ಬೆಳಗ್ಗೆ ಎದ್ದು office ಗೆ ಹೊರಟಿದ್ದೆ. ಈ ನಡುವೆ office ಗೆ ಹೋಗೋದಂದ್ರೆ ಬೇಜಾರು. ಏನಾದರೂ ಕೆಟ್ಟ ಸುದ್ದಿಯೇ ಕಿವಿಗೆ ಬೀಳುತ್ತಿರುತ್ತೆ . oh..ಏನಪ್ಪಾ ಕೆಟ್ಟ ಸುದ್ದಿ ಆಫೀಸಿನಲ್ಲಿರುತ್ತೆ ಅಂತ ಆಶ್ಚರ್ಯ ಪಡುತ್ತಿದ್ದೀರ? expense optimization start ಆದಾಗಿನಿಂದ resource cutdown ಶುರುವಾಗಿದೆ. ಇದು sentitive ವಿಷಯ . ಹಾಗಾಗಿ ಇದರ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಆದರೆ ಇದರ ಬಿಸಿ ಮಾತ್ರ ಎಲ್ಲ business unit ಗಳ ಮೇಲೂ ತಾಕಿದೆ .
ಈ ದಿನ ಚೆನ್ನಾಗಿರಲಿ ಅಂತ ಆಶಿಸಿ ಹೊರಟಿದ್ದೆ . ಯಾಕಂದ್ರೆ ಇವತ್ತು ನನ್ನ ಹುಟ್ಟಿದ ದಿನ . ಎಲ್ಲ ಒಳ್ಳೆಯದಾಗಲಿ ಅಂತ ದೇವರನ್ನ ಬೇಡಿ cab ಹತ್ತಿದ್ದೆ . ಈದಿನ ಸಹ ಎಲ್ಲ ದಿನದಹಾಗೆ normal ಆಗಿ start ಆಯಿತು . ಬೆಳಗ್ಗಿನ Green 'T 'ಮುಗಿಸಿ , mails check ಮಾಡಿ , reply ಮಾಡಿ , ಕೆಲವು meetings attend ಮಾಡಿ desk ಗೆ ಬಂದು ಕೂತಿದ್ದೆ . ಆಗ ಕೇಳಿಸಿತು ಒಂದು ಬಿಸಿ ಸುದ್ದಿ . ನನ್ನ colleague ಹೇಳ್ತಿದ್ರು , ದೊಡ್ಡಮ್ಮ ಬಂದು ಹೋದರಂತೆ ಎರಡು ದಿನದ ಮಟ್ಟಿಗೆ , ಏನು ಅಂತ ವಿಷಯ ಗೊತ್ತಾಯಿತ ಅಂತ . ಮೊದಲು ಈ ದೊಡ್ಡಮ್ಮ ಯಾರು ಅಂತ ಗೊಂದಲಕ್ಕೆ ಸಿಕ್ಕ ನನಗೆ ತಕ್ಷಣ ಹೊಳೆಯಿತು ನಮ್ಮ company CEO ಅಂತ . US ನಿಂದ 2 ದಿನದ ಮಟ್ಟಿಗೆ ಬಂದು ಹೋಗುವ ಗಂಭೀರವಾದ ವಿಷಯ ಏನಿತ್ತು ಅಂತ ತಲೆಗೆ ಹೊಳೆಯದೆ ಯೋಚನೆಗೆ ಬಿದ್ದೆ . ಆಗ ಕೆಲವೊಂದು ವಿಷಯಗಳು ಹೊರಗೆ ಬಂದವು ....ಏನೋ 15% cutdown ಅಂತೆ , across all levels ಅಂತೆ , master list ಪ್ರಿಪೇರ್ ಆಗಿದ್ಯಂತೆ, phases ನಲ್ಲಿ start ಆಗುತ್ತಂತೆ ...