Saturday, 8 August 2015

ನಾಯಿ-ನೆರಳು

ಪುನರ್ಜನ್ಮ, ಪೂರ್ವ ಕರ್ಮದ ಫಲಾಪಲದ ಸುತ್ತ ಹೆಣೆದುಕೊಂಡಿರುವ ಕಥಾವಸ್ತುವನ್ನೊಳಗೊಂಡ ಕಾದಂಬರಿ ನಾಯಿ-ನೆರಳು. ಭೈರಪ್ಪನವರು ಹೇಳಿರುವಂತೆ ಶೀರ್ಷಿಕೆಯಲ್ಲಿ ಬರುವ ನಾಯಿ ಪ್ರಾಚೀನ ಕರ್ಮದ ಸಂಕೇತ. ನಮ್ಮ ಪೂರ್ವ ಜನ್ಮದ ಕರ್ಮ ನಮ್ಮ ನೆರಳಾಗಿ ನಮ್ಮ ಜೊತೆಗಿರುತ್ತದೆ ಎನ್ನುವ ಭಾವ. ಇಂತಹ ಕಥಾವಸ್ತುವನ್ನು ಭೈರಪ್ಪನವರು ಹೇಗೆ ಚಿಂತಿಸಿ ತಮ್ಮ ಬರವಣಿಗೆಯಲ್ಲಿ ತಂದರು ಎಂದು ಆಶ್ಚರ್ಯವಾಗುತ್ತದೆ. ಇಲ್ಲಿ ಬರುವ ಕೆಲವು ಸನ್ನಿವೇಶಗಳು ನಮ್ಮನ್ನು ಚಿಂತನೆಗೆ ದೂಡುತ್ತವೆ. ಕಾದಂಬರಿಯನ್ನು ಓದುವಾಗ ನನಗೆಲ್ಲೂ ಇದೊಂದು ಕಥೆ ಎಂದೆಣಿಸಲಿಲ್ಲ. ಇದೊಂದು ನಿಜವಾದ ಚಿತ್ರಣ ಎಂದೆನಿಸುತಿತ್ತು.
ವಿಶ್ವೇಶ್ವರ ಮತ್ತೆ ಕ್ಷೇತ್ರಪಾಲನಾಗಿ ಹುಟ್ಟಿ ಬರುವ ಸನ್ನಿವೇಶದೊಂದಿಗೆ ಕಥಾ ಹಂದರ ತೆರೆದುಕೊಳ್ಳುತ್ತದೆ. ಎಂಟು ವರ್ಷದ ಹುಡುಗ ತನಗೆ ಮದುವೆಯಾಗಿದೆ, ಒಂದು ಮಗು ಇದೆ ಎಂದು ಹೇಳುತ್ತಾ ಎಲ್ಲರನ್ನೂ ಚಕಿತಗೊಳಿಸುತ್ತಾನೆ. ದೆವ್ವದ ಕಾಟ ಎಂದು ಮೊದಲು ಊರ ಜನ ಅಭಿಪ್ರಾಯಪಟ್ಟರೂ ಮುಂದೆ ಬರುವ ಸನ್ನಿವೇಶಗಳು ಪುನರ್ಜನ್ಮವನ್ನು ಎತ್ತಿ ಹಿಡಿಯುತ್ತದೆ. ಪ್ರಪಂಚ ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದ್ದಿದ್ದರೂ ಸಹ ಕೆಲವೊಂದು ವಿಷಯಗಳು, ಘಟನೆಗಳು ಮನುಷ್ಯನ ಯೋಚನಾ ಪರಿಧಿಗೆ ಸಿಲುಕುವುದಿಲ್ಲ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದಾಗ ಮನುಷ್ಯ ಮೂಕನಾಗುತಾನೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ಇಂತಹ ಘಟನೆಗಳು ನಡೆದ ಬಗ್ಗೆ ಎಷ್ಟೋ ಸಲ ನಾವು ದಿನಪತ್ರಿಕೆಯಲ್ಲಿ ಅಥವಾ ಟೀವೀಯಲ್ಲಿ ಬಿತ್ತರಿಸುವುದನ್ನು ನೋಡಿದ್ದೇವೆ. ಅಂತಹ ಸಮಯದಲ್ಲಿ ಪುನರ್ಜನ್ಮ ನಿಜವೇ ? ಎಂಬ ಪ್ರಶ್ನೆ ನಿಲ್ಲುತ್ತದೆ. ಆತ್ಮಕ್ಕೆ ಎಂತಹ ವಯಸ್ಸು ? ಶರೀರ ಹುಟ್ಟತ್ತೆ, ಬಿದ್ದೋಗತ್ತೆ ಎನ್ನುವ ಮಾತು ನಿಜವೇ ಎನಿಸುತ್ತದೆ. ಭೈರಪ್ಪನವರು ಇದನ್ನು ತುಂಬಾ ಸೊಗಸಾಗಿ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಕಾದಂಬರಿ ಓದಿ ಮುಗಿಸಿದ ನಂತರ ಸಾಕಷ್ಟು ಪ್ರಶ್ನೆಗಳು, ಗೊಂದಲ ಮನದಲ್ಲಿ ಉಳಿಯುತ್ತದೆ.
ಪೂಜಾರಿಯ ಮೈಮೇಲೆ ಬರುವ ಗ್ರಾಮದೇವತೆ, ಹರಕೆಯನ್ನು ತೀರಿಸಲು ಕೆಂಡದ ಮೇಲೆ ನಡೆಯುವ ಜನ, ಕೊಳ್ಳಿದೆವ್ವ, ಬೇವಿನ ಮರದಲ್ಲಿ ಕಾಣಬರುವ ಸಿಹಿಯಾದ ಬೇವಿನಹಾಲು, ಬೆಟ್ಟದ ಮೇಲಿನ ಜೋಗಯ್ಯ, ಸನ್ಯಾಸಿ ಎಲ್ಲವುದರ ಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಇದಕ್ಕೆಲ್ಲ ವೈಜ್ಞಾನಿಕ ಆಧಾರವುಂಟೆ ಅಥವಾ ಇವು ಅಂಧ ಧರ್ಮದ ನಂಬಿಕೆಗಳ? ಉತ್ತರ ಓದುಗರಿಗೆ ಬಿಟ್ಟಿದ್ದು!

