Saturday, 19 October 2013

ನಾಮಕರಣ

ನನ್ನ  ಆಫೀಸ್  Friend ರಮ್ಯ  ಮಗುವಿನ  ನಾಮಕರಣವಿತ್ತು. ಆಫೀಸ್ ವರೆಗೂ  ಬಂದು  ಎಲ್ಲರನ್ನೂ invite ಮಾಡಿ  ಹೋಗಿದ್ದರು . ISKCON ನಲ್ಲಿ  function  ಇಟ್ಕೊಂಡಿದ್ರು . Weekday ಆಗಿರೋದ್ರಿಂದ  ಹಾಗು  friends company ಇರೋದ್ರಿಂದ  functionಗೆ  ಹೋಗುವ  ತೀರ್ಮಾನ  ಮಾಡಿದ್ದೆ . I was all set to go.

Function ದಿನ  ಬಂದೇ ಬಿಟ್ಟಿತ್ತು. ಆಫೀಸ್  ಗೆ  ಬಂದಾಗ ಸೋಹನ್ ಹೇಳಿದ್ರು  ಸ್ವಲ್ಪ  ಬೇಗನೆ  ಹೊರಡುವ  on the way gift purchase ಮಾಡ್ಬೇಕು  ಅಂತ . ಸರಿ  11.15 ಕ್ಕೆ start ಮಾಡೋಣ  ಅಂತ  decide ಮಾಡಿದ್ವಿ . ಕೆಲಸದಲ್ಲಿ  busy ಆಗ್ಬಿಟ್ಟು ಟೈಮ್  ಹೋಗಿದ್ದೇ ಗೊತ್ತಾಗ್ಲಿಲ್ಲ . 11.15 ಆಗೋಷ್ಟರಲ್ಲಿ ಸೋಹನ್ ನಿಂದ  2 ಸಲ  reminder ಬಂದಿತ್ತು . ಸರಿ  ಬೇಗನೆ  ಕೆಲಸನ  wrap up ಮಾಡಿ  parking lot ge ಹೋದೆಸೋಹನ್  ಜೊತೆ  ಕಾರ್ ನಲ್ಲಿ  ಹೊರಡಬೇಕಿತ್ತು . ಆದರೆ  ಮಹಾನುಭಾವ  ಕಾರ್  ಕೀನೇ  ಮರೆತು  ಬಂದಿದ್ರು. ಹಾಗೂ ಹೀಗೂ  ಆಫೀಸ್ನಿಂದ  ಹೊರಟೆವು . ಆದರೆ  ನಮ್ಮ  ದುರಾದುಷ್ಟಕ್ಕೆ , ಹೆಬ್ಬಾಲ್  ಕಡೆ  ದಾರಿನ  block ಮಾಡಿದ್ರು . No point in waiting ಅಂತ  left ತೊಗೊಂಡು  U trun ಮಾಡ್ಕೊಂಡು  ಬರೋಣ  ಅಂತ  ಹೊರಟೆವು . ಸ್ವಲ್ಪ  ದೂರ  ಮಾತ್ರ  ಹೋಗಬೇಕು  U turn ತೊಗೊಳಕ್ಕೆ  ಅನ್ಕೊಂಡ  ನಮಗೆ  U ಕಾಣಿಸಲೇ  ಇಲ್ಲಸೋಹನ್  frustration ಮುಖದಲ್ಲಿ ಕಾಣಿಸುತ್ತಿತ್ತು. ಕೊನೆಗೂ  ಹೆಬ್ಬಾಲ್  ಕಡೆ  car ತಿರುಗಿತ್ತು . ಬೇರೆಯವರು  12 ಕ್ಕೆ ಹೊರಡುತ್ತಾರೆ  ಅಂದಿದ್ರು . ನಾವು   ಇಷ್ಟೆಲ್ಲಾ  circus ಮಾಡಿ  ಹೋಗೋಷ್ಟರಲ್ಲಿ  ಬೇರೆಯವರು  ನಮ್ಮ   ಜೊತೇನೇ  join ಆಗ್ತಾರೇನೋ ಅನ್ಕೊಂಡಿದ್ವಿ . ಆದರೆ  ಹಾಗಾಗಲಿಲ್ಲ .

