ಬದಲಾವಣೆಯ ಗಾಳಿ.....
(Change is in the wind)
ಜುಲೈ 4. ಅಮೇರಿಕದ ಸ್ವತಂತ್ರ ದಿನಾಚರಣೆ. USಗೆ ರಜಾ ದಿನ. ಹಾಗಾಗಿ ಸಾಯಂಕಾಲದ callsನಿಂದ ಮುಕ್ತಿಪಡೆದಿದ್ದೆ. ಏನಾದರೂ ಬರೆಯಬೇಕೆಂಬ ಆಸಕ್ತಿ ಹೆಚ್ಚಿತ್ತು. ಯಾವ ವಿಷಯದ ಬಗ್ಗೆ ಬರಿಯಬೇಕು ಅಂತ ಯೋಚನೆಯಲ್ಲಿದ್ದಾಗ ಕಂಪನಿಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಒಂದು ಕಥಾವಸ್ತುವನ್ನು ಹೆಣೆಯುವ ಹಂಬಲ ಹುಟ್ಟಿತ್ತು. ಸರಿ ಮನಸ್ಸು ನೆನಪಿನ ಅಂಗಳಕ್ಕೆ ಲಗ್ಗೆಇಟ್ಟಿತ್ತು....
Change ಅಂದರೆ ಬದಲಾವಣೆ. ಈಗ ಹೆಚ್ಚು ಚಲಾವಣೆಯಲ್ಲಿರುವ ಪದ ಇದು. ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರ ಮನಸ್ಸನ್ನು ಹಾಸು ಹೊಕ್ಕಾಗಿರುವ ಪದ ಎಂದರೆ ಚೇಂಜ್. ಈ ಎಲ್ಲ ಚೇಂಜಸ್ ಗೆ ನಾಂದಿ ಹಾಡಿದ್ದು ನಮ್ಮ ಕಂಪನಿಯ CIO ರಿಸೈನ್ ಮಾಡಿದಾಗ. ಅವರ ರೆಸಿಗ್ನೇಶನ್ ಅಷ್ಟೇನೂ ಆಶ್ಚರ್ಯ ಹುಟ್ಟಿಸಿರಲಿಲ್ಲ. ಸುಮಾರು ದಿನಗಳಿಂದ ಗಾಳಿಯಲ್ಲಿ ಹರಡಿದ್ದ ರೂಮರ್ ಅಂದು ನಿಜವಾಗಿತ್ತು. CIO ಪಟ್ಟವನ್ನು ಯಾರು ಪಡೆಯುತ್ತಾರೆ ಅನ್ನುವ ಕುತೂಹಲ ಮಾತ್ರ ಇತ್ತು. ಈ ಪೊಸಿಶನ್ ನಿಜವಾಗಲೂ ಅಗತ್ಯವೇ ಎನ್ನುವ ಯೋಚನೆಯೂ ಮನಸ್ಸಿಗೆ ಬಂದಿತ್ತು. CEO ಸಂದೇಶದ ಪ್ರಕಾರ CIO ಹುಡುಕಾಟ ನಡೆದಿತ್ತು. ನಾವು ಇದೆಲ್ಲ ಮರೆತು ಯತಾ ಪ್ರಕಾರ ನಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದೋ. ಆದರೆ ಅದೊಂದುದಿನ ಮೈಲ್ ಬಾಕ್ಸ್ ನಲ್ಲಿ ಇಣುಕಿದ ಮೈಲ್ ಎಲ್ಲರಿಗೂ ಆಶ್ಚರ್ಯವನ್ನು ಮೂಡಿಸಿತ್ತು. ಅದನ್ನು ಯಾರೂ ಊಹಿಸಿರಲಿಲ್ಲ. CEO ರಿಸೈನ್ ಮಾಡಿದ್ದರು. ಮೇಲ್ನೋಟಕ್ಕೆ ಇದು ವಾಲಂಟರೀ decision ಅಂತ ಕಾಣಿಸಿದರೂ ವಿಷಯ ಅದಾಗಿರಲಿಲ್ಲ. Data Breach ಕಂಪನಿಯ ವರ್ಚಸನ್ನು ಕುಂದಿಸಿತ್ತು. ಗೆಸ್ಟ್ಸ್ ಗಳ ನಂಬಿಕೆಗೆ ಬಲವಾದ ಪೆಟ್ಟು ಬಿದ್ದಿತ್ತು. ಇದು ಕಂಪನಿಯ ಸೇಲ್ಸ್ ಮೇಲೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿತ್ತು. ಇದೆಲ್ಲದರ ಪರಿಣಾಮ CEO ರೆಸಿಗ್ನೇಶನ್.