Sunday, 26 July 2015

ವಂಶವೃಕ್ಷ!

S.L ಭೈರಪ್ಪನವರ ವಂಶವೃಕ್ಷ ಕಾದಂಬರಿಯ ಬಗ್ಗೆ ನನ್ನ ವಿಮರ್ಶೆ......


ಮಾನವ ಸಂಬಂಧಗಳ, ಮನಸ್ಸಿನ ಭಾವನೆಗಳ , ಸಮಾಜದ ಕಟ್ಟು ಪಾಡುಗಳ ಸುತ್ತ ಬೆಸೆದಿರುವ ಕಥಾವಸ್ತುವನ್ನೊಳಗೊಂಡ ಅಧ್ಬುತವಾದ ಕಾದಂಬರಿ ವಂಶವೃಕ್ಷ . ಮನುಷ್ಯನ ಆಂತರ್ಯದ ಅರಿವು , ಮನಸ್ಸಿನ ದ್ವಂದ್ವ , ಬೇಗುದಿ , ಜಿಗುಪ್ಸೆ, ತೊಳಲಾಟವನ್ನು ಅರ್ಥವತ್ತಾಗಿ ಬಿಂಬಿಸಿದ್ದಾರೆ ಭೈರಪ್ಪನವರು. ಇಲ್ಲಿ ಬರುವ ಕೆಲೆವೊಂದು ಪಾತ್ರಗಳು ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ಇಂತಹ ಕೆಲವೊಂದು ಪಾತ್ರಗಳ ಬಗ್ಗೆ ನನ್ನ ಅಭಿಪ್ರಾಯ.

ಮೊದಲನೆಯದಾಗಿ ಶ್ರೋತ್ರಿಗಳ ಪಾತ್ರ . ಇವರ ವ್ಯಕ್ತಿತ್ವ ಮನವನ್ನು ಮುಟ್ಟುತ್ತದೆ . ಅವರ ಉದಾತ್ತ ಮನೋಭಾವ , ಸಂಕಲ್ಪ ಶಕ್ತಿ , ಕರ್ತವ್ಯ ನಿಷ್ಟತೆ , ಧಾರ್ಮಿಕತೆ , ಆಧ್ಯಾತ್ಮದ ಬಗ್ಗೆ ಇರುವ ಆಳವಾದ ವಿಶ್ವಾಸ , ಇಂತಹ ಮತ್ತೊಬ್ಬ ವ್ಯಕ್ತಿಯನ್ನು ಈಗಿನ ಕಾಲದಲ್ಲಿ ಕಾಣುವುದು ಅಪರೂಪ . ಎಂತಹ ಪರಿಸ್ಥಿತಿಯಲ್ಲೂ ತಮ್ಮ ಮನಸ್ಸಿನ ಸ್ಥಿಮಥಿಯನ್ನು ಕಳೆದುಕೊಳ್ಳುವುದಿಲ್ಲ . ತಮ್ಮ ಮನೋಭಲದಿಂದ ಎಂತಹ ಕಠಿಣ ಪರಿಸ್ಥಿಯನ್ನೂ ನಿಗ್ರಹಿಸುತ್ತಿದ್ದರು. ಕಾತ್ಯಾಯಿನಿಯ ಬಗ್ಗೆ ತೋರಿದ ಅವರ ಪ್ರೀತಿ , ತಳೆದ ನಿರ್ಧಾರ , ರಾಯರ ಬಗ್ಗೆ ಇರುವ ವಿಶ್ವಾಸ , ಗೌರವ , ಮೊಮ್ಮಗನ ಬಗ್ಗೆ ಇರುವ ಪ್ರೀತಿ , ಲಕ್ಷ್ಮಿಯ ಬಗ್ಗೆ ಇರುವ ನಂಬಿಕೆ ಅಪಾರ . ತನ್ನ ಮಗನು ಸತ್ತ ಮೇಲೂ ಸೊಸೆಯನ್ನು ಮಗಳ ತರಹ ಪ್ರೀತಿಯಿಂದ ನಡೆಸಿಕೊಂಡರು . ಅವಳ ಮನಸ್ಸಿಗೆ ದುಃಖವಾಗುವ ಹಾಗೆ ಎಂದೂ ನಡೆದುಕೊಂಡವರಲ್ಲ. ಮನೆಯವರ ಇಷ್ಟಕ್ಕೆ ವಿರುದ್ದವಾಗಿ ಅವಳಿಗೆ ವಿಧವೆಯ ಪಟ್ಟ ಕಟ್ಟದೆ, ಕಾಲೇಜ್ ಓದಲು ಕಳುಹಿಸಿದರು . ನಂತರ ಸೊಸೆ ಇನ್ನೊಂದು ಮದುವೆಯಾಗುವ ಬಯಕೆಯನ್ನು ತಿಳಿಸಿದಾಗಲು ಅವಳ ಮೇಲೆ ಅವರಿಗೆ ಕೋಪ ಬರಲಿಲ್ಲ . ತನ್ನ ಮೊಮ್ಮಗನನ್ನು ಕರೆದು ಕೊಂಡು ಹೋಗಲೂ ಅವಳನ್ನು ತಡೆಯಲಿಲ್ಲ. ಅವಳು ಮಗುವನ್ನು ಬಿಟ್ಟು ಹೊರಟು ಹೋದಾಗಲೂ, ತಾಯಿ ಪ್ರೀತಿಯ ಕೊರತೆ ಇಲ್ಲದೆ ಅವನನ್ನು ಬೆಳೆಸಿದ್ದರು . ಮೊಮ್ಮಗನ ಮನಸ್ಸಿನಲ್ಲಿ ಎಂದೂ ತಾಯಿಯ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಭಿತ್ತಲಿಲ್ಲ . ಆದರೆ ಕೊನೆಯಲ್ಲಿ ತಳೆದ ನಿರ್ಧಾರ ಯಾಕೋ ನನಗೆ ಸರಿಕಾಣಲಿಲ್ಲ . ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವವನ್ನು ಪಡೆಯಲು ಹೊರಡಬೇಕಿತ್ತೆ ಎನ್ನುವ ಪ್ರಶ್ನೆ ನಿಲ್ಲುತ್ತದೆ . ಅವರು ಮನಸ್ಸು ಮಾಡಿದಿದ್ದರೆ ಕಾತ್ಯಾಯಿನಿ ಹಾಗು ಚೀನಿಯನ್ನು ಮತ್ತೆ ಒಂದು ಗೂಡಿಸಬಹುದಿತ್ತು. ಅವಳ ಬರಡು ಬದುಕಿನಲ್ಲಿ ಒಂದು ಬೆಳಕು ಮೂಡಿಸಬಹುದಿತ್ತು.

