ಆಗ ತಾನೇ ಹೊಸ Business unitಗೆ ಬಡ್ತಿ ಪಡೆದು entry ಕೊಟ್ಟಿದ್ದೆ. ಅದು ನನಗೆ ಹೊಸ area ಆಗಿತ್ತು. ಆದರೆ adjust ಆಗಲು ಹೆಚ್ಚು ಕಷ್ಟ ಆಗಲಿಲ್ಲ. ನಮ್ಮ ಬಿಸ್ನೆಸ್ ಯೂನಿಟ್ ನ head US ನಲ್ಲಿದ್ದರು. ಅವರೇ ನನ್ನ ಇಂಟರ್ವ್ಯೂ ತೊಗೊಂಡಿದ್ದದ್ದು. ಅವರ ಬಗ್ಗೆ ಹೆಚ್ಚು ಕೇಳಿರಲಿಲ್ಲ. ಆದರೆ ತುಂಬಾ detail oriented person ಅಂತ ಕೇಳಿದ್ದೆ. ಬೇರೆಯವರಿಗೆ ಹೆಚ್ಚು ಮಾತಾಡಲು ಅವಕಾಶ ಕೊಡದೆ ತಾವೇ ಹೆಚ್ಚು ಮಾತನಾಡುತ್ತಿದ್ದರು. ಆದರೆ ನನ್ನ ಇಂಟರ್ವ್ಯೂ Audio call ಮುಖಾಂತರ ನಡೆದಿತ್ತು. ಹಾಗಾಗಿ ಅವರನ್ನು ಮುಖತಃ ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ.
ನನ್ನ ಹೊಸ role ಶುರುವಾಗಿತ್ತು. ಒಂದೆರಡು ತಿಂಗಳು ಕಳೆದ ಮೇಲೆ India ಆಫೀಸ್ ಗೆ ನಮ್ಮ business unitನ Director visit ಮಾಡುವವರಿದ್ದರು. ಸಾಮಾನ್ಯವಾಗಿ Quarterಗೆ ಒಂದು ಸಲ Unitನ head India ಆಫೀಸ್ ಗೆ ಭೇಟಿಕೊಡುವ ಪರಿಪಾಠವಿತ್ತು. ತಮ್ಮ ಇಲ್ಲಿಯ team ಅನ್ನು ಭೇಟಿಮಾಡುವುದಕ್ಕೆ. ಬಂದಾಗ, ಎಲ್ಲರ ಜೊತೆ Face to Face ಭೇಟಿ ಮತ್ತು Offsite ಮೀಟಿಂಗ್ಸ್ ಇರುತಿತ್ತು. ಹಾಗೆ ಈ ಭೇಟಿಯಲ್ಲಿ head ಜೊತೆ ನನ್ನ 1:1 ಮೀಟಿಂಗ್ ಫಿಕ್ಸ್ ಆಗಿತ್ತು. ಮೊದಲ ಸಲ ಮುಖತಃ ಭೇಟಿಯಾಗುತ್ತಿದ್ದೆ. ಅವರು ತುಂಬಾ strict ಅಂತ ಕೇಳಿದ್ದೆ. ಸರಿ ಭೇಟಿಯಾಗುವ ಸಮಯ ಬಂದಿತ್ತು.
