ಒಂದು ಕುತೂಹಲಕಾರಿ ವಿಷಯದೊಂದಿಗೆ ನಿಮ್ಮ ಮುಂದೆ ಬಂದಿದ್ದೀನಿ. ಅದು ಏನು ಅಂತ ಆಶ್ಚರ್ಯ ಪಡುತ್ತಿದ್ದರೆ ಅದೊಂದು ಪಯಣದ ಬಗ್ಗೆ , ಬದುಕಿನ ಕೊನೆಯ ಪಯಣ . ನಾನು ಹೇಳಬಯಸುವ ವಿಷಯ Mars ನ ಕಡೆ ಹೊರಡುವ ಪಯಣ . One way mission to Mars. ಇದನ್ನು ಮೊದಲು ಕೇಳಿದಾಗ ನಂಬಿಕೆ ಬರಲಿಲ್ಲ. ಆಮೇಲೆ ತಿಳಿಯಿತು ಇದು ಖಂಡಿತ joke ಅಲ್ಲ , ನಿಜ ಎಂದು. ವಿಜ್ಞಾನ ಎಷ್ಟು ಮುಂದುವರೆದಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದು ಇದರಿಂದ ತಿಳಿದು ಬರುತ್ತದೆ. ನಮ್ಮ astronauts ಎಷ್ಟೋ ಸಲ space ಗೆ ಪಾದಾರ್ಪಣೆ ಮಾಡಿದ ವಿಷಯ ಹೊಸದೇನಲ್ಲ. ಆದರೆ , ಇದು Mars ಎನ್ನುವ ಗ್ರಹದ ಬಳಿ ಹೋಗಲು ನಮ್ಮ ಮನುಕುಲಕ್ಕೆ ಬಂದ invitation. ಆದರೆ ಇಲ್ಲಿಗೆ ಹೋಗಲು ಸಿಕ್ಕಿರುವಿದು ಬರೀ one way ticket ಮಾತ್ರ. ಅಂದರೆ ಹೋಗಲು ಮಾತ್ರ ಸಾಧ್ಯ ಆದರೆ ಮರಳಿ ಭೂಮಿಗೆ ಬರಲು ಇಲ್ಲಿ ಅವಕಾಶವಿಲ್ಲ. ಅವಕಾಶ ಅನ್ನುವುದಕ್ಕಿಂತ ಬರಲು ಸಾಧ್ಯವೋ ಇಲ್ಲವೋ ಅನ್ನುವುದು ಯಾರಿಗೂ ತಿಳಿಯದ ವಿಷಯ , ಒಂದು ಯಕ್ಷ ಪ್ರಶ್ನೆ. ಇಂತಹ one way ticket ಪಯಣಕ್ಕೆ ಯಾರು ಸಿದ್ದ ಅಂತ ಯೋಚಿಸಿ ನೋಡಿದರೆ ಮತ್ತೊಂದು ಆಶ್ಚರ್ಯವೇ ಕಾದಿದೆ. ನಮ್ಮ ಭಾರತ ದೇಶದಿಂದಲೇ ಸರಿ ಸುಮಾರು 20,000 ಜನರು ಇಲ್ಲಿಗೆ ಹೋಗಲು ತಯಾರಾಗಿದ್ದಾರೆ . ಇನ್ನು ಬೇರೆ ದೇಶಗಳನ್ನೂ ಸೇರಿಸಿದರೆ ಒಟ್ಟು ಸಂಖ್ಯೆ ಲಕ್ಷ ಮುಟ್ಟುತ್ತದೆ. ಭಂಡ ಧೈರ್ಯ ಅನ್ನಬಹುದು. ಯಾರು ತಾನೇ ನಿಗೂಢ ಪ್ರಪಂಚಕ್ಕೆ ಹೋಗಿ ಸಾವಿನ ದವಡೆಗೆ ಬೀಳಲು ಇಚ್ಚಿಸುತ್ತಾರೆ .ಇದರ ಬಗ್ಗೆ ಮಾಹಿತಿ ಹುಡುಕುತ್ತ ಹೋದಾಗ ಹಲವು ವಿಷಯಗಳು ತಿಳಿಯಿತು.