ಕಾತ್ಯಾಯಿನಿ, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಪುಟ್ಟ ಮಗುವಿನ ಜೊತೆ ಪಡುವ ಅವಳ ಮನಸ್ಸಿನ ತೊಳಲಾಟವನ್ನು ಕಾಣಬಹುದು . ಮನೆಗೆ ಮಗಳಾಗಿ , ಸೊಸೆಯಾಗಿ , ಚೀನಿಗೆ ಪ್ರೀತಿಯ ತಾಯಿಯಾಗಿ ಕಾಣುವ ಅವಳ ಪಾತ್ರ ಮುಂದೆ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳಲು ಹೊರಟಾಗ ಅವಳು ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ. ಸ್ತ್ರೋತ್ರಿಗಳ ಮುಂದೆ ತನ್ನ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಅಸಮರ್ಥಳಾದಾಗ ಪತ್ರದ ಮುಖಾಂತರ ತನ್ನ ಮನಸ್ಸಿನ ತೊಳಲಾಟವನ್ನು ತೋಡಿಕೊಳ್ಳುವಾಗ ಅವಳ ಮನಸ್ಸಿನಲ್ಲಿ ನಡೆಯುವ ದ್ವಂದ್ವವನ್ನು ಗುರುತಿಸಬಹುದು . ಕೊನೆಗೆ ಮಗನನ್ನು ಬಿಡಲಾರದೆ ಬಿಟ್ಟು ತನ್ನದೇ ಆದ ಪ್ರಪಂಚಕ್ಕೆ ಕಾಲಿಡಲು ಹೊರಟಾಗ ಅವಳ ಮಾತೃತ್ವ ತೊಡೆದು ಹೋಗುತ್ತದೆ . ತನ್ನ ಹೊಸ ಬದುಕಿನಲ್ಲಿ ಕಾಲಿಟ್ಟ ಮೇಲೂ ಅವಳ ಯಾವುದೋ ಒಂದು ಮನಸ್ಸಿನ ಸುಪ್ತ ಮೂಲೆಯಲ್ಲಿ ದುಃಖ ಮಡುವಾಗಿರುತ್ತದೆ. ತನ್ನ ಎಲ್ಲ ಬಸಿರೂ ನಾಶವಾದಾಗ , ಅವಳ ಆ ದುಃಖ ಒಡೆದು ಬರುತ್ತದೆ . ಕೊನೆಗೆ ಚೀನಿಯೂ ಅವಳನ್ನು ಧಿಕ್ಕರಿಸಿದಾಗ , ಅವಳ ಮನಸ್ಸು ಹೃದಯ ಒಡೆದು ಹೋಗುತ್ತದೆ . ಅದರ ನೆನಪಿನಲ್ಲಿಯೇ ಕೃಶವಾಗಿ ಕೊನೆಯುಸಿರುಯುತ್ತಾಳೆ . ತುಂಬಾ ಬಲಹೀನ ಹೃದಯಿಯಾಗುತ್ತಾಳೆ. ರಾಜನನ್ನು ಮಾದುವೆಯಾಗುವಾಗ ಇದ್ದ ಮನಸ್ಸಿನ ದೃಢತೆ , ತನ್ನ ಮಗನನ್ನು ಪಡೆಯಲು ಪಟ್ಟ ಪ್ರಯತ್ನದಲ್ಲಿ ಕಾಣಸಿಗುವುದಿಲ್ಲ . ಮನಸ್ಸು ಮಾಡಿದಿದ್ದರೆ ಸ್ರೋತ್ರಿಗಳನ್ನು ಕಂಡು ಮಗನ ಪ್ರೀತಿಯನ್ನು ಮತ್ತೆ ಗಳಿಸಬಹುದಿತ್ತು .

