Saturday, 9 November 2013

ನಾನು , ಶಂಗಂ ಸಾಹಿತ್ಯ ಹಾಗು ಕನ್ನಡ

ನವೆಂಬರ್ ,  ಯಾರು  ತಾನೇ  ಮರೆಯಲು  ಸಾಧ್ಯ  ಕನ್ನಡ  ರಾಜ್ಯೋತ್ಸವದ ದಿನವನ್ನು .   ವರ್ಷ   ೫೭ನೇ  ರಾಜ್ಯೋತ್ಸವವನ್ನು ಆಚರಿಸಿದ  ವರ್ಷ . ಆಫೀಸ್ಗೆ  ರಜೆ . ಸ್ನೇಹಿತರ  ಜೊತೆ  ರಾಜ್ಯೋತ್ಸವದ  ಶುಭಾಶಯವನ್ನು  ಹಂಚಿಕೊಂಡಿದ್ದೆ . ಹೀಗೆ  ಮಾತು  ಕಥೆಯಲ್ಲಿ  ಸ್ನೇಹಿತನ  ಸಲಹೆ  ಶಂಗಂ ತಮಿಳಗಂ  ಮತ್ತು  ಕನ್ನಡ  ನಾಡು  ನುಡಿ’  ಪುಸ್ತಕವನ್ನು  ಓದಲು . ಇದು  ಕೇಂದ್ರ  ಸಾಹಿತ್ಯ  ಅಕಾಡೆಮಿಯ  ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ  ಕೃತಿ . ಇತಿಹಾಸಕಾರರಾದ ಶೆಟ್ಟರ್   ಕೃತಿಯ  ಕರ್ತ್ರು. ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ  ಕುರಿತ  ಪುಸ್ತಕ . ಹೆಚ್ಚಾಗಿ ಪುಸ್ತಕಗಳನ್ನು ಓದದ ನಾನು , ಪುಸ್ತಕದ ಹೆಸರನ್ನು ಕೇಳಿರಲಿಲ್ಲ. ಹೇಗೂ ಸಮಯ ಇದ್ದುದರಿಂದ, ಸ್ವಪ್ನ ಬುಕ್ ಹೌಸ್  ಗೆ  ಹೋಗಿ  ಬುಕ್  ಕೊಳ್ಳುವ  ಯೋಜನೆ  ಸಿದ್ದಪಡಿಸಿದೆ . ಸ್ವಲ್ಪದರಲ್ಲೇ ಪುಸ್ತಕ  ನನ್ನದಾಗಿತ್ತು . ಇನ್ನು  ಓದುವುದೊಂದು  ಬಾಕಿ . ಮಧ್ಯಾನದ  ಊಟ  ಮುಗಿಸಿ ಪುಸ್ತಕ  ಓದಲು  ಕುಳಿತೆ .

