Saturday, 9 August 2014

ಸ್ಟೀವ್ ಜಾಬ್ಸ್

ಸ್ಟೀವ್ ಜಾಬ್ಸ್
                       - ಒಂದು ನಮನ

Steve Jobs ಭಯಾಗ್ರಫೀ  ಓದಿ ಮುಗಿಸಿದ್ದೆಈ ಪುಸ್ತಕ ನನ್ನ ಕೈಗೆ ಸಿಕ್ಕಿದ್ದು ಒಂದು ಅನಿರೀಕ್ಷಿತ ಅನ್ನಬಹುದು. ನನ್ನ ಬಾಸ್ ಗೆ sendoff ಗಿಫ್ಟ್ ಎಂದು ತಂದ ಈ ಪುಸ್ತಕ ಅವರ ಬಳಿ ಆಗಲೇ ಒಂದು ಪ್ರತಿ ಇದ್ದುದರಿಂದ ನನ್ನ ಕೈ ಸೇರಿತ್ತು. ಪುಸ್ತಕ ಓದುವುದಕ್ಕೆ ಮುಂಚೆ ಭಯಾಗ್ರಫೀ ಅಂದರೆ ತುಂಬಾ ಬೋರ್ ಆಗಬಹುದು ಎಂದುಕೊಂಡಿದ್ದೆ. ಆದರೆ ಓದಲು ಶುರು ಮಾಡಿದ ಮೇಲೆ ಬಂದಿದ್ದ ಯೋಚನೆ ಬದಲಾಗಿತ್ತು. ಇದೊಂದು ಅಧ್ಬುತ ಪುಸ್ತಕ ಎನ್ನಬಹುದು, an inspirational one. ಓದಿ ಮುಗಿಸಿದ ಮೇಲೆ wow ಅಂತ ಒಂದು ಉದ್ಗಾರ ಹೊರಬಿದ್ದಿತ್ತು. ಲೇಖಕ Walter Isaacson, ತುಂಬಾ ಅಚ್ಚುಕಟ್ಟಾಗಿ ಸ್ಟೀವ್ ಜಾಬ್ಸ್ ನ  ಜೀವನಚರಿತ್ರೆಯನ್ನು ತನ್ನ ಲೇಖನಿಯಲ್ಲಿ ಬಿಂಬಿಸಿದ್ದ. ಜಾಬ್ಸ್ ನ ಒಳ ಹೊರಗುಗಳನ್ನು, ಅವರ ಒರಟುತನ, ಕಾರ್ಯದಕ್ಷತೆ ಎಲ್ಲವನ್ನೂ ಅಧ್ಬುತವಾಗಿ ಬರೆದಿದ್ದರು.

ಸ್ಟೀವ್ ಜಾಬ್ಸ್, ಡಿಜಿಟಲ್ ಸಾಮ್ರಾಜ್ಯದ ಅನಘ್ಯ ಒಡೆಯನಾಗಿದ್ದ. ಅವರ ತೀಕ್ಷ್ಣ ಬುದ್ದಿ, ಮಾಡಲೇಬೇಕೆಂಬ ಹಟ, ಏನೇ ಬಂದರೂ ಎದುರಿಸಿ ನಿಲ್ಲುವ ಛಲ, ಗುರಿ ಅವರನ್ನು ಒಂದು ಉನ್ನತ ಸ್ಥಾನಕ್ಕೆ ಕೊಂಡೊಯ್ದಿತ್ತು. ಕಿರಿ ವಯಸ್ಸಿನಲ್ಲಿಯೇ ಎಲೆಕ್ಟ್ರಾನಿಕ್ಸ್ ಪ್ರಪಂಚಕ್ಕೆ ಸಿಕ್ಕ ಅವರ exposure,ತಂದೆಯಿಂದ ಕಲಿತ ಮೆಕ್ಯಾನಿಕ್ಸ್, ಸುತ್ತ ಮುತ್ತಲಿನ ವಾತಾವರಣ, ಸ್ನೇಹಿತರು, ಕಾಲೇಜ್, ಪ್ರೊಫೆಸ್ಸರ್ಸ್, ಅವರ ಆಧ್ಯಾತ್ಮಿಕ ಒಲವು, ಸಾತ್ವಿಕ ಆಹಾರದ ಅಭ್ಯಾಸವನ್ನು ರೂಢಿಸಿಕೊಂಡ ಬಗೆ, ಮೆಡಿಟೇಶನ್ ಎಲ್ಲವೂ ಅವರನ್ನು ಪಕ್ವ ಮನುಷ್ಯನನ್ನಾಗಿಸಿತ್ತು.

ಸ್ಟೀವ್, ಒಬ್ಬ Perfectionist. ಹಿಡಿದ ಕೆಲಸವನ್ನು ಮುಗಿಸದೆ ಬಿಡುತ್ತಿರಲಿಲ್ಲ. ಆ ಕೆಲಸದಲ್ಲಿಯ ನೈಪುಣ್ಯತೆ, ಪಕ್ವತೆ, ಪರ್ಫೆಕ್ಶನ್, ಸಣ್ಣ ಸಣ್ಣ ವಿಚಾರದಲ್ಲಿ ಗಮನ ಹರಿಸುವ ಬಗೆ, ಸಂಗತಿಗಳನ್ನು ಸಂಗ್ರಹಿಸುವ ಬಗೆ, ವಿಚಾರ ಮಂಥನ ಅಧ್ಬುತ. ಇವರ ತೀಕ್ಷ್ಣ ವಿಚಾರಕ್ಕೆ ಯಾರೂ ಸರಿಸಮಾನವಾಗಿ ನಿಲ್ಲಲು ಸಾಧವಿಲ್ಲತನ್ನದೇ ಆದ ವಿಚಾರವಂತಿಕೆಯಿಂದ ತನ್ನ Apple ಸಾಮ್ರಾಜ್ಯವನ್ನು ಕಟ್ಟಿದ್ದರು. 'Think Different' ಎನ್ನುವುದು ಈತನ ಮಂತ್ರವಾಗಿತ್ತು. ಇದನ್ನೇ Appleನ ವಿಷನ್ ಸ್ಟೇಟ್ಮೆಂಟ್ ಆಗಿ ಮಾಡಿದ್ದರು. ಈ ವಿಷನ್ ಅಡಿ ಹಲವಾರು ಅಧ್ಬುತ ಪ್ರಾಡಕ್ಟ್ಸ್ ಗಳು ಮಾರ್ಕೆಟ್ ಗೆ ಬಂದು ಫಲಕಾರಿಯಾಗಿದ್ದವು. ಸ್ಟೀವ್ ಪ್ರಕಾರ  'Drive for perfection meant caring about craftsmanship even if the parts unseen'.  

