Sunday, 29 September 2013

ಫೇಸ್ Book

ಈಗಿನ social Networking ಸೈಟ್ಗಳಲ್ಲಿ ನಮ್ಮ FaceBook ತನ್ನ  ಸಾಮ್ರಾಜ್ಯವನ್ನು ಸ್ಥಾಪಿಸಿದೆ . ಇದಕ್ಕೆ ಸಿಕ್ಕಿರುವ  ಖ್ಯಾತಿ  ಯಾವ  Hollywood ಅಥವಾ  Bollywood ನಟರಿಗೂ  ಸಿಕ್ಕಿಲ್ಲ . ಇದರ ಮೋಹ  ಎಲ್ಲ  ಪೀಳಿಗೆಯ   ಜನರನ್ನು  ಆಕರ್ಷಿಸಿದೆ. ಎಲ್ಲರಿಗೂ  ತಮ್ಮದೂ ಒಂದು facebook account ಇದೆ  ಎಂದು  ಹೇಳಿಕೊಳ್ಳಲು  ಏನೋ  ಹೆಮ್ಮೆ , ದೊಡ್ಡ ಪದಕ  ಸಿಕ್ಕಷ್ಟು  ಸಂತೋಷ. ಯುವಪೀಳಿಗೆಯ  ಜನರ  ಬದುಕು ಬೆಳಗಿನಿಂದ ರಾತ್ರಿಯವರೆಗೂ  facebook ಗೆ ಬೆಸೆದುಕೊಂಡಿರುತ್ತದೆ . ಪ್ರತಿ  ನಿಮಿಷ  ಗಂಟೆಗೆ   ಒಂದು  ಸಾರಿಯಾದರೂ ತಮ್ಮ status update ಮಾಡದೆ  ಹೋದರೆ  ಅವರಿಗೆ  ಏನೋ  ಕಳೆದುಕೊಂಡಷ್ಟು ಬೇಸರ . ಅವರ  updates ಗೆ Likes ಗಳ ಸುರಿಮಳೆ  ಬಂದರೆ  ಅದೇನೋ  ಸಾಧಿಸಿದಷ್ಟು ಸಂತೋಷ, ಪ್ರಸನ್ನಭಾವ. updates ಗಳನ್ನು ನೋಡಿದರೆ  ನಗು  ಬರುವಂತೆ  ಇರುತ್ತೆ ..ನಾನು  ತಿಂಡಿ  ತಿಂದೆ , ಊಟ  ಮಾಡಿದೆ , ಕಾಫಿ  ಕುಡಿದೆ ..ಹೀಗೆ ದಿನಚರಿಯ ಬಗ್ಗೆ. ಇದನ್ನು  ಓದಿದವರು  Like ಅಂತ press ಮಾಡಿರುತ್ತಾರೆ.  ಹೀಗೊಂದು update ಇರುತ್ತೆ ..."My wife is not keeping well today".ಇದಕ್ಕೆ  ನೂರು  Likes. ಜನರು ಯಾವುದನ್ನು  Like ಅಂತ  ಹೇಳಬೇಕು  ಅನ್ನುವ ಪ್ರಜ್ಞಾಭಾವವನ್ನೇ ಕಳೆದುಕೊಂಡಿರುತ್ತಾರೆ.

ಕೆಲವೊಂದು  ಸಲ  ಇಂತಹ Likes ಇಕ್ಕಟ್ಟಿನ  ಪರಿಸ್ಥಿಯನ್ನು  ತರುತ್ತೆ . ಯಾರೋ  ಏನೋ communal ಕಲಹದ  ಬಗ್ಗೆಯೋ  ಅಥವಾ  terrorism ಬಗ್ಗೆ updates ಹಾಕಿದ್ರೆ , ಅಪ್ಪಿ  ತಪ್ಪಿ Like ಅಂತ  press ಮಾಡಿದರೆ  Jail ಗ್ಯಾರಂಟಿ. ಇನ್ನು ಕೆಲವು  ಸಲ ಬೇಡವಾದ  photos ಬೇರೆಯವರ account ಗೆ  Tag ಮಾಡಿ  ಅವರನ್ನು  ಸಂಕಷ್ಟಕ್ಕೆ  ಈಡುಮಾಡಿದ ಪ್ರಸಂಗಗಳು ಹಲವು.