ಮುನ್ನುಡಿ  ಓದಿದಾಗಲೇ ಅರಿತೆ  ಇದು  ಹಲವು  ದಶಕಗಳ  ಇತಿಹಾಸವನ್ನು ಕುರಿತ ಚರ್ಚೆ , ಚಿಂತನೆ , ಸಂವಾದಗಳೆಂದು. ಕನ್ನಡದ  ಪುರಾತನ  ಕೃತಿಯಾದ ಕವಿರಾಜಮಾರ್ಗ  ಹಾಗು  ತಮಿಳರ  ಶಂಗಂ  ಸಾಹಿತ್ಯದ  ಬಗ್ಗೆ  ಸಮಾಲೋಚನೆ  ಕುರಿತ  ವಿಷಯ. ಶಂಗಂ ಕಾಲದ  ರಾಜಮನೆತನಗಳಾದ ಪಾಂಡ್ಯ, ಚೋಳ , ಚೇರರ ಬಗ್ಗೆ  ಇಲ್ಲಿ  ಚರ್ಚೆ  ಇದೆ .ಹಾಗೆಯೇ  ಕನ್ನಡದ  ನೆಲದಲ್ಲಿ  ರಾಜ್ಯಕಟ್ಟಿದ ಕದಂಬ , ಬಾದಾಮಿ , ಚಾಲುಕ್ಯ  ಮತ್ತು  ರಾಷ್ಟ್ರಕೂಟರು  ಸಂಸ್ಕೃತಕ್ಕೆ  ಕೊಟ್ಟ ಸ್ಥಾನಮಾನದ ಬಗ್ಗೆ  ಪ್ರಶಂಸೆ ಇದೆ. ಶಂಗಂ  ತಮಿಳರ  ಮೇಲೆ  ಬೀರಿದ  ಕನ್ನಡ  ಪ್ರಭಾವ  ಅಪಾರ . ಬಹುಕಾಲದ ವರೆಗೂ  ಲಿಪಿರಹಿತ  ಜನಾಂಗದ ತಮಿಳಗಂ  ಕಾರ್ಯಕ್ಷೇತ್ರದಲ್ಲಿ  ತಮ್ಮ  ವ್ಯವಹಾರಕ್ಕೆ  ತಮಿಳು ಬ್ರಾಹ್ಮೀ ಲಿಪಿಯನ್ನು ಬಳಸಿಕೊಂಡಿದ್ದರು .   ಶಾಸನವನ್ನು  ಹಿನ್ನಲೆಯಾಗಿಟ್ಟು ನೋಡಿದರೆ  ತಮಿಳರ  ಮೇಲೆ  ಹಳೆಗನ್ನಡ  ಬೀರಿದ  ಪ್ರಭಾವದ  ಅರಿವಾಗುತ್ತದೆ . ಇದರಿಂದ  ಶಂಗಂ  ಕಾಲಕ್ಕಾಗಲೇ ಕನ್ನಡವು ಬೆಳೆದ  ಭಾಷೆಯಾಗಿತೆಂಬುದು ತಿಳಿದು  ಬರುತ್ತದೆ.

ಕೆಲ ಅಧ್ಯಾಯಗಳನ್ನು ಶ್ರದ್ದೆ  ಇಂದ  ಓದಿದ  ಮೇಲೆ  ಅದೇ  ವಿಷಯಗಳನ್ನು  ಕೆದಕುತ್ತಾ  ಹೋದ ಹಾಗೆ ಅನ್ನಿಸಿತು. ಪುಸ್ತಕದ  ವಕ್ಕಣೆ ಗೊತ್ತಾಗಿತ್ತು . ಎರಡು  ಅಧ್ಬುತ  ಗ್ರಂಥಗಳಾದ ಕವಿರಾಜಮಾರ್ಗ ಹಾಗು ತೊಲ್ಕಾಪ್ಪಿಯಂ ಗಳ  ಕರ್ತ್ರು  ಯಾರು  ಅಂತ  ಎಲ್ಲರಿಗಿರುವ ಗೊಂದಲ, ತಿಳಿದುಕೊಳ್ಳುವ ಜಿಗ್ನ್ಯಾಸೆ ನನಗೂ ಇತ್ತು. ಇದರಲ್ಲಿ ಕಾವೇರಿ  ನದಿಯ  ಮೂಲದ  ಬಗ್ಗೆ  ಚರ್ಚೆ  ಇತ್ತು . ಎರಡೂ ರಾಜ್ಯಗಳ ಪ್ರಾಂತ್ಯಗಳನ್ನು ಧಾಟುವ ಕಾವೇರಿಯ  ನೀರಿಗೆ  ವರ್ಷ  ವರ್ಷ  ನಡೆಯುವ  ನೀರಿನ  ಯುದ್ದ  ಅಸಮಂಜಸ  ಎನಿಸ ತೊಡಗಿತು . ನಮ್ಮ  ಪೂರ್ವಿಕರು  ಬಿಟ್ಟು  ಹೋದ  ಕಾವ್ಯ  ಸಂಪತ್ತಿನ  ಅರಿವೇ  ಇಲ್ಲದ ಅಜ್ಞ್ಯಾನದ ಹೊಸ್ತಿಲನ್ನು  ಮೆಟ್ಟಿ  ನಿಂತ  ನಮ್ಮ  ಜನರ  ಭಾಷಾ  ಕಲಹದ  ಬಗ್ಗೆ  ಮನಸ್ಸು  ಖೇದಗೊಂಡಿತ್ತು. ಈಗಿನ  ಕಾಲದ  ಎಷ್ಟೋ  ಕನ್ನಡಿಗರಿಗೆ  ನಮ್ಮ  ಕನ್ನಡವೆ  ಕಬ್ಬಿಣದ  ಕಡಲೆಯಾಗಿರುವ ವಿಷಯ  ಸ್ವಲ್ಪ  ದುಃಖತರುವ  ವಿಷಯ.