ಸದಾಶಿವರಾಯರು ತಮ್ಮ ಜ್ಞಾನಸಾಧನೆಗಾಗಿ ಹೆಂಡತಿ ನಾಗಲಕ್ಷ್ಮಿಯನ್ನು ನಿರ್ಲಕ್ಷಿಸಿ ಕರುಣಾಳ ಹಿಂದೆ ಹೋದದ್ದು ಯಾಕೋ ಸರಿಕಾಣಲಿಲ್ಲ . ತಮ್ಮ ಸಾಧನೆಯ ಗುರಿಮುಟ್ಟಲು ಅವರಿಗೆ ಹಲವಾರು ಮಾರ್ಗಗಳಿದ್ದವು. ಆದರೆ ತಮ್ಮ ತಪ್ಪಿನರಿವಾಗಿ ಕೊನೆಗೆ ಹೆಂಡತಿಯ ಜೊತೆ ಒಂದಾದದ್ದು ಸಮಾಧಾನದ ವಿಷಯ . ಆದರೆ ಆ ಸಮಾಧಾನ ಹೆಚ್ಚು ಕಾಲ ಉಳಿಯುವುದಿಲ್ಲ.

ಇನ್ನು ರಾಜನ ಬಗ್ಗೆ ಹೇಳುವುದಾದರೆ , ಈತನದು ಆದರ್ಶ ವ್ಯಕ್ತಿತ್ವ . ತನ್ನ ಅಣ್ಣನ ಸಂಸಾರ ಮುಳುಗಿದಾಗ , ಇವನೇ ತನ್ನ ಅತ್ತಿಗೆ ಹಾಗೂ ಅವರ ಮಗನಿಗೆ ನೆರಳಾಗಿ ನಿಂತಿದ್ದು . ತನ್ನ ಅಣ್ಣ ಮರುಮದುವೆಯಾದಾಗಲೂ ಸಹ ಅವರ ಮೇಲೆ ಕೋಪಗೊಳ್ಳಲಿಲ್ಲ. ಅವರ ಮೇಲಿದ್ದ ಗೌರವ ಕಮ್ಮಿಯಾಗಲಿಲ್ಲ . ಆ ಮದುವೆಯ ಹಿಂದಿನ ಪರಿಸ್ಥಿತಿಯ ಅರಿವು ಅವನಿಗಿತ್ತು . ಕಾತ್ಯಾನಿಯ ವಿಷಯದಲ್ಲೂ ತನ್ನ ಉನ್ನತ ವ್ಯಕ್ತಿತ್ವವನ್ನು ಮೆರೆದಿದ್ದರು . ಆಕೆ ವಿಧವೆಯೆಂದು ಗೊತ್ತಿದ್ದರೂ , ಒಂದು ಮಗುವಿನ ತಾಯಿ ಅಂತ ಅರಿವಿದ್ದರೂ ಅವಳನ್ನು ಪ್ರೀತಿಸಿ ಮದುವೆಯಾಗಲು ಮುಂದೆ ಬಂದು , ತನ್ನ ಆದರ್ಶವನ್ನು ಮೆರೆದಿದ್ದರು. ಮದುವೆಯಾದ ಮೇಲೂ ಅವಳ ವ್ಯಕ್ತಿತ್ವಕ್ಕೆ ಧಕ್ಕೆ ಬರದ ಹಾಗೆ ನೋಡಿಕೊಂಡರು . ಆದರೆ ಕಾತ್ಯಾಯಿನಿಯನ್ನು ಮದುವೆಯಾದ ಮೇಲೆ ಅವಳ ಮಗನ ಅಗಲಿಕೆಯ ದುಃಖವನ್ನು ಅರಿತ್ತಿದ್ದನು. ತನ್ನ ಎಲ್ಲ ಬಸಿರ ಕುಡಿಗಳೂ ನಾಶವಾದಾಗ , ಕಾತ್ಯಾಯಿನಿ ಅದರ ನೆನಪಿನಲ್ಲೇ ಕ್ರುಶಳಾದಾಗ ಈತ ಶ್ರೋತ್ರಿಗಳನ್ನು ಕಂಡು ಮಾತಾಡಿ ಚೀನಿಯ ಜೊತೆ ಒಂದು ಕೂಡಿಸಲು ಪ್ರಯತ್ನ ಮಾಡಬಹುದಿತ್ತು . ಇದರಿಂದ ಕಾತ್ಯಾಯಿನಿಯನ್ನು ಉಳಿಸಿಕೊಳ್ಳಬಹುದಿತ್ತು . ಈತ ಎಂದೂ ಶ್ರೋತ್ರಿಗಳ ಜೊತೆ ಸಂಪರ್ಕ ಮಾಡದೆ ಇದ್ದದ್ದು ಆಶ್ಚರ್ಯ ಎನಿಸುತ್ತದೆ . ಶ್ರೋತ್ರಿಗಳ ಉನ್ನತ ವ್ಯಕ್ತಿತ್ವದ ಅರಿವು ಕಾತ್ಯಯಿನಿಯಿಂದ ತಿಳಿದ್ದಿತ್ತು. ಅದರೂ ಒಮ್ಮೆಯಾದರೂ ಅವರನ್ನು ಭೆಟ್ಟಿ ಮಾಡಿ ಕಾತ್ಯಾಯಿನಿಯನ್ನು ಮದುವೆ ಯಾಗುವ ವಿಚಾರದ ಬಗ್ಗೆ , ಚೀನಿಯನ್ನು ತನ್ನ ಮಗುವೆಂದು ಸ್ವೀಕರಿಸುವ ಬಗ್ಗೆ ಅವರ ಬಳಿ ಮಾತನಾಡಬಹುದಿತ್ತು . ಕಾತ್ಯಾಯಿನಿಯನ್ನು ಮದುವೆಯಾದ ಮೇಲಾದರೂ ಅವರ ಬಳಿ ಒಮ್ಮೆಹೋಗಿ ಕ್ಷಮೆ ಕೇಳಿ ಆಶೀರ್ವಾದವನ್ನು ಪಡೆಯಬಹುದಿತ್ತು. ಆದರೆ ಆ ಪ್ರಯತ್ನ ಎಲ್ಲೂ ಕಾಣಬರುವುದಿಲ್ಲ . ಎಲ್ಲ ನಿರ್ಧಾರವನ್ನು ಕಾತ್ಯಾಯಿನಿಗೆ ಬಿಟ್ಟಿದ್ದರು . ಇದು ಅವರ ವ್ಯಕ್ತಿತ್ವಕ್ಕೆ ಸ್ವಲ್ಪ ವ್ಯತಿರಿಕ್ತವಾಗಿತ್ತು ಅನ್ನಿಸುತ್ತದೆ.