ನನ್ನ  ಹಾಗು  facebook   ಬಾಂಧವ್ಯ ಅಷ್ಟಕ್ಕಷ್ಟೆ. ನಾನು  ಎಲ್ಲರಿಗಿಂತ ಸ್ವಲ್ಪ  ತದ್ವಿರುದ್ದ  ವಿಷಯದಲ್ಲಿ . ತಿಂಗಳಿಗೋ  ಅಥವಾ  ಎರಡು  ತಿಂಗಳಿಗೋ  ಒಂದು  ಸಲ ಇದರ  ಒಳಗೆ ಇಣುಕಿ  ನೋಡುತ್ತೇನೆ . Friends request accept ಮಾಡೋದಕ್ಕೆ  ಅಥವಾ  B'day ಗಳ  wishes ಕಳಿಸೋದಕ್ಕೆ ಮತ್ತೆ  wishes ಸ್ವೀಕರಿಸಿ  reply ಮಾಡೋದಕ್ಕೆ. ಇಲ್ಲಿಗೆ ನನ್ನ ಹಾಗು ಫೇಸ್ ಬುಕ್ ನ connect ಮುಗಿಯುತ್ತೆ.

ಇದರಲ್ಲಿನ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಅಂತ ಹೇಳಬಹುದು. This is more prone to security breach. Hackers ಸುಲಭವಾಗಿ accounts hack ಮಾಡಿ ಅದರಲ್ಲಿಯ personal details ನ ದುರುಪಯೋಗ ಪಡಿಸಿಕೊಳ್ಳಬಹುದು.
ಇಷ್ಟಾದರೂ Facebook ತನ್ನ ವರ್ಚಸ್ಸನ್ನು ಕಳೆದು ಕೊಂಡಿಲ್ಲ. ದಿನದಿಂದ  ದಿನಕ್ಕೆ  ಇದರ  Face ವ್ಯಾಲ್ಯೂ ಮೇಲಕ್ಕೇರುತ್ತಲೇ ಇದೆ !!!
*spelling mistakes ಗಳ ಬಗ್ಗೆ ಕ್ಷಮೆ ಇರಲಿ

Saturday, 21 September 2013

ಹೀಗೊಂದು ಸಮಾಚಾರ ಟಾರ್ಗೆಟ್ ನಲ್ಲಿ .....

ಎಲ್ಲ ಕಂಪನಿಯಲ್ಲಿ ಆಗೋದೇ ಇಲ್ಲೂ ಆಗಿರೋದು .Economic Slowdown ಭೀತಿಯ , Inflation ಭಯ ಜನಸಾಮಾನ್ಯರ ಬದ್ಹುಕನಷ್ಟೇ ಅಲ್ಲದೆ Software ಪ್ರಪಂಚದ ಮೇಲೂ impact ಬೀರಿವೆ .ಕಂಪನಿಗಳ financial results ಗಳು set ಮಾಡಿದ goal ಅನ್ನು  reach ಆಗದೆ  ಮಕಾಡೆ ಮಲಗಿವೆ.   ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ತಮ್ಮದೇ ಆದ approch follow ಮಾಡ್ತಿದಾರೆ . ನಮ್ಮ company ಯಲ್ಲಿ ಆದದ್ದು  ಇದೆ …..

Budget ನಲ್ಲಿ  ಕಡಿತ start ಆಗಿವೆ , Rock the expense ತಂಡಗಳು form ಆಗಿವೆ . ಇವರ main goal ಇರೋದು ,  ಹೇಗೆ expense cutdown ಮಾಡೋದು  ಅಂತ ....power saving, paper printing ಇಂದ  ಹಿಡಿದು  travel ಮೇಲಿನ  ಕಡಿತ , resource cutdown ಸಹ ಬರದಿಂದ ಸಾಗಿವೆ. ಎಲ್ಲದರ  ನಡುವೆ , viral ನಮ್ಮ  daily transport ಮೇಲೂ  ತನ್ನ  ಕರಾಳ  ಹಸ್ತವನ್ನು  ಚಾಚಿದೆ .

ಪ್ರತಿದಿನ ಒಂದು SMS ನಮ್ಮ mobile ನಲ್ಲಿ transport ಡೆಸ್ಕ್ ನಿಂದ  route number, driver number details   ಜೊತೆ  ಕೂತಿರುತ್ತೆ .ನಮ್ಮ  ಜಂಜಾಟ  ಇಲ್ಲಿಂದ  ಶುರುವಾಗುತ್ತೆ . Driver ಗೆ route ಪರಿಚಯ  ಮಾಡಿಸಿ  ಎಲ್ಲರನ್ನು  company ಗೆ  ತಲುಪಿಸುವ  ಹೊತ್ತಿಗೆ  ಬೆಂಗಳೂರಿನ ಒಂದು  ಸ್ಥೂಲ  ಪರಿಚಯ  ನಮಗೂ  ಸಿಗುತ್ತೆ . ಸದ್ಯ ನಾಳೆ  ಇಂದ  ಇದರ  ಗೊಡವೆ  ಇರೋಲ್ಲ  driver ಗೆ  route ಗೊತ್ತಾಗಿದೆ  ಅನ್ಕೊಂಡು  ಸಮಾಧಾನದ  ನಿಟ್ಟಿಸುರು  ಬಿಡುವಷ್ಟರಲ್ಲಿ,  ಮತ್ತೆ  ಒಂದು SMS ಇಣುಕುತ್ತೆ transport ನಿಂದ ...ಮತ್ತೆ  ಹೊಸ driver   ಪರಿಚಯ , route change etc etc

