗಿದ್ದು layoff ಎನ್ನುವ ಆತಂಕಕಾರಿ ಸುದ್ದಿ. ಈ ಸುಳಿಯಲ್ಲಿ ಹಲವು PMsಗಳು ಕೊಚ್ಚಿ ಹೋದರು.PMಗಳ scope diminish ಆಗಲು ಶುರುವಾಗಿತ್ತು. ಇದೇ ಕಾರಣಕ್ಕೆ ಬೇರೆ business unit ನಲ್ಲೂ ರೋಲ್ಸ್ overlap ಆಗಿರುವದರಿಂದ, duplicate ರೋಲ್ eliminate ಆಗಿತ್ತು. ಈಗ ಮತ್ತೆ ಹೊಸ st. ತಲೆಯೆತ್ತಿದೆ. ಹೊಸ org st ಪ್ರಕಾರ PMಗಳು dual ರೋಲ್ ಮಾಡಬೇಕಾಗಿದೆ. ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ activities ಜೊತೆ BA ರೋಲ್ ಸಹ ಮಾಡಬೇಕಿದೆ. ರೋಲ್ಸ್ ಚೇಂಜ್ ಆಗಿದೆ, Designation ಚೇಂಜ್ ಆಗಿದೆ. Rapid change ಜೊತೆ Rapid framework ಇಣುಕಿದೆ.
ಕಂಪನಿ transformation ಆಗುತ್ತಿರುವ ಹಾಗೆ Sohan ಸಹ company changeಗೆ align ಆಗುವ ಹಾಗೆ transform ಆಗಿದ್ದಾನೆ. ಉಡುಗೆ ತೊಡುಗೆ ಬದಲಾಗಿದೆ, ಹೇರ್ ಸ್ಟೈಲ್ ಚೇಂಜ್ ಆಗಿದೆ, ಆಹಾರದಲ್ಲೂ ಬದಲಾವಣೆಯಾಗಿದೆ. ಅಂತೂ ಬದಲಾವಣೆಗಳು ಮುಂದುವರೆಯುತ್ತಿದೆ ಪರ್ಸನಲ್ ಮತ್ತೆ ಪ್ರೊಫೆಶನಲ್ lifeನಲ್ಲಿ.
Change is the only only constant !!!
* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.
No comments:
Post a Comment