ಅಂತು ಒಂದು ಅಧ್ಬುತ ಕೃತಿಯನ್ನು ಓದಿ ಮುಗಿಸಿದ್ದೆ. ಸಾಕಷ್ಟು ವಿಷಯಗಳ ಪರಿಚಯವಾಗಿತ್ತು.  ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಸಾಹಿತ್ಯವನ್ನು ಎಲ್ಲರೂ ಉಳಿಸಿ ಬೆಳೆಸಲಿ ಎಂದು ಆಶಿಸುತ್ತೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಲ್ಗೆ !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.

Sunday, 3 November 2013

ದೀಪಾವಳಿ



ದೀಪಗಳ  ಹಬ್ಬ  ದೀಪಾವಳಿ .  ಮನುಕುಲವನ್ನು  ಅಂಧಕಾರದಿಂದ  ಬೆಳಕಿನತ್ತ  ತರುವ  ಹಬ್ಬ  ದೀಪಾವಳಿ . ಮನೆಯ ಮನದ  ಕತ್ತಲನ್ನು  ಹೋಗಲಾಡಿಸಿ  ಬೆಳಕನ್ನು  ಹಚ್ಚುವ  ಹಬ್ಬ ದೀಪಾವಳಿ. ಇಷ್ಟೆಲ್ಲಾ  ವೈಭವದಿಂದ  ಕೂಡಿದ  ದೀಪಾವಳಿ  ಎಲ್ಲರ  ತನು  ಮನವನ್ನು  ಬೆಳಗಿಸುವ  ಬೆಳಕಿನ  ಹಬ್ಬವಾಗಿದೆ. 