ಮೀಟಿಂಗ್ ರೂಮ್ ಗೆ ಹೋದೆ. ಹೆಡ್ ಬಂದರು. ಹೆಸರಿನ ಪರಿಚಯದೊಂದಿಗೆ ಎದಿರು ಬದಿರು ಕುಳಿತೆವು. ಮೊದಲ ಸಲ ಅವರು ನನ್ನನ್ನು ಭೇಟಿಯಾಗುತ್ತಿದ್ದರಿಂದ, ಮೊದಲ 10ನಿಮಿಷ GTKY ಇತ್ತು. ನಾನು ನನ್ನ ಪರಿಚಯ ಮಾಡಿಕೊಂಡು ಕೆಲಸದ ಬಗ್ಗೆ brief ಆಗಿ explain ಮಾಡಿದ್ದೆ. ನಂತರ ಮಾತನಾಡುವುದು ಅವರ ಸರದಿಯಾಗಿತ್ತು. ಮಾತನ್ನು ಶುರು ಮಾಡಿದ್ದರು. ನಾನು ಪರಿಚಯ ಮಾಡಿಕೊಂಡಾಗ ನನ್ನ ಪರ್ಸನಲ್ ವಿಷಯಗಳ ಬಗ್ಗೆ ಹೇಳಿರಲಿಲ್ಲ. ಆದ್ರೆ ಈ ಮನುಷ್ಯ ಕೆಲಸದ ವತ್ತಡದ ಬಗ್ಗೆ ವಿಚಾರಿಸುತ್ತಾ ಹಾಗೆ ಕ್ಯಾಶುಯಲ್ ಆಗಿ "Are you married ?" ಅಂತ ಕೇಳಿದ್ದರು. ತುಂಬಾ ಕ್ಯಾಶುಯಲ್ ಪ್ರಶ್ನೆ. ಆದರೆ ಪ್ರಶ್ನೆ ಕೇಳಿದ ಮೇಲೆ ಕಣ್ಣನ್ನು wink ಮಾಡಿದ್ದರು. ಅದು ನನಗೆ ಇರಿಸು ಮುರಿಸು ತಂದಿತ್ತು. ನಂತರದ ಪ್ರಶ್ನೆ ಮತ್ತೆ uncomfortable ಫೀಲಿಂಗ್ ತಂದು ಕೊಟ್ಟಿತ್ತು. "Is anything on the card ?" ಅಂತ ಕೇಳಿ ಮತ್ತೆ ವಿಂಕ್ ಮಾಡಿದ್ದರು. ಬರೀ ಪ್ರಶ್ನೆ ಕೇಳಿದ್ದರೆ ನಾನು ಕ್ಯಾಶುಯಲ್ ಆಗಿ ಉತ್ತರ ಕೊಟ್ಟಿರುತ್ತಿದೆ. ಆದರೆ ಆ ಪ್ರಶ್ನೆಗಳ ನಂತರದ ಅವರ ಹಾವ ಭಾವ ನನಗೆ ತುಂಬಾ ಇರಿಸು ಮುರಿಸು ತಂದಿತ್ತು. ಬಿಸ್ನೆಸ್ ಯೂನಿಟ್ ಹೆಡ್ ಇಂಥ ವ್ಯಕ್ತಿಯ ಅಂತ ಅನಿಸಿತ್ತು. ಇಂತಹ ವ್ಯಕ್ತಿಯ direction ನಲ್ಲಿ ಕೆಲಸ ಮಾಡಬೇಕ ಅನಿಸಿತ್ತು. ಯಾಕಾದರೂ ಈ ಯೂನಿಟ್ನ ಸೇರ್ಕೊಂಡೆನೋ, ಮುಂದೆ ಹೇಗೆ ಇದೆ ಯೂನಿಟ್ ನಲ್ಲಿ ಮುಂದಿವರಿಯಬೇಕಾಗುತ್ತದೆ ಅಂತೆಲ್ಲ ನೂರಾರು ಯೋಚನೆಗಳು ತಲೆಯಲ್ಲಿ ಚುಚ್ಚುತ್ತಿತ್ತು. ಈ ಎಲ್ಲ ಯೋಚನೆಗಳು ಅರ್ಧ ಕ್ಷಣದಲ್ಲಿ ಮಿಂಚಿ ಮರೆಯಾಯಿತು . ಹೆಡ್ ತಮ್ಮ ಮಾತನ್ನು ಮುಂದುವರೆಸಿದ್ದರು. ಹೊಸ ರೋಲ್ನ expectation ಬಗ್ಗೆ ಹೇಳುತ್ತಿದ್ದರು. ಮಾತಿನ ಉದ್ದಕ್ಕೂ ಕಣ್ಣನ್ನು wink ಮಾಡುತಿದ್ದರು. Oh!ದೊಡ್ಡ ರಿಲೀಫ್ ಸಿಕ್ಕಿತ್ತು. ಆಗ ಅರ್ಥವಾಗಿತ್ತು ಅವರು ಕಣ್ಣನ್ನು ಮಿಟುಕಿಸಿದ್ದು ಯಾವುದೇ intension ಇಂದ ಅಲ್ಲ, ಆದರೆ ಅವರಿಗೆ ಕಣ್ಣಿನ ಪ್ರಾಬ್ಲಮ್ ಇದೆ ಅಂತ ತಿಳಿಯಿತು. ಹಾಗೆ ಮಾತನಾಡುತ್ತಾ ನನ್ನ ಮೀಟಿಂಗ್ ಟೈಮ್ ಮುಗಿದಿತ್ತು. ಅವರಿಗೆ Good day ಅಂತ ಹೇಳಿ ರೂಮ್ ನಿಂದ ಹೊರಬಿದ್ದಿದ್ದೆ.
