- ಒಂದು ನಮನ
Steve Jobs ಭಯಾಗ್ರಫೀ ಓದಿ ಮುಗಿಸಿದ್ದೆ. ಈ ಪುಸ್ತಕ ನನ್ನ ಕೈಗೆ ಸಿಕ್ಕಿದ್ದು ಒಂದು ಅನಿರೀಕ್ಷಿತ ಅನ್ನಬಹುದು. ನನ್ನ ಬಾಸ್ ಗೆ sendoff ಗಿಫ್ಟ್ ಎಂದು ತಂದ ಈ ಪುಸ್ತಕ ಅವರ ಬಳಿ ಆಗಲೇ ಒಂದು ಪ್ರತಿ ಇದ್ದುದರಿಂದ ನನ್ನ ಕೈ ಸೇರಿತ್ತು. ಪುಸ್ತಕ ಓದುವುದಕ್ಕೆ ಮುಂಚೆ ಭಯಾಗ್ರಫೀ ಅಂದರೆ ತುಂಬಾ ಬೋರ್ ಆಗಬಹುದು ಎಂದುಕೊಂಡಿದ್ದೆ. ಆದರೆ ಓದಲು ಶುರು ಮಾಡಿದ ಮೇಲೆ ಬಂದಿದ್ದ ಯೋಚನೆ ಬದಲಾಗಿತ್ತು. ಇದೊಂದು ಅಧ್ಬುತ ಪುಸ್ತಕ ಎನ್ನಬಹುದು, an inspirational one. ಓದಿ ಮುಗಿಸಿದ ಮೇಲೆ wow ಅಂತ ಒಂದು ಉದ್ಗಾರ ಹೊರಬಿದ್ದಿತ್ತು. ಲೇಖಕ Walter Isaacson, ತುಂಬಾ ಅಚ್ಚುಕಟ್ಟಾಗಿ ಸ್ಟೀವ್ ಜಾಬ್ಸ್ ನ ಜೀವನಚರಿತ್ರೆಯನ್ನು ತನ್ನ ಲೇಖನಿಯಲ್ಲಿ ಬಿಂಬಿಸಿದ್ದ. ಜಾಬ್ಸ್ ನ ಒಳ ಹೊರಗುಗಳನ್ನು, ಅವರ ಒರಟುತನ, ಕಾರ್ಯದಕ್ಷತೆ ಎಲ್ಲವನ್ನೂ ಅಧ್ಬುತವಾಗಿ ಬರೆದಿದ್ದರು.
ಸ್ಟೀವ್ ಜಾಬ್ಸ್, ಡಿಜಿಟಲ್ ಸಾಮ್ರಾಜ್ಯದ ಅನಘ್ಯ ಒಡೆಯನಾಗಿದ್ದ. ಅವರ ತೀಕ್ಷ್ಣ ಬುದ್ದಿ, ಮಾಡಲೇಬೇಕೆಂಬ ಹಟ, ಏನೇ ಬಂದರೂ ಎದುರಿಸಿ ನಿಲ್ಲುವ ಛಲ, ಗುರಿ ಅವರನ್ನು ಒಂದು ಉನ್ನತ ಸ್ಥಾನಕ್ಕೆ ಕೊಂಡೊಯ್ದಿತ್ತು. ಕಿರಿ ವಯಸ್ಸಿನಲ್ಲಿಯೇ ಎಲೆಕ್ಟ್ರಾನಿಕ್ಸ್ ಪ್ರಪಂಚಕ್ಕೆ ಸಿಕ್ಕ ಅವರ exposure,ತಂದೆಯಿಂದ ಕಲಿತ ಮೆಕ್ಯಾನಿಕ್ಸ್, ಸುತ್ತ ಮುತ್ತಲಿನ ವಾತಾವರಣ, ಸ್ನೇಹಿತರು, ಕಾಲೇಜ್, ಪ್ರೊಫೆಸ್ಸರ್ಸ್, ಅವರ ಆಧ್ಯಾತ್ಮಿಕ ಒಲವು, ಸಾತ್ವಿಕ ಆಹಾರದ ಅಭ್ಯಾಸವನ್ನು ರೂಢಿಸಿಕೊಂಡ ಬಗೆ, ಮೆಡಿಟೇಶನ್ ಎಲ್ಲವೂ ಅವರನ್ನು ಪಕ್ವ ಮನುಷ್ಯನನ್ನಾಗಿಸಿತ್ತು.