ಈತ ಒಬ್ಬ Spiritual ಮನುಷ್ಯ. Zen Buddhismನ ಹಿಂಬಾಲಕ. ಚಿಕ್ಕ ವಯಸ್ಸಿನಲ್ಲಿಯೇ  ಜ್ಞಾನೋದಯದ ಅನ್ವೇಷಣೆಯಲ್ಲಿ ತನ್ನ ಗುರುವಾದ ನೀಂ ಕರೋಲಿ ಬಾಬಾನ ಭೇಟಿಯಾಗುವ ಉದ್ದೇಶದಿಂದ ಭಾರತಕ್ಕೆ ಬಂದು ಇಲ್ಲಿ ಸುಮಾರು 6-7 ತಿಂಗಳುಗಳ ಕಾಲ ಹಿಮಾಲಯದ ತಪ್ಪಲಿನಲ್ಲಿ ಇದ್ದರು. ಸುಮಾರು ಕಾಲ ಯೋಗಿಗಳ ಜೊತೆ ಸುತ್ತಾಡಿ, Buddhism, Hinduism, ಹಾಗೂ spiritualismನ ಅಭ್ಯಾಸ ಮಾಡಿ ಕೊನೆಗೆ ವಾಪಸ್ ತನ್ನ ದೇಶಕ್ಕೆ ಮರಳಿದ್ದರು. ತನ್ನ ಜೀವನ ಪರ್ಯಂತ ಕೆಲವೊಂದು ಆಧ್ಯಾತ್ಮಿಕ ಸತ್ವಗಳನ್ನು ಪಾಲಿಸಿಕೊಂಡು ಬಂದಿದ್ದರು.

ಈತ ಒಬ್ಬ Futurist. ಈತ ಮಾರ್ಕೆಟ್ ನ ಸರ್ವೇ ಮಾಡಿ ಜನರಿಗೆ ಬೇಕಾದ ಪ್ರಾಡಕ್ಟ್ಸ್ ಅನ್ನು ತಯಾರುಮಾಡುತ್ತಿರಲಿಲ್ಲ. ಜನರ ಯೋಚನೆಗೂ ಸಿಲುಕದಂತಹ ಫೀಚರ್ಸ್ ಅನ್ನು ಒಳಗೊಂಡ ಪ್ರಾಡಕ್ಟ್ಸ್ ಅನ್ನು ಮಾಡಲು ಪ್ರೇರೇಪಿಸುತ್ತಿದ್ದ. ಮೊದಲಿಗೆ ಈತನ ಐಡಿಯಾ ಯಾರೂ ಒಪ್ಪದೆ ಇದ್ದರೂ, ಅದರ ಹಿಂದೆ ಇರುವ ಯೋಚನೆಯನ್ನು ಅರಿತಾಗ ಸ್ಟೀವ್ ಹೇಳಿದ ಮಾತು ನಿಜ ಅನ್ನಿಸುತ್ತಿತ್ತು. when he speaks, he sees the future and make sure it works. ಈತನ ಪ್ರಾಡಕ್ಟ್ಸ್ ಜನರ ಕಲ್ಪನೆಗೂ ಸಿಲುಕದ ತಯಾರಿಕೆಯಾಗಿರುತ್ತಿತ್ತು. ಈತನ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಸಾಧನಗಳ ಹಿಂದಿನ ಪ್ರೇರಕ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು.

ಸ್ಟೀವ್, ಹಟವಾದಿ, ಖಂಡಿತವಾದಿ, ಒಬ್ಬ Critic. ಮುಖದ ಮೇಲೆ ಹೊಡೆಯುವ ಹಾಗೆ ಮಾತಾಡುವ ಸ್ವಭಾವಅವರು ಕೆಲವೊಂದು ಸಲ ತಮ್ಮ ಸಹವರ್ತಿಗಳ ಜೊತೆ ತುಂಬಾ  ಕಠಿಣವಾಗಿ ವರ್ತಿಸುತ್ತಿದ್ದರು. ತನ್ನ ಸ್ವಭಾವದಿಂದ ಎಷ್ಟೋ ಜನರ ಜೊತೆ ಧ್ವೇಷ ಕಟ್ಟಿಕೊಂಡಿದ್ದರು. ಆದರೆ ಅವರ ಕೆಲಸದ ನೈಪುಣ್ಯತೆ, ಆಪಲ್ ಎಂಪ್ಲಾಯೀಸ್ ಅಸಾಧ್ಯ ಎಂದು ಅರಿತಿದ್ದ ಮಹತ್ತರ ಪ್ರಾಡಕ್ಟ್ಸ್ ಅನ್ನು ತಯಾರು ಮಾಡಲು ಪ್ರೇರೇಪಿಸುತ್ತಿತ್ತು. ಇಂತಹ ಅಧ್ಬುತ ಕಲೆಗಾರಿಕೆ ಸ್ಟೀವ್ ನಲ್ಲಿ ಇತ್ತುಎಲ್ಲಕ್ಕಿಂತ ಹೆಚ್ಚಾಗಿ ಜಾಬ್ಸ್ ಸುತ್ತ ಇದ್ದ ಉದ್ಯಮಶೀಲತೆಯ ಪ್ರಭಾವಳಿಯು ಇತರರ ಪಾಲಿಗೆ ನಿರಂತರವಾಗಿ ಸ್ಪೂರ್ತಿದಾಯಕವಾಗಿರುತ್ತಿತ್ತು.