ಸೋಹನ್ Route ಮ್ಯಾಪ್  on ಆಯಿತು  mobileನಲ್ಲಿ . Frenchನಲ್ಲಿ  instructions set ಮಾಡಿದ್ರು . French  ಗಂಧ  ಅರಿಯದ  ನನಗೆ  ತುಂಬಾ  ತಮಾಷೆಯಾಗಿತ್ತು ಕೇಳಲು. French ಅರೆದು ಕುಡಿದ ಇವರು instructions follow ಮಾಡ್ಕೊಂಡು Malleswaram ತಲುಪಿದ್ವಿ. Cloud Nine ಮುಂದೆ ಕಾರ್ ನಿಲ್ತು .'Mom and Me' ಗೆ  ಹೋಗ್ಬೇಕಿತ್ತಲ್ಲ   ಅನ್ಕೊಂಡ ನನಗೆ , Hospital ವಳಗೆ    shop ಇರುವ  ಬಗ್ಗೆ  ತಿಳಿಯಿತು . ಸರಿ  basement ಗೆ  ಹೋದ್ವಿ . Mom & me ಎದುರಾಯಿತು . ಎಲ್ಲ  ಮಕ್ಕಳ  items, good collection. ಬೇಕಾದ items   select ಮಾಡಿದ್ವಿ . ಆಗಲೇ  12.45 ಆಗಿತ್ತುಸೋಹನ್  gifts ಗಳ photo ತೊಗೊಂಡ್ರು  ಬೇರೆಯವರಿಗೆ  ತೋರಿಸಲು . Gift wrap ಮಾಡಿಸಿ  ಹೊರಡೋಷ್ಟೊತ್ತಿಗೆ  1 ಆಗಿತ್ತು . ಇನ್ನೇನು  ಕಾರ್  start ಮಾಡಿದ್ವಿಸಿದ್ಹ್  ಕಾಲ್  ಮಾಡಿದ್ರು  ಎಲ್ಲಿದ್ದೀರಾ  ಅಂತ  ಕೇಳಲು . ಸರಿ  ಇನ್ನೊಂದು  10 ನಿಮಿಷದಲ್ಲಿ  Iskconನಲ್ಲಿ  ಇರ್ತೀವಿ ಅಂತ  ಹೇಳಿ  ಹೊರಟೆವು .