ವಂಶವೃಕ್ಷವು ಸಂಭಂಧಗಳ ಬೇರುಗಳಿಂದ, ಪ್ರೀತಿ, ಅಭಿಮಾನ, ನಂಬಿಕೆಗಳ ಆರೈಕೆಯಿಂದ ಭದ್ರವಾಗಿ ನಿಂತು ಹೆಮ್ಮರವಾಗಿ ಬೆಳೆಯಲು ಸಾಧ್ಯ !!!

ತಪ್ಪುಗಳಿದ್ದರೆ ಕ್ಷಮೆ ಇರಲಿ.

Sunday, 8 March 2015

ಹೀಗೊಂದು ದಿನ officeನಲ್ಲಿ.....

ಬೆಳಗ್ಗೆ  ಎದ್ದು  office ಗೆ  ಹೊರಟಿದ್ದೆ. ನಡುವೆ office ಗೆ  ಹೋಗೋದಂದ್ರೆ  ಬೇಜಾರು. ಏನಾದರೂ  ಕೆಟ್ಟ  ಸುದ್ದಿಯೇ  ಕಿವಿಗೆ  ಬೀಳುತ್ತಿರುತ್ತೆ . oh..ಏನಪ್ಪಾ  ಕೆಟ್ಟ  ಸುದ್ದಿ  ಆಫೀಸಿನಲ್ಲಿರುತ್ತೆ  ಅಂತ  ಆಶ್ಚರ್ಯ  ಪಡುತ್ತಿದ್ದೀರ? expense optimization start ಆದಾಗಿನಿಂದ  resource cutdown ಶುರುವಾಗಿದೆ. ಇದು  sentitive ವಿಷಯ . ಹಾಗಾಗಿ  ಇದರ  ಬಗ್ಗೆ  ಹೆಚ್ಚು ಹೇಳಲು  ಇಷ್ಟಪಡುವುದಿಲ್ಲ. ಆದರೆ ಇದರ  ಬಿಸಿ  ಮಾತ್ರ  ಎಲ್ಲ  business unit ಗಳ ಮೇಲೂ  ತಾಕಿದೆ .