ಸ್ಟೀವ್, Simplicity, ಸರಳತೆಯಲ್ಲಿ ನಂಬಿಕೆ ಇಟ್ಟವರು. ಇದನ್ನು ತಮ್ಮ ಪರ್ಸನಲ್ ಹಾಗೂ ಪ್ರೊಫೆಶನಲ್ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆಹಾರ, ಉಡುಗೆ ತೊಡುಗೆ, ಜೀವನ ನಡೆಸಿದ ರೀತಿ ಎಲ್ಲವೂ ಈತನ ಸರಳ ಸಿದ್ದಾಂತವನ್ನು ತೋರಿಸುತ್ತದೆಇನ್ನು ಕಂಪನಿಯ ಪ್ರಾಡಕ್ಟ್ ವಿಷಯದಲ್ಲಿಯೂ ಸಹ ಇದನ್ನು ಪಾಲಿಸುತ್ತಿದ್ದರು. ಯಾವುದೇ ಪ್ರಾಡಕ್ಟ್ ಅನ್ನು ತಯಾರು ಮಾಡಬೇಕಿದ್ದರೂ ಸರಳ ವಿನ್ಯಾಸಗಳ ಟೆಕ್ನೀಕ್ ಅನ್ನು ಬಳಸುತ್ತಿದ್ದರು. ಸ್ಟೀವ್ ಪ್ರಕಾರ "It takes a lot of hard work to make something simple, to truly understand the underlying challenges and come up with elegant solutions". ಈ ಸರಳತೆಯು ಇವರು ರೂಪಿಸಿದ ಐಫೋನ್ ಮತ್ತು ಐಪಾಡ್ಗಳಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ.

ಈತ ಒಬ್ಬ Magician, ಮೋಡಿಗಾರ. ತನ್ನ ಮೋಡಿಯಿಂದ ಎದುರಿಗಿನ ವ್ಯಕ್ತಿಯನ್ನು ಗೆಲ್ಲುತ್ತಿದ್ದರು. ಇವರ ಪ್ರಾಡಕ್ಟ್ಸ್ ಲಾಂಚ್ ಸ್ಪೀಚ್ ಎಲ್ಲರನ್ನು ಮೋಡಿ ಮಾಡುತ್ತಿತ್ತು. Steve had the charisma and corporate clout that would lead them to "make a dent in the universe". ಅದ್ಭುತವಾದ ಸಾಫ್ಟ್ವೇರ್ ಸಂಸ್ಥೆಯ ವಿಶಾಲ ಸಾಮ್ರಾಜ್ಯ ಕಟ್ಟಿ ಹೋಗಿದ್ದಾರೆ.

ಈತ ಒಬ್ಬ Entrepreneur, ಯಶಸ್ವಿ ಉದ್ಯಮಿ. Pixer ಹಾಗೂ Apple ಕಂಪನಿಗಳನ್ನು ಕಟ್ಟಿ ಬೆಳಸಿದ್ದರು. ಸ್ಟೀವ್ ಪ್ರಕಾರ " My goal has always been not only to make great products, but to build great companies". ನಾವೆಲ್ಲ ಈಗ ತುಂಬ ಇಷ್ಟಪಡುವ ಡಿಜಿಟಲ್ ಸಾಧನಗಳಾದ ಐಟ್ಯೂನ್ಸ್, ಐಫೋನ್, ಐಪಾಡ್, ಮ್ಯಾಕ್ಸ್ ಮುಂತಾದವುಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಲು ಅವರಿಂದ ಸಾಧ್ಯವಾಗಿತ್ತು. ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆ ಕಟ್ಟಿ ಬೆಳೆಸಿದ ಹೆಗ್ಗಳಿಕೆಯೂ ಅವರದ್ದು.ಇವರು ಎಂದೂ ಲಾಭಾಂಶಕಾಗಿ ಅದ್ಭುತ ಪ್ರಾಡಕ್ಟ್ಸ್ಗಳನ್ನು ಮಾರ್ಕೆಟ್ ಗೆ ಬಿಡುಗಡೆಮಾಡಲಿಲ್ಲ. ಹಣ ಎಂದೂ ಇವರ ಜೀವನದ ಪ್ರಮುಖ ಅಂಶ ಆಗಿರಲಿಲ್ಲ.

ಜಗತ್ತು ಕಂಡ ಒಬ್ಬ ಅತ್ಯಂತ ಬುದ್ದಿವಂತ ಮನುಷ್ಯ ಸ್ಟೀವ್. ಇವರ ಅಗಲಿಕೆ ಪ್ರಪಂಚಕ್ಕೆ ಒಂದು ತುಂಬಲಾರದ ನಷ್ಟವಾಗಿದೆ. Apple ಒಬ್ಬ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡಿದೆ. ತನಗಿದ್ದ ಪ್ಯಾನ್ಕ್ರಿಯಾಸ್ ಕ್ಯಾನ್ಸರ್ ಅನ್ನು ಸರಿಯಾಗಿ ಗಣನೆಗೆ ತೆಗೆದುಕೊಳ್ಳದೆ ಇದ್ದ ಪರಿಣಾಮ, ಅದು ನಿಧಾನವಾಗಿ ಹರಡಿ ಲಿವರ್ ಅನ್ನು ಡ್ಯಾಮೇಜ್ ಮಾಡಿತ್ತು. ಇನ್ನೂ ತನ್ನದೇ ಆದ ಟ್ರೀಟ್ಮೆಂಟ್ ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂದು ಅರಿತು ಲಿವರ್ ಟ್ರ್ಯಾನ್ಸ್ಪ್ಲ್ಯಾಂಟ್ ಗೆ ಒಪ್ಪಿದ್ದರು. ಆದರೂ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಅದು ಜಾಬ್ ಅನ್ನು ಸ್ವಲ್ಪ ಸ್ವಲ್ಪವಾಗಿ ಬಲಿತೆಗೆದು ಕೊಂಡಿತ್ತುತನ್ನ ಕಡೆ ಸಮಯದಲ್ಲಿಯೂ ಸಹ, ದೇಹಪರಿಸ್ಥಿತಿ ಕೆಲಸ ಮಾಡಲು ಆಸ್ಪದ ಕೊಡದೆ ಇದ್ದರೂ ಸಹ ತನ್ನ ಮನೋಛಲದಿಂದ ಕೊನೆಯವರೆಗೂ ಕೆಲಸ ಮಾಡಿದರು. ಇದು ಇವರ ಕೆಲಸದಲ್ಲಿಯ  ಶ್ರದ್ದೆಯನ್ನು ಸೂಚಿಸುತ್ತದೆ. ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂತಿದಾಯಕರಾಗಿದ್ದಾರೆ.

ಸ್ಟೀವ್, ಮತ್ತೆ ಹುಟ್ಟಿ ಬರಲಿ ಎನ್ನುವುದು ನಮ್ಮೆಲ್ಲರ ಆಶಯ!!!!

* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.