ISKCON ತಲುಪಿ  ಮಥುರ  ಹಾಲ್  ಗೆ  ಹೋದಾಗ  ವಿಕಾಸ್ , ರಮ್ಯ  husband ಎದುರಾದರು . ನಿಮ್ಮ  Freinds ಎಲ್ಲ  Temple ಗೆ  ಹೋಗಿದ್ದಾರೆ ಅಂದ್ರು . ನನಗೂ  ಹೋಗುವ  plan ಇತ್ತು. Call ಮಾಡಿ  ಎಲ್ಲಿದ್ದಾರೆ ಅಂತ  ವಿಚಾರಿಸ್ಕೊಳುವ ಅನ್ಕೊಂಡ್ರೆ , signal ಸಿಕ್ಲಿಲ್ಲ . ಆಗಲೇ  Function ಎಲ್ಲ  ಮುಗಿದು  ಜನ ಊಟಕ್ಕೆ  ಕೂತಿದ್ರುಸುಹಾಸ್  ಬೆಳಗಿನಿಂದ  ಎಲ್ಲ  ಹೊಸ  ಮುಖಗಳನ್ನು  ನೋಡಿ  ರಚ್ಚೆ  ಹಿಡಿದಿದ್ದ . ರಮ್ಯ  ಅವನನ್ನ  ಸಮಾಧಾನ  ಮಾಡಲು  ಒಳಗೆ  ಕರೆದು  ಕೊಂಡು  ಹೋದರು . ನಾನು  ಮತ್ತೆ  ಸೋಹನ್ ಇಬ್ಬರೇ  ಉಳ್ಕೊಂದ್ವಿ  ಹಾಲ್ ನಲ್ಲಿ . ಹೊರಗಡೆ  ಬಿಸಿಲಿನಿಂದ  ಬಂದ  ನಮಗೆ  ಶೆಕೆ  ಆಗ್ತಿತ್ತು. ಹೋಗಿ  3600 ಫ್ಯಾನ್  ಕೆಳಗೆ  ಕೂತ್ಕೊಂದ್ವಿ. ಮತ್ತೆ  try ಮಾಡಿದರೂ signal ಸಿಗ್ಲಿಲ್ಲ. ಸರಿ  ಹೊರಗಡೆ  ಹೋದ್ರೆ  signal ಸಿಗುತ್ತೆ  ಅನ್ಕೊಂದ್ವಿ . ಕೈನಲ್ಲಿ  gift ಕವರ್  ಇತ್ತು . ಅದನ್ನ  ಹೊತ್ಕೊಂಡು  ಓಡಾಡ್ಹೋಬದಲು ರಮ್ಯನಿಗೆ  ಕೊಟ್ಟು  ಹೋಗೋಣ  ಅನ್ಕೊಂಡು  ಒಳಗೆ  ಹೋಗಿ  ಕೊಟ್ಟು  ಬಂದೆ. ಹೊರಗಡೆ  ಬಂದು  ಸ್ವಲ್ಪ  ಹೊತ್ತು  wait ಮಾಡಿದ್ಮೇಲೆ  ಆನಂದ್ , ಸಿದ್ಹ್ , ಸಿಬಿ  ಮತ್ತೆ  ಶಾಂತಿ  ಕಾಣಿಸಿದರು. Temple ದರ್ಶನ  ಮುಗಿಸಿ  ಬರ್ತಿದ್ರು .ಅಗರಬತ್ತಿಯ  shopping ಜೋರಾಗಿ  ನಡೆದಿತ್ತು . Temple ಅಷ್ಟರಲ್ಲೇ  close ಆಯಿತು  ಅಂತ  ಕೇಳಿ  ನನಗೆ  ಸ್ವಲ್ಪ  ಬೇಜಾರಾಯಿತು . ಇಷ್ಟು  ದೂರ  ಬಂದು  templeಗೆ  ಹೋಗಲಾಗಲಿಲ್ಲವಲ್ಲ  ಅಂತ . ಆದರೆ  ಸೋಹನ್  ಮುಖದಲ್ಲಿಯ  ಅಸಮಧಾನ  ಬೇರೆಯೇ  ಕಾರಣಕ್ಕೆ  ಅಂತ ತಿಳಿಯಿತು . ಅವರು  ಆಫೀಸ್ನಿಂದ  ಹೊರಡುವಾಗಲೇ  ಅಗರಬತ್ತಿಯ  shopping ಮಾಡ್ಬೇಕು  ಅಂತ  ಹೇಳಿದ್ರು . ಅವರ  main objective ಅಗರಬತ್ತಿ  purchase ಮತ್ತೆ  Orion mall ನಲ್ಲಿ  shopping ಆಗಿತ್ತು.

ಸರಿ , ಎಲ್ಲರೂ  ಮತ್ತೆ  ಹಾಲ್   ಒಳಗೆ  ಹೋದೆವು . ಊಟಕ್ಕೆ  ಕುಳಿತ  batch ಇನ್ನೂ  ಊಟ  ಮುಗಿಸಿರಲಿಲ್ಲ . ರಮ್ಯ  ಮಗುವನ್ನು  ಮಲಗಿಸಿ  ಹೊರಗಡೆ  ಬಂದಿದ್ದರು . ಅವರ  ಜೊತೆ  ಒಂದಷ್ಟು  ಹರಟೆ  ಹೊಡೆದೆವುಸೋಹನ್ಗೆ  ಏನೋ  ಅವತ್ತು  ಫೋಟೋ  ತೆಗೆಯುವ  ಆಸಕ್ತಿ ಬಂದಿತ್ತು . ಎಲ್ಲರೂ  gift ಕೊಡುವ  ಒಂದು  ಗ್ರೂಪ್  ಫೋಟೋ  ಹಿಡಿಸ್ಕೊಳೋಣ  ಅಂದ್ರು . Oops..ಆದರೆ  ಆಗಲೇ  ನಾನು  gift ಕೊಟ್ಬಿಟ್ಟಿದ್ದೆ. Formal ಆಗಿ  ಕೊಟ್ಟಿರಲಿಲ್ಲವಾದ  ಕಾರಣ ಮತ್ತೆ  ಒಳಗೆ  ಹೋಗಿ  ತೆಗೆದು ಕೊಂಡು  ಬನ್ನಿ  ಅಂದ್ರು . ನನಗೆ  ತೀರ  ಮುಜುಗುರವಾಯಿತು , ಕೊಟ್ಟ  gift   ಮತ್ತೆ  ಹೇಗೆ  ಕೇಳಲು  ಸಾಧ್ಯ  ಅಂತ . ನಾನು  ಹೋಗಿ  ತರಲು  ಹಿಂದೇಟು  ಹಾಕಿದೆ. ಆದರೆ  ಸೋಹನ್  ಬಿಡಲಿಲ್ಲ . ಅವರೇ  ರಮ್ಯ  ಕೇಳಿ  ಮತ್ತೆ  ವಾಪಸ್  ತೊಗೊಂಡು  ಬಂದರು . ಮತ್ತೆ  ಕೊಟ್ಟ  ಶಾಸ್ತ್ರ ಮಾಡಿ  ಫೋಟೋ  ತೆಗಿಸ್ಕೊಂದ್ವಿ. ಅಷ್ಟರಲ್ಲೇ  ಎಲ್ಲರಿಗೂ  ಹೊಟ್ಟೆ  ತಾಳ  ಹಾಕುತಿತ್ತು . 1st batch ಊಟ  ಮುಗಿದಿತ್ತು . ನಾವು  ಎಲ್ಲ  ಹೋದೆವು  ಊಟ  ಮಾಡಲು .