ಅಂತೆ ಕಂತೆಗಳು . ತಲೆ ಬಿಸಿ ಆಗೋದಕ್ಕೆ start ಆಯಿತು . ಒಂದು ಸಮಯ ಕೆಲಸ ಹೋದರೆ ಮುಂದೆ ಏನು ಅಂತ ಯೋಚನೆ , break ತೊಗೊಂಡ್ಳ, resume ready ಮಾಡ್ಕೊಂಡ್ಳ , ಹೀಗೆ ಹತ್ತಾರು ಯೋಚನೆಗಳು . ಊಟದ ಸಮಯ ಆಗಿತ್ತು . lunch ಮುಗಿಸಿ ಬಂದಾಗ cake cutting arrange ಮಾಡಿದ್ರು . Mood ಇರದೇ ಇದ್ರೂ ಎಲ್ಲರ ಮುಂದೆ ತೋರಿಸಿಕೊಳ್ಳದೆ cut ಮಾಡಿ ಎಲ್ಲರಿಗೂ ಹಂಚಿದ್ದೆ . ಮನದ ಎಲ್ಲೊ ಒಂದು ಮೂಲೆಯಲ್ಲಿ ಸಿಗದ ಉತ್ತರಕ್ಕೆ ಮನಸ್ಸು ಚಡಪಡಿಸುತ್ತಿತ್ತು . ಕೆಲಸ ಮಾಡಲು mood ಇರಲಿಲ್ಲ . ಮತ್ತೆ ಒಂದು ಸುದ್ದಿ ಬಂದಿತ್ತು ...ಇನ್ನೊಂದು busines unit ನಲ್ಲಿ 4 ಜನ resign ಮಾಡಿದ್ಹಾರಂತೆ ಅಂತ . Mail ನೋಡಿದ ತಕ್ಷಣ ಅನಿಸಿದ್ದು ... ಇದು ಎಲ್ಲರ ಕಣ್ಣಿಗೆ resign ಅಂತ ತೋರಿಕೆಯಾದರು , they were asked to go ಅಂತ . ಮನದ ತುಮುಲ ಜಾಸ್ತಿಯಾಯಿತು . ಈ ದಿನವೇ ಇಂತ ಸುದ್ದಿಗಳನ್ನು ಕೇಳಬೇಕಾಯಿತ ಅನ್ನಿಸ್ತು . ಅಷ್ಟರಲ್ಲಿ mailbox ನಲ್ಲಿ ಒಂದು mail ಇಣುಕಿತ್ತು ....ನಮ್ಮ HR ಇಂದ ಬಂದ mail. Meeting ಗೆ ಬುಲಾವ್ ಬಂದಿತ್ತು . ಏನಪ್ಪಾ ಇದು ಅನ್ಕೊಂಡು meeting ಗೆ ಹೋದರೆ , HR ನಿಂದ gyan session. ಹೇಗೆ ಈ situation ನ handle ಮಾಡ್ಬೇಕು ಅಂತ ಜ್ಞ್ಯಾನಬೋಧನೆ. ಮೂಲೆಯಿಂದ ಒಂದು ಪ್ರಶ್ನೆ ಬಂದಿತ್ತು ...Is this news all true ? ಅಂತ . HR ನ sarcastic ನಗೆ ಆ ಪ್ರಶ್ನೆಗೆ ಉತ್ತರ ಕೊಟ್ಟಿತ್ತು . ಸರಿ , ಇಲ್ಲಿ ಯಾರು safe ಇಲ್ಲ ಅನ್ನಿಸ್ತು . ಮತ್ತೆ ದಿನದ ನೆನಪು . ದಿನವೆಲ್ಲ ಬರಿ ಇಂಥದೇ ಸುದ್ದಿ ಆಗಿತ್ತು . Meeting ಮುಗಿಸಿ chai break ಗೆ ಹೋದಾಗಲೂ ಬರಿ ಇಂಥದೇ ಮಾತುಗಳು . ಎಲ್ಲರೂ ತಮ್ಮ EMI ಬಗ್ಗೆ, liabilities ಬಗ್ಗೆ ಮಾತನಾಡುತ್ತಿದ್ದರು. ಸಧ್ಯ ಆ ಯೋಚನೆ ನನಗಿರಲಿಲ್ಲ. ದಿನ ಯಾವಾಗ ಮುಗಿಯತ್ತೋ ಅನ್ನಿಸ್ತಿತ್ತು. ಹಾಗೆ ಕಾಲ ತಳ್ಳುತ್ತಾ cab ಸಮಯ ಆಗಿತ್ತು . ಈ ವಾತಾವರಣದಿಂದ ತಪ್ಪಿಸಿಕೊಳ್ಳಲು ಬೇಗನೆ wrap up ಮಾಡಿ , cab ನಲ್ಲಿ ಹೋಗಿ ಕೂತಿದ್ದೆ . cabನಲ್ಲಿ ಕೂತಾಗಲು ಏನೋ ಮನಸ್ಸಿನಲ್ಲಿ ತಳಮಳ . ಬೇಡದ ಯೋಚನೆಗಳು ...