Sunday, 11 May 2014

ಮಂಗಳ ಮುಖಿಯರು

ಕ್ಯಾಬ್ನಲ್ಲಿ ಆಫೀಸ್ಗೆ ಹೊರಟಿದ್ದೆ. ಬಿಸಿಲಿನ ಜ್ವಾಲೆ ಬೆಳಗ್ಗಿನಿಂದಲೇ ತನ್ನ ಕೆನ್ನಾಲಿಗೆಯನ್ನು ಚಾಚಿತ್ತು. ಕ್ಯಾಬ್ ಕಾರ್ಪೊರೇಶನ್ ಸರ್ಕಲ್ ತಲುಪಿತ್ತು. ಕಣ್ಣು ಮುಚ್ಚಿ ದಿನದ ಕೆಲಸದ ಬಗ್ಗೆ ಯೋಚನೆಯಲ್ಲಿದ್ದ ನನಗೆ "ಮಾಮ" ಅಂತ ಕರೆದ ಒಂದು ಗಂಡಸಿನ ದ್ವನಿ ಕೇಳಿ ವಾಸ್ತವಕ್ಕೆ ಬಂದಿದ್ದೆ. ಕಿಟಕಿಯ ಹತ್ತಿರ ಒಂದು ಮುಖ ಕಂಡಿತ್ತು, ಹಿಜರಾದು. ಚೆಂದವಾಗಿ ಡ್ರೆಸ್ ಮಾಡಿಕೊಂಡು ದುಡ್ಡಿಗಾಗಿ ಚಾಚಿದ ಕೈ ಕಾಣಿಸಿತು. ನಮ್ಮ ಕ್ಯಾಬ್ ಡ್ರೈವರ್ ದುಡ್ಡಿನ ನಾಣ್ಯವನ್ನು ಚಾಚಿದ್ದ ಕೈಗೆ ನೀಡಿದ್ದರು. ಹಾಗೆ ಕಿಟಕಿಯ ಹೊರಗೆ ಕಣ್ಣಾಯಿಸಿದಾಗ 3-4 ಹಿಜರಾಗಳು ದುಡ್ಡು ಕೇಳುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿತ್ತು. ಮನಸ್ಸು ತನ್ನ ಪಥವನ್ನು ಬದಲಿಸಿ ಅವರ ಬಗ್ಗೆ ಯೋಚನೆಗೆ ಬಿದ್ದಿತ್ತು.

Transgenders ಅಥವಾ ಹಿಜರಾ ಅಂದರೆ ಮಂಗಳ ಮುಖಿಯರು. ಇತ್ತ ಗಂಡಸು ಅಲ್ಲದ ಹೆಂಗಸು ಅಲ್ಲದ ದೇಹವನ್ನು ಹೊತ್ತು ಹೆಂಗಸಿನ ವೇಷದೊಳಗೆ ತಮ್ಮನ್ನು ತಾವೇ ಬೆಸೆದುಕೊಂಡು ಜೀವನ ಸಾಗಿಸುತ್ತಿರುವ ಒಂದು ಪಂಗಡ. ತಾವು ಮಾಡದೇ ಇದ್ದ ತಪ್ಪಿಗೆ, ದೇವರ ಸೃಷ್ಟಿಯ ಕೈಗೊಂಬೆಗಳಾಗಿ ಭೂಮಿಗೆ ಬಂದು ಎಷ್ಟೆಲ್ಲ ಕಷ್ಟವನ್ನು ಕಾಣುತ್ತಿರುವ ಅವರ ಬದುಕಿನ ಬಗ್ಗೆ ಮನಸ್ಸು ಪರಿತಪಿಸಿತ್ತು. ತಮ್ಮ ಅಸ್ಥಿತ್ವವನ್ನು ಕಾಣಲು ಇವರು ಪಟ್ಟ ಬವಣೆ ಅಪಾರಒಬ್ಬೊಬ್ಬರ ಹಿಂದೆಯೂ ಒಂದೊಂದು ಕಥೆ ಅಡಗಿದೆ. ಮನೆಯವರಿಂದ, ನೆರೆಹೊರೆಯವರಿಂದ, ಬಂಧುಗಳಿಂದ, ಸಮಾಜದಿಂದ ತಿರಸ್ಕರಿತ ಪಂಗಡ ಇದುಸಮಾಜದ ದೃಷ್ಠಿಯಲ್ಲಿ ತಿರಸ್ಕಾರದ ಭಾವಕ್ಕೊಳಗಾಗುವ ಮಂಗಳ ಮುಖಿಯರ ನೈಜ ಜೀವನದ ಕಥಾನಕವನ್ನೊಮ್ಮೆ ಅವಲೋಕಿಸಿದರೆ ಕಲ್ಲು ಹೃದಯವೂ ಕರಗದಿರದು. ನಾವೂ ಸಹ ಮನುಷ್ಯರು, ನಮ್ಮನ್ನು ಮನುಷ್ಯರಂತೆ ಕಾಣಿ ಎನ್ನುವ ಅವರ ಕೂಗು ಅಂತೂ ಸಮಾಜಕ್ಕೆ ಮುಟ್ಟಿದೆ. ಇವರ ಬದುಕಿಗೊಂದು ನೆಲೆ ಸಿಕ್ಕಿದೆ, ಸಮಾಜದಲ್ಲಿ ಅವರಿಗೊಂದು ಸ್ಥಾನ ಮಾನ ದೊರಕಿದೆ.