ಬಗೆ  ಬಗೆಯ  ಭಕ್ಷ್ಯಗಳು . ಊಟ  ಚೆನ್ನಾಗಿತ್ತು . ಪೇಣಿ , ಮೈಸೂರ್  ಪಾಕ್  ಸ್ವೀಟ್ಸ್ . Pineapple ಕೂಟು ಎಲ್ಲರಿಗೂ  ಇಷ್ಟವಾಗಿತ್ತು . ಊಟ  ಮುಗಿಸಿ  ತಾಂಬೂಲ  ತೆಗೆದುಕೊಂಡು  ಮಗುವನ್ನು  ನೋಡಲು  ಒಳಗೆ  ಬಂದ್ವಿಸುಹಾಸ್  ಆಗಲೇ  ಎದ್ದು  ತೊಟ್ಟಿಲಲ್ಲಿ  ಆಟ  ಆಡ್ತಿದ್ದ . ಮುದ್ದಾದ ಮಗು . ಸ್ವಲ್ಪ  ಹೊತ್ತು  ಅವನ  ಜೊತೆ  ಕಾಲ  ಕಳೆದು  ಹೊರಡಲು  ಅನುವಾದೆವು . ಎಲ್ಲರಿಗೂ  ಹೇಳಿ  ಹೊರಟಿದ್ವಿಸೋಹನ್ ಅಗರಬತ್ತಿ  purchase ಮಾಡ್ಬೇಕು  ಅಂದ್ರು . ಅವರು  ಅಗರಬತ್ತಿಯನ್ನು  ತೆಗೆದುಕೊಂಡು  ಹೋಗಲೇ  ಬೇಕೆಂಬ  ತೀರ್ಮಾನ  ಮಾಡಿದ್ದರು . ಆದರೆ  temple ಮತ್ತೆ  ಸಂಜೆಗೇ open ಆಗುವುದು ಅಂದರು . Mobile ಗಾಡಿಯೂ  ಕೈಕೊಟ್ಟಿತ್ತು . ಆದರೆ  ಅವರು  ಪಟ್ಟು  ಬಿಡಲಿಲ್ಲ . ಅವರ  ಹಠ  ನೋಡಿ ಕೊನೆಗೆ  ಆನಂದ್  ತಾವು  purchase ಮಾಡಿದ  packet  ಅವರಿಗೇ ಕೊಟ್ಬಿಟ್ರು. Wow...ಸೋಹನ್  ಮುಖದಲ್ಲಿ  ವಿಜಯದ  ನಗೆ. ಅವರ  ಒಂದು  objective successful ಆಗಿ  complete ಆಗಿತ್ತು . Orion ಮಾಲ್  shopping ಒಂದು  ಉಳಿದಿತ್ತು . ನಾನು  ಮತ್ತೆ  ಸಿಬಿಯನ್ನು  ಬಿಟ್ಟು , ಎಲ್ಲರೂ  ವಾಪಸ್ ಮನೆಗೆ  ಹೋಗುವ  ತೀರ್ಮಾನ  ಮಾಡಿದ್ದರು . ನಾನು  ಆಫೀಸ್ಗೆ  ಹೋಗಿ  ಮೀಟಿಂಗ್  attend ಮಾಡಬೇಕಿತ್ತು.  Shopping ಮಾಡೋಷ್ಟು  ಟೈಮ್  ಇರ್ಲಿಲ್ಲಸೋಹನ್  ಏನಾದರು  shopping ಮಾಡ್ಬೇಕು  ಅಂದ್ರೆ, ಅವರನ್ನು ಇಲ್ಲಿಯೇಬಿಟ್ಟು  ನಾನು  ಮತ್ತೆ  ಸಿಬಿ  ಆಟೋದಲ್ಲಿ  ಆಫೀಸ್ ಗೆ   ಹೋಗಿ  ಬಿಡುವ  ಅಂತ  decide ಮಾಡಿದ್ವಿ . ಸಧ್ಯಕ್ಕೆ  ಸೋಹನ್  ಹಠ  ಹಿಡಿಯಲ್ಲಿಲ್ಲ . ಆಫೀಸ್ ಗೆ  ಹೊರಡಲು  ಒಪ್ಪಿದರು . ಎಲ್ಲರಿಗೂ  ವಿಧಾಯ  ಹೇಳಿ  ನಾವು ಕಾರ್  ಹತ್ತಿದ್ದೆವು .