Netherland ನ ಒಂದು non-profit ಸಂಸ್ಥೆ ಈ ಪಯಣವನ್ನು ಹಮ್ಮಿಕೊಂಡಿದೆ . 6 billion US dollors ಇದಕ್ಕೆ ತಗುಲುವ ವೆಚ್ಚ. 2025 ನೆ ವರುಷದಲ್ಲಿ Mars ಗೆ ಮೊದಲ flight takeoff ಆಗುತ್ತಿದೆ . ಈ ಪಯಣದ roadmap ನ ಕೆಲಸ ತೀವ್ರಗತಿಯಿಂದ ಸಾಗಿದೆ . ಜನರನ್ನು ಕರೆದುಕೊಂಡು ಹೋಗುವ flight ತುಂಬಾ powerful ಆಗಿರಬೇಕು. ಅಲ್ಲಿಗೆ ಹೊರಡುವ ಜನರು ಎಲ್ಲ ಸಿದ್ದತೆಯಿಂದ ಹೊರಡಬೇಕು. Mars ನಲ್ಲಿ ವಾಸಿಸಲು ವಾತಾವರಣ ಹೇಗಿರುತ್ತೆ ಎಂದು ತಿಳಿಯದು , ಅಲ್ಲಿ ಕುಡಿಯಲು ನೀರು ದೊರೆಯುತ್ತದ ಎಂದು ತಿಳಿಯದು, ಹೀಗೆ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ. ನಮ್ಮ ತಯಾರಿಯಲ್ಲಿ ನಾವು ಹೊರಡಬೇಕು. ಅಲ್ಲಿಗೆ ಹೋದಮೇಲೆ , ಅಲ್ಲಿಯೇ ತಮ್ಮ ಜಗತ್ತನ್ನು ಸೃಷ್ಟಿಸಿ ಕೊಳ್ಳಬೇಕು . ನಮ್ಮ ಆಹಾರವನ್ನು ನಾವೇ ಬೆಳೆದು ತಿನ್ನಬೇಕು. ಅಲ್ಲಿಗೆ ಹೋದ ಮೇಲೆ ಮತ್ತೆ ಮರಳಿ ತಮ್ಮ ಗೂಡಿಗೆ ವಾಪಸ್ ಆಗುವ ಪ್ರಶ್ನೆಯೇ ಇಲ್ಲ. You are there for the rest of your life. ಈ ನಿಜಾಂಶವನ್ನು ಅರಿತವರು ಮಾತ್ರ ಇಲ್ಲಿಗೆ ಹೋಗಲು ಸಿದ್ದರಾಗಬೇಕು.
ತಮಾಷೆಯ ವಿಷಯ ಏನೆಂದರೆ, ಆಫೀಸ್ ನಲ್ಲಿ ಈ ವಿಷಯದ ಪ್ರಸ್ತಾಪ ಬಂದಾಗ ಕೆಲವರು ತಮಗೆ ಇಷ್ಟವಿಲ್ಲದವರನ್ನು Mars ಗೆ ಕಲಿಸುವ ಪ್ಲಾನ್ ಹಾಕಿದ್ದರು. ಅಂತು ತಮ್ಮ ಅತ್ತೆಯರು ಇಲ್ಲಿಗೆ ಹೋಗಲು ಸೂಕ್ತ ಎಂದು ಹಾಸ್ಯ ಮಾಡುತ್ತಿದ್ದರು.
"ಎಲ್ಲಿಗೆ ಪಯಣ, ಯಾವುದೋ ದಾರಿ, ಏಕಾಂಗಿ ಸಂಚಾರಿ...." ಹಾಡಿನ ಸಾಲು ಮನದ ಮೂಲೆಯಲ್ಲಿ ಹಾದು ಹೋಯಿತು!!!
*Spelling mistakes ಗಳ ಬಗ್ಗೆ ಕ್ಷಮೆ ಇರಲಿ.
*Spelling mistakes ಗಳ ಬಗ್ಗೆ ಕ್ಷಮೆ ಇರಲಿ.