ಅಂತೂ CIO , CEO ಜಾಗಗಳು ಖಾಲಿಯಾಗಿತ್ತು. CEO ಜಾಗಕ್ಕೆ ಸೂಕ್ತ ವ್ಯಕ್ತಿಯನ್ನು ತರುವವರೆಗೂ ಕಂಪನಿಯ CFO ಆ ಜಾಗಕ್ಕೆ Interim CEO ಅಂತ ಆಯ್ಕೆಯಾಗಿದ್ದರು. ಇಷ್ಟೆಲ್ಲ ಆಗುವಷ್ಟರಲ್ಲಿ ಕಂಪನಿಯ CIO ಅನ್ನು ಸೆಲೆಕ್ಟ್ ಮಾಡಿದ್ದರು. ಕಂಪನಿಯಲ್ಲಿರುವ ಹಳೇ ತಲೆಗಳ ಪೈಕಿ ಒಬ್ಬರು CIO ಸ್ಥಾನವನ್ನು ಅಲಂಕರಿಸುತ್ತಾರೆ ಅಂತ ಇದ್ದ ನಮ್ಮ ನಂಬಿಕೆ ಹುಸಿಯಾಗಿತ್ತು. ಇವರು ಆರಿಸಿದ್ದಿದು external ಕ್ಯಾಂಡಿಡೇಟ್ ಅನ್ನು. ಸುಮಾರು 25-30 ವರ್ಷಗಳ ಸರ್ವಿಸ್ ಅನುಭವ ಪಡೆದ್ದಿದ್ದ ಹಾಗೂ ಟೆಕ್ನಾಲಜೀ ಯನ್ನು ಅರಿತಿದ್ದ ಒಬ್ಬ ವ್ಯಕ್ತಿ ನಮ್ಮ CIO ಆಗಿದ್ದರು. ಎಲ್ಲರಿಗೂ CIO ಸಿಕ್ಕ ಒಂದು ಸಮಾಧಾನ ಹಾಗೆ ಮುಂದೇನಾಗುತ್ತದೆ ಎನ್ನುವ ಕುತೂಹಲ ಮನೆ ಮಾಡಿತ್ತು.