ದೇಶಾದ್ಯಂತ  ಆಚರಿಸುವ ಈ  ಹಬ್ಬಕ್ಕೆ  ಹಲವು  ಪೌರಾಣಿಕ ಹಿನ್ನಲೆಗಳಿವೆ. ಶ್ರೀಮನ್ನಾರಾಯಣ ವರಾಹವತಾರವೆತ್ತಿ  ಲೋಕವನ್ನು  ಉದ್ದರಿಸಿದ  ಬಳಿಕ  ಅವರ  ದೇಹದಿಂದ  ಬಿದ್ದ  ಒಂದು  ತೊಟ್ಟು  ಬೆವರು  ಅಸುರಾಕೃತಿಯನ್ನು ಪಡೆದು  ಮುಂದೆ  ಅವನು  ನರಕಾಸುರನಾದನಂತೆ . ರಾಕ್ಷಸ  ಪ್ರವೃತ್ತಿಯ  ಇವನು  ಕೊನೆಗೆ  ಶ್ರೀಕೃಷ್ಣನಿಂದ  ಸಂಹಾರವಾಗುತ್ತಾನೆ. ನರಕಾಸುರನ  ತಾಯಿಯ  ಕೋರಿಕೆಯ  ಮೇರೆಗೆ  ಅವನನ್ನು ಎಲ್ಲರೂ  ನೆನೆಪಿಸಿಕೊಳ್ಳೋದಕ್ಕೋಸ್ಕರ  ಶ್ರೀಕೃಷ್ಣ  ಈ  ಹಬ್ಬವನ್ನು  ಸ್ಥಾಯಿಗೊಳಿಸಿದ  ಎಂಬುದು  ಪ್ರತೀತಿ . ಆ  ದಿನದ  ನೆನಪೇ  ನರಕ  ಚತುದರ್ಶಿ. ದೀಪಾವಳಿಯ  ಅಮಾವಾಸ್ಯೆಯ  ದಿನ  ಪಿತೃಗಳಿಗೆ  ತರ್ಪಣವನಿತ್ತು ಶ್ರದ್ದಾ  ವಿಧಿಗಳನ್ನು  ತೀರಿಸಿ  ಜನರು  ತಮ್ಮ  ಅಗಲಿದ  ಹಿರಿಯರಿಗೆ  ಭಕ್ತಿಯಿಂದ  ಪ್ರಾರ್ಥನೆ  ಸಲ್ಲಿಸುವ  ಪರಿಪಾಠವಿದೆ. ಲಕ್ಷ್ಮಿ  ಹಬ್ಬವನ್ನು  ಆಚರಿಸುವುದು ಈ  ಹಬ್ಬದ  ಮತ್ತೊಂದು  ವೈಶಿಷ್ಟ್ಯ. ಇನ್ನು  ಬಲಿಚಕ್ರವರ್ತಿಯನ್ನು  ನೆನಪಿಸಿಕೊಳ್ಳುವ  ದಿನವೇ  ಬಲಿಪಾಡ್ಯಮಿ . ಹೀಗೆ  ನರಕ  ಚತುದರ್ಶಿ , ಅಮಾವಾಸ್ಯೆ , ಬಲಿಪಾಡ್ಯಮಿ ದಿನಗಳನ್ನೊಳಗೊಂಡ  ದೀಪಾವಳಿ  ಹಬ್ಬ  ಸಂಭ್ರಮದಿಂದ  ಕೂಡಿರುತ್ತೆ .

ಮಕ್ಕಳ  ಅತ್ಯಂತ  ನೆಚ್ಚಿನ  ಹಬ್ಬ  ಇದಾಗಿದೆ . ಹೊಸ  ಬಟ್ಟೆಗಳನ್ನು  ತೊಟ್ಟು , ಮನೆಯನ್ನು ದೀಪಗಳಿಂದ  ಅಲಂಕರಿಸಿ , ಪಟಾಕಿಗಳನ್ನು  ಹಚ್ಚಿ  ಸಂಭ್ರಮಿಸುತ್ತಾರೆ.