ದಿನ  ಚೆನ್ನಾಗಿರಲಿ  ಅಂತ  ಆಶಿಸಿ  ಹೊರಟಿದ್ದೆ . ಯಾಕಂದ್ರೆ  ಇವತ್ತು  ನನ್ನ  ಹುಟ್ಟಿದ  ದಿನ . ಎಲ್ಲ  ಒಳ್ಳೆಯದಾಗಲಿ ಅಂತ  ದೇವರನ್ನ  ಬೇಡಿ  cab ಹತ್ತಿದ್ದೆ . ಈದಿನ  ಸಹ  ಎಲ್ಲ  ದಿನದಹಾಗೆ  normal ಆಗಿ  start ಆಯಿತು . ಬೆಳಗ್ಗಿನ  Green 'T 'ಮುಗಿಸಿ , mails check ಮಾಡಿ , reply ಮಾಡಿ , ಕೆಲವು  meetings attend ಮಾಡಿ  desk ಗೆ  ಬಂದು  ಕೂತಿದ್ದೆ . ಆಗ ಕೇಳಿಸಿತು  ಒಂದು  ಬಿಸಿ  ಸುದ್ದಿ . ನನ್ನ  colleague ಹೇಳ್ತಿದ್ರು ,  ದೊಡ್ಡಮ್ಮ  ಬಂದು  ಹೋದರಂತೆ  ಎರಡು  ದಿನದ  ಮಟ್ಟಿಗೆ , ಏನು  ಅಂತ  ವಿಷಯ  ಗೊತ್ತಾಯಿತ  ಅಂತ . ಮೊದಲು    ದೊಡ್ಡಮ್ಮ  ಯಾರು  ಅಂತ  ಗೊಂದಲಕ್ಕೆ  ಸಿಕ್ಕ  ನನಗೆ  ತಕ್ಷಣ  ಹೊಳೆಯಿತು  ನಮ್ಮ  company CEO ಅಂತ . US ನಿಂದ 2 ದಿನದ  ಮಟ್ಟಿಗೆ  ಬಂದು ಹೋಗುವ  ಗಂಭೀರವಾದ ವಿಷಯ  ಏನಿತ್ತು  ಅಂತ  ತಲೆಗೆ  ಹೊಳೆಯದೆ  ಯೋಚನೆಗೆ  ಬಿದ್ದೆ . ಆಗ ಕೆಲವೊಂದು  ವಿಷಯಗಳು   ಹೊರಗೆ  ಬಂದವು ....ಏನೋ  15% cutdown ಅಂತೆ , across all levels ಅಂತೆ , master list ಪ್ರಿಪೇರ್  ಆಗಿದ್ಯಂತೆ, phases ನಲ್ಲಿ start ಆಗುತ್ತಂತೆ ...ಅಂತೆ ಕಂತೆಗಳು . ತಲೆ  ಬಿಸಿ  ಆಗೋದಕ್ಕೆ  start ಆಯಿತು . ಒಂದು  ಸಮಯ  ಕೆಲಸ  ಹೋದರೆ  ಮುಂದೆ  ಏನು  ಅಂತ  ಯೋಚನೆ , break ತೊಗೊಂಡ್ಳ,  resume ready ಮಾಡ್ಕೊಂಡ್ಳ , ಹೀಗೆ  ಹತ್ತಾರು  ಯೋಚನೆಗಳು . ಊಟದ  ಸಮಯ  ಆಗಿತ್ತು . lunch ಮುಗಿಸಿ  ಬಂದಾಗ  cake cutting arrange ಮಾಡಿದ್ರು . Mood ಇರದೇ  ಇದ್ರೂ  ಎಲ್ಲರ  ಮುಂದೆ  ತೋರಿಸಿಕೊಳ್ಳದೆ  cut ಮಾಡಿ  ಎಲ್ಲರಿಗೂ  ಹಂಚಿದ್ದೆ . ಮನದ  ಎಲ್ಲೊ  ಒಂದು ಮೂಲೆಯಲ್ಲಿ  ಸಿಗದ  ಉತ್ತರಕ್ಕೆ  ಮನಸ್ಸು  ಚಡಪಡಿಸುತ್ತಿತ್ತು . ಕೆಲಸ  ಮಾಡಲು  mood ಇರಲಿಲ್ಲ . ಮತ್ತೆ  ಒಂದು  ಸುದ್ದಿ ಬಂದಿತ್ತು ...ಇನ್ನೊಂದು  busines unit ನಲ್ಲಿ  4 ಜನ  resign ಮಾಡಿದ್ಹಾರಂತೆ  ಅಂತ . Mail ನೋಡಿದ  ತಕ್ಷಣ  ಅನಿಸಿದ್ದು ... ಇದು ಎಲ್ಲರ  ಕಣ್ಣಿಗೆ  resign ಅಂತ  ತೋರಿಕೆಯಾದರು , they were asked to go ಅಂತ . ಮನದ  ತುಮುಲ  ಜಾಸ್ತಿಯಾಯಿತು .   ದಿನವೇ  ಇಂತ ಸುದ್ದಿಗಳನ್ನು  ಕೇಳಬೇಕಾಯಿತ  ಅನ್ನಿಸ್ತು . ಅಷ್ಟರಲ್ಲಿ  mailbox ನಲ್ಲಿ  ಒಂದು  mail ಇಣುಕಿತ್ತು ....ನಮ್ಮ  HR ಇಂದ  ಬಂದ mail. Meeting ಗೆ  ಬುಲಾವ್  ಬಂದಿತ್ತು . ಏನಪ್ಪಾ  ಇದು  ಅನ್ಕೊಂಡು  meeting ಗೆ ಹೋದರೆ , HR ನಿಂದ  gyan session. ಹೇಗೆ    situation   handle ಮಾಡ್ಬೇಕು  ಅಂತ  ಜ್ಞ್ಯಾನಬೋಧನೆ. ಮೂಲೆಯಿಂದ  ಒಂದು  ಪ್ರಶ್ನೆ  ಬಂದಿತ್ತು ...Is this news all true ? ಅಂತ . HR   sarcastic ನಗೆ    ಪ್ರಶ್ನೆಗೆ  ಉತ್ತರ  ಕೊಟ್ಟಿತ್ತು . ಸರಿ , ಇಲ್ಲಿ   ಯಾರು  safe ಇಲ್ಲ  ಅನ್ನಿಸ್ತು . ಮತ್ತೆ  ದಿನದ  ನೆನಪು . ದಿನವೆಲ್ಲ  ಬರಿ  ಇಂಥದೇ  ಸುದ್ದಿ  ಆಗಿತ್ತು . Meeting ಮುಗಿಸಿ  chai break ಗೆ  ಹೋದಾಗಲೂ  ಬರಿ  ಇಂಥದೇ  ಮಾತುಗಳು . ಎಲ್ಲರೂ ತಮ್ಮ EMI ಬಗ್ಗೆ, liabilities ಬಗ್ಗೆ ಮಾತನಾಡುತ್ತಿದ್ದರು. ಸಧ್ಯ ಯೋಚನೆ ನನಗಿರಲಿಲ್ಲದಿನ  ಯಾವಾಗ  ಮುಗಿಯತ್ತೋ  ಅನ್ನಿಸ್ತಿತ್ತು. ಹಾಗೆ  ಕಾಲ  ತಳ್ಳುತ್ತಾ cab ಸಮಯ  ಆಗಿತ್ತು .   ವಾತಾವರಣದಿಂದ  ತಪ್ಪಿಸಿಕೊಳ್ಳಲು  ಬೇಗನೆ  wrap up ಮಾಡಿ , cab ನಲ್ಲಿ  ಹೋಗಿ  ಕೂತಿದ್ದೆ . cabನಲ್ಲಿ ಕೂತಾಗಲು  ಏನೋ  ಮನಸ್ಸಿನಲ್ಲಿ ತಳಮಳ . ಬೇಡದ  ಯೋಚನೆಗಳು ...