ಈ ಎಲ್ಲದರ ಮಧ್ಯೆ ನನಗೆ  Temple ದರ್ಶನ ಮಾಡೊಕ್ಕಾಗಲೇ ಇಲ್ಲ. “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು,,,” ಅನ್ನುವ ಗೋಪಾಲಕೃಷ್ಣ ಅಡಿಗರ ಹಾಡು ಮನದಲ್ಲಿ ತೇಲಿಹೋಯಿತು ...... !!!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.

Wednesday, 16 October 2013

ನಳಪಾಕ

ಅವತ್ತು  ಆಫೀಸ್ನಿಂದ  ಬೇಗನೆ ಮನೆಗೆ  ಬಂದಿದ್ದೆ . Usually ಆಫೀಸ್  ಕ್ಯಾಬ್ ನಲ್ಲಿ  ಬಂದ್ರೆ  ಮನೆ  ತಲುಪೋಷ್ಟುತ್ತಿಗೆ  ಆಗಲೇ ಕತ್ತಲಾಗಿರುತ್ತೆ . ಇವತ್ತು  ಇನ್ನೂ  ಸಂಜೆಯ  ಬೆಳಕಿತ್ತು . ಸರಿ , ಸ್ವಲ್ಪ  ಆಫೀಸ್  ಕೆಲಸ  ಮುಗಿಸಿ , walk ಗೆ  ಹೊರಟಿದ್ದೆ . walk ಮುಗಿಸಿ  ಬಂದ ಮೇಲೂ , ಸಾಕಷ್ಟು  ಸಮಯ ಇತ್ತು  ನನ್ನ  serial start  ಆಗಲು .  ಏನಾದರು  ಮಾಡುವ  ಅನ್ನಿಸ್ತು . ಅಷ್ಟರಲ್ಲಿ  Dining table ಮೇಲೆ  ಮೊನ್ನೆ  ತಂದ  sweet corn ಕಾಣಿಸ್ತು . ಅಮ್ಮ  ಯಾವಾಗಲು ಹೇಳುವ ಮಾತು ನೆನಪಾಯಿತು, ಸುಮ್ನೆ  ತಂದು  use ಮಾಡೋದೇ  ಇಲ್ಲ ಹಳೆದು ಮಾಡ್ಕೊಂಡು ತಿನ್ತೀರಾ ಅಂತ . ಸರಿ , sweet corn ನಲ್ಲಿ  ಏನಾದ್ರು  ಮಾಡೋಣ  ಅನ್ನಿಸ್ತು . ತಕ್ಷಣ  ಮನಸ್ಸಿಗೆ  ಹೊಳೆದದ್ದು  Sweet corn soup.