ಈಗ ಬೆಂಗಳೂರಿನಲ್ಲಿ ಇವರನ್ನು ಎಲ್ಲೆಂದರೆ ಅಲ್ಲಿ ಕಾಣಬಹುದು. ಮುಂಚೆಲ್ಲ ನಾನು ಚಿಕ್ಕವಳಿದ್ದಾಗ ಇವರು  ಭರೀ ಟೀವೀ ಅಥವಾ ಸಿನೆಮಾಗಳಲ್ಲಿ ಕಾಣಸಿಗುತ್ತಿದ್ದರು. ಇವರನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ತೆಗೆದ ಒಂದು ಹಳೆಯ ಹಿಂದಿ ಚಿತ್ರ "ತಮನ್ನಾ" ನನ್ನ ಮನದ ಮೂಲೆಯಲ್ಲಿ ಇನ್ನೂ ಹಚ್ಚ ಹಸುರಾಗಿದೆ. ಮಹೇಶ್ ಭಟ್ directionನಲ್ಲಿ ಕಂಡ ಚಿತ್ರದಲ್ಲಿ ಪರೇಶ್ ರಾವಲ್ ಹಿಜರಾ ಪಾತ್ರವನ್ನು ನಿರ್ವಹಿಸಿದ್ದರು. ಪೂಜಾ ಭಟ್ ಚಿತ್ರದ ನಾಯಕಿ. ಅನಾಥ ಮಗುವಾಗಿದ್ದ ನಾಯಕಿಯನ್ನು ಹಿಜರಾ ಬದಕನ್ನು ಬಾಳುತ್ತಿರುವ ಒಬ್ಬ ವ್ಯಕ್ತಿ ಬೆಳಸುತ್ತಾನೆ. ಮಗುವಿಗೆ ತಾನು ಹಿಜರಾ ಎನ್ನುವ ಸತ್ಯವನ್ನು ಮರೆಮಾಚಿ ತಂದೆಯಾಗಿ ದೊಡ್ಡವಳನ್ನಾಗಿ ಬೆಳಸುತ್ತಾನೆ. ಆದರೆ ತನ್ನ ಗೆಳತಿಯ ಮದುವೆಯ ಸಂಧರ್ಬದಲ್ಲಿ ತನ್ನ ತಂದೆಯನ್ನು ಹಿಜರಾ ವೇಷದಲ್ಲಿ ನೋಡಿ ಆಘಾತದಿಂದ ಅವನನ್ನು ದಿಕ್ಕರಿಸಿ ಮನೆಯಿಂದ ಹೊರನಡೆಯುತ್ತಾಳೆ ನಾಯಕಿ. ನಂತರ ಮನಸ್ಸು ಪರಿವರ್ತನೆಯಾಗಿ ತನ್ನ ತಂದೆ ಪಟ್ಟ ಕಷ್ಟನನ್ನು ಅರ್ಥಮಾಡಿಕೊಂಡು ಮರಳಿ ಬರುವುದೇ ಚಿತ್ರದ ಕಥೆ. ಪರೇಶ್ ರಾವಲ್ನ ಮನೋಜ್ಞ ಅಭಿನಯ ಹಿಜರಾ ಪಾತ್ರಕ್ಕೆ ಜೀವ ತುಂಬಿತ್ತು.

ಪೂನಾದ ಲಕ್ಷ್ಮಿ ನಾರಾಯಣ ತ್ರಿಪಾಠಿ ಬಗ್ಗೆ ಹೇಳದೆ ಲೇಖನವನ್ನು ಮುಗಿಸುವಹಾಗಿಲ್ಲ. ಈಕೆ ಒಬ್ಬ transgender activist. ಹಿಂದಿಯ ಕೆಲವು ಚಿತ್ರಗಳಲ್ಲಿ ನಟಿಸಿರುವಾಕೆ ಹಾಗೂ ಭರತನಾಟ್ಯ ಡ್ಯಾನ್ಸರ್. ಸ್ವತಃ ತಾನೇ transgender ಆಗಿರುವ ಈಕೆ ಸಮಾಜದಲ್ಲಿ ತನ್ನ ಹಿಜರಾ ಪಂಗಡಕ್ಕೆ ನ್ಯಾಯ, ಹಕ್ಕನ್ನು ಒದಗಿಸಲು ಪಟ್ಟ ಶ್ರಮ ಅಪಾರ. She is the first transgender person to represent Asia Pacific in the UN.ಈಕೆ  ಹಿಂದಿಯ ರಿಯಾಲಿಟೀ ಶೋ ಬಿಗ್ಗ್ ಬಾಸ್ನಲ್ಲೂ ಸಹ ಬಾಗವಹಿಸಿದ್ದಳು. ಇನ್ನೂ ಮದುರೈನ ಭಾರತಿ ಕಣ್ಣಮ್ಮ ಬಗ್ಗೆ ಹೇಳುವುದಾದರೆ, ಈಕೆ ಮೊದಲ transgender ಕ್ಯಾಂಡಿಡೇಟ್ ಸಲದ Electionನಲ್ಲಿ ಸ್ಪರ್ಧಿಸುತ್ತಿರುವಾಕೆ. ಈಗ Election ಬ್ಯಾಲಟ್ ಪೇಪರ್ ನಲ್ಲಿ ಜೆಂಡರ್ ವಿಭಾಗದಲ್ಲಿ ಮೇಲ್/ಫೀಮೇಲ್ ಜೊತೆಗೆ ಮತ್ತೊಂದು ಜೆಂಡರ್ ಸೇರ್ಪಡೆಯಾಗಿದೆ. ಹೀಗೆ LGBT ಪಂಗಡಕ್ಕೆ ಸಮಾಜದಲ್ಲಿ ಒಂದು ಸ್ಥಾನ ಮಾನ ದೊರಕಿರುವುದು ಒಂದು ಸಮಾಧಾನದ ವಿಷಯ!!!

* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.

Wednesday, 19 March 2014

ಕಾಲ ಚಕ್ರ!

ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು, ಆಧುನೀಕರಣ, ಜೀವನ ಶೈಲಿ, ಸುತ್ತಲಿನ ಪರಿಸರ, ಪಾಶ್ಚ್ಯಾತೀಕರಣ, ತ್ವರಿತ ಗತಿಯಲ್ಲಿ ಸಾಗುತ್ತಿರುವ ನಮ್ಮ ಸೈನ್ಸ್ ಮತ್ತು ಟೆಕ್ನಾಲಜೀ ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಸಾಮಾಜಿಕ ದೃಷ್ಟಿಕೋನದಿಂದ  ನೋಡಿದರೆ ಇದು ಕೇವಲ ಬದಲಾವಣೆಯಲ್ಲ, ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು.

ನಮ್ಮ ಪೂರ್ವಿಕರು ಸಮಾಜದ ಆಯಕಟ್ಟಿಗೆ ತಕ್ಕ ಹಾಗೆ ಬದುಕುತ್ತಿದ್ದರು. ವಿಜ್ಞಾನ ಅಷ್ಟೊಂದು ತ್ವರಿತ ಗತಿಯಲ್ಲಿ ಮುಂದುವರಿಯದೆ ಇದ್ದರೂ, ಪಾಶ್ಚ್ಯಾತೀಕರಣದ ಮೋಹಕ್ಕೆ ಬೀಳದೆ, ಆಧುನೀಕರಣವನ್ನು ರೂಢಿಸಿಕೊಳ್ಳದೆ ಸಾಮಾಜಿಕ ಬದುಕಿದೆ ತಮ್ಮನ್ನು ಅಳವಡಿಸಿಕೊಂಡಿದ್ದರು. ಆಹಾರದ ವಿಷಯದಲ್ಲೂ ಕಟ್ಟು ನಿಟ್ಟು. ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದರು. ನೈತಿಕ ಮೌಲ್ಯಗಳು ಸಮಾಜದ ಅಡಿಪಾಯವಾಗಿತ್ತು. ಜನರ  ಸೇವೆಯೇ ಸಮಾಜದ ಧ್ಯೇಯವಾಗಿತ್ತು.

