Sunday, 8 March 2015

ನೆನಪು ಮರುಕಳಿಸಿದಾಗ.....

ಸೋಹನ್ ಮೊದಲ ಸಲ ಆಫೀಸ್ ನಿಂದ USಗೆ ಹೊರಟಿದ್ದರು 3 ವಾರದ ಮಟ್ಟಿಗೆ. ಸಾಮಾನ್ಯವಾಗಿ ಎಲ್ಲರೂ USನಿಂದ ವಾಪಸ್ ಬರುವಾಗ ಆಫೀಸ್ ಸ್ಟಾಫ್ ಗೆ ಅಂತ ಚಾಕ್ಲೇಟ್ಸ್ ತಂದಿರುತ್ತಾರೆ. ಹಾಗೆ ಸೋಹನ್ ನಿಂದಲೂ ನಾವೆಲ್ಲ expect ಮಾಡಿದ್ದೆವು.

Trip ಮುಗಿಸಿ ಇಂಡಿಯಾ ಆಫೀಸ್ ಗೆ ರಿಪೋರ್ಟ್ ಮಾಡಿ ಕೊಂಡ ದಿನ ಎಲ್ಲರ ನಿರೀಕ್ಷಣೆಯ ಕ್ಷಣ ಬಂದೇ ಬಿಟ್ಟಿತ್ತು. ಸೋಹನ್ ನಿಂದ ಒಂದು Mail  ಎದಿರು ನೋಡಿದ್ದೋ "chacos at my desk" ಅಂತ. ಆದರೆ ಅವರು ತಾವೇ ಸ್ವತಃ ಎಲ್ಲರ cubicleಗು ಬಂದು ಚಾಕ್ಲೇಟ್ಸ್ ಹಂಚತೊಡಗಿದ್ದರು. ಹಾಗೆ ನನ್ನ cubeಗು ಬಂದರು. ನನ್ನ ನಿರೀಕ್ಷೆಗೆ ತದ್ವಿರುದ್ದವಾಗಿ ಅಂಗೈ ಮೇಲೆ 2 ಚಾಕ್ಲೇಟ್ಸ್ ಇಟ್ಟಿದ್ದರು. ಕೈ ಮೇಲಿಟ್ಟ ಚಾಕ್ಲೇಟ್ಸ್ನ ಒಮ್ಮೆ ನೋಡಿ ಅವರ ಮುಖವನ್ನೊಮ್ಮೆ ನೋಡಿದ್ದೆ. ಏನಿದು ಅಂದೆ. ಚಾಕೋಸ್ ಅಂದಿದ್ದರು. ಎಲ್ಲಿಂದ ಅಂದೆ. Abu dhabi ಇಂದ ಅಂದರು. ಒಂದು ಸಣ್ಣ ಆಘಾತವಾಗಿತ್ತು. ನನ್ನ ಆಶ್ಚರ್ಯ, ಅಸಮಾಧಾನದ ಮುಖಭಾವವನ್ನು ಗಮನಿಸಿ ತಾನು ತಂದ ಚೊಕೊಸ್ ಬಗ್ಗೆ ವಿವರಣೆ ಕೊಡಲು ಶುರು ಮಾಡಿದರು. 2 ಚಾಕೋಸ್ ನಲ್ಲಿ, ಒಂದು Peacy Bon Bon vitamin ಕ್ಯಾಂಡೀ ಅಂತೇ. ಮತ್ತೊಂದು ಸಣ್ಣ square ಆಕಾರದ ಮಿಲ್ಕ್ ಚಾಕೋ ಆಗಿತ್ತು. ಬಾನ್ ಬಾನ್ ಕ್ಯಾಂಡೀ ನೋಡಲು ಚಿಕ್ಕದಾಗಿದ್ದರೂ ಅದರಲ್ಲಿ ತುಂಬಿದ್ದ Multivitamins ಗುಣಗಳ ಬಗ್ಗೆ ವಿವರಿಸಿದ್ದರು. vitamins ಕೊರತೆ ಇದರಿಂದ ನೀಗುತ್ತದೆ ಎಂದಿದ್ದರು. ನಾನು ಕಣ್ಣಗಲಿಸಿಕೊಂಡು ಕೇಳಿಸಿಕೊಳ್ಳುತಿದ್ದೆ. ತಮ್ಮ explanation ಮುಗಿದ ಮೇಲೆ ಬೇರೆಯವರಿಗೆ ಕೊಡಲು ಹೊರಟರು. ಒಂದು ಕ್ಷಣವನ್ನು ಅರಗಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದೆ.