ನೆಟ್  ನಲ್ಲಿ  check ಮಾಡ್ದೆ  soup ನ  receipe ಬಗ್ಗೆ . ತುಂಬಾ  simple ಅನ್ನಿಸ್ತು . ಅದಕ್ಕೆ  ಬೇಕಾಗಿರುವ  basic ingredients ಎಲ್ಲ  ಇತ್ತು . ಅಮ್ಮನಿಗೆ  corn flour ಇದೆಯಾ  ಅಂತ  ಕೇಳಿದೆ. ಸ್ವಲ್ಪ ಮಾತ್ರ ಇದೆ  ಅಂದ್ರು . ಸರಿ  ಹೋಗಿ  ಅಂಗಡಿ  ಇಂದ  ತಂದು  ಬಿಡೋಣ  ಅನ್ಕೊಂಡು , sweet corn ನ  cooker ನಲ್ಲಿ  ಬೇಯಿಸಕ್ಕೆ  ಇಟ್ಟೆ. corn flour ತರುವಷ್ಟರಲ್ಲಿ  corn ಬೆಂದ್ದಿತ್ತು. Vegetables ಏನಿದೆ  ಅಂತ  fridge ನಲ್ಲಿ  check ಮಾಡ್ದೆ . ಕ್ಯಾರಟ್  ಮತ್ತೆ  ಬೀನ್ಸ್  ಇಟ್ಟು . ಸಾಕು  ಇಷ್ಟು  ಅಂತ  preparations ಗೆ  ಸಿದ್ದವಾದೆ . Lalbagh ನಿಂದ  ತಂದ  vegetable chopper ಅನ್ನು ಹೆಚ್ಚು  use ಮಾಡಿರಲಿಲ್ಲ . ಈಗ  ಅದು  ಉಪಯೋಗಕ್ಕೆ  ಬಂತು. ಕ್ಯಾರಟ್  ಮತ್ತೆ  ಬೀನ್ಸ್  ನ  ಅದರಲ್ಲಿ  chop ಮಾಡಿಕೊಂಡು  soup ಪ್ರಿಪೇರ್  ಮಾಡಲು  ಹೊರಟೆ. ಜಾಸ್ತಿ  ಟೈಮ್  ಹಿಡಿಯಲಿಲ್ಲ . 15 ನಿಮಿಷದಲ್ಲಿ soup ರೆಡಿಯಾಗಿತ್ತು . ಒಂದು ಮಟ್ಟಿಗೆ ಚೆನ್ನಾಗಿ  ಬಂದ್ದಿತ್ತು . ಆದರೆ  quantity ಜಾಸ್ತಿ  ಆಗ್ಬಿಟ್ಟಿತ್ತು. ಇಷ್ಟೊಂದು  ಹೇಗಪ್ಪ  ಖಾಲಿ  ಮಾಡೋದು  ಅನ್ಕೊಂಡು ಸ್ವಲ್ಪ  nephew ಗೆ  ಕೊಟ್ಟು  ಬಂದೆ . ಅವರಾಗಲೇ  ಊಟ  ಮುಗಿಸಿದ್ದರು ...ಆದರೂ ತುಂಬಾ  ಚೆನ್ನಾಗಿದೆ  ಅಂತ  ಮಾರ್ಕೆಟ್  ಮಾಡಿ  ಒಂದಷ್ಟನ್ನು  ಕೊಟ್ಟಿದ್ದೆ . ಅಮ್ಮ  ಟೇಸ್ಟ್  ಮಾಡಿ  not bad ಅಂದ್ರು . ನನಗೆ  good ಅನ್ನಿಸ್ತು . ಸ್ವಲ್ಪ  pepper ಮತ್ತೆ  corn flour mix ಜಾಸ್ತಿ  ಆಗಿತ್ತು . ಇವೆರಡನ್ನೂ  ಸ್ವಲ್ಪ  ಕಮ್ಮಿ  ಮಾಡಿದರೆ  ಇನ್ನೂ  ಚೆನ್ನಾಗಿರುತ್ತೆ  ಅನ್ನಿಸ್ತು . vegetables ನ ನೀರಿನಲ್ಲಿ ಬೇಯಿಸೋ ಬದಲು vegetable stock ನಲ್ಲಿ ಬೇಯಿಸಿದರೆ ಇನ್ನೂ tasty ಆಗಿರುತ್ತೆ  ಅಂತ  ಹೇಳಿದ್ದರು. Next time ಮಾಡುವಾಗ ಇದನ್ನು  ಗಮನದಲ್ಲಿ ಇಟ್ಕೋಬೇಕು  ಅನ್ಕೊಂಡು  ನನ್ನ  ಬೌಲ್ ನಲ್ಲಿಯ  soup ನ  ಖಾಲಿ  ಮಾಡಿದ್ದೆ serial ನೋಡುತ್ತಾ. ಇಲ್ಲಿಗೆ  ನನ್ನ  soupನ  ನಳಪಾಕ  ಮುಗಿದಿತ್ತು.

