ಕ್ಯಾಬ್ನಲ್ಲಿ ಆಫೀಸ್ಗೆ ಹೊರಟಿದ್ದೆ. ಬಿಸಿಲಿನ ಜ್ವಾಲೆ ಬೆಳಗ್ಗಿನಿಂದಲೇ ತನ್ನ ಕೆನ್ನಾಲಿಗೆಯನ್ನು ಚಾಚಿತ್ತು. ಕ್ಯಾಬ್ ಕಾರ್ಪೊರೇಶನ್ ಸರ್ಕಲ್ ತಲುಪಿತ್ತು. ಕಣ್ಣು ಮುಚ್ಚಿ ಆ ದಿನದ ಕೆಲಸದ ಬಗ್ಗೆ ಯೋಚನೆಯಲ್ಲಿದ್ದ ನನಗೆ "ಮಾಮ" ಅಂತ ಕರೆದ ಒಂದು ಗಂಡಸಿನ ದ್ವನಿ ಕೇಳಿ ವಾಸ್ತವಕ್ಕೆ ಬಂದಿದ್ದೆ. ಕಿಟಕಿಯ ಹತ್ತಿರ ಒಂದು ಮುಖ ಕಂಡಿತ್ತು, ಹಿಜರಾದು. ಚೆಂದವಾಗಿ ಡ್ರೆಸ್ ಮಾಡಿಕೊಂಡು ದುಡ್ಡಿಗಾಗಿ ಚಾಚಿದ ಕೈ ಕಾಣಿಸಿತು. ನಮ್ಮ ಕ್ಯಾಬ್ ಡ್ರೈವರ್ ದುಡ್ಡಿನ ನಾಣ್ಯವನ್ನು ಚಾಚಿದ್ದ ಕೈಗೆ ನೀಡಿದ್ದರು. ಹಾಗೆ ಕಿಟಕಿಯ ಹೊರಗೆ ಕಣ್ಣಾಯಿಸಿದಾಗ 3-4 ಹಿಜರಾಗಳು ದುಡ್ಡು ಕೇಳುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿತ್ತು. ಮನಸ್ಸು ತನ್ನ ಪಥವನ್ನು ಬದಲಿಸಿ ಅವರ ಬಗ್ಗೆ ಯೋಚನೆಗೆ ಬಿದ್ದಿತ್ತು.
Transgenders ಅಥವಾ ಹಿಜರಾ ಅಂದರೆ ಮಂಗಳ ಮುಖಿಯರು. ಇತ್ತ ಗಂಡಸು ಅಲ್ಲದ ಹೆಂಗಸು ಅಲ್ಲದ ದೇಹವನ್ನು ಹೊತ್ತು ಹೆಂಗಸಿನ ವೇಷದೊಳಗೆ ತಮ್ಮನ್ನು ತಾವೇ ಬೆಸೆದುಕೊಂಡು ಜೀವನ ಸಾಗಿಸುತ್ತಿರುವ ಒಂದು ಪಂಗಡ. ತಾವು ಮಾಡದೇ ಇದ್ದ ತಪ್ಪಿಗೆ, ದೇವರ ಸೃಷ್ಟಿಯ ಕೈಗೊಂಬೆಗಳಾಗಿ ಭೂಮಿಗೆ ಬಂದು ಎಷ್ಟೆಲ್ಲ ಕಷ್ಟವನ್ನು ಕಾಣುತ್ತಿರುವ ಅವರ ಬದುಕಿನ ಬಗ್ಗೆ ಮನಸ್ಸು ಪರಿತಪಿಸಿತ್ತು. ತಮ್ಮ ಅಸ್ಥಿತ್ವವನ್ನು ಕಾಣಲು ಇವರು ಪಟ್ಟ ಬವಣೆ ಅಪಾರ. ಒಬ್ಬೊಬ್ಬರ ಹಿಂದೆಯೂ ಒಂದೊಂದು ಕಥೆ ಅಡಗಿದೆ. ಮನೆಯವರಿಂದ, ನೆರೆಹೊರೆಯವರಿಂದ, ಬಂಧುಗಳಿಂದ, ಸಮಾಜದಿಂದ ತಿರಸ್ಕರಿತ ಪಂಗಡ ಇದು. ಸಮಾಜದ ದೃಷ್ಠಿಯಲ್ಲಿ ತಿರಸ್ಕಾರದ ಭಾವಕ್ಕೊಳಗಾಗುವ ಈ ಮಂಗಳ ಮುಖಿಯರ ನೈಜ ಜೀವನದ ಕಥಾನಕವನ್ನೊಮ್ಮೆ ಅವಲೋಕಿಸಿದರೆ ಕಲ್ಲು ಹೃದಯವೂ ಕರಗದಿರದು. ನಾವೂ ಸಹ ಮನುಷ್ಯರು, ನಮ್ಮನ್ನು ಮನುಷ್ಯರಂತೆ ಕಾಣಿ ಎನ್ನುವ ಅವರ ಕೂಗು ಅಂತೂ ಸಮಾಜಕ್ಕೆ ಮುಟ್ಟಿದೆ. ಇವರ ಬದುಕಿಗೊಂದು ನೆಲೆ ಸಿಕ್ಕಿದೆ, ಸಮಾಜದಲ್ಲಿ ಅವರಿಗೊಂದು ಸ್ಥಾನ ಮಾನ ದೊರಕಿದೆ.