ಆ ಒಂದು ಕ್ಷಣದ ನನ್ನ ಮನಸ್ಸಿನ ತುಮುಲ, ತಲೆಯಲ್ಲಿ ಬಂದಿದ್ದ ನೂರಾರು ಯೋಚನೆ ಈಗಲೂ ನೆನಪಿಸಿಕೊಂಡರೆ ನಗೆ ಮೂಡುತ್ತದೆ. ಈ ವಿಷಯವನ್ನು ನನ್ನ ಬಿಸ್ನೆಸ್ ಯೂನಿಟ್ ನ colleagues ಜೊತೆ ಹೇಳಿ ಹಂಚಿಕೊಂಡಿದ್ದೆ. ಮೊದಲೇ ಅವರ ಕಣ್ಣಿನ ಸಮಸ್ಯೆಯ ಬಗ್ಗೆ ನನಗೆ ವಿಷಯ ತಿಳಿಸದೆ ಇರುವುದಕ್ಕೆ ಅವರ ಬಗ್ಗೆ ಹುಸಿ ಕೋಪ ವ್ಯಕ್ತಪಡಿಸಿದ್ದೆ. ಎಲ್ಲರೂ ನನ್ನ ಅನುಭವ ಕೇಳಿ ಬಿದ್ದು ಬಿದ್ದು ನಕ್ಕಿದ್ದರು.
ಹೀಗೆ ವಿಷಯ ಪ್ರಸ್ತಾಪಿಸಿದಾಗ, ನನ್ನ ಇನ್ನೊಬ್ಬರು colleague ಇದ್ದರು. ಅವರೂ ಸಹ ನಮ್ಮ ಬಿಸ್ನೆಸ್ ಯೂನಿಟ್ ಗೆ ಬೇರೆ ಯೂನಿಟ್ ನಿಂದ ಬಂದಿದ್ದರು. ನಾನು ನನ್ನ ಅನುಭವವನ್ನು ಹಂಚಿಕೊಂಡಾಗ, ಅವರು ತಮಗಾದ ಪರಿಸ್ಥಿತಿಯನ್ನು ಹೇಳಿದರು. ಅವರೂ ಸಹ ಮೊದಲ ಸಹ ಡೈರೆಕ್ಟರ್ ಜೊತೆ ಮುಖತಃ ಭೇಟಿಯಾಗಿದ್ದರು. ಅವರಿಗೂ ಇವರ ಕಣ್ಣಿನ ಸಮಸ್ಯೆಯ ಬಗ್ಗೆ ಗೊತ್ತಿರಲಿಲ್ಲ. ಅವರಿಗೂ ತಮ್ಮ ಡೈರೆಕ್ಟರ್ ವಿಂಕ್ ಮಾಡಿದ್ದಾಗ ಶಾಕ್ ಆಗಿತ್ತು. ನನ್ನ ಮುಂದೆ ನಿಮ್ಮ ಪರಿಸ್ಥಿತಿಗಿಂತ ನನ್ನದು ಅಧ್ವಾನವಾಗಿತ್ತು ಎಂದರು. When a guy winks at another guy, ನನ್ನ ಪರಿಸ್ಥಿತಿ ಹೇಗಾಗಿತ್ತು ಅಂತ ಯೋಚನೆ ಮಾಡಿ ಎಂದಾಗ, ನಾನು ಬಿದ್ದು ಬಿದ್ದು ನಕ್ಕಿದ್ದೆ. I could imagine his position. ಅಂತೂ ಒಂದು ತಪ್ಪು ಕಲ್ಪನೆ ಎಂಥ ಪ್ರಸಂಗಕ್ಕೆ ಎಡೆಮಾಡಿ ಕೊಡುತ್ತದೆ ಎನ್ನುವುದಕ್ಕೆ ಈ ಪ್ರಸಂಗವೇ ಉತ್ತಮ ಸಾಕ್ಷಿ!!!
*Spelling mistakes ಗಳ ಬಗ್ಗೆ ಕ್ಷಮೆ ಇರಲಿ.