ಸ್ಟೀವ್, ಒಬ್ಬ Perfectionist. ಹಿಡಿದ ಕೆಲಸವನ್ನು ಮುಗಿಸದೆ ಬಿಡುತ್ತಿರಲಿಲ್ಲ. ಆ ಕೆಲಸದಲ್ಲಿಯ ನೈಪುಣ್ಯತೆ, ಪಕ್ವತೆ, ಪರ್ಫೆಕ್ಶನ್, ಸಣ್ಣ ಸಣ್ಣ ವಿಚಾರದಲ್ಲಿ ಗಮನ ಹರಿಸುವ ಬಗೆ, ಸಂಗತಿಗಳನ್ನು ಸಂಗ್ರಹಿಸುವ ಬಗೆ, ವಿಚಾರ ಮಂಥನ ಅಧ್ಬುತ. ಇವರ ತೀಕ್ಷ್ಣ ವಿಚಾರಕ್ಕೆ ಯಾರೂ ಸರಿಸಮಾನವಾಗಿ ನಿಲ್ಲಲು ಸಾಧವಿಲ್ಲ. ತನ್ನದೇ ಆದ ವಿಚಾರವಂತಿಕೆಯಿಂದ ತನ್ನ Apple ಸಾಮ್ರಾಜ್ಯವನ್ನು ಕಟ್ಟಿದ್ದರು. 'Think Different' ಎನ್ನುವುದು ಈತನ ಮಂತ್ರವಾಗಿತ್ತು. ಇದನ್ನೇ Appleನ ವಿಷನ್ ಸ್ಟೇಟ್ಮೆಂಟ್ ಆಗಿ ಮಾಡಿದ್ದರು. ಈ ವಿಷನ್ ಅಡಿ ಹಲವಾರು ಅಧ್ಬುತ ಪ್ರಾಡಕ್ಟ್ಸ್ ಗಳು ಮಾರ್ಕೆಟ್ ಗೆ ಬಂದು ಫಲಕಾರಿಯಾಗಿದ್ದವು. ಸ್ಟೀವ್ ಪ್ರಕಾರ 'Drive for perfection meant caring about craftsmanship even if the parts unseen'.
ಈತ ಒಬ್ಬ Spiritual ಮನುಷ್ಯ. Zen Buddhismನ ಹಿಂಬಾಲಕ. ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನೋದಯದ ಅನ್ವೇಷಣೆಯಲ್ಲಿ ತನ್ನ ಗುರುವಾದ ನೀಂ ಕರೋಲಿ ಬಾಬಾನ ಭೇಟಿಯಾಗುವ ಉದ್ದೇಶದಿಂದ ಭಾರತಕ್ಕೆ ಬಂದು ಇಲ್ಲಿ ಸುಮಾರು 6-7 ತಿಂಗಳುಗಳ ಕಾಲ ಹಿಮಾಲಯದ ತಪ್ಪಲಿನಲ್ಲಿ ಇದ್ದರು. ಸುಮಾರು ಕಾಲ ಯೋಗಿಗಳ ಜೊತೆ ಸುತ್ತಾಡಿ, Buddhism, Hinduism, ಹಾಗೂ spiritualismನ ಅಭ್ಯಾಸ ಮಾಡಿ ಕೊನೆಗೆ ವಾಪಸ್ ತನ್ನ ದೇಶಕ್ಕೆ ಮರಳಿದ್ದರು. ತನ್ನ ಜೀವನ ಪರ್ಯಂತ ಕೆಲವೊಂದು ಆಧ್ಯಾತ್ಮಿಕ ಸತ್ವಗಳನ್ನು ಪಾಲಿಸಿಕೊಂಡು ಬಂದಿದ್ದರು.
ಈತ ಒಬ್ಬ Futurist. ಈತ ಮಾರ್ಕೆಟ್ ನ ಸರ್ವೇ ಮಾಡಿ ಜನರಿಗೆ ಬೇಕಾದ ಪ್ರಾಡಕ್ಟ್ಸ್ ಅನ್ನು ತಯಾರುಮಾಡುತ್ತಿರಲಿಲ್ಲ. ಜನರ ಯೋಚನೆಗೂ ಸಿಲುಕದಂತಹ ಫೀಚರ್ಸ್ ಅನ್ನು ಒಳಗೊಂಡ ಪ್ರಾಡಕ್ಟ್ಸ್ ಅನ್ನು ಮಾಡಲು ಪ್ರೇರೇಪಿಸುತ್ತಿದ್ದ. ಮೊದಲಿಗೆ ಈತನ ಐಡಿಯಾ ಯಾರೂ ಒಪ್ಪದೆ ಇದ್ದರೂ, ಅದರ ಹಿಂದೆ ಇರುವ ಯೋಚನೆಯನ್ನು ಅರಿತಾಗ ಸ್ಟೀವ್ ಹೇಳಿದ ಮಾತು ನಿಜ ಅನ್ನಿಸುತ್ತಿತ್ತು. when he speaks, he sees the future and make sure it works. ಈತನ ಪ್ರಾಡಕ್ಟ್ಸ್ ಜನರ ಕಲ್ಪನೆಗೂ ಸಿಲುಕದ ತಯಾರಿಕೆಯಾಗಿರುತ್ತಿತ್ತು. ಈತನ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಸಾಧನಗಳ ಹಿಂದಿನ ಪ್ರೇರಕ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು.