Bob Derodes, ನಮ್ಮ ಹೊಸ CIO ತಮ್ಮ ಕಾರ್ಯವನ್ನು ಪ್ರಾರಂಬಿಸಿದ್ದರು. ಮೊದಲ ಕೆಲವು ವಾರಗಳು ಕಂಪನಿಯ ರೀಟೇಲ್ ವಹಿವಾಟುಗಳನ್ನು ಅರ್ಥಮಾಡಿಕೊಳ್ಳುವದರಲ್ಲಿ ಹೋಗಿತ್ತು. ಕಂಪನಿಯ ಆಪರೇಟಿಂಗ್ ಮಾಡೆಲ್, ಡಿಜಿಟಲ್ ಟ್ರ್ಯಾನ್ಸ್ಫರ್ಮೇಶನ್ ಬಗ್ಗೆ, .com ಆರ್ಕಿಟೆಕ್ಚರ್, hierarchy, ಸೆಕ್ಯೂರಿಟೀ, strategy ಹೀಗೆ ಎಲ್ಲದರ ಬಗ್ಗೆ ಅರಿಯ ತೊಡಗಿದರು. That was his listening and learning period. ನಂತರದ ದಿನಗಳಲ್ಲಿ ಟಾರ್ಗೆಟ್ vision ನ ಡಿಫೈನ್ ಮಾಡಲು ಹೊರಟರು. canada ದ ಕುಂಟಿತ ಸೇಲ್ಸ್, ಸೆಕ್ಯೂರಿಟೀ ಲೂಪ್ ಹೋಲ್ಸ್, ಡಿಜಿಟಲ್ ಸಾಮ್ರಾಜ್ಯದ ಹಿನ್ನಡೆ ಎಲ್ಲವನ್ನೂ ಅಡ್ರೆಸ್ ಮಾಡಿ ತನ್ನ ಅಭಿಪ್ರಾಯವನ್ನು ಮಂಡಿಸಿದ್ದರು. ಇದರ ಸಾರಾಂಶದ ಪ್ರಕಾರ seepd to market, agility, being nimble, taking smart risks, learning from mistakes ಇವೆಲ್ಲ buzz ವರ್ಡ್ಸ್ ಆಗಿದ್ದವು.
ತನ್ನೆಲ್ಲ experience ನ ಹಂಚಿಕೊಳ್ಳಲು HQ ನಲ್ಲಿ townhall ಮೀಟಿಂಗ್ ಅನ್ನು ನಡೆಸಿದ್ದರು. ಆ ಮೀಟಿಂಗ್ ನಲ್ಲಿ ತಮ್ಮ 2 ತಿಂಗಳ ಅನುಭವ, ಅರಿತ ವಿಷಗಳು, ಇರುವ ಗ್ಯಾಪ್ಸ್ ಎಲ್ಲದರ ಬಗ್ಗೆ ಮಾತನಾಡಿದ್ದರು. ಟೆಕ್ನಾಲಜೀ ಹಾಗೂ ಬಿಸ್ನೆಸ್ ಯೂನಿಟ್ಸ್ ಗಳ ಮಧ್ಯೆ ಇರುವ ಅಂತರ,ಎಂಪ್ಲಾಯೀಸ್ ಗಿಂತ ಹೆಚ್ಚಿರುವ ಕಾಂಟ್ರ್ಯಾಕ್ಟರ್ footprint,ಹೆಡ್ಕ್ವಾರ್ಟರ್ ಗಿಂತ ಕ್ಯಾಪ್ಟಿವ್ ಯೂನಿಟ್ ಗಳಲ್ಲಿ ಹೆಚ್ಚಿರುವ ವರ್ಕ್ಫೋರ್ಸ್ ಅವರ ಅಸಮಾಧಾನಕ್ಕೆ ಗುರಿಯಾಗಿತ್ತು. ಈ ಎಲ್ಲವನ್ನೂ ಚೇಂಜ್ ಮಾಡುವುದಾಗಿ ಬರವಸೆ ಕೊಟ್ಟರು. ಇಲ್ಲಿಯವರೆಗೂ ಟೀಮ್ ಮಾಡಿರುವ accomplishments ಅನ್ನು ಪ್ರಶಂಸಿದರಾದರೂ ತಾನು ಸಾಕಷ್ಟು ಸಮಯವನ್ನು coach ಆಗಿ ಕಳೆಯುತ್ತೇನೆ ಎಂದಿದ್ದರು. ಹೀಗೆ ಹೇಳುವುದರ ಮೂಲಕ, expectation ಸೆಟ್ ಮಾಡಿದ್ದರು. TM's ಪರಿವರ್ತನೆಗೆ ಹೊಂದುಕೊಳ್ಳಬೇಕು ಇಲ್ಲದಿದ್ದರೆ ತಮ್ಮ ಮಾರ್ಗವನ್ನು ತಾವೇ ಹುಡುಕಿಕೊಳ್ಳಬೇಕು ಎನ್ನುವ tough ಮೆಸೇಜ್ ಅನ್ನು ಕೊಟ್ಟಿದ್ದರು.