ಈಗಿನ  ಹಬ್ಬಕ್ಕೂ  ನಾನು  ಚಿಕ್ಕವಳಾಗಿದ್ದಾಗ  ಆಚರಿಸುತ್ತಿದ್ದ  ಹಬ್ಬಕ್ಕೂ  ತುಂಬಾ  ವ್ಯತ್ಯಾಸವಿದೆ. ಆಗೆಲ್ಲ ಹಬ್ಬ  ಎಂದರೆ  ಎಲ್ಲಿಲ್ಲದ  ಸಡಗರ . ಒಂದು  ವಾರದ  ಮುಂಚೆಯೇ  ಹೊಸಬಟ್ಟೆಗಳನ್ನು ಖರೀದಿಸಿ, ಹಬ್ಬ  ಬರುವುದನ್ನೇ  ಎದಿರು  ನೋಡುತ್ತಿರುತ್ತಿದ್ದೆ . ಇನ್ನು ಹಬ್ಬದ  ದಿನವಂತೂ ಸಡಗರ  ಹೇಳತೀರದು . ಬೆಳಗ್ಗಿನ  ಜಾವ  ಬೇಗನೆ  ಎದ್ದು, ಎಣ್ಣೆ  ಸ್ನಾನ  ಮಾಡಿ  ಹೊಸ  ಬಟ್ಟೆಯನ್ನು  ತೊಟ್ಟು , ದೇವರ  ಪೂಜೆ  ಮಾಡಿ  ದೇವಸ್ಥಾನಕ್ಕೆ  ಹೊರಡುತ್ತಿದ್ದೆವು. ಆಮೇಲೆ  ಕಜ್ಜಾಯ  ತಿನ್ನುವ  ಸಡಗರ . ಕಜ್ಜಾಯದ  ತಯಾರಿಕೆಯಂತು 2-3 ದಿನದ  ಮುಂಚೆಯೇ  ನಡೆದಿರುತ್ತಿತ್ತು . ಅಮ್ಮ  ಪಾತ್ರೆ  ತುಂಬಾ  ಕಜ್ಜಾಯ  ಮಾಡಿರುತ್ತಿದ್ದರು .  ಇಷ್ಟೆಲ್ಲಾ  ಆದ  ಮೇಲೆ  ಸಂಜೆಗೆ  ಪಟಾಕಿ  ಹೊಡೆಯುವ  ಸಂಭ್ರಮ. ಅಪ್ಪ  ಇದರ ಬಗ್ಗೆ ತುಂಬಾ strict. ಪಟಾಕಿಯ  ಮೇಲೆ ಹೆಚ್ಚಾಗಿ ದುಡ್ಡು  ಸುರಿಯುತ್ತಿರಲಿಲ್ಲ. ನನಗೋ ಪಟಾಕಿ ಅಂದರೆ ತುಂಬಾ  ಆಸೆ . ಆ  ಬಾಣ  ಬಿರಿಸು , ಸುರು  ಸುರು  ಬತ್ತಿ , ಫ್ಲವರ್  ಪಾಟ್ , ಲಕ್ಷ್ಮಿ ಪಟಾಕಿ , ಮತಾಪು , gun ಪಟಾಕಿ  ಎಲ್ಲ  ಇಷ್ಟ . ಆಕಾಶದೆತ್ತರಕ್ಕೆ  ಹೋಗುವ  ರಾಕೆಟ್  ಅನ್ನು  ನೋಡುವುದೆಂದರೆ  ಎಲ್ಲಿಲ್ಲದ  ಆಸೆ . ಮನೆಮಂದಿಯೆಲ್ಲಾ ಸೇರಿ ಸ್ನೇಹಿತರು ಹಾಗು ನೆರೆಹೊರೆಯವರ ಜೊತೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದೆವು. ಹೀಗೆ  ಮೂರುದಿನಗಳ  ಹಬ್ಬ  ಯಾವಾಗ  ಮುಗಿದಿತ್ತು  ಅಂತ  ಗೊತ್ತೇ  ಆಗುತ್ತಿರಲಿಲ್ಲ .