ಸ್ಟೀವ್, ಹಟವಾದಿ, ಖಂಡಿತವಾದಿ, ಒಬ್ಬ Critic. ಮುಖದ ಮೇಲೆ ಹೊಡೆಯುವ ಹಾಗೆ ಮಾತಾಡುವ ಸ್ವಭಾವ. ಅವರು ಕೆಲವೊಂದು ಸಲ ತಮ್ಮ ಸಹವರ್ತಿಗಳ ಜೊತೆ ತುಂಬಾ ಕಠಿಣವಾಗಿ ವರ್ತಿಸುತ್ತಿದ್ದರು. ತನ್ನ ಸ್ವಭಾವದಿಂದ ಎಷ್ಟೋ ಜನರ ಜೊತೆ ಧ್ವೇಷ ಕಟ್ಟಿಕೊಂಡಿದ್ದರು. ಆದರೆ ಅವರ ಕೆಲಸದ ನೈಪುಣ್ಯತೆ, ಆಪಲ್ ಎಂಪ್ಲಾಯೀಸ್ ಅಸಾಧ್ಯ ಎಂದು ಅರಿತಿದ್ದ ಮಹತ್ತರ ಪ್ರಾಡಕ್ಟ್ಸ್ ಅನ್ನು ತಯಾರು ಮಾಡಲು ಪ್ರೇರೇಪಿಸುತ್ತಿತ್ತು. ಇಂತಹ ಅಧ್ಬುತ ಕಲೆಗಾರಿಕೆ ಸ್ಟೀವ್ ನಲ್ಲಿ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಜಾಬ್ಸ್ ಸುತ್ತ ಇದ್ದ ಉದ್ಯಮಶೀಲತೆಯ ಪ್ರಭಾವಳಿಯು ಇತರರ ಪಾಲಿಗೆ ನಿರಂತರವಾಗಿ ಸ್ಪೂರ್ತಿದಾಯಕವಾಗಿರುತ್ತಿತ್ತು.
ಸ್ಟೀವ್, Simplicity, ಸರಳತೆಯಲ್ಲಿ ನಂಬಿಕೆ ಇಟ್ಟವರು. ಇದನ್ನು ತಮ್ಮ ಪರ್ಸನಲ್ ಹಾಗೂ ಪ್ರೊಫೆಶನಲ್ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆಹಾರ, ಉಡುಗೆ ತೊಡುಗೆ, ಜೀವನ ನಡೆಸಿದ ರೀತಿ ಎಲ್ಲವೂ ಈತನ ಸರಳ ಸಿದ್ದಾಂತವನ್ನು ತೋರಿಸುತ್ತದೆ. ಇನ್ನು ಕಂಪನಿಯ ಪ್ರಾಡಕ್ಟ್ ವಿಷಯದಲ್ಲಿಯೂ ಸಹ ಇದನ್ನು ಪಾಲಿಸುತ್ತಿದ್ದರು. ಯಾವುದೇ ಪ್ರಾಡಕ್ಟ್ ಅನ್ನು ತಯಾರು ಮಾಡಬೇಕಿದ್ದರೂ ಸರಳ ವಿನ್ಯಾಸಗಳ ಟೆಕ್ನೀಕ್ ಅನ್ನು ಬಳಸುತ್ತಿದ್ದರು. ಸ್ಟೀವ್ ಪ್ರಕಾರ "It takes a lot of hard work to make something simple, to truly understand the underlying challenges and come up with elegant solutions". ಈ ಸರಳತೆಯು ಇವರು ರೂಪಿಸಿದ ಐಫೋನ್ ಮತ್ತು ಐಪಾಡ್ಗಳಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ.
ಈತ ಒಬ್ಬ Magician, ಮೋಡಿಗಾರ. ತನ್ನ ಮೋಡಿಯಿಂದ ಎದುರಿಗಿನ ವ್ಯಕ್ತಿಯನ್ನು ಗೆಲ್ಲುತ್ತಿದ್ದರು. ಇವರ ಪ್ರಾಡಕ್ಟ್ಸ್ ಲಾಂಚ್ ಸ್ಪೀಚ್ ಎಲ್ಲರನ್ನು ಮೋಡಿ ಮಾಡುತ್ತಿತ್ತು. Steve had the charisma and corporate clout that would lead them to "make a dent in the universe". ಅದ್ಭುತವಾದ ಸಾಫ್ಟ್ವೇರ್ ಸಂಸ್ಥೆಯ ವಿಶಾಲ ಸಾಮ್ರಾಜ್ಯ ಕಟ್ಟಿ ಹೋಗಿದ್ದಾರೆ.