ಪ್ರತಿ ವಾರ ತಮ್ಮ ಮೆಸೇಜ್ ಅನ್ನು ಮೈಲ್ ಮುಖಾಂತರ ಎಲ್ಲರಿಗೂ ಕಳಿಸುತ್ತಿದ್ದರು. ಬದಲಾವಣೆಯ ಮೊದಲ ಹೆಜ್ಜೆ ಏನೆಂದರೆ EC ಹಾಗೂ ತಮ್ಮ ಟೀಮ್ ಜೊತೆ ಮೀಟಿಂಗ್ ಅನ್ನು ನಡೆಸಿ strategy ಪ್ಲ್ಯಾನಿಂಗ್ ಬಗ್ಗೆ ಡಿಸ್ಕಶನ್ ಮಾಡಿದ್ದರು. ಇವರ ಚೇಂಜ್ ತೀವ್ರತೆ ಎಲ್ಲರಲ್ಲೂ ಸ್ವಲ್ಪ ಮುಜುಗುರಕ್ಕೆ ಎಡೆ ಮಾಡಿಕೊಟ್ಟಿತ್ತು. ನಂತರದ ಹೆಜ್ಜೆ ಎಂದರೆ ಕಂಪನಿಯ ಎಲ್ಲ ಎಂಪ್ಲಾಯೀಸ್ ಜೊತೆ ಬ್ರೇಕ್ಫಾಸ್ಟ್ meeting ಮಾಡಿದ್ದು. ಆ ಸಮಯದಲ್ಲಿ, ತಮ್ಮ ಚೇಂಜ್ ಬಾಷಣವನ್ನು ಮಂಡಿಸಿದ್ದರು. ಮೆಸೇಜ್ ಅನ್ನು ಎಲ್ಲರ ಜೊತೆ ಹಂಚಲು ಸಲಹೆ ಕೊಟ್ಟಿದರು. ಇದರ ಪರಿಣಾಮ, Breakfast with Bob ಎನ್ನುವ ಮೇಲ್ಸ್ ಗಳು viral ತರ ನಮ್ಮ ಮೈಲ್ box ತುಂಬಿತ್ತು. ಎಲ್ಲರ ಬಾಯಲ್ಲೂ ಅದೇ ಮಾತು. ಅದೇ messageಗಳು. ಚೇಂಜ್ ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು. ಕೆಲವು ಲೀಡರ್ಸ್ ಗಳು ಬಾಬ್ ಸಿದ್ದಾಂತವನ್ನು ಒಪ್ಪದೆ ಕೊಂಪನಿಯನ್ನು ಬಿಡತೊಡಗಿದರು. ಇದರ ರಿಸಲ್ಟ್ ಇತ್ತೀಚಿನ SVP ಹಾಗೂ ಕೆಲವು directors ಗಳ ರೆಸಿಗ್ನೇಶನ್ಸ್. Leaders were nervous about the change. Bob leadersಗಳು tech savvy ಯಾಗಿರಬೇಕು ಅಂತ ಹೇಳಿದರ ಪರಿಣಾಮ, ಎಲ್ಲರ ಚಿಂತನೆಗೆ ಗುರಿ ಮಾಡಿಕೊಟ್ಟಿತ್ತು.