ಆದರೆ  ಈಗ  life style ಬದಲಾಗಿದೆ . ಯಾವಾಗ  ಹಬ್ಬ  ಬಂದು  ಹೋಯಿತೆನ್ನುವುದು ಗೊತ್ತೇ  ಆಗುವುದಿಲ್ಲ . ಆಫೀಸ್ಗೆ  ಒಂದು  ದಿನ  ರಜ ಸಿಕ್ಕಿರುತ್ತೆ ...ಹೀಗಾಗಿ  ಹಬ್ಬದ  ಆಚರಣೆ . ಆಚರಣೆ  ಅನ್ನೋದಕ್ಕಿಂತ , relaxing ಅನ್ನುವುದು ಉತ್ತಮ . ಮುಂಚಿನ  ಸಡಗರ  ಈಗಿಲ್ಲ. ಹೊಸಬಟ್ಟೆ  ತೊಟ್ಟು  ದೇವಸ್ಥಾನಕ್ಕೆ  ಹೋಗುವ  ಪ್ರಕ್ರಿಯೆ  ನಿಂತಿದೆ . ಈಗ  ಎಲ್ಲ  ತಿನಿಸುಗಳು  ಹೊರಗಡೆ ದೊರೆಯುವುದರಿಂದ , ಮನೆಯಲ್ಲಿ  ಮಾಡುವ  ಸಿಹಿಪರ್ದಾರ್ಥಗಳು ಅಷ್ಟಕಷ್ಟೇ. ಇನ್ನು ಸ್ನೇಹಿತರಿಗೆ ಹಬ್ಬದ wishes ನ ತಿಳಿಸಲು ಒಂದು sms ಹೋಗಿರುತ್ತೆ. ಪಟಾಕಿಗಳ ಹುಚ್ಚು  ಸಂಪೂರ್ಣ  ಬಿಟ್ಟಿದೆ . ವಾಯುಮಾಲಿನ್ಯದ  ಅರಿವು , ಅದರಿಂದ ದೇಹದ  ಮೇಲಾಗುವ  ದುಷ್ಪರಿಣಾಮಗಳ  ತಿಳುವಳಿಕೆ ಹೆಚ್ಚಿದೆ. 

ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿವೆಯಾದರೂ, ಎಲ್ಲೊ  ನಮ್ಮ  ಹಿಂದಿನ  ಸಂಪ್ರದಾಯಗಳು ಈಗಿನ  ಆಧುನಿಕತೆಯಲ್ಲಿ ಮರೆಯಾಗುತ್ತಿವೆ  ಅನ್ನಿಸುತ್ತಿದೆ . ನಮ್ಮ  ಯುವಪೀಳಿಗೆಗಳು ನಮ್ಮ ಪರಂಪರೆಯನ್ನು ಮರೆಯದಿರಲಿ  ಎಂದು  ಆಶಿಸೋಣ !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ 

Saturday, 2 November 2013

Bigg ಬಾಸ್

ಇದು  Reality showಗಳ  ಜಮಾನ. TV on ಮಾಡಿದರೆ , ಎಲ್ಲ  ಭಾಷೆಗಳ chanells ನಲ್ಲೂ  ಒಂದಲ್ಲ  ಒಂದು  reality ಶೋ ಪ್ರೋಗ್ರಾಮ್ telecast ಆಗುತ್ತಿರುತ್ತೆ. ಹಾಡು , ಡಾನ್ಸ್  ಪ್ರೊಗ್ರಾಮ್ ಗಳಿಗೆ  ಮಾತ್ರ  ಇಂತಹ ಶೋ  ಸೀಮಿತವಾಗಿಲ್ಲ . ಆಧುನಿಕ ಸ್ವಯಂವರಗಳು ಈನಡುವೆ  ಹೆಚ್ಚಿನ ಜನಮನ್ನಣೆಯನ್ನುಗಳಿಸುತ್ತಿವೆ .