ಈತ ಒಬ್ಬ Entrepreneur, ಯಶಸ್ವಿ ಉದ್ಯಮಿ. Pixer ಹಾಗೂ Apple ಕಂಪನಿಗಳನ್ನು ಕಟ್ಟಿ ಬೆಳಸಿದ್ದರು. ಸ್ಟೀವ್ ಪ್ರಕಾರ " My goal has always been not only to make great products, but to build great companies". ನಾವೆಲ್ಲ ಈಗ ತುಂಬ ಇಷ್ಟಪಡುವ ಡಿಜಿಟಲ್ ಸಾಧನಗಳಾದ ಐಟ್ಯೂನ್ಸ್, ಐಫೋನ್, ಐಪಾಡ್, ಮ್ಯಾಕ್ಸ್ ಮುಂತಾದವುಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಲು ಅವರಿಂದ ಸಾಧ್ಯವಾಗಿತ್ತು. ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆ ಕಟ್ಟಿ ಬೆಳೆಸಿದ ಹೆಗ್ಗಳಿಕೆಯೂ ಅವರದ್ದು.ಇವರು ಎಂದೂ ಲಾಭಾಂಶಕಾಗಿ ಅದ್ಭುತ ಪ್ರಾಡಕ್ಟ್ಸ್ಗಳನ್ನು ಮಾರ್ಕೆಟ್ ಗೆ ಬಿಡುಗಡೆಮಾಡಲಿಲ್ಲ. ಹಣ ಎಂದೂ ಇವರ ಜೀವನದ ಪ್ರಮುಖ ಅಂಶ ಆಗಿರಲಿಲ್ಲ.
ಜಗತ್ತು ಕಂಡ ಒಬ್ಬ ಅತ್ಯಂತ ಬುದ್ದಿವಂತ ಮನುಷ್ಯ ಸ್ಟೀವ್. ಇವರ ಅಗಲಿಕೆ ಪ್ರಪಂಚಕ್ಕೆ ಒಂದು ತುಂಬಲಾರದ ನಷ್ಟವಾಗಿದೆ. Apple ಒಬ್ಬ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡಿದೆ. ತನಗಿದ್ದ ಪ್ಯಾನ್ಕ್ರಿಯಾಸ್ ಕ್ಯಾನ್ಸರ್ ಅನ್ನು ಸರಿಯಾಗಿ ಗಣನೆಗೆ ತೆಗೆದುಕೊಳ್ಳದೆ ಇದ್ದ ಪರಿಣಾಮ, ಅದು ನಿಧಾನವಾಗಿ ಹರಡಿ ಲಿವರ್ ಅನ್ನು ಡ್ಯಾಮೇಜ್ ಮಾಡಿತ್ತು. ಇನ್ನೂ ತನ್ನದೇ ಆದ ಟ್ರೀಟ್ಮೆಂಟ್ ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂದು ಅರಿತು ಲಿವರ್ ಟ್ರ್ಯಾನ್ಸ್ಪ್ಲ್ಯಾಂಟ್ ಗೆ ಒಪ್ಪಿದ್ದರು. ಆದರೂ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಅದು ಜಾಬ್ ಅನ್ನು ಸ್ವಲ್ಪ ಸ್ವಲ್ಪವಾಗಿ ಬಲಿತೆಗೆದು ಕೊಂಡಿತ್ತು. ತನ್ನ ಕಡೆ ಸಮಯದಲ್ಲಿಯೂ ಸಹ, ದೇಹಪರಿಸ್ಥಿತಿ ಕೆಲಸ ಮಾಡಲು ಆಸ್ಪದ ಕೊಡದೆ ಇದ್ದರೂ ಸಹ ತನ್ನ ಮನೋಛಲದಿಂದ ಕೊನೆಯವರೆಗೂ ಕೆಲಸ ಮಾಡಿದರು. ಇದು ಇವರ ಕೆಲಸದಲ್ಲಿಯ ಶ್ರದ್ದೆಯನ್ನು ಸೂಚಿಸುತ್ತದೆ. ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂತಿದಾಯಕರಾಗಿದ್ದಾರೆ.
ಸ್ಟೀವ್, ಮತ್ತೆ ಹುಟ್ಟಿ ಬರಲಿ ಎನ್ನುವುದು ನಮ್ಮೆಲ್ಲರ ಆಶಯ!!!!
* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.