ಕಾಲ ಬದಲಾಗಿದೆ. ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಜನರು ತಮ್ಮ ಜೀವನ ಶೈಲಿಯನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬದಲಾಯಿಸಿಕೊಂಡಿದ್ದಾರೆ. ಆಧುನೀಕರಣದ ಮೋಹಕ್ಕೆ ಸಿಲುಕಿದ್ದಾರೆ. ಸೈನ್ಸ್ ಮತ್ತು ಟೆಕ್ನಾಲಜೀ ಮನುಕುಲವನ್ನು ಮೀರಿ ಸಾಗಿದೆ. ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಮಾನವ ಚಂದ್ರ ಗ್ರಹಕ್ಕೆ ಪಾದಾರ್ಪಣೆ ಮಾಡಿ ಬಂದ ಮೇಲೆ, ಭೂಮಿಯನ್ನು ಬಿಟ್ಟು ಬೇರೊಂದು ಗ್ರಹದ  ಮೇಲೂ ಮನುಷ್ಯ ವಾಸಿಸಲು ಸಾಧ್ಯ ಎಂದು ಸಾಭೀತುಪಡಿಸಿದ್ದಾನೆ. ಇದರ ಪ್ರಯತ್ನವೇ 'Mission to Mars'.

ಸಾಮಾಜಿಕ ಬದಲಾವಣೆ ಜನರ ಜೀವನದ ಗತಿಯನ್ನು ಬದಲಾಯಿಸಿದೆ. ಭಾಷಾ ಮೌಲ್ಯ ತನ್ನ ವರ್ಚಸನ್ನು ಕಳೆದುಕೊಂಡಿದೆ. ಕಾಲ ತನ್ನ ಪಥವನ್ನು ಬದಲಾಯಿಸಿದೆ. ಜನ ಯಾಂತ್ರಿಕ ಜೀವನಕ್ಕೆ ಒಗ್ಗಿ ಹೋಗಿದ್ದಾರೆ. ಕುರುಡು ಕಾಂಚಾಣ ಮೇಲುಗೈ ಸಾಧಿಸಿದೆ. ಸಮಾಜದಲ್ಲಿನ ಪ್ರತಿಷ್ಟೆ ಮುಖ್ಯವಾಗಿದೆ. ಜೀವನದ ನೈತಿಕ ಮೌಲ್ಯಗಳು ಮೂಲೆ ಗುಂಪಾಗಿವೆ. ಸಮಾಜದಲ್ಲಿ ಕ್ರೌರ್ಯಗಳು ಹೆಚ್ಚಾಗುತ್ತಿವೆ, ಸ್ವೇಚ್ಛಾಚಾರಿಕೆ ಮುಗಿಲು ಮುಟ್ಟಿದೆವಿದೇಶಿ ವ್ಯಾಮೋಹಕ್ಕೆ ಬಿದ್ದ ಜನ ತಮ್ಮ ತನವನ್ನು ಮರೆಯುತ್ತಿದ್ದಾರೆ, ಹಿರಿಯರನ್ನು ಕಡೆಗಣಿಸುತ್ತಿದ್ದಾರೆ. ದೇಶವನ್ನು ಕಾಪಾಡುವ ನಾಯಕರು ತಮ್ಮ ತಮ್ಮ ನಡುವೆಯೇ  ಸ್ಥಾನಕ್ಕಾಗಿ ಕಿತ್ತಾಡಿಕೊಳ್ಳುತ್ತಾ ದೇಶವನ್ನು ಕಡೆಗಣಿಸುತ್ತಿದ್ದಾರೆ.

ಇನ್ನು ಜನರ ನಡುವೆ ಪ್ರೀತಿ ಕಮ್ಮಿಯಾಗಿ ಧ್ವೇಷ ಹೆಚ್ಚಾಗುತ್ತಿದೆ. ನಂಬಿಕೆಗಳು ಬದಲಾಗುತ್ತಿವೆ. ಕಾಂಪಿಟೇಶನ್ ಯುಗದಲ್ಲಿ ಜನ ಧಾಪುಗಾಲು ಹಾಕಿ ಮುಂದೆ ಸಾಗಿದ್ದಾರೆ. ಕಲುಷಿತ ವಾತಾವರಣ, ಬದಲಾಗುತ್ತಿರುವ ಜೀವನ ಶೈಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಹೆಣ್ಣು ಮಕ್ಕಳು ತಮ್ಮ ಸ್ವಂತ ಕಾಲ ಮೇಲೆ ತಾವು ನಿಂತಿದ್ದಾರೆ. ಇದೊಂದು ಒಳ್ಳೆಯ ಬದಲಾವಣೆ ಎಂದು ಹೇಳಬಹುದಾದರೂ, ಇದರ ಇನ್ನೊದು  ಮುಖ ಅತಿಯಾದ ಸ್ವಾತಂತ್ರ್ಯ ಮನೋಭಾವ.ಡೈವೋರ್ಸ್ ಗಳು ಹೆಚ್ಚಾಗುತ್ತಿವೆ.ತಾಳ್ಮೆ ಕಡಿಮೆಯಾಗುತ್ತಾ ವಿಚಾರವಂತಿಕೆ ಮಸುಕಾಗಿದೆ.

ಇಷ್ಟೆಲ್ಲ ಬದಲಾವಣೆಗಳಿಂದ ಪ್ರಯೋಜನವೇನು ಎಂದು ಒಮ್ಮೆ ಹಿಂದೆ ತಿರುಗಿ ನೋಡಿದರೆ ಕಾಣುವುದು ಬರೀ ಶೂನ್ಯ. ಮನುಷ್ಯ ಬರುವಾಗ ಖಾಲಿ ಕೈ, ಹೋಗುವಾಗ ಖಾಲಿ ಕೈ, ಮಧ್ಯೆ ಬರೀ ಶೂನ್ಯ. ಹೀಗೆ ಕಾಲ ಚಕ್ರ ತಿರುಗುತ್ತಿದೆ!!!

* ವ್ಯಾಕರಣ ಹಾಗು ತಪ್ಪು ಪದಗಳ ಬಳಕೆಯಾಗಿದ್ದರೆ ಕ್ಷಮೆ ಇರಲಿ.