ಎಲ್ಲರಿಗೂ ತಿಳಿದಿರುವ  ಹಾಗೆ , BigBoss ಸಹ TVಯಲ್ಲಿ ಬರುವ ಒಂದು Reality show. ಸರಿ ಸುಮಾರು 3 ತಿಂಗಳು ನಡೆಯುವ ಈ showದಲ್ಲಿ 12-14 Housemates ಇರುತ್ತಾರೆ. ಒಂದು ದೊಡ್ಡ ಮನೆಯಲ್ಲಿ ಇವರೆಲ್ಲ ಒಟ್ಟಿಗೆ ಬಂಧಿಯಾಗಿರುತ್ತಾರೆ. ಆ ಬಿಗ್ ಬಾಸ್ ಮನೆಯಲ್ಲಿರುವವರು ಹೊರಗಿನ ಪ್ರಪಂಚದಿಂದ ಸಂಪೂರ್ಣ cutoff. ಒಳಗೆ Entertainmentಗೆ ಅಂತ TV, Music, Newspaper, Phone, Internet ಏನೂ ಇರುವುದಿಲ್ಲ. ಇವರೆಲ್ಲ ಒಟ್ಟಿಗಿದ್ದು ಜೊತೆಗೆ ದಿನ ನೂಕಬೇಕು. ಇವರೇ  ಮನೆಯ  ಎಲ್ಲ  ಕೆಲಸವನ್ನು ಮಾಡಬೇಕಾಗುತ್ತೆ . ಕಸ  ಗುಡಿಸುವುದರಿಂದ   ಹಿಡಿದು , cleaning, cooking, washing ಎಲ್ಲ ಅಚ್ಚು ಕಟ್ಟಾಗಿ ನಡೆಯಬೇಕು. ಇದರ ಬಿಗ್ ಬಾಸ್ ದಿನ ಬೆಳಗಾದರೆ ಇವರಿಗೊಂದು Task ready ಮಾಡಿರುತ್ತಾರೆ. ಪ್ರತಿ ವಾರ Nomination ಪ್ರಕ್ರಿಯೆ  ಇರುತ್ತೆ  ಹಾಗೆ  Elimination ಸಹ  ಇರುತ್ತೆ . ಸರಿಯಾಗಿ  task ಅನ್ನು  ಶ್ರದ್ದೆಯಿಂದ ಮಾಡದೆ  ಹೋದರೆ  vote out ಆಗುವ chance ಜಾಸ್ತಿ. ಇದರ Host ವಾರಕೊಮ್ಮೆ ಬಂದು TV screen ನ ಮುಖಾಂತರ ಮನೆಯ ಒಳಗೆ entry ಕೊಟ್ಟು housemates ಗಳ ಸುಖ ದುಃಖಗಳನ್ನು ವಿಚಾರಿಸುತ್ತಾರೆ. ಇವರೇ housemates ಮತ್ತು ಹೊರಪ್ರಪಂಚದ ಒಂದು ಕೊಂಡಿ.

Housemates ಸಹ ಕೇವಲ ಸಾಮಾನ್ಯ ಜನರಲ್ಲ...Artists, Film stars, ನಾಟಕ  ರಂಗದಿಂದ  ಬಂದವರು, Politicians ಹೀಗೆ ಬೇರೆ ಬೇರೆ  ಕ್ಷೇತ್ರದಲ್ಲಿ ತಮ್ಮದೇ  ಆದ  ಛಾಪನ್ನು ಮೂಡಿಸಿಕೊಂಡವರು. ಅಥವಾ ಯಾವುದಾದರು scandleನಲ್ಲಿ ಸುದ್ದಿ ಮಾಡಿದವರು. Channelನ TRP ಹೆಚ್ಹ ಬೇಕಾದರೆ ಇಂಥ ಕೆಲವೊಂದು ಜನ ಇರಬೇಕಾಗುತ್ತೆ.