ಈಗ ಬೆಂಗಳೂರಿನಲ್ಲಿ ಇವರನ್ನು ಎಲ್ಲೆಂದರೆ ಅಲ್ಲಿ ಕಾಣಬಹುದು. ಮುಂಚೆಲ್ಲ ನಾನು ಚಿಕ್ಕವಳಿದ್ದಾಗ ಇವರು ಭರೀ ಟೀವೀ ಅಥವಾ ಸಿನೆಮಾಗಳಲ್ಲಿ ಕಾಣಸಿಗುತ್ತಿದ್ದರು. ಇವರನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ತೆಗೆದ ಒಂದು ಹಳೆಯ ಹಿಂದಿ ಚಿತ್ರ "ತಮನ್ನಾ" ನನ್ನ ಮನದ ಮೂಲೆಯಲ್ಲಿ ಇನ್ನೂ ಹಚ್ಚ ಹಸುರಾಗಿದೆ. ಮಹೇಶ್ ಭಟ್ directionನಲ್ಲಿ ಕಂಡ ಈ ಚಿತ್ರದಲ್ಲಿ ಪರೇಶ್ ರಾವಲ್ ಹಿಜರಾ ಪಾತ್ರವನ್ನು ನಿರ್ವಹಿಸಿದ್ದರು. ಪೂಜಾ ಭಟ್ ಈ ಚಿತ್ರದ ನಾಯಕಿ. ಅನಾಥ ಮಗುವಾಗಿದ್ದ ನಾಯಕಿಯನ್ನು ಹಿಜರಾ ಬದಕನ್ನು ಬಾಳುತ್ತಿರುವ ಒಬ್ಬ ವ್ಯಕ್ತಿ ಬೆಳಸುತ್ತಾನೆ. ಆ ಮಗುವಿಗೆ ತಾನು ಹಿಜರಾ ಎನ್ನುವ ಸತ್ಯವನ್ನು ಮರೆಮಾಚಿ ತಂದೆಯಾಗಿ ದೊಡ್ಡವಳನ್ನಾಗಿ ಬೆಳಸುತ್ತಾನೆ. ಆದರೆ ತನ್ನ ಗೆಳತಿಯ ಮದುವೆಯ ಸಂಧರ್ಬದಲ್ಲಿ ತನ್ನ ತಂದೆಯನ್ನು ಹಿಜರಾ ವೇಷದಲ್ಲಿ ನೋಡಿ ಆಘಾತದಿಂದ ಅವನನ್ನು ದಿಕ್ಕರಿಸಿ ಮನೆಯಿಂದ ಹೊರನಡೆಯುತ್ತಾಳೆ ನಾಯಕಿ. ನಂತರ ಮನಸ್ಸು ಪರಿವರ್ತನೆಯಾಗಿ ತನ್ನ ತಂದೆ ಪಟ್ಟ ಕಷ್ಟನನ್ನು ಅರ್ಥಮಾಡಿಕೊಂಡು ಮರಳಿ ಬರುವುದೇ ಈ ಚಿತ್ರದ ಕಥೆ. ಪರೇಶ್ ರಾವಲ್ನ ಮನೋಜ್ಞ ಅಭಿನಯ ಹಿಜರಾ ಪಾತ್ರಕ್ಕೆ ಜೀವ ತುಂಬಿತ್ತು.
ಪೂನಾದ ಲಕ್ಷ್ಮಿ ನಾರಾಯಣ ತ್ರಿಪಾಠಿ ಬಗ್ಗೆ ಹೇಳದೆ ಈ ಲೇಖನವನ್ನು ಮುಗಿಸುವಹಾಗಿಲ್ಲ. ಈಕೆ ಒಬ್ಬ transgender activist. ಹಿಂದಿಯ ಕೆಲವು ಚಿತ್ರಗಳಲ್ಲಿ ನಟಿಸಿರುವಾಕೆ ಹಾಗೂ ಭರತನಾಟ್ಯ ಡ್ಯಾನ್ಸರ್. ಸ್ವತಃ ತಾನೇ transgender ಆಗಿರುವ ಈಕೆ ಸಮಾಜದಲ್ಲಿ ತನ್ನ ಹಿಜರಾ ಪಂಗಡಕ್ಕೆ ನ್ಯಾಯ, ಹಕ್ಕನ್ನು ಒದಗಿಸಲು ಪಟ್ಟ ಶ್ರಮ ಅಪಾರ. She is the first transgender person to represent Asia Pacific in the UN.ಈಕೆ ಹಿಂದಿಯ ರಿಯಾಲಿಟೀ ಶೋ ಬಿಗ್ಗ್ ಬಾಸ್ನಲ್ಲೂ ಸಹ ಬಾಗವಹಿಸಿದ್ದಳು. ಇನ್ನೂ ಮದುರೈನ ಭಾರತಿ ಕಣ್ಣಮ್ಮ ನ ಬಗ್ಗೆ ಹೇಳುವುದಾದರೆ, ಈಕೆ ಮೊದಲ transgender ಕ್ಯಾಂಡಿಡೇಟ್ ಈ ಸಲದ Electionನಲ್ಲಿ ಸ್ಪರ್ಧಿಸುತ್ತಿರುವಾಕೆ. ಈಗ Election ಬ್ಯಾಲಟ್ ಪೇಪರ್ ನಲ್ಲಿ ಜೆಂಡರ್ ವಿಭಾಗದಲ್ಲಿ ಮೇಲ್/ಫೀಮೇಲ್ ಜೊತೆಗೆ ಮತ್ತೊಂದು ಜೆಂಡರ್ ಸೇರ್ಪಡೆಯಾಗಿದೆ. ಹೀಗೆ LGBT ಪಂಗಡಕ್ಕೆ ಸಮಾಜದಲ್ಲಿ ಒಂದು ಸ್ಥಾನ ಮಾನ ದೊರಕಿರುವುದು ಒಂದು ಸಮಾಧಾನದ ವಿಷಯ!!!
* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.