Bob ತಮ್ಮ ಮೆಸೇಜ್ ಅನ್ನು ಎಲ್ಲ ಎಂಪ್ಲಾಯೀಸ್ ಗು ತಲುಪಿಸುವುದರ ಮೂಲಕ ಮೇಲುಗೈ ಸಾದಿಸಿದ್ದಾರೆ. ಟಾರ್ಗೆಟ್ ಇತಿಹಾಸದಲ್ಲಿ ಇಂಥ transparency ಕಂಡಿರುವುದು ಇದೆ ಮೊದಲ ಸಲ ಎನ್ನಬಹುದು. ಇದು ಮುಂಬರಲಿರುವ ಮಹಾ ಬದಲಾವಣೆಯ ಸೂಚನೆಯಾಗಿದೆ. Bob ತಮ್ಮ ಬ್ರೇಕ್ಫಾಸ್ಟ್ ಮೀಟಿಂಗ್ಸ್ ಅನ್ನು ಮುಂದುವರೆಸಿದ್ದಾರೆ. ಹಾಗೆ ವಾರ ವಾರ ತಮ್ಮ ಮೆಸೇಜ್ ಅನ್ನು ಮೈಲ್ ಮುಖಾಂತರ ಎಲ್ಲರಿಗೂ ತಲುಪಿಸುತ್ತಿದ್ದಾರೆ. ಮುಂಬರುವ ಚೇಂಜ್ ದೊಡ್ಡ ಪ್ರಮಾಣದಲ್ಲಿ ಆಗುವ ನಿರೀಕ್ಷೆ ಇದೆ. Labors ದಿನಕ್ಕಿಂತ ಮುಂಚೆ ಆಗಬಹುದಾದ ಚೇಂಜ್ ಅನ್ನು ಎಲ್ಲರೂ ನಿರೀಕ್ಷೆ ಇಂದ ಕಾದಿದ್ದಾರೆ. ಕಂಪನಿಯ ಇತಿಹಾಸದಲ್ಲಿ ಇದೊಂದು ಪ್ರಮುಖ ಘಟ್ಟ ಎನ್ನಬಹುದು. ಇಲ್ಲಿಯವರೆಗೂ Bob ತಮ್ಮ ಮೇಲುಗೈ ಸಾದಿಸಿದ್ದಾರೆ. ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದಾರೆ. Executive committee ಸದಸ್ಯರ ಹಾಗೂ ICEO ಧ್ವನಿ ಅಡಗಿದೆ.
ಅಂತೂ ಲೀಡರ್ಶಿಪ್ ಚೇಂಜ್ ಎಂತ ಬದಲಾವಣೆಯನ್ನು ತಂದಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಬದಲಾವಣೆ ಧಾಪುಗಾಲು ಹಾಕಿ ಸಾಗಿದೆ. ಅದರ ವೇಗಕ್ಕೆ ತಕ್ಕ ಹಾಗೆ ನಾವು ಹೆಜ್ಜೆ ಹಾಕಬೇಕಿದೆ. COE concept ಮರೆಯಾಗಿ ಮತ್ತೆ ನಾವು pre transformation ಪ್ರಪಂಚಕ್ಕೆ ಹೋಗಬೇಕಿದೆ. ಚೇಂಜಸ್ ಯಾವ ತಿರುವು ಪಡೆಯುತ್ತದೆ ಎಂದು ಕಾದುನೋಡಬೇಕಿದೆ. ಈ ಬದಲಾವಣೆಯ ಚಕ್ರವ್ಯೂಹದಲ್ಲಿ ಇನ್ನೆಷ್ಟು ತಲೆಗಳು ಉರುಳುತ್ತದೆ ಎನ್ನುವುದು ಇನ್ನೂ ತಿಳಿಯದು. ಕಾಲವೇ ಇದನ್ನು ನಿರ್ಣಯ ಮಾಡುತ್ತದೆ. ಬದಲಾವಣೆಯ ದಾರಿಯಲ್ಲಿ ಸಾಗುತ್ತಿರುವ ನಿರಂತರ ಪಯಣದ ಒಂದು ಪಕ್ಷಿ ನೋಟವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಕಾಲಾಯ ತಸ್ಮೈ ನಮಹ!!!
* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.
No comments:
Post a Comment