ಹಾಗೆ  ನನ್ನ  cooking list ಗೆ  Sweet corn vegetable soup add ಆಗಿತ್ತು !!!

Sweet Corn Vegetable Soup

Sunday, 6 October 2013

ಫೋಟೋgraphy

ಫೋಟೋಗ್ರಫಿ ಅಂದಾಕ್ಷಣ ಮನಸ್ಸಿಗೆ ಬರೋದು camera. ಒಂದು  ಸಣ್ಣ  ವಸ್ತುವಿನಲ್ಲಿ   ಪ್ರಪಂಚದ ಸೌಂದರ್ಯವನ್ನೇ  ಹಿಡಿದಿಡುವ  ಶಕ್ತಿ  ಇದೆ. ಸಂತೋಷದುಃಖ, ಅಳುನಗು  ಎಲ್ಲವನ್ನು  ಸೆರೆಹಿಡಿಯುವ  ಸಾಮರ್ಥ್ಯ ಇದಕ್ಕೆ. ಗತಕಾಲದ  ನೆನಪುಗಳನ್ನು  ಮರುಕಳಿಸುವ  ಶಕ್ತಿ  ಇದಕ್ಕಿದೆ.

ನನ್ನ  ಹಾಗು  ಕ್ಯಾಮೆರಾದ  ವಡನಾಟ ಕೆಲವು ವರ್ಷಗಳ  ಹಿಂದೆ  ಶುರುವಾಯಿತು. ನನ್ನ  ಮೊದಲ  ಕ್ಯಾಮೆರಾ  Role ಕ್ಯಾಮೆರಾ. ಆಗಿನ್ನೂ  Digital ಕ್ಯಾಮೆರಾಗಳು  ಅಷ್ಟು  ಬಳಕೆಯಲ್ಲಿರಲಿಲ್ಲ. ನಾನು  professional career ಶುರು ಮಾಡಿದ್ಮೇಲೆ ಮೊದಲ ಸಲ USಗೆ  ಹೋದಾಗ  purchase ಮಾಡಿದ್ದು. ಆಗೆಲ್ಲ ಹೊರದೇಶದ  pictures  capture ಮಾಡಿ  ಮನೆಯಲ್ಲಿ  ತೋರಿಸುವ  ಒಂದು  craze.

Digital ಪ್ರಪಂಚ  ನನ್ನನು ಡಿಜಿಟಲ್ ಕ್ಯಾಮೆರಾದ  ಮೋಡಿಗೆ  ಬೀಳಿಸಿತು. ಸರಿ, Role ಕ್ಯಾಮೆರಾ  ಹೋಗಿ  ಹೆಗಲಿಗೆ  ಡಿಜಿಟಲ್ ಕ್ಯಾಮೆರಾ  ನೇತಾಡಲು  ಶುರುವಾಯಿತು. ಪ್ರಪಂಚವನ್ನೆಲ್ಲಾ ಸುತ್ತಾಡಿ  ಬರುವ  ಆಸೆ  ನನಗೆ. ಫೋಟೋಗ್ರಫಿ ಹುಚ್ಚು  ನನ್ನ  Travelಗೆ  ಅನುಕೂಲವಾಯಿತು. ಹೋದ  ಕಡೆಯಲ್ಲೆಲ್ಲಾ ಕ್ಯಾಮೆರಾ  ನನ್ನ  ಜೊತೆಗಿರುತ್ತಿತ್ತುನನ್ನ  ಪಯಣ  ಶುರುವಾಯಿತು. ಗೋವಾ , ಮೈಸೂರ್ , ರಾಜಸ್ಥಾನ್ , ಉತ್ತರಖಂಡ್ , ಲಡಾಖ್, ಅಮ್ರಿತಸರ್, ಆಗ್ರಾ , ಹಳೆಯ  ಶತಮಾನಗಳ  ದೇವಸ್ಥಾನಗಳು ಹೀಗೆ  ಎಲ್ಲ  ಕಡೆ  ಸುತ್ತಾಡಿ  ಬಂದೆ. ಸಾವಿರಾರು ಫೋಟೋಸ್ capture ಮಾಡಿದ್ದೆ  ಹಾಗು  ಸ್ನೇಹಿತರ ಜೊತೆ  share ಮಾಡಿದ್ದೆ.