ಮನೆಗೆ ತಲುಪಿ bag ನ ಟೇಬಲ್ ಮೇಲಿಟ್ಟು ಮತ್ತೆ ಯೋಚನೆಗೆ ಬಿದ್ದೆ . ಅಮ್ಮ sweets ಮಾಡಿದ್ರು . ತಿನ್ನುವ ಮನಸ್ಸು ಇರಲಿಲ್ಲ . ಮತ್ತೆ office friend ನಿಂದ call...ಯಾವುದೋ area ದಲ್ಲಿ 7 cut down ಅಂತ . ನಾಳೆ office ಗೆ ರಜ ಹಾಕ್ಬೇಕು ಅಂತ ಅನ್ಕೊಂಡೆ. ಸರಿ ಊಟ ಮಾಡಿ ಮಲಗಿ ಬಿಡುವ ಅನ್ನಿಸ್ತು . ಸಧ್ಯಕ್ಕೆ ಯಾವ calls ಇರ್ಲಿಲ್ಲ . ಹಾಗೆ ದಿಂಬಿಗೆ ಒರಗಿ ಕಣ್ಣು ಮುಚ್ಚಿದ್ದೆ . ಕಣ್ಣಿಗೆ ಮಂಪರು ಹತ್ತಿತ್ತು . Sudden ಆಗಿ ಅಮ್ಮ ಕರೆದ ಧ್ವನಿ ದೂರದಿಂದ ಕೇಳಿಸ್ತು ....office ಗೆ late ಆಯಿತು ಏಳಲ್ವೇನೆ ಅಂತ , ಮತ್ತೆ ಕೂಗು ....ಕಣ್ಣು ಬಿಟ್ಟು ನೋಡಿದೆ ...oh ಆಗಲೇ 6.30 ಆಗಿತ್ತು . ಈಗ ತಾನೇ ಆಫೀಸ್ನಿಂದ ಬಂದಿದ್ದಲ್ವ, ಅಷ್ಟು ಬೇಗ ಬೆಳಗಾಗೋಯ್ತ ಅಂತ ಅನ್ಕೊಂಡಾಗ ಹೊಳೆದಿದ್ದು ನಾನು ಇಲ್ಲಿವರೆಗೂ ಕಂಡಿದ್ದು ಬರೀ ಕನಸು ಅಂತ. ನನ್ನ ಹುಟ್ಟುಹಬ್ಬ ಕಳೆದು ಆಗಲೇ ಒಂದು ವಾರದ ಮೇಲೆ ಆಗಿತ್ತು . Oh..ಸಧ್ಯ ಕನಸು ಇದು , ನಿಜ ಅಲ್ಲ ಅಂತ ತಿಳಿದು ಸ್ವಲ್ಪ ಸಮಾಧಾನ ಆಯಿತು . office ಗೆ ಹೊರಡಲು readyಯಾಗಲು ಎದ್ದೆ.
ಆದರೆ office ನಲ್ಲಿ ಮತ್ತೊಂದು bomb ಸ್ಪೋಟಿಸುತ್ತೆ ಅಂತ ಗೊತ್ತೇ ಇರಲಿಲ್ಲ ....!!!!
*spelling mistakes ಗಳ ಬಗ್ಗೆ ಕ್ಷಮೆ ಇರಲಿ