ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು, ಆಧುನೀಕರಣ, ಜೀವನ ಶೈಲಿ, ಸುತ್ತಲಿನ ಪರಿಸರ, ಪಾಶ್ಚ್ಯಾತೀಕರಣ, ತ್ವರಿತ ಗತಿಯಲ್ಲಿ ಸಾಗುತ್ತಿರುವ ನಮ್ಮ ಸೈನ್ಸ್ ಮತ್ತು ಟೆಕ್ನಾಲಜೀ ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಸಾಮಾಜಿಕ ದೃಷ್ಟಿಕೋನದಿಂದ ನೋಡಿದರೆ ಇದು ಕೇವಲ ಬದಲಾವಣೆಯಲ್ಲ, ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು.
ನಮ್ಮ ಪೂರ್ವಿಕರು ಸಮಾಜದ ಆಯಕಟ್ಟಿಗೆ ತಕ್ಕ ಹಾಗೆ ಬದುಕುತ್ತಿದ್ದರು. ವಿಜ್ಞಾನ ಅಷ್ಟೊಂದು ತ್ವರಿತ ಗತಿಯಲ್ಲಿ ಮುಂದುವರಿಯದೆ ಇದ್ದರೂ, ಪಾಶ್ಚ್ಯಾತೀಕರಣದ ಮೋಹಕ್ಕೆ ಬೀಳದೆ, ಆಧುನೀಕರಣವನ್ನು ರೂಢಿಸಿಕೊಳ್ಳದೆ ಸಾಮಾಜಿಕ ಬದುಕಿದೆ ತಮ್ಮನ್ನು ಅಳವಡಿಸಿಕೊಂಡಿದ್ದರು. ಆಹಾರದ ವಿಷಯದಲ್ಲೂ ಕಟ್ಟು ನಿಟ್ಟು. ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದರು. ನೈತಿಕ ಮೌಲ್ಯಗಳು ಸಮಾಜದ ಅಡಿಪಾಯವಾಗಿತ್ತು. ಜನರ ಸೇವೆಯೇ ಸಮಾಜದ ಧ್ಯೇಯವಾಗಿತ್ತು.
ಕಾಲ ಬದಲಾಗಿದೆ. ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಜನರು ತಮ್ಮ ಜೀವನ ಶೈಲಿಯನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬದಲಾಯಿಸಿಕೊಂಡಿದ್ದಾರೆ. ಆಧುನೀಕರಣದ ಮೋಹಕ್ಕೆ ಸಿಲುಕಿದ್ದಾರೆ. ಸೈನ್ಸ್ ಮತ್ತು ಟೆಕ್ನಾಲಜೀ ಮನುಕುಲವನ್ನು ಮೀರಿ ಸಾಗಿದೆ. ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಮಾನವ ಚಂದ್ರ ಗ್ರಹಕ್ಕೆ ಪಾದಾರ್ಪಣೆ ಮಾಡಿ ಬಂದ ಮೇಲೆ, ಭೂಮಿಯನ್ನು ಬಿಟ್ಟು ಬೇರೊಂದು ಗ್ರಹದ ಮೇಲೂ ಮನುಷ್ಯ ವಾಸಿಸಲು ಸಾಧ್ಯ ಎಂದು ಸಾಭೀತುಪಡಿಸಿದ್ದಾನೆ. ಇದರ ಪ್ರಯತ್ನವೇ 'Mission to Mars'.