ಆಮೇಲೆ ನಾನು ಕೆಲಸದಲ್ಲಿ ಮುಳುಗಿ ಹೋಗಿದ್ದೆ. ಆಗ ಒಂದು Mail ನನ್ನ ಮೈಲ್ ಬಾಕ್ಸ್ ನಲ್ಲಿ ಇಣುಕಿತ್ತು. ಏನಪ್ಪಾ ಅಂತ ನೋಡಿದರೆ ಅದು ಸೋಹನ್ ನಿಂದ ಬಂದ mail ಆಗಿತ್ತು, ಮತ್ತೊಂದು ಆಫೀಸ್ ಫ್ರೆಂಡ್ ಗೆ ಕಳಿಸಿದ್ದ mail. mail ಒಕ್ಕಣೆಯ ಪ್ರಕಾರ ಸೋಹನ್ ಆಗ ತಾನೇ ಹಂಚಿ ಬಂದಿದ್ದ ಬಾನ್ ಬಾನ್ ಕ್ಯಾಂಡೀ ಬಗ್ಗೆ ವಿವರಿಸಿದ್ದರು. ಅದರಲ್ಲಿರುವ Multivitamins, ಪ್ರೋಟೀನ್, ಮಿನರಲ್ಸ್, ಎಲ್ಲದರ ಬಗ್ಗೆ ವಿವರಣೆ ಇತ್ತು. ಇಷ್ಟೆಲ್ಲ ವಿವರಣೆ ಕೊಟ್ಟ ಮೇಲೆ, ಚಾಕೋಸ್ ತಿಂದು ನನಗಾದ health benefits ಬಗ್ಗೆ ಬರೆದ್ದಿದ್ದರು. ಅದನ್ನು ಓದಿದ ಮೇಲೆ , ಸ್ವಲ್ಪ ಸಿಟ್ಟಿನಲ್ಲಿಯೇ mail ಗೆ ರಿಪ್ಲೈ ಮಾಡಿದ್ದೆ. ಬಾನ್ ಬಾನ್ ನನ್ನ ಗಂಟಲಿನ ಮೇಲೆ ಬೀರಿದ ಪರಿಣಾಮದಿಂದ ರಜದ ಮೇಲೆ ಹೋಗಬೇಕಾದ ಪರಿಸ್ಥಿತಿಯನ್ನು ವಿವರಿಸಿದ್ದೆ. Have chacos at your own risk ಅಂತ ಬರೆಯುವುದನ್ನು ಮರೆತಿರಲಿಲ್ಲ. ಇದರಿಂದ ಸೋಹನಗೆ ಅಸಮಾಧಾನವಾಗಿತ್ತು. ನನ್ನಿಂದ ಅವರ ಚಾಕೋಸ್ ಗೆ ಹೆಚ್ಚು marketing ಸಿಗಲಿಲ್ಲ ಎನ್ನುವುದು ಅವರ ಧೋರಣೆಯಾಗಿತ್ತು. ಆಫೀಸ್ ನಲ್ಲಿ 2-3 ದಿನ ಬಾನ್ ಬಾನ್ ದೆ ಚರ್ಚೆ ನಡೆದಿತ್ತು, ತಮಾಷೆಯ ವಿಷಯವಾಗಿತ್ತು. ಸಿಗದಿದ್ದವರು ಅದರ health benefits ನಿಂದ ವಂಚಿತರಾದವರಂತೆ ಪೇಚಾಡಿಕೊಂಡಿದ್ದರು. ಅಂತೂ ಬಾನ್ ಬಾನ್ ಅಧ್ಯಾಯ ಮುಗಿದಿತ್ತು.

ಆದರೆ ಇದರ impact ನಮ್ಮ ಮೇಲೆ ಪರಿಣಾಮ ಬೀರಿತ್ತು. ನಾವೆಲ್ಲ ಸೋಹನ್ ರೇಗಿಸಿದ್ದು ಅವರಿಗೆ ಕೋಪ ಬಂದಿತ್ತು. ಇದಾದಮೇಲೆ ಅವರು ಮುಂದೆ US ಗೆ ಹೋಗಿ ಬಂದ ದಿನಗಳಲ್ಲಿ ಚಾಕ್ಲೇಟ್ಸ್ ಅಪ್ಪಿ ತಪ್ಪಿಯೂ ತರುತ್ತಿರಲಿಲ್ಲ. ಮೊನ್ನೆ ಹೋಗಿ ಬಂದಾಗಲೂ ಚಾಕ್ಲೇಟ್ಸ್ ಚಕಾರ ಎತ್ತಲಿಲ್ಲ. ಈಗಲು US ನಿಂದ ಯಾರಾದರೂ ಚಾಕ್ಲೇಟ್ಸ್ ತಂದರೆ peachy ಬಾನ್ ಬಾನ್ ನೆನಪು ಮರುಕಳಿಸುತ್ತದೆ.

No comments:

Post a Comment