Monday, 10 February 2014

ಹೀಗೊಂದು ಪ್ರಸಂಗ!

ಆಗ ತಾನೇ ಹೊಸ Business unitಗೆ ಬಡ್ತಿ ಪಡೆದು entry ಕೊಟ್ಟಿದ್ದೆ. ಅದು ನನಗೆ ಹೊಸ area ಆಗಿತ್ತು. ಆದರೆ adjust ಆಗಲು ಹೆಚ್ಚು ಕಷ್ಟ ಆಗಲಿಲ್ಲ. ನಮ್ಮ ಬಿಸ್ನೆಸ್ ಯೂನಿಟ್ head US ನಲ್ಲಿದ್ದರು. ಅವರೇ ನನ್ನ ಇಂಟರ್ವ್ಯೂ ತೊಗೊಂಡಿದ್ದದ್ದು. ಅವರ ಬಗ್ಗೆ ಹೆಚ್ಚು ಕೇಳಿರಲಿಲ್ಲ. ಆದರೆ ತುಂಬಾ detail oriented person ಅಂತ ಕೇಳಿದ್ದೆ. ಬೇರೆಯವರಿಗೆ ಹೆಚ್ಚು ಮಾತಾಡಲು ಅವಕಾಶ ಕೊಡದೆ ತಾವೇ ಹೆಚ್ಚು ಮಾತನಾಡುತ್ತಿದ್ದರು. ಆದರೆ ನನ್ನ ಇಂಟರ್ವ್ಯೂ Audio call ಮುಖಾಂತರ ನಡೆದಿತ್ತು. ಹಾಗಾಗಿ ಅವರನ್ನು ಮುಖತಃ ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ

ನನ್ನ ಹೊಸ role ಶುರುವಾಗಿತ್ತು. ಒಂದೆರಡು ತಿಂಗಳು ಕಳೆದ ಮೇಲೆ India ಆಫೀಸ್ ಗೆ ನಮ್ಮ business unit  Director visit ಮಾಡುವವರಿದ್ದರು. ಸಾಮಾನ್ಯವಾಗಿ Quarterಗೆ ಒಂದು ಸಲ Unit head India ಆಫೀಸ್ ಗೆ ಭೇಟಿಕೊಡುವ ಪರಿಪಾಠವಿತ್ತು. ತಮ್ಮ ಇಲ್ಲಿಯ team ಅನ್ನು ಭೇಟಿಮಾಡುವುದಕ್ಕೆ. ಬಂದಾಗ, ಎಲ್ಲರ ಜೊತೆ Face to Face ಭೇಟಿ ಮತ್ತು Offsite ಮೀಟಿಂಗ್ಸ್ ಇರುತಿತ್ತು. ಹಾಗೆ ಭೇಟಿಯಲ್ಲಿ head ಜೊತೆ ನನ್ನ 1:1 ಮೀಟಿಂಗ್ ಫಿಕ್ಸ್ ಆಗಿತ್ತು. ಮೊದಲ ಸಲ ಮುಖತಃ ಭೇಟಿಯಾಗುತ್ತಿದ್ದೆ. ಅವರು ತುಂಬಾ strict ಅಂತ ಕೇಳಿದ್ದೆ. ಸರಿ ಭೇಟಿಯಾಗುವ ಸಮಯ ಬಂದಿತ್ತು.

ಮೀಟಿಂಗ್ ರೂಮ್ ಗೆ ಹೋದೆ. ಹೆಡ್ ಬಂದರು. ಹೆಸರಿನ ಪರಿಚಯದೊಂದಿಗೆ ಎದಿರು ಬದಿರು ಕುಳಿತೆವು. ಮೊದಲ ಸಲ ಅವರು ನನ್ನನ್ನು ಭೇಟಿಯಾಗುತ್ತಿದ್ದರಿಂದ, ಮೊದಲ 10ನಿಮಿಷ GTKY ಇತ್ತು. ನಾನು ನನ್ನ ಪರಿಚಯ ಮಾಡಿಕೊಂಡು ಕೆಲಸದ ಬಗ್ಗೆ brief ಆಗಿ explain ಮಾಡಿದ್ದೆ. ನಂತರ ಮಾತನಾಡುವುದು ಅವರ ಸರದಿಯಾಗಿತ್ತು. ಮಾತನ್ನು ಶುರು ಮಾಡಿದ್ದರು. ನಾನು ಪರಿಚಯ ಮಾಡಿಕೊಂಡಾಗ ನನ್ನ ಪರ್ಸನಲ್ ವಿಷಯಗಳ ಬಗ್ಗೆ ಹೇಳಿರಲಿಲ್ಲ. ಆದ್ರೆ ಮನುಷ್ಯ ಕೆಲಸದ ವತ್ತಡದ ಬಗ್ಗೆ ವಿಚಾರಿಸುತ್ತಾ ಹಾಗೆ ಕ್ಯಾಶುಯಲ್ ಆಗಿ "Are you married ?" ಅಂತ ಕೇಳಿದ್ದರು. ತುಂಬಾ ಕ್ಯಾಶುಯಲ್ ಪ್ರಶ್ನೆ. ಆದರೆ ಪ್ರಶ್ನೆ ಕೇಳಿದ ಮೇಲೆ ಕಣ್ಣನ್ನು wink ಮಾಡಿದ್ದರು. ಅದು ನನಗೆ ಇರಿಸು ಮುರಿಸು ತಂದಿತ್ತು. ನಂತರದ ಪ್ರಶ್ನೆ ಮತ್ತೆ uncomfortable ಫೀಲಿಂಗ್ ತಂದು ಕೊಟ್ಟಿತ್ತು. "Is anything on the card ?" ಅಂತ ಕೇಳಿ ಮತ್ತೆ ವಿಂಕ್ ಮಾಡಿದ್ದರು. ಬರೀ ಪ್ರಶ್ನೆ ಕೇಳಿದ್ದರೆ ನಾನು ಕ್ಯಾಶುಯಲ್ ಆಗಿ ಉತ್ತರ ಕೊಟ್ಟಿರುತ್ತಿದೆ. ಆದರೆ ಪ್ರಶ್ನೆಗಳ ನಂತರದ ಅವರ ಹಾವ ಭಾವ ನನಗೆ ತುಂಬಾ ಇರಿಸು ಮುರಿಸು ತಂದಿತ್ತು. ಬಿಸ್ನೆಸ್ ಯೂನಿಟ್ ಹೆಡ್ ಇಂಥ ವ್ಯಕ್ತಿಯ ಅಂತ ಅನಿಸಿತ್ತು. ಇಂತಹ ವ್ಯಕ್ತಿಯ direction ನಲ್ಲಿ ಕೆಲಸ ಮಾಡಬೇಕ ಅನಿಸಿತ್ತು. ಯಾಕಾದರೂ ಯೂನಿಟ್ನ ಸೇರ್ಕೊಂಡೆನೋ, ಮುಂದೆ ಹೇಗೆ ಇದೆ ಯೂನಿಟ್ ನಲ್ಲಿ ಮುಂದಿವರಿಯಬೇಕಾಗುತ್ತದೆ ಅಂತೆಲ್ಲ ನೂರಾರು ಯೋಚನೆಗಳು ತಲೆಯಲ್ಲಿ ಚುಚ್ಚುತ್ತಿತ್ತು. ಎಲ್ಲ ಯೋಚನೆಗಳು ಅರ್ಧ ಕ್ಷಣದಲ್ಲಿ ಮಿಂಚಿ ಮರೆಯಾಯಿತು . ಹೆಡ್ ತಮ್ಮ ಮಾತನ್ನು ಮುಂದುವರೆಸಿದ್ದರು. ಹೊಸ ರೋಲ್ನ expectation ಬಗ್ಗೆ ಹೇಳುತ್ತಿದ್ದರು. ಮಾತಿನ ಉದ್ದಕ್ಕೂ ಕಣ್ಣನ್ನು wink ಮಾಡುತಿದ್ದರು. Oh!ದೊಡ್ಡ ರಿಲೀಫ್ ಸಿಕ್ಕಿತ್ತು. ಆಗ ಅರ್ಥವಾಗಿತ್ತು ಅವರು ಕಣ್ಣನ್ನು ಮಿಟುಕಿಸಿದ್ದು ಯಾವುದೇ intension ಇಂದ ಅಲ್ಲ, ಆದರೆ ಅವರಿಗೆ ಕಣ್ಣಿನ ಪ್ರಾಬ್ಲಮ್ ಇದೆ ಅಂತ ತಿಳಿಯಿತು. ಹಾಗೆ ಮಾತನಾಡುತ್ತಾ ನನ್ನ ಮೀಟಿಂಗ್ ಟೈಮ್ ಮುಗಿದಿತ್ತು. ಅವರಿಗೆ Good day ಅಂತ ಹೇಳಿ ರೂಮ್ ನಿಂದ ಹೊರಬಿದ್ದಿದ್ದೆ.