ಸಾಮಾಜಿಕ ಬದಲಾವಣೆ ಜನರ ಜೀವನದ ಗತಿಯನ್ನು ಬದಲಾಯಿಸಿದೆ. ಭಾಷಾ ಮೌಲ್ಯ ತನ್ನ ವರ್ಚಸನ್ನು ಕಳೆದುಕೊಂಡಿದೆ. ಕಾಲ ತನ್ನ ಪಥವನ್ನು ಬದಲಾಯಿಸಿದೆ. ಜನ ಯಾಂತ್ರಿಕ ಜೀವನಕ್ಕೆ ಒಗ್ಗಿ ಹೋಗಿದ್ದಾರೆ. ಕುರುಡು ಕಾಂಚಾಣ ಮೇಲುಗೈ ಸಾಧಿಸಿದೆ. ಸಮಾಜದಲ್ಲಿನ ಪ್ರತಿಷ್ಟೆ ಮುಖ್ಯವಾಗಿದೆ. ಜೀವನದ ನೈತಿಕ ಮೌಲ್ಯಗಳು ಮೂಲೆ ಗುಂಪಾಗಿವೆ. ಸಮಾಜದಲ್ಲಿ ಕ್ರೌರ್ಯಗಳು ಹೆಚ್ಚಾಗುತ್ತಿವೆ, ಸ್ವೇಚ್ಛಾಚಾರಿಕೆ ಮುಗಿಲು ಮುಟ್ಟಿದೆ. ವಿದೇಶಿ ವ್ಯಾಮೋಹಕ್ಕೆ ಬಿದ್ದ ಜನ ತಮ್ಮ ತನವನ್ನು ಮರೆಯುತ್ತಿದ್ದಾರೆ, ಹಿರಿಯರನ್ನು ಕಡೆಗಣಿಸುತ್ತಿದ್ದಾರೆ. ದೇಶವನ್ನು ಕಾಪಾಡುವ ನಾಯಕರು ತಮ್ಮ ತಮ್ಮ ನಡುವೆಯೇ ಸ್ಥಾನಕ್ಕಾಗಿ ಕಿತ್ತಾಡಿಕೊಳ್ಳುತ್ತಾ ದೇಶವನ್ನು ಕಡೆಗಣಿಸುತ್ತಿದ್ದಾರೆ.
ಇನ್ನು ಜನರ ನಡುವೆ ಪ್ರೀತಿ ಕಮ್ಮಿಯಾಗಿ ಧ್ವೇಷ ಹೆಚ್ಚಾಗುತ್ತಿದೆ. ನಂಬಿಕೆಗಳು ಬದಲಾಗುತ್ತಿವೆ. ಕಾಂಪಿಟೇಶನ್ ಯುಗದಲ್ಲಿ ಜನ ಧಾಪುಗಾಲು ಹಾಕಿ ಮುಂದೆ ಸಾಗಿದ್ದಾರೆ. ಕಲುಷಿತ ವಾತಾವರಣ, ಬದಲಾಗುತ್ತಿರುವ ಜೀವನ ಶೈಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಹೆಣ್ಣು ಮಕ್ಕಳು ತಮ್ಮ ಸ್ವಂತ ಕಾಲ ಮೇಲೆ ತಾವು ನಿಂತಿದ್ದಾರೆ. ಇದೊಂದು ಒಳ್ಳೆಯ ಬದಲಾವಣೆ ಎಂದು ಹೇಳಬಹುದಾದರೂ, ಇದರ ಇನ್ನೊದು ಮುಖ ಅತಿಯಾದ ಸ್ವಾತಂತ್ರ್ಯ ಮನೋಭಾವ.ಡೈವೋರ್ಸ್ ಗಳು ಹೆಚ್ಚಾಗುತ್ತಿವೆ.ತಾಳ್ಮೆ ಕಡಿಮೆಯಾಗುತ್ತಾ ವಿಚಾರವಂತಿಕೆ ಮಸುಕಾಗಿದೆ.
ಇಷ್ಟೆಲ್ಲ ಬದಲಾವಣೆಗಳಿಂದ ಪ್ರಯೋಜನವೇನು ಎಂದು ಒಮ್ಮೆ ಹಿಂದೆ ತಿರುಗಿ ನೋಡಿದರೆ ಕಾಣುವುದು ಬರೀ ಶೂನ್ಯ. ಮನುಷ್ಯ ಬರುವಾಗ ಖಾಲಿ ಕೈ, ಹೋಗುವಾಗ ಖಾಲಿ ಕೈ, ಮಧ್ಯೆ ಬರೀ ಶೂನ್ಯ. ಹೀಗೆ ಕಾಲ ಚಕ್ರ ತಿರುಗುತ್ತಿದೆ!!!
* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.