ಮನೆಗೆ  ತಲುಪಿ  bag   ಟೇಬಲ್  ಮೇಲಿಟ್ಟು ಮತ್ತೆ  ಯೋಚನೆಗೆ  ಬಿದ್ದೆ . ಅಮ್ಮ  sweets ಮಾಡಿದ್ರು . ತಿನ್ನುವ  ಮನಸ್ಸು  ಇರಲಿಲ್ಲ . ಮತ್ತೆ  office friend ನಿಂದ  call...ಯಾವುದೋ  area ದಲ್ಲಿ 7 cut down ಅಂತ . ನಾಳೆ  office ಗೆ  ರಜ ಹಾಕ್ಬೇಕು  ಅಂತ  ಅನ್ಕೊಂಡೆ. ಸರಿ  ಊಟ  ಮಾಡಿ  ಮಲಗಿ  ಬಿಡುವ  ಅನ್ನಿಸ್ತು . ಸಧ್ಯಕ್ಕೆ  ಯಾವ  calls ಇರ್ಲಿಲ್ಲ . ಹಾಗೆ  ದಿಂಬಿಗೆ  ಒರಗಿ  ಕಣ್ಣು  ಮುಚ್ಚಿದ್ದೆ . ಕಣ್ಣಿಗೆ  ಮಂಪರು  ಹತ್ತಿತ್ತು . Sudden ಆಗಿ  ಅಮ್ಮ  ಕರೆದ  ಧ್ವನಿ  ದೂರದಿಂದ  ಕೇಳಿಸ್ತು ....office ಗೆ  late ಆಯಿತು  ಏಳಲ್ವೇನೆ ಅಂತ , ಮತ್ತೆ  ಕೂಗು  ....ಕಣ್ಣು  ಬಿಟ್ಟು  ನೋಡಿದೆ ...oh ಆಗಲೇ  6.30 ಆಗಿತ್ತು . ಈಗ  ತಾನೇ  ಆಫೀಸ್ನಿಂದ  ಬಂದಿದ್ದಲ್ವಅಷ್ಟು  ಬೇಗ  ಬೆಳಗಾಗೋಯ್ತ ಅಂತ  ಅನ್ಕೊಂಡಾಗ  ಹೊಳೆದಿದ್ದು  ನಾನು  ಇಲ್ಲಿವರೆಗೂ  ಕಂಡಿದ್ದು  ಬರೀ ಕನಸು  ಅಂತ. ನನ್ನ  ಹುಟ್ಟುಹಬ್ಬ ಕಳೆದು  ಆಗಲೇ  ಒಂದು ವಾರದ ಮೇಲೆ ಆಗಿತ್ತು  . Oh..ಸಧ್ಯ  ಕನಸು  ಇದು , ನಿಜ  ಅಲ್ಲ  ಅಂತ  ತಿಳಿದು  ಸ್ವಲ್ಪ  ಸಮಾಧಾನ  ಆಯಿತು . office ಗೆ  ಹೊರಡಲು readyಯಾಗಲು ಎದ್ದೆ.

ಆದರೆ  office ನಲ್ಲಿ  ಮತ್ತೊಂದು  bomb ಸ್ಪೋಟಿಸುತ್ತೆ ಅಂತ  ಗೊತ್ತೇ  ಇರಲಿಲ್ಲ ....!!!!

*spelling mistakes ಗಳ ಬಗ್ಗೆ ಕ್ಷಮೆ ಇರಲಿ

ಆಫೀಸ್ನ ವಾತಾವರಣ!

ಸುದ್ದಿಯ updates ತೊಗೊಂಡು ಮತ್ತೆ ನಿಮ್ಮ ಮುಂದೆ ಬಂದಿದ್ದೀನಿ . ಈಸಲದ ವಿಷಯ layoff  after effects ಮತ್ತೆ  ಆಫೀಸ್ನ  ವಾತಾವರಣದ  ಬಗ್ಗೆ.

ನಡುವೆ ಆಫೀಸ್ನ  ವಾತಾವರಣ ಹಿತಕರವಾಗಿಲ್ಲ. Layoff ಅನ್ನುವ ಭೂತ ಮೆಟ್ಟಿದ ವಾತಾವರಣವಾಗಿದೆ. 10/10 mass layoff event ಎಲ್ಲರ  ಮನದ  ಒಂದು  ಮೂಲೆಯಲ್ಲಿ  ಭಯದ ಮನೋಭಾವವನ್ನು  ಮೂಡಿಸಿದೆ . Next event ಯಾವಾಗಾಗುತ್ತದೋ  ಎನ್ನುವ  ಆತಂಕದ  ಮನೋಸ್ಥಿತಿ .ಕೆಲಸದ  ಮೇಲಿನ  ಆಸಕ್ತಿ ಕಡಿಮೆಯಾಗುತ್ತಿದೆ. Uncertainty ಹೆಚ್ಚಾಗುತ್ತಿದೆ .

ಟಾರ್ಗೆಟ್ನ ಇತಿಹಾಸದಲ್ಲಿ  ಇಂತಹ ಒಂದು  Event ಆಗಿದ್ದು  ಇದೆ  ಮೊದಲ  ಸಲ . TM's career development  ಮೇಲೆ  ಹೆಚ್ಚಿನ  ಗಮನ  ಹರಿಸುತ್ತಿದ್ದ  ಕಂಪನಿ  Employees   layoff ಮಾಡುತ್ತಾರೆ  ಅಂತ  ಯಾರು  ಕನಸು  ಮನಸಿನಲ್ಲೂ  ಎಣಿಸಿರಲಿಲ್ಲ . 10/10 event ಎಲ್ಲರಿಗೂ  ಒಂದು  ಎಚ್ಚರಿಕೆಯ  ಪಾಠವಾಗಿದೆ. ಮುಂದೆ  ಆಗುವ  ಸಂಭವಗಳು ಹೆಚ್ಚಾಗುತ್ತಿದೆ. ಈಗಾಗಿದ್ದು  ಬರಿ trailer ಮಾತ್ರ, Abhi bi picture baaki hai ಎನ್ನುವ  dialogue ಎಲ್ಲರ  ಬಾಯಲ್ಲೂ ಹರಿದಾಡುತ್ತಿದೆ . ಗಂಭೀರವಾದ ವಿಷಯ ಈಗ ಎಲ್ಲರಿಗೂ  ತಮಾಷೆಯ  ವಿಷಯವಾಗಿದೆ . ಮುಂದೆ  ಏನೇ ಆದರೂ ಎಲ್ಲರೂ  ಸಿದ್ದವಾಗಿದ್ದಾರೆ . I am prepared as well. ಕೆಲವೊಂದು  ಸಲ   ಇಷ್ಟೊಂದು  ಯೋಚನೆ  ಮಾಡುವ  ಅವಶ್ಯಕತೆ  ಇಲ್ಲ  ಅಂತ ಅನ್ನಿಸುತ್ತದೆ . ಆಗೋದಂತೂ  ಆಗೇ ಆಗುತ್ತದೆ . ಹಾಗಿದ್ದ  ಮೇಲೆ  ಯೋಚನೆ  ಇಂದ  ಟೈಮ್  waste ಮಾಡುವ  ಅವಶ್ಯಕತೆ  ಇಲ್ಲ  ಅಂತ . There is life beyond all these.   ಕೆಲಸ  ಇಲ್ಲದೇದ್ರೆ ಏನಂತೆ  ಇನ್ನೊಂದು  ಕೆಲಸ . ನಮ್ಮ  ಬೆಂದಕಾಳೂರಿನಲ್ಲಿ  ಕಂಪನಿಗಳಿಗೇನು  ಬರ !!!