ಹೀಗಿರುವಾಗ, ಆಫೀಸಿನಲ್ಲಿ  ಒಂದು  ಫೋಟೋಗ್ರಫಿ  contest ಇಟ್ಟಿದ್ರು. ಸಾಮಾನ್ಯವಾಗಿ  ಡಿಸೆಂಬರ್ ತಿಂಗಳನ್ನು vacation month ಅಂತ  ಹೇಳಬಹುದು. Vacation pictures ಫೋಟೋಗ್ರಫಿ ಕಾಂಟೆಸ್ಟ್ನ theme ಆಗಿತ್ತು. ಆಗ ತಾನೇ ಅಮ್ರಿತಸರ್ ಹಾಗೂ ಉತ್ತರಖಂಡ್ ಗೆ ಹೋಗಿ ಬಂದಿದ್ದೆ. ಸರಿ, ನನಗೂ    contest ನಲ್ಲಿ  ಭಾಗವಹಿಸುವ ಬಯಕೆಯಾಯಿತು. ನಾನು ತೆಗೆದ ಫೋಟೋಸ್ನೆಲ್ಲ ಒಂದು  ಸಾರಿ  glance ಮಾಡಿದೆ. ಅಮ್ರಿತಸರ್ Golden temple ಮತ್ತೆ  ಸರಯು ನದಿಯ sunset picture ನನ್ನನ್ನ ಸೆಳೆಯಿತುಇವೆರಡನ್ನೆ contestಗೆ  ಕಳಿಸಿದ್ದೆ. wow!!! ನನ್ನ  ಆಶ್ಚರ್ಯಕ್ಕೆ  ನನ್ನ  Golden temple ಫೋಟೋಗೆ 2ನೇ ಬಹುಮಾನ ಬಂದಿತ್ತು. ಏನೋ  ಸಾಧಿಸಿದಷ್ಟು ಸಂತೋಷ.

Golden Tample - Amritsar

ಫೋಟೋಗ್ರಫಿ ಒಂದು ಕಲೆ. ಆದರೆ ನಾನು ಇದರ rules ಅಥವಾ conventions ಅನ್ನು ಅಷ್ಟು follow ಮಾಡೋಲ್ಲ. ಯಾವುದು ಕಣ್ಮನ ಸೆಳೆಯುತ್ತದೋ ಅದನ್ನು ಸರೆಹಿಡಿಯುವ ಆಸೆ ಅಷ್ಟೆ. ಎಲ್ಲೋ ಓದಿದ ನೆನಪು   "The best images are the ones that retain their strength and impact over the years, regardless of the number of times they are viewed". ಎಷ್ಟು ಸತ್ಯ ಮಾತು.

ನನ್ನ ಬಗ್ಗೆ ಸಾಕು, ಇನ್ನು ಜನರ ಮನೋವಿಚಾರಕ್ಕೆ ಬರೋಣ. ಕೆಲವರಿಗೆ ಕ್ಯಾಮರಾಕ್ಕೆ pose ಕೊಡೋದಂದ್ರೆ ಎಲ್ಲಿಲ್ಲದ ಇಷ್ಟ, camera ಮುಂದೆ ನಿಂತುಕೊಳ್ಳುವ chance miss ಮಾಡ್ಕೊಳಲ್ಲ. ಅದೇ ಕೆಲವರಿಗೆ photo ಅಂದ್ರೆ ಅಷ್ಟಕಷ್ಟೆ. ತಮ್ಮ ಭಾವಚಿತ್ರವನ್ನು ಯಾರ ಬಳಿ share ಮಾಡಲು ಇಷ್ಟಪಡುವುದಿಲ್ಲ. ಬೇರೆಯವರ ಕ್ಯಾಮೆರಾದಲ್ಲಿ ಬಿಡಿ ತಮ್ಮ ಸ್ವಂತ ಕ್ಯಾಮೆರದಲ್ಲೂ ಸೆರೆಸಿಕ್ಕಲು ಇಷ್ಟಪಡುವುದಿಲ್ಲ. ಒಬ್ಬೊಬ್ಬರದು ಒಂದೊಂದು ಮನೋಭಾವ. ನಾನು ಮೊದಲ ಗುಂಪಿಗೆ ಸೇರಿದೋಳು.

Life is like photography. We develop from the negatives. Let's capture life !!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