ಸಿಟ್ಟಿನ  ಬರದಲ್ಲಿ  ಯಾಕಪ್ಪ  ಪದೇ ಪದೇ  ಹೀಗೆ  route change ಮಾಡ್ತಿದೀರ  ಅಂತ  driver   ಕೇಳಿದ್ರೆ , ಅಲ್ಲಿಂದ  ಬಂದ  ಉತ್ತರ  ಬೆಚ್ಚಿಬೀಳಿಸಿತ್ತು. Madam ಏನೋ  "Expense Optimization" ಅಂತೆ ...ಹಾಗಾಗಿ route optimize ಮಾಡ್ತಿದಾರೆ  ಅಂತ.

ಈಗ  ತಿಳೀತು  ಸಮಸ್ಯೆಯ gravity ಎಷ್ಟು  ಅಂತ ....!!!

* Spelling mistakes ಗಳ ಬಗ್ಗೆ ಕ್ಷಮೆ ಇರಲಿ. 

Friday, 20 September 2013

Fashion ಲೋಕ

Fashion ಅನ್ನೋದು  ಮಾಯನಗರಿಯ  ಒಂದು  ಭಾಗವಾಗಿ  ಹೋಗಿದೆ. ಮೊದಲು  ಹೆಣ್ಣು ಮಕ್ಕಳು  ಉಡುಗೆ  ತೊಡುಗೆ  ಯಲ್ಲಿ  ಮುಂದಿರ್ತಿದ್ದರು, ಆದರೆ  ಗಂಡು  ಹುಡುಗರು  ಹುಡುಗಿರಗಿಂತ ಒಂದು  ಕೈ  ಮೇಲು ...ನಾವೇನು  ಅವರಿಗಿಂತ  ಕಮ್ಮಿ  ಎನ್ನುವ  ಧಾಟಿಯಲ್ಲಿ  ಸಾಗಿದೆ  ಅವರ  fashion ಬದುಕು. ಮೊದಲೆಲ್ಲ  ಹುಡುಗರ  dressing sense ಅಷ್ಟೊಂದು  forward ಆಗಿರಲಿಲ್ಲ . ಆದರೆ ಈಗ ಹಾಗಲ್ಲ. ಹುಡುಗಿಯರ  ತರ ಇವರಿಗೂ  ಸಹ  ಕಿವಿಯಲ್ಲಿ  ಓಲೆ  ಬಂದಿದೆ , ಕೈನಲ್ಲಿ  ಕಡಗ , ವಿನೂತನ  hair styles, tattoos etc. Men's parlour ಗಳೂ  ಎಲ್ಲೆಂದರಲ್ಲಿ ಇಣುಕುತ್ತಿವೆ  ladies parlours   ಅಣಕಿಸುವಹಾಗೆ.

ಈ ಮಾಯೆ  ನನ್ನ  friend ನು  ಬಿಟ್ಟಿಲ್ಲಕೆಲಸದ  ಒತ್ತಡದಿಂದ  2 ತಿಂಗಳು  sabbatical ಮೇಲೆ ಹೋಗಿದ್ದ  ಇವ  ವಾಪಸ್  ಬರುವಷ್ಟರಲ್ಲಿ  complete ಆಗಿ transform ಆಗಿದ್ದ . ಮೊದಲಿನ  ಕ್ರಾಪ್  ಬಾಚಿದ  ತಲೆಗೂದಲು , formal look   ಪೂರ  ಬದಲಾಗಿದೆ . ಕಿವಿಯಲ್ಲಿ  ಓಲೆ , spiked hair style, ಕೈಗೆ  band, ಕತ್ತಿಗೆ ದೊಡ್ಡ  locket chain ಮತ್ತೆ dress ಸಹ color color trousers ಹಾಗು ಅದಕ್ಕೆ matching ಆಗಿರುವ shoes. Professional look ಹೋಗಿ    funky look ಬಂದಿದೆ. ಯಾಕೆ  change ಅಂತ  ಕಣ್ಣರಳಿಸಿ  ಕೇಳಿದರೆ  ಬಂದ  ಉತ್ತರ ಒಂದೇ …Just for a change!!!
* Spelling mistakes ಗಳ ಬಗ್ಗೆ ಕ್ಷಮೆ ಇರಲಿ.