ಒಂದು ಕ್ಷಣದ ನನ್ನ ಮನಸ್ಸಿನ ತುಮುಲ, ತಲೆಯಲ್ಲಿ ಬಂದಿದ್ದ ನೂರಾರು ಯೋಚನೆ ಈಗಲೂ ನೆನಪಿಸಿಕೊಂಡರೆ ನಗೆ ಮೂಡುತ್ತದೆ. ವಿಷಯವನ್ನು ನನ್ನ ಬಿಸ್ನೆಸ್ ಯೂನಿಟ್ colleagues ಜೊತೆ ಹೇಳಿ ಹಂಚಿಕೊಂಡಿದ್ದೆ. ಮೊದಲೇ ಅವರ ಕಣ್ಣಿನ ಸಮಸ್ಯೆಯ ಬಗ್ಗೆ ನನಗೆ ವಿಷಯ ತಿಳಿಸದೆ ಇರುವುದಕ್ಕೆ ಅವರ ಬಗ್ಗೆ ಹುಸಿ ಕೋಪ ವ್ಯಕ್ತಪಡಿಸಿದ್ದೆ. ಎಲ್ಲರೂ ನನ್ನ ಅನುಭವ ಕೇಳಿ ಬಿದ್ದು ಬಿದ್ದು ನಕ್ಕಿದ್ದರು.

ಹೀಗೆ ವಿಷಯ ಪ್ರಸ್ತಾಪಿಸಿದಾಗ, ನನ್ನ ಇನ್ನೊಬ್ಬರು colleague ಇದ್ದರು. ಅವರೂ ಸಹ ನಮ್ಮ ಬಿಸ್ನೆಸ್ ಯೂನಿಟ್ ಗೆ ಬೇರೆ ಯೂನಿಟ್ ನಿಂದ ಬಂದಿದ್ದರು. ನಾನು ನನ್ನ ಅನುಭವವನ್ನು ಹಂಚಿಕೊಂಡಾಗ, ಅವರು ತಮಗಾದ ಪರಿಸ್ಥಿತಿಯನ್ನು ಹೇಳಿದರು. ಅವರೂ ಸಹ ಮೊದಲ ಸಹ ಡೈರೆಕ್ಟರ್ ಜೊತೆ ಮುಖತಃ ಭೇಟಿಯಾಗಿದ್ದರು. ಅವರಿಗೂ ಇವರ ಕಣ್ಣಿನ ಸಮಸ್ಯೆಯ ಬಗ್ಗೆ ಗೊತ್ತಿರಲಿಲ್ಲ. ಅವರಿಗೂ ತಮ್ಮ ಡೈರೆಕ್ಟರ್ ವಿಂಕ್ ಮಾಡಿದ್ದಾಗ ಶಾಕ್ ಆಗಿತ್ತು. ನನ್ನ ಮುಂದೆ ನಿಮ್ಮ ಪರಿಸ್ಥಿತಿಗಿಂತ ನನ್ನದು ಅಧ್ವಾನವಾಗಿತ್ತು ಎಂದರು. When a guy winks at another guy, ನನ್ನ ಪರಿಸ್ಥಿತಿ ಹೇಗಾಗಿತ್ತು ಅಂತ ಯೋಚನೆ ಮಾಡಿ ಎಂದಾಗ, ನಾನು ಬಿದ್ದು ಬಿದ್ದು ನಕ್ಕಿದ್ದೆ. I could imagine his position. ಅಂತೂ ಒಂದು ತಪ್ಪು ಕಲ್ಪನೆ ಎಂಥ ಪ್ರಸಂಗಕ್ಕೆ ಎಡೆಮಾಡಿ ಕೊಡುತ್ತದೆ ಎನ್ನುವುದಕ್ಕೆ ಪ್ರಸಂಗವೇ ಉತ್ತಮ ಸಾಕ್ಷಿ!!!

*Spelling mistakes ಗಳ ಬಗ್ಗೆ ಕ್ಷಮೆ ಇರಲಿ.