ಇಲ್ಲಿಂದ ಶುರುವಾಗುತ್ತೆ ಬಿಗ್ ಬಾಸ್ ನ ಮೋಡಿ. ನಾವು  ಸಹ  ನಮ್ಮೆಲ್ಲ  ನೆಚ್ಚಿನ  stars ಅನ್ನು ನಿಜ  ರೀತಿಯಲ್ಲಿ  ನೋಡುವ ತವಕದಿಂದ ನಮೆಲ್ಲ ಕೆಲಸಗಳನ್ನು ಬೇಗನೆ ಮುಗಿಸಿ correct ಆಗಿ  ಈ program start ಆಗುವಷ್ಟರಲ್ಲಿ  TV ಮುಂದೆ ಹಾಜರ್. ಇಲ್ಲಿಂದ  ಶುರುವಾಗುತ್ತೆ  ಇವರ  ನಿಜ ಜೀವನದ ಪರಿಚಯ. ಮೊದಲ ಕೆಲ ದಿನಗಳು  ಎಲ್ಲ  ಸರಿ  ಇರುತ್ತೆ , ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ. ಆಮೇಲೆ ನಿಧಾನವಾಗಿ ಇವರ  ನಿಜ  ಬಣ್ಣ ಹೊರಬರುತ್ತದೆ. ಸಣ್ಣದಾಗಿ  ಕೆಲವೊಬ್ಬರ  ಮಧ್ಯೆ  ಜಗಳ  ಶುರುವಾಗುತ್ತೆ, ಯಾವುದಾದರು ಒಂದು ಸಣ್ಣ ವಿಷಯಕೋಸ್ಕರ. ಅದನ್ನೇ  ದೊಡ್ಡದಾಗಿ  ಮಾಡಿ  ರಂಪ  ರಾಮಾಯಣ  ಮಾಡಿ  ಅತ್ತು  ಕರೆದು ಎಲ್ಲರ  ಅನುಕಂಪ  ಗಿಟ್ಟಿಸಿಕೊಳ್ಳುವ  ಪ್ರಯತ್ನ  ನಡೆಯುತ್ತೆ . ಕೆಲವೊಂದು  ಸಲವಂತೂ  ಒಬ್ಬರನೊಬ್ಬರು  ಹಿಗ್ಗಾಮುಗ್ಗ  ಬೈಯುತ್ತ   ಕೈ  ಸಹ  ಮಿಲಾಯಿಸುವ  ತನಕ ಹೋಗಿರುತ್ತೆ . ಇದರಿಂದ  ಬದ್ದದ್ವೇಶಿಗಳಾಗಿ ಹೊರಬಂದವರು  ಇದ್ದಾರೆ. ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಳ್ಳೋದಕ್ಕೋಸ್ಕರ ನಿರಂತರ strategic ಪ್ರಯತ್ನ ನಡೆಯುತ್ತಿರುತ್ತೆ.

BigBoss  ಅಭಿಮಾನಿಗಳಂತು ಈ show ನ ಚಾಚು ತಪ್ಪದೆ follow ಮಾಡುತ್ತಾರೆ . ಒಂದು  ದಿನವೂ  miss  ಮಾಡ್ಕೊಳಲ್ಲ . ಅಪ್ಪಿ  ತಪ್ಪಿ  elimination ಪ್ರಕ್ರಿಯೆ  ನಡೆದ  ದಿನವನ್ನು  ಮಿಸ್  ಮಾಡ್ಕೊಂಡ್ರೆ , ಯಾರು out ಆಗಿದ್ದು ಅಂತ ತಿಳಿದುಕೊಳ್ಳೋವರೆಗೊ ಅವರಿಗೆ ಸಮಾಧಾನವಿಲ್ಲ. ತಮ್ಮ favourite contestent ಯಾರಾದ್ರೂ out ಆಗ್ಬಿಟ್ರೆ , ಇವರಿಗೇನೋ ಬೇಸರ . ಅದೇ  ಬೇಡದವರು out ಆದರೆ , ಇವರ  ಸಂತೋಷ  ಹೇಳತೀರದು . "I guessed it right", "she got out yesterday" ಇಂತ  ಮಾತುಗಳು  ಆಫೀಸ್ ನಲ್ಲಿ  pantry ಗೆ ಹೋದಾಗಲೋ, cafe ಗೆ  ಹೋದಾಗಲೋ  ಕಿವಿಗೆ  ಬೀಳುತ್ತಿರುತ್ತೆ.

ಅಂತೂ ಈ  Reality show ಜನರನ್ನು ಹಿಡಿದಿಟ್ಟುಕೊಳ್ಳೋದ್ರಲ್ಲಿ ಮೇಲುಗೈ ಸಾಧಿಸಿದೆ!!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.