10/10 event ನಿಂದ  ಮ್ಯಾನೇಜ್ಮೆಂಟ್  ಒಂದು  ಪಾಠ  ಕಲಿತಿದೆ . External consultants ಹಾಗೂ  Severance package deal ಹೆಚ್ಚೂ ಕಮ್ಮಿ 10M ವರೆಗೂ ಮುಟ್ಟಿದೆ. Quiet expensive layoff. Consultants ಗೇನೆ ಸುಮಾರು 5m ಸುರಿದಿದ್ದಾರೆ ಎಲ್ಲ legal aspects  handle ಮಾಡಲು. ಮುಂದೆ  ಆಗುವ  events ಗೆ  ಇಷ್ಟು  ಖರ್ಚು ಮಾಡಿದರೆ ಕಂಪನಿಯ financial crisis ಇನ್ನೂ ಹದಗೆಡುತ್ತದೆ . ಆದ್ದರಿಂದ ಎಚ್ಚರ ವಹಿಸುತ್ತಿದ್ದಾರೆ. ಹಾಗಂತ  resource ಕಡಿತ  ನಿಲ್ಲೋದಿಲ್ಲ. Performance management ಮುಖಾಂತರ  headcount ಕಡಿಮೆ  ಮಾಡುವ  ಹುನ್ನಾರ . Process slow ಆಗಬಹುದು.

Next speculated date ಇದ್ದದ್ದು  11/20 ಮತ್ತೆ  1/15. ಆದರೆ  11/20  ಅಂದು  ಏನೂ  ಆಗಲಿಲ್ಲ . ಆಗುವ  probabilities ತುಂಬಾ  ಕಮ್ಮಿ  ಇತ್ತು ಅನ್ನಬಹುದು . Peak season ಸ್ಟಾರ್ಟ್  ಆಗಿರೋದ್ರಿಂದ  ಇಂಥ  ಟೈಮ್  ನಲ್ಲಿ  layoff ಮಾಡಿದರೆ  sales ಗೆ  ಮತ್ತಷ್ಟು  ಹೊಡೆತ  ಬೀಳುವ  ಸಂಭವಗಳು  ಹೆಚ್ಚು . Q3 sales Q2 ಗಿಂತ  ಸ್ವಲ್ಪ ಸುಧಾರಿಸಿದರೂ last year    mark reach ಆಗಿಲ್ಲ . ಹಾಗಾಗಿ  risk ತೊಗೊಳೋದ್ದಿಲ್ಲ ಅಂತ  ಒಂದು  ಭರವಸೆ ಇತ್ತು . ಹಾಗೇ ಆಯಿತು . ಅಂತು ದೀಪಾವಳಿಯ  ಧಮಾಕ  ಸದ್ಯಕ್ಕೆ  November ನಲ್ಲಿ  ಇರುವುದಿಲ್ಲ  , December peak season ಆಗಿರೋದ್ರಿಂದ ಅವಾಗಲೂ ಆಗೋದಿಲ್ಲ . ಇನ್ನು  January ಯಲ್ಲಿ  ಸಂಕ್ರಾಂತಿಯ  ಸಕ್ಕರೆ ಪೊಂಗಲ್ ತಿನ್ನಿಸುತ್ತಾರ  ಅಥವಾ ಖಾರ  ಪೊಂಗಲ್  ತಿನ್ನಿಸುತ್ತಾರ ಅಂತ ಕಾದು ನೋಡಬೇಕು . Anything can happen!! ಕಾದು ನೋಡಬೇಕು .

ಮುಂದೇನಾಗುತ್ತದೆ ಎನ್ನುವ  ಆತಂಕದ  ಕ್ಷಣ  ಎಲ್ಲರ  ಮನದಲ್ಲೂ  ಇದೆ . ನನ್ನ ಮನಸ್ಥಿಯೂ  ಇದಕ್ಕೆ  ಹೊರತಾಗಿಲ್ಲ . After all everyone is dispensable. ಹಾಗಂತ ಇಂದಿನ ಕ್ಷಣವನ್ನು  ಮರೆತು  ಮುಂದಾಗುವ  ಕ್ಷಣವನ್ನು  ಯೋಚಿಸಿ  ಫಲವಿಲ್ಲ . ವಾತಾವರಣದಿಂದ  ಒಂದು  break ತೊಗೊಳ್ಳುವ  ಯೋಚನೆ . ಗಾಂಧೀ ಹುಟ್ಟಿದ  ನಾಡು  Gujarat ಗೆ  ಹೋಗುವ  ಬಯಕೆ .  Incredible ಇಂಡಿಯಾದಲ್ಲೊಂದು memorable journey ಮಾಡುವ